ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ನಿವ್ವಳ ಆಸ್ತಿ ಮೌಲ್ಯವು 13.9 ಬಿಲಿಯನ್ ಡಾಲರ್ ಕುಸಿದ ನಂತರ ಫ್ರೆಂಚ್ ಐಷಾರಾಮಿ ಸಮೂಹ LVMH ಮೊಯೆಟ್ ಹೆನ್ನೆಸ್ಸಿ - ಲೂಯಿಸ್ ವಿಟಾನ್ ಕಂಪನಿಯ ಅಧ್ಯಕ್ಷ ಮತ್ತು CEO ಆಗಿರುವ ಫ್ರೆಂಚ್ ಉದ್ಯಮಿ ಬರ್ನಾರ್ಡ್ ಅರ್ನಾಲ್ಟ್ ಸದ್ಯ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದಾರೆ. ಅರ್ನಾಲ್ಟ್ ವಿಶ್ವದ ಶ್ರೀಮಂತ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುತ್ತಿರುವುದು ಇದೇ ಮೊದಲಲ್ಲ. ಅವರು 2019ರ ಡಿಸೆಂಬರ್‌ನಲ್ಲಿ, ಜನವರಿ 2020ರಲ್ಲಿ, ಮೇ 2021ರಲ್ಲಿ ಮತ್ತು ಜುಲೈ 2021ರಲ್ಲಿ ಮತ್ತೊಮ್ಮೆ ನಂಬರ್ 1 ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದರು. LVMHನಲ್ಲಿ ಫ್ರೆಂಚ್ ಉದ್ಯಮಿ 47.5% ಪಾಲನ್ನು ಹೊಂದಿದ್ದಾರೆ. ಲೂಯಿ ವಿಟಾನ್ ಮೊಯೆಟ್ ಹೆನ್ನೆಸ್ಸಿ 400 ಬಿಲಿಯನ್ ಡಾಲರ್‌ಗಿಂತ ಹೆಚ್ಚು ಮಾರುಕಟ್ಟೆ ಬಂಡವಾಳವನ್ನು ಹೊಂದಿದೆ. ಲೂಯಿಸ್ ವಿಟಾನ್, ಮೊಯಿಟ್ ಮತ್ತು ಚಾಂಡನ್, ಹೆನ್ನೆಸಿ ಕಾಗ್ನ್ಯಾಕ್, ಕ್ರಿಶ್ಚಿಯನ್ ಡಿಯರ್, ಮತ್ತು ಟಿಫಾನಿ & ಕೋ -ಕವರ್ ಫ್ಯಾಷನ್, ಆಭರಣಗಳು, ಸೌಂದರ್ಯವರ್ಧಕಗಳು, ವೈನ್‌ಗಳು ಮತ್ತು ಸ್ಪಿರಿಟ್‌ಗಳು LMVHನ ಅಂಗಸಂಸ್ಥೆಗಳು.
ಫೋರ್ಬ್ಸ್ ರಿಯಲ್-ಟೈಮ್ ಬಿಲಿಯನೇರ್‌ಗಳ ಪ್ರಕಾರ ಅರ್ನಾಲ್ಟ್ ಟಾಪ್ ಫ್ಯಾಷನ್ ಕಂಪನಿಗಳಾದ ಲೂಯಿಸ್ ವಿಟಾನ್, ಸೆಫೊರಾ, ಮೊಯೆಟ್ & ಚಾಂಡನ್, ಮತ್ತು ಟಿಫಾನಿ & ಕೋ ಮೂಲಕ ಗುರುವಾರ 199.1 ಬಿಲಿಯನ್ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿದ್ದರು.
