‘ಬಿಜೆಪಿಗೆ ವೋಟ್​​ ಮಾಡಿದ್ರೆ ಬೇಟಿ ಬಚಾವೋ, ಬೇಟಿ ಪಢಾವೋ, ಬೇಟಿ ಖಿಲಾವೊ ಗ್ಯಾರಂಟಿ: ಬಬಿತಾ ಪೋಗಟ್ ಭರವಸೆ

ಬಿಜೆಪಿಗೆ ಮತ ನೀಡಿ ಗೆಲ್ಲಿಸಿ. ಆಗ ಕ್ರೀಡಾ ಕ್ಷೇತ್ರಕ್ಕೂ ಬೇಟಿ ಬಚಾವೋ, ಬೇಟಿ ಪಢಾವೋ, ಬೇಟಿ ಖಿಲಾವೊ ಯೋಜನೆ ವಿಸ್ತರಿಸುತ್ತೇವೆ- ಬಬಿತಾ ಪೋಗಟ್​

news18-kannada
Updated:October 16, 2019, 7:23 PM IST
‘ಬಿಜೆಪಿಗೆ ವೋಟ್​​ ಮಾಡಿದ್ರೆ ಬೇಟಿ ಬಚಾವೋ, ಬೇಟಿ ಪಢಾವೋ, ಬೇಟಿ ಖಿಲಾವೊ ಗ್ಯಾರಂಟಿ: ಬಬಿತಾ ಪೋಗಟ್ ಭರವಸೆ
ಬಬಿತಾ ಪೋಗಟ್​​​​
  • Share this:
ನವದೆಹಲಿ(ಅ.16): ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ದಾದ್ರಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಅಂತರಾಷ್ಟ್ರೀಯ ಮಹಿಳಾ ಕುಸ್ತಿಪಟು ಬಬಿತಾ ಪೋಗಟ್ ಬಿರುಸಿನ ಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿಗೆ ವೋಟ್​​ ಹಾಕಿ ಗೆಲ್ಲಿಸಿದರೇ ಕ್ರೀಡಾ ಕ್ಷೇತ್ರಕ್ಕೂ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಬೇಟಿ ಬಚಾವೋ, ಬೇಟಿ ಪಢಾವೋ, ಬೇಟಿ ಖಿಲಾವೊ ಯೋಜನೆ ವಿಸ್ತರಿಸುವುದಾಗಿ ಪೋಗಟ್​​ ಭರವಸೆ ನೀಡಿದ್ದಾರೆ.

ಇಂದು ಬಬಿತಾ ಪೋಗಟ್​​ ದಾದ್ರೀ ಕ್ಷೇತ್ರದಾದ್ಯಂತ ಸಂಚರಿಸಿ ಅಬ್ಬರದ ಪ್ರಚಾರ ನಡೆಸಿದರು. ಈ ವೇಳೆ ಬಿಜೆಪಿಗೆ ಮತ ನೀಡಿ ಗೆಲ್ಲಿಸಿ. ಆಗ ಕ್ರೀಡಾ ಕ್ಷೇತ್ರಕ್ಕೂ ಬೇಟಿ ಬಚಾವೋ, ಬೇಟಿ ಪಢಾವೋ, ಬೇಟಿ ಖಿಲಾವೊ ಯೋಜನೆ ವಿಸ್ತರಿಸುತ್ತೇವೆ. ದೇಶದ ಮಗಳನ್ನು ರಕ್ಷಿಸಿ, ಶಿಕ್ಷಣ ನೀಡಿ, ಕ್ರೀಡೆಯತ್ತ ಉತ್ತೇಜಿಸುವ ಯೋಜನೆ ಇದಾಗಿದೆ ಎಂದರು.

