Savings Tips: ಗಂಡು ಮಗುವಿನ ಉತ್ತಮ ಭವಿಷ್ಯಕ್ಕಾಗಿ ಯಾವ ಯೋಜನೆಗಳು ಉತ್ತಮ? ಇಲ್ಲಿದೆ ಸಂಪೂರ್ಣ ವಿವರ
Post Office Saving Scheme for Boy Child: ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳನ್ನು ನಿಮ್ಮ ಮಗನ ಭವಿಷ್ಯದ ನಿರ್ಮಾಣಕ್ಕಾಗಿ ಬಳಸಿಕೊಳ್ಳಬಹುದಾಗಿದ್ದು ನೀವು ಸುರಕ್ಷಿತವಾಗಿ ಈ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದಾಗಿದೆ
ಹೆಣ್ಣುಮಗುವಿಗಾಗಿ ನಿರ್ದಿಷ್ಟವಾಗಿ ವಿನ್ಯಾಸಪಡಿಸಲಾದ ಹಲವಾರು ಹೂಡಿಕೆ ಆಯ್ಕೆಗಳಿದ್ದು ಗಂಡುಮಗುವಿನ ಭವಿಷ್ಯ ನಿರ್ಮಾಣಕ್ಕಾಗಿ ಈ ರೀತಿಯ ಯಾವುದೇ ಹೂಡಿಕೆ ಆಯ್ಕೆಗಳಿಲ್ಲ ಎಂದು ನೀವು ಚಿಂತಿತರಾಗಿದ್ದರೆ ಇಂದಿನ ಲೇಖನದಲ್ಲಿ ನಿಮ್ಮ ಗಂಡು ಮಗುವಿನ ಉತ್ತಮ ಭವಿಷ್ಯ ನಿರ್ಮಾಣಕ್ಕೆ ಸಹಕಾರಿಯಾಗಿರುವ ಕೆಲವೊಂದು ಯೋಜನೆಗಳನ್ನು ತಿಳಿಸಿಕೊಡಲಿದ್ದೇವೆ. ಮಗುವಿನ ಹೆಚ್ಚಿನ ವಿದ್ಯಾಭ್ಯಾಸವಾಗಿರಬಹುದು ಅಥವಾ ವಿವಾಹ ಯೋಜನಗೆಳಿಗೆ ನೀವು ಇದನ್ನು ಬಳಸಿಕೊಳ್ಳಬಹುದಾಗಿದೆ.
ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳನ್ನು ನಿಮ್ಮ ಮಗನ ಭವಿಷ್ಯದ ನಿರ್ಮಾಣಕ್ಕಾಗಿ ಬಳಸಿಕೊಳ್ಳಬಹುದಾಗಿದ್ದು ನೀವು ಸುರಕ್ಷಿತವಾಗಿ ಈ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದಾಗಿದೆ.
ಗಂಡು ಮಗು ಯೋಜನೆ - Postal PPF Saving Scheme for Male child:
ಹೆಣ್ಣು ಮಕ್ಕಳಿಗಾಗಿ ಸಾಕಷ್ಟು ಯೋಜನೆಗಳು ಲಭ್ಯವಿದ್ದು ಅದರಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಒಂದಾಗಿದೆ. ಇದು ಹೆಚ್ಚು ಜನಪ್ರಿಯ ಹೂಡಿಕೆ ಯೋಜನೆ ಎಂದೆನಿಸಿದೆ. ಆದರೆ ಗಂಡು ಹುಡುಗರಿಗಾಗಿ ಕೆಲವು ಸೀಮಿತ ಯೋಜನೆಗಳಿವೆ. ಅದರಲ್ಲೊಂದು ಪೊನ್ಮಗನ್ ಪೊದುವಾಯಿಪ್ಪ್ ನಿಧಿ. ಈ ಯೋಜನೆಯನ್ನು ತಮಿಳು ನಾಡು ಜಾರಿಗೆ ತಂದಿದ್ದು ಮಗುವಿಗೆ 10 ವರ್ಷವಾಗುವ ಮುನ್ನ ಆ ರಾಜ್ಯದ ಪೋಷಕರು ಮಗುವಿನ ಹೆಸರಿನಲ್ಲಿ ಪೋಸ್ಟ್ ಆಫೀಸ್ನಲ್ಲಿ ಖಾತೆ ತೆರೆಯಬಹುದಾಗಿದೆ.
