ಬೆಟರ್ ಡಾಟ್ ಕಾಂನ (Better.com) ಭಾರತ-ಅಮೆರಿಕಾ ಮುಖ್ಯಸ್ಥ ಮತ್ತೆ ತನ್ನ 3,000 ಉದ್ಯೋಗಿಗಳನ್ನು ವಜಾಗೊಳಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಕಳೆದ ವರ್ಷ ಝೂಮ್ ಮೀಟಿಂಗ್ನಲ್ಲಿ (Zoom Meeting) 900 ಸಿಬ್ಬಂದಿಗಳನ್ನು ವಜಾಗೊಳಿಸುವ ಮೂಲಕ ಸುದ್ದಿಯಲ್ಲಿದ್ದ ಬೆಟರ್ ಡಾಟ್ ಕಾಮ್ ಕಂಪನಿ ಸಿಇಓ ವಿಶಾಲ್ ಗರ್ಗ್ (Vishal Garg) ಮತ್ತೆ ಸಾಮೂಹಿಕವಾಗಿ ಉದ್ಯೋಗಿಗಳನ್ನು ವಜಾ ಮಾಡುವ (Mass firing) ಮೂಲಕ ಸುದ್ದಿಯಾಗಿದ್ದಾರೆ. ಬೆಟರ್ ಡಾಟ್ ಕಾಂ ಕಂಪನಿ ಭಾರತ ಹಾಗೂ ಅಮೆರಿಕ ಸೇರಿದಂತೆ ವಿಶ್ವದಾದ್ಯಂತ 8 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. ಇದೀಗ 3,000 ಉದ್ಯೋಗಿಗಳನ್ನು ಕಂಪನಿ ವಜಾಗೊಳಿಸಿ ಸುಮಾರು ಶೇ.50 ರಷ್ಟು ಉದ್ಯೋಗಿಗಳನ್ನು ತೆಗೆದು ಹಾಕಿದೆ
Better.com ಸಿಇಒ ವಿಶಾಲ್ ಗರ್ಗ್ 8,000 ವೃತ್ತಿಪರ ಸಿಬ್ಬಂದಿಗಳಲ್ಲಿ ಅಮೆರಿಕಾ ಮತ್ತು ಭಾರತದ ಸುಮಾರು 3,000ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ವಜಾ ಮಾಡಿದ್ದಾರೆ ಎಂದು ವರದಿಯಾಗಿದೆ. ವೇತನ ಪಟ್ಟಿಯಲ್ಲಿ ಬೇರ್ಪಡಿಕೆ ಪರಿಶೀಲನೆಯಲ್ಲಿ ಅಮೆರಿಕಾ ಮತ್ತು ಭಾರತದ ಉದ್ಯೋಗಿಗಳನ್ನು ವಜಾಗೊಳಿಸಿ ಕಂಪನಿ ಆದೇಶ ಹೊರಡಿಸಿದೆ.
ಈ ಹಿಂದೆಯೂ ಉದ್ಯೋಗಿಗಳನ್ನು ವಜಾ ಮಾಡಿದ್ದರು ಈ ಹಿಂದೆ ಡಿಜಿಟಲ್ ಮಾರ್ಟೆಜಲ್ ಕಂಪನಿ ಜೂಮ್ ಕಾಲ್ ನಲ್ಲಿ 9% ಉದ್ಯೋಗಿಗಳನ್ನು ವಜಾಗೊಳಿಸಿದ ವಿಡಿಯೋ ವೈರಲ್ ಆಗಿತ್ತು. ಇದಾದ ಬಳಿಕ ಗಾರ್ಗ್ ತಮ್ಮ 3,000 ಉದ್ಯೋಗಿಗಳನ್ನು ವಜಾ ಮಾಡಿದ್ದಾರೆ.
ವರದಿಯ ಪ್ರಕಾರ, ವಜಾಗೊಳಿಸುವಿಕೆಯನ್ನು ಮಾರ್ಚ್ 9ರಂದು ಯೋಜಿಸಲಾಗಿತ್ತು, ಆದರೆ, ಆಕಸ್ಮಿಕವಾಗಿ ಆದ ಪ್ರಮಾದದಿಂದಾಗಿ ಈ ಬೇರ್ಪಡಿಸುವಿಕೆ ವೇತನದ ಚೆಕ್ ಗಳು ಒಂದು ದಿನ ಮುಂಚಿತವಾಗಿಯೇ ವಜಾಗೊಂಡ ಸಿಬ್ಬಂದಿಗಳಿಗೆ ತೋರಿಸಲಾರಂಭಿಸಿದವು. ಈ ಬಗ್ಗೆ ಉದ್ಯೋಗಿಯೊಬ್ಬರು, "ಆಕಸ್ಮಿಕವಾಗಿ ಪೇಸ್ಲಿಪ್ಗಳ ಬೇರ್ಪಡಿಕೆ ತುಂಬಾ ಮುಂಚೆಯೇ ಹೊರಬಂದಿವೆ” ಎಂದು ತಮ್ಮ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.
