ಯಾರ ಮಗನಾದರೇನಂತೆ, ಗೂಂಡಾ ಪ್ರವೃತ್ತಿ ತೋರಿದ ಬಿಜೆಪಿ ಶಾಸಕ ಆಕಾಶ್​ ವಿಜಯ್​ವರ್ಗೀಯ ವಿರುದ್ಧ ಮೋದಿ ಮಾತು

ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಗೊಂಡ ನಂತರ, ಆಕಾಶ್​ಗೆ ಬಿಜೆಪಿ ಕಾರ್ಯಕರ್ತರಿಂದ ಅಭೂತಪೂರ್ವ ಸ್ವಾಗತ ಲಭ್ಯವಾಗಿತ್ತು. ಬಿಜೆಪಿ ಸಭೆಯಲ್ಲಿ ಈ ಬಗ್ಗೆಯೂ ಚರ್ಚೆಗೆ ಬಂದಿದ್ದು, ತಪ್ಪು ಮಾಡಿ ಜೈಲಿಗೆ ಹೋದವರನ್ನು ಈ ರೀತಿ ಸ್ವಾಗತಿಸುವುದು ಸರಿಯಲ್ಲ ಎಂದು ಮೋದಿ ಹೇಳಿದ್ದಾರೆ ಎನ್ನಲಾಗಿದೆ

Sharath Sharma Kalagaru | news18
Updated:July 2, 2019, 12:25 PM IST
ಯಾರ ಮಗನಾದರೇನಂತೆ, ಗೂಂಡಾ ಪ್ರವೃತ್ತಿ ತೋರಿದ ಬಿಜೆಪಿ ಶಾಸಕ ಆಕಾಶ್​ ವಿಜಯ್​ವರ್ಗೀಯ ವಿರುದ್ಧ ಮೋದಿ ಮಾತು
ನರೇಂದ್ರ ಮೋದಿ
  • News18
  • Last Updated: July 2, 2019, 12:25 PM IST
  • Share this:
ನವದೆಹಲಿ: ಸರ್ಕಾರಿ ನೌಕರರೊಬ್ಬರ ಮೇಲೆ ಕ್ರಿಕೆಟ್​ ಬ್ಯಾಟ್​ನಿಂದ ಹಲ್ಲೆ ಮಾಡಿದ್ದ ಮಧ್ಯಪ್ರದೇಶ ಬಿಜೆಪಿ ಶಾಸಕ ಆಕಾಶ್​ ವಿಜಯ್​ವರ್ಗೀಯ ವಿರುದ್ಧ ನರೇಂದ್ರ ಮೋದಿ ಕಿಡಿಕಾರಿದ್ದಾರೆ ಎನ್ನಲಾಗಿದೆ. ಆಕಾಶ್​ ವಿಜಯ್​ವರ್ಗೀಯ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಕೈಲಾಶ್​ ವಿಜಯ್​ವರ್ಗೀಯ ಅವರ ಮಗ. ಈ ಹಿನ್ನೆಲೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, "ಯಾರ ಮಗನಾದರೇನು. ಸರ್ಕಾರಿ ನೌಕರರೊಬ್ಬರ ಮೇಲೆ ಕ್ರಿಕೆಟ್​ ಬ್ಯಾಟ್​ನಿಂದ ಹಲ್ಲೆ ಮಾಡಿದ್ದ ಮಧ್ಯಪ್ರದೇಶ ಬಿಜೆಪಿ ಶಾಸಕ ಆಕಾಶ್​ ವಿಜಯ್​ವರ್ಗೀಯ ವಿರುದ್ಧ ನರೇಂದ್ರ ಮೋದಿ ಕಿಡಿಕಾರಿದ್ದಾರೆ ಎನ್ನಲಾಗಿದೆ. ಆಕಾಶ್​ ವಿಜಯ್​ವರ್ಗೀಯ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಕೈಲಾಶ್​ ವಿಜಯ್​ವರ್ಗೀಯ ಅವರ ಮಗ. ಈ ಹಿನ್ನೆಲೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, "ಯಾರ ಮಗನಾದರೇನು. ಈ ರೀತಿಯ ಗೂಂಡಾ ವರ್ತನೆಯನ್ನು ನಾವು ಸಹಿಸುವುದಿಲ್ಲ. ಪಕ್ಷದ ವರ್ಚಸ್ಸಿಗೆ ತೊಂದರೆ ಮಾಡುವ ಯಾರೂ ಪಕ್ಷದಲ್ಲಿ ಮುಂದುವರೆಯುವಂತಿಲ್ಲ," ಎಂದರು. 