ಅಂತರಾಷ್ಟ್ರೀಯ ಮಹಿಳಾ ಕುಸ್ತಿಪಟು ಬಬಿತಾ ಪೋಗಟ್, ರಾಜಕೀಯದಲ್ಲಿ​ ಮೊದಲ ಬಾರಿಗೆ ತಮ್ಮ ಅದೃಷ್ಟ ಪರಿಕ್ಷೇಗೆ ಮುಂದಾಗಿದ್ದಾರೆ. ಪೋಗಟ್ ಕಾಂಗ್ರೆಸ್‌ನ ನೃಪೇಂದ್ರ ಸಿಂಗ್ ಸಾಂಗ್ವಾನ್, ಸ್ವತಂತ್ರ ಅಭ್ಯರ್ಥಿ ಸೋಂಬೀರ್ ಸಾಂಗ್ವಾನ್ ಮತ್ತು ಜನನಾಯಕ್ ಜನತಾ ಪಕ್ಷದ ಸತ್ಪಾಲ್ ಸಾಂಗ್ವಾನ್ ವಿರುದ್ಧ ಕಣಕ್ಕಿಳಿದಿದ್ದಾರೆ. ಈಗಾಗಲೇ ದಾದ್ರಿ ಕ್ಷೇತ್ರದಲ್ಲಿ ಬಬಿತಾ ಪೋಗಟ್​​ ಪರವಾಗಿ ಪ್ರಚಾರ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಹರಿಯಾಣ ಮನೆಮಗಳಿಗೆ ಮತಹಾಕಿ ಗೆಲ್ಲಿಸಿ ಎಂದು ಕರೆ ನೀಡಿದ್ದಾರೆ.

ಇತ್ತೀಚೆಗೆ ಅಂತರಾಷ್ಟ್ರೀಯ ಮಹಿಳಾ ಕುಸ್ತಿಪಟುವಾಗಿ ಮಿಂಚಿದ್ದ ಬಬಿತಾ ಪೋಗಟ್(29), ಪೊಲೀಸ್​​ ಎಸ್​​ಐ ಆಗಿ ಕಾರ್ಯನಿರ್ವಹಿಸುತ್ತಿದ್ದ ಹುದ್ದೆಗೆ ರಾಜೀನಾಮೆ ನೀಡಿದ್ದರು. ಈ ಬೆನ್ನಲ್ಲೇ ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಕುಸ್ತಿಪಟುವಾದ ಬಬಿತಾ ಪೊಗಟ್, ತನ್ನ ತಂದೆ ಮಹಾವೀರ್​​​ ಪೋಗಟ್​​​ರೊಂದಿಗೆ ಬಿಜೆಪಿ ಸೇರ್ಪಡೆಯಾಗಿದ್ದರು. ಈ ಮೂಲಕ ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸಿದರು.

ಇದನ್ನೂ ಓದಿ: ಗರಡಿಮನೆಯಿಂದ ರಾಜಕೀಯಕ್ಕೆ ಬಂದ ಮಹಿಳಾ ಕುಸ್ತಿಪಟು; ಬಬಿತಾ ಪೊಗಟ್​​ಗೆ ಪ್ರಧಾನಿ ಮೋದಿ ಸ್ವಾಗತ

ಇನ್ನು, ಇದೇ ಅಕ್ಟೋಬರ್ 21ರಂದು ನಡೆಯಲಿರುವ ಹರಿಯಾಣ ವಿಧಾನಸಭಾ ಚುನಾವಣೆಗೆ ಬಿಜೆಪಿ ಈಗಾಗಲೇ ರಣಕಹಳೆ ಊದಿದೆ. ಪ್ರಧಾನಿ ನರೇಂದ್ರ ಮೋದಿ, ರಾಜ್ಯಕ್ಕೆ ಪ್ರಚಾರಕ್ಕಾಗಮಿಸಿ ಸಿಎಂ ಮನೋಹರ್ ಲಾಲ್ ಖಟ್ಟರ್ ಸರ್ಕಾರಕ್ಕೆ ಮತ್ತೊಮ್ಮೆ ಅವಕಾಶ ನೀಡುವಂತೆ ಕೇಳಿಕೊಳ್ಳುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಕೈಹಿಡಿದಂತೆ ವಿಧಾನಸಭಾ ಚುನಾವಣೆಯಲ್ಲೂ ಖಟ್ಟರ್ ಅವರ ಕೈಹಿಡಿಯಬೇಕೆಂದು ಮೋದಿ ಮನವಿ ಮಾಡಿದ್ದಾರೆ.
-----------
First published:October 16, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