ಉದ್ಯೋಗಿಗಳಿಗೆ ಮಾಹಿತಿಯೇ ಇರಲಿಲ್ಲ! ಕಂಪನಿಯಿಂದ ಯಾವುದೇ ಹೆಚ್ಚುವರಿ ಮಾಹಿತಿ ಇಲ್ಲದೇ ಬೇರ್ಪಡಿಕೆ ಚೆಕ್ಗಳು ಬಂದಿವೆ ಎಂದು ಮಾಜಿ ಉದ್ಯೋಗಿ ದೃಢಪಡಿಸಿದ್ದಾರೆ. ವಜಾಗೊಳಿಸಲಾದ ಬಹುಪಾಲು ಸಿಬ್ಬಂದಿ ಸೇಲ್ಸ್ ಮತ್ತು ಕಾರ್ಯಾಚರಣೆಯ ಪಾತ್ರಗಳಲ್ಲಿದ್ದರೂ, ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ.ಇದು ಇಡೀ ಕಂಪನಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದೆ.
ಹಿಂದಿನ ವರದಿಯಲ್ಲಿ 4,000 ಉದ್ಯೋಗಿಗಳನ್ನು ವಜಾಗೊಳಿಸಲಾಗುವುದು ಎಂದು ಕಂಪನಿ ಸೂಚಿಸಿತ್ತು. ಆದರೆ ಕಂಪನಿಯ ವಕ್ತಾರರು ಕೇವಲ 3,000 ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ತೆಗೆಯಲಾಗಿದೆ ಎಂದು ಹೇಳಿದರು. ಕಂಪನಿಯು US ಮತ್ತು ಭಾರತ ಎರಡರಲ್ಲೂ ನಮ್ಮ ಉದ್ಯೋಗಿಗಳನ್ನು ವಜಾಗೊಳಿಸಲಾಗುತ್ತದೆ ಎಂದು ಕಂಪನಿ ತಿಳಿಸಿತ್ತು.
ಸ್ವತಃ ಸಿಇಒ ಕ್ಷಮೆಯಾಚಿಸಿದ್ದರು... ಕಳೆದ ವರ್ಷವು ಸಿಇಓ ವಿಶಾಲ್ 900 ಸಿಬ್ಬಂದಿಗಳನ್ನು ವಜಾಗೊಳಿಸಿ ಸಿಬ್ಬಂದಿಗಳಿಗೆ ಶಾಕ್ ನೀಡಿದ್ದರು. ಇದು ದೇಶಾದ್ಯಂತ ಭಾರೀ ವಿವಾದ ಸೃಷ್ಟಿಸಿತ್ತು. ಈ ಬೆನ್ನಲ್ಲೇ ಪರ ವಿರೊಧದ ಚರ್ಚೆಗಳು ನಡೆದಿದ್ದವು. ಇದಾದ ಬಳಿಕ ಬೆಟರ್ ಡಾಟ್ ಕಾಮ್ ಸಿಇಓ ವಿಶಾಲ್ ಗಾರ್ಗ್ ಕ್ಷಮೆಯಾಚಿಸಿದ್ದರು.
ಸಾಫ್ಟ್ಬ್ಯಾಂಕ್ ಬೆಂಬಲಿತ ಕಂಪನಿಯು ವೀಡಿಯೊ ಕರೆ ಮೂಲಕ ತನ್ನ ಸುಮಾರು 9 ಪ್ರತಿಶತದಷ್ಟು ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಇದಾದ ನಂತರ ಸಿಇಓ ವಿಶಾಲ್ ಗರ್ಗ್ ತೀವ್ರ ಟೀಕೆಗೆ ಒಳಗಾಗಿದ್ದರು.
ನಂತರ ಬರೆದ ಪತ್ರದಲ್ಲಿ ಏನಿತ್ತು? "ವಜಾಗೊಳಿಸುವಿಕೆಯನ್ನು ತಿಳಿಸುವಲ್ಲಿ ನಾವು ಎಡವಿದ್ದು ಇದನ್ನು ಕಾರ್ಯಗತಗೊಳಿಸುವಲ್ಲಿ ಪ್ರಮಾದವಾಗಿದೆ" ಎಂದು ಹೇಳುವ ಮೂಲಕ ಕ್ಷಮೆಯಾಚಿಸಿದ್ದರು. "ನಾನು ಈ ಸುದ್ದಿಯನ್ನು ತಿಳಿಸಲು ಬಳಸಿದ ವಿಧಾನವು ಕಠಿಣ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ" ಎಂದು ಗಾರ್ಗ್ ಪತ್ರದ ಮೂಲಕ ತಿಳಿಸಿದ್ದರು.
ಕಾರಣವನ್ನೂ ನೀಡಿದ್ದರು 3 ನಿಮಿಷದ ವಿಡಿಯೋ ಕರೆಯಲ್ಲಿ 900 ಸಿಬ್ಬಂದಿಗಳನ್ನು ಕಂಪನಿಯಿಂದ ಹೊರ ಹಾಕಲಾಗಿತ್ತು. ಇದಕ್ಕೆ ವಿಶಾಲ್ ಗರ್ಗ್ ಕಾರಣವನ್ನೂ ನೀಡಿದ್ದರು. ಈ ಉದ್ಯೋಗಿಗಳು ದಿನದಲ್ಲಿ ಗರಿಷ್ಠ 2 ಗಂಟೆ ಕೆಲಸ ಮಾಡಿಲ್ಲ. ಸಮರ್ಥವಾಗಿ ಕೆಲಸ ನಿರ್ವಹಿಸಲು ಅಸಾಧ್ಯರಾಗಿದ್ದಾರೆ ಎಂದಿದ್ದರು.