ಆಕಾಶ್​ ಜೂನ್​ 26ರಂದು ಅಧಿಕಾರಿಗೆ ಥಳಿಸಿದ ನಂತರ ಬಂಧನಕ್ಕೊಳಗಾಗಿದ್ದರು. ಅದಾದ ನಂತರವೂ ತಾವು ಮಾಡಿದ್ದನ್ನು ತಪ್ಪು ಎಂದು ಆಕಾಶ್​ ಒಪ್ಪಿಕೊಂಡಿರಲಿಲ್ಲ. ಅದರ ಬದಲು, ಆತ್ಮರಕ್ಷಣೆಗಾಗಿ ಹಲ್ಲೆ ಮಾಡಿದ್ದಾಗಿ ಆಕಾಶ್​ ಹೇಳಿಕೊಂಡಿದ್ದರು. ಜತೆಗೆ ಬಿಜೆಪಿ ಪಕ್ಷ ತಮಗೆ ಕಲಿಸಿರುವುದೇ ಇದನ್ನು, ಮೊದಲು ನಿವೇದನೆ ನಂತರ ಥಳಿಸುವುದು ಎಂದು ಹೇಳುವ ಮೂಲಕ ಪಕ್ಷದ ವಿರುದ್ಧ ಜನಾಭಿಪ್ರಾಯ ಹುಟ್ಟಲು ಕಾರಣರಾಗಿದ್ದರು.

ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಗೊಂಡ ನಂತರ, ಆಕಾಶ್​ಗೆ ಬಿಜೆಪಿ ಕಾರ್ಯಕರ್ತರಿಂದ ಅಭೂತಪೂರ್ವ ಸ್ವಾಗತ ಲಭ್ಯವಾಗಿತ್ತು. ಬಿಜೆಪಿ ಸಭೆಯಲ್ಲಿ ಈ ಬಗ್ಗೆಯೂ ಚರ್ಚೆಗೆ ಬಂದಿದ್ದು, ತಪ್ಪು ಮಾಡಿ ಜೈಲಿಗೆ ಹೋದವರನ್ನು ಈ ರೀತಿ ಸ್ವಾಗತಿಸುವುದು ಸರಿಯಲ್ಲ ಎಂದು ಮೋದಿ ಹೇಳಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ನಡುರಸ್ತೆಯಲ್ಲಿ ಕ್ರಿಕೆಟ್ ಬ್ಯಾಟ್​ನಿಂದ ಸರ್ಕಾರಿ ಅಧಿಕಾರಿಗೆ ಹೊಡೆದ ಬಿಜೆಪಿ ಶಾಸಕನ ಬಂಧನ

ಈ ಸಂಬಂಧ ಬಿಜೆಪಿ ಪಕ್ಷ ಇನ್ನೂ ಶಿಸ್ತು ಕ್ರಮ ಕೈಗೊಂಡಿಲ್ಲ. ಆದರೆ ಪ್ರಧಾನಿ ಮೋದಿಯವರ ಅಭಿಪ್ರಾಯದ ಬೆನ್ನಲ್ಲೇ ಆಕಾಶ್​ರನ್ನು ಪಕ್ಷದಿಂದ ಉಚ್ಛಾಟಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

First published:July 2, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...