ಕಿಸಾನ್ ವಿಕಾಸ್ ಪಾತ್ರ (Kisan Vikas Patra):
ಇದನ್ನು ಮೊದಲು 1988 ರಲ್ಲಿ ಪರಿಚಯಿಸಲಾಯಿತು ಹಾಗೂ ಕೆಲವೊಂದು ಬೇಡಿಕೆಗಳ ಮೇರೆಗೆ 2014 ರಲ್ಲಿ ಮರುಪರಿಚಯಿಸಲಾಯಿತು. ಇದು ಹೆಚ್ಚು ಜನಪ್ರಿಯ ಯೋಜನೆಯಾಗಿದೆ ಹಾಗೂ ಕೆಳ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಪ್ರಯೋಜನಕಾರಿಯಾಗಿದೆ. ಸರಕಾರದ ಉಳಿತಾಯ ಯೋಜನೆ ಇದಾಗಿದ್ದು ವಾರ್ಷಿಕವಾಗಿ ಆಕೆಯ/ಆತನ ಉಳಿತಾಯವನ್ನು ಒಂದು ದೊಡ್ಡ ಮೊತ್ತದಲ್ಲಿ ಹೂಡಿಕೆ ಮಾಡಬಹುದು. ಇದಕ್ಕೆ ಸರಕಾರವು ನಿರ್ಧರಿಸಿದ ಬಡ್ಡಿಯ ಮೊತ್ತವನ್ನು ಪಾವತಿಸುತ್ತದೆ. ಈ ಯೋಜನೆಯಡಿ ಹೂಡಿಕೆ ಮಾಡುವ ಮೊತ್ತ ಕನಿಷ್ಠ ರೂ 1000 ಆಗಿದೆ. ಹಾಗೂ ಗಂಡು ಮಗುವಿನ ವಯಸ್ಸು 18 ಕ್ಕಿಂತ ಕಡಿಮೆ ಇರಬೇಕು.
ಮಾರುಕಟ್ಟೆಯಲ್ಲಿ ಲಭ್ಯವಿರುವ ಸುರಕ್ಷಿತ ಹಾಗೂ ಸುಭದ್ರ ಉಳಿತಾಯ ಆಯ್ಕೆಯಾಗಿದೆ. ಈ ಯೋಜನೆಯಲ್ಲಿ ಸರಕಾರವು ಹೂಡಿಕೆ ಮತ್ತು ರಿಟರ್ನ್ಗಳೆರಡನ್ನೂ ನಿರ್ವಹಿಸುತ್ತದೆ ಮತ್ತು ಹೂಡಿಕೆದಾರರಿಗೆ ಪಾವತಿಸುವ ಮಾಸಿಕ ಪಾವತಿಗಳನ್ನು ಖಾತ್ರಿಪಡಿಸುತ್ತದೆ. ಮಗುವು 10 ಹಾಗೂ 18 ವಯಸ್ಸಿನ ಒಳಗಿರಬೇಕು.
ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಸಾರ್ವಜನಿಕ ಭವಿಷ್ಯ ನಿಧಿ - Public Provident Fund):
ಇದೊಂದು ಉಳಿತಾಯ ಯೋಜನೆಯಾಗಿದ್ದು ತೆರಿಗೆ ಉಳಿಸುವ ಗುರಿ ಹೊಂದಿದೆ. ಸಾರ್ವಜನಿಕ ಭವಿಷ್ಯ ನಿಧಿಯನ್ನು ಮೊದಲ ಬಾರಿಗೆ 1968 ರಲ್ಲಿ ಪರಿಚಯಿಸಲಾಯಿತು. ನೀವು ಹೂಡಿಕೆದಾರರಾಗಿ ಈ ಯೋಜನೆಯಲ್ಲಿ 15 ವರ್ಷಗಳವರೆಗೆ ಹೂಡಿಕೆ ಮಾಡಬಹುದು ಹಾಗೂ ನೀವು ಹೂಡಿಕೆ ಮಾಡಿದ ಮೊತ್ತಕ್ಕೆ ವಿವಿಧ ತೆರಿಗೆ ಪ್ರಯೋಜನಗಳನ್ನು ಪಡೆಯಬಹುದು.
ಮೇಲೆ ತಿಳಿಸಿದ ಕೆಲವೊಂದು ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳು ಗಂಡು ಮಕ್ಕಳಿಗಾಗಿ ಭಾರತದಲ್ಲಿ ಲಭ್ಯವಿರುವ ಯೋಜನೆಗಳಾಗಿವೆ. ನಿಮ್ಮ ಅಗತ್ಯಗಳು ಹಾಗೂ ಸಾಮರ್ಥ್ಯಗಳಿಗೆ ಅನುಗುಣವಾಗಿ ನಿಮ್ಮ ಹೆಸರು ಅಥವಾ ಮಗುವಿನ ಹೆಸರಿನಲ್ಲಿ ಯೋಜನೆಗಳಿಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಹಣ ಉಳಿತಾಯ ಮಾಡಲು ಹಾಗೂ ನಿಮ್ಮ ಮಗುವಿನ ಸುರಕ್ಷಿತ ಭವಿಷ್ಯಕ್ಕಾಗಿ ಈ ಯೋಜನೆಗಳನ್ನು ವಿನ್ಯಾಸಗೊಳಿಸಲಾಗಿದೆ.
Published by:Sharath Sharma Kalagaru
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