ಇನ್ನು, Amazon.com ಕಂಪನಿಯಲ್ಲಿ ಬೆಜೋಸ್ 11 ಪ್ರತಿಶತದಷ್ಟು ಪಾಲನ್ನು ಹೊಂದಿದ್ದು, ಈ ಕಂಪನಿಯ ಎರಡನೇ ತ್ರೈಮಾಸಿಕ ಗಳಿಕೆ ನಿರೀಕ್ಷೆಗಿಂತ ದುರ್ಬಲವಾಗಿದೆ. ಆದರೂ, ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಮುಖ್ಯಸ್ಥ ಎಲಾನ್ ಮಸ್ಕ್‌ಗಿಂತ ಬೆಜೋಸ್‌ನ ನಿವ್ವಳ ಮೌಲ್ಯವು 13 ಬಿಲಿಯನ್ ಡಾಲರ್ ಹೆಚ್ಚಾಗಿದೆ. ಬೆಜೋಸ್‌ನ ನೈಜ ಸಮಯದ ನಿವ್ವಳ ಮೌಲ್ಯ 193.8 ಬಿಲಿಯನ್ ಡಾಲರ್ ಆಗಿದ್ದರೆ, ಎಲಾನ್ ಮಸ್ಕ್‌ನ ಮೌಲ್ಯವು 184.7 ಬಿಲಿಯನ್ ಡಾಲರ್ ಇದೆ.
ಬೆಜೋಸ್‌ನ ನಿವ್ವಳ ಮೌಲ್ಯ 590 ಮಿಲಿಯನ್ ಡಾಲರ್‌ನಷ್ಟು ಕುಸಿದಿದ್ದು, ಕಂಪನಿಯು ಎರಡನೇ ತ್ರೈಮಾಸಿಕ ಗಳಿಕೆಯನ್ನು ವರದಿ ಮಾಡಿದ ನಂತರ ಅಮೆಜಾನ್ ಸ್ಟಾಕ್ ಶುಕ್ರವಾರ ಶೇ. 7.6ರಷ್ಟು ಕುಸಿದಿದೆ.
ಐಷಾರಾಮಿ ಬ್ರ್ಯಾಂಡ್ LMVH ಏಷ್ಯಾ ಮತ್ತು ಯುಎಸ್ಎಗಳಲ್ಲಿ ಸಾಂಕ್ರಾಮಿಕ ಪೂರ್ವ ಮಾರಾಟ ಅಂಕಿಅಂಶಗಳನ್ನು ಹಂಚಿಕೊಳ್ಳುತ್ತಿದ್ದಾರೆ. LMVHನ ಹ್ಯಾಂಡ್‌ಬ್ಯಾಗ್ ಹಾಗೂ ಮದ್ಯ ಮಾರಾಟ ಯೂರೋಪ್ ಮಾರುಕಟ್ಟೆಯಲ್ಲಿ ಹೆಚ್ಚಾಗಿತ್ತು. ಅಲ್ಲದೆ, ಚೀನಾದಲ್ಲಿ LVMH ಒಟ್ಟಾರೆ ಮಾರಾಟ ಭಾರಿ ಏರಿಕೆಯನ್ನು ದಾಖಲಿಸಿದೆ. ಏಕೆಂದರೆ COVID-19 ಸಾಂಕ್ರಾಮಿಕ ರೋಗದಿಂದಾಗಿ ಮಂಕಾಗಿದ್ದ ದೇಶದ ಆರ್ಥಿಕತೆಯು ಚೇತರಿಕೆ ಕಾಣುತ್ತಿದೆ.
ಸಾಂಕ್ರಾಮಿಕ ರೋಗದ ಮೊದಲ ವರ್ಷದಲ್ಲಿ ಅರ್ನಾಲ್ಟ್ 100 ಬಿಲಿಯನ್ ಡಾಲರ್‌ಗಿಂತ ಹೆಚ್ಚು ಶ್ರೀಮಂತರಾದ ನಂತರ, LVMHನ ಮೌಲ್ಯ ಬೇಸಿಗೆಯಲ್ಲಿ ಹೆಚ್ಚಾಗಿರಲಿಲ್ಲ.
ಇನ್ನು, ಫೋರ್ಬ್ಸ್ ರಿಯಲ್ ಟೈಮ್ ಬಿಲಿಯನೇರ್‌ಗಳ ವಿಶ್ವದ ಟಾಪ್ 10 ಶ್ರೀಮಂತರ ಪಟ್ಟಿ ಇಲ್ಲಿದೆ:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