Bentley luxury car: ಲಂಡನ್​ನಲ್ಲಿ ಕಾಣೆಯಾದ ದುಬಾರಿ ಬೆಂಟ್ಲಿ ಕಾರು ಪಾಕಿಸ್ತಾನದ ಮನೆಯೊಂದರಲ್ಲಿ ಪತ್ತೆ! ಕಳ್ಳ ಸಿಕ್ಕಿಬಿದ್ದದ್ದು ಹೇಗೆ ಗೊತ್ತಾ?

ಕರಾಚಿಯ ಕಸ್ಟಮ್ಸ್ ಎನ್ಫೋರ್ಸ್ಮೆಂಟ್ ಕಲೆಕ್ಟರೇಟ್ (ಸಿಸಿಇ) ಯುಕೆ ನ್ಯಾಷನಲ್ ಕ್ರೈಮ್ ಏಜೆನ್ಸಿಯಿಂದ ಮಾಹಿತಿಯನ್ನು ಪಡೆಯುತ್ತಾರೆ. ಇದರ ಅನ್ವಯ ನಗರದ ಡಿಎಚ್ಎ ಪ್ರದೇಶದ ಐಷಾರಾಮಿ ಮನೆಯೊಂದರ ಬಳಿ ನಿಲ್ಲಿಸಲಾಗಿದೆ ಎಂಬ ಸುಳಿವು ಸಿಕ್ಕಿತು. ಹೀಗಾಗಿ ಅಧಿಕಾರಿಗಳು ಆ ಮನೆಗೆ ದಾಳಿ ನಡೆಸುತ್ತಾರೆ. ಈ ವೇಳೆ ದುಬಾರಿ ಬೆಲೆಯ ಕದ್ದ ಬೆಂಟ್ಲಿ ಕಾರು ಸಿಕ್ಕಿದೆ.

ಬೆಂಟ್ಲಿ ಕಾರು

ಬೆಂಟ್ಲಿ ಕಾರು

 • Share this:
  ಲಂಡನ್ (London)​ ರಿಜಿಸ್ಟ್ರೇಶನ್​ ಹೊಂದಿದ್ದ ದುಬಾರಿ ಬೆಲೆಯ ಬೆಂಟ್ಲಿ ಕಾರು ಪಾಕಿಸ್ತಾನದಲ್ಲಿ (Pakistan) ಪತ್ತೆಯಾಗಿದೆ. ಸುಮಾರು 2.39 ಕೋಟಿ ಬೆಲೆಯ ಕಾರು ಇದಾಗಿದ್ದು, ಇತ್ತೀಚೆಗೆ ಕಾಣೆಯಾಗಿತ್ತು. ಆದರೀಗ ದುಬಾರಿ ಬೆಂಟ್ಲಿ ಕಾರು ಕರಾಚಿಯ (Karachi) ಬಂಗಲೆಯೊಂದರಲ್ಲಿ ಸಿಕ್ಕಿದೆ. ಆದರೆ ಈ ಕಾರನ್ನು ಅಧಿಕಾರಿಗಳು ಸುಲಭವಾಗಿ ಪತ್ತೆಹಚ್ಚಿದ್ದಾರೆ. ಜೊತೆಗೆ ಕಾರು ಕದ್ದ ಕಳ್ಳನನ್ನು ಮತ್ತು ಮನೆಯ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ. 

  ಕರಾಚಿಯ ಕಸ್ಟಮ್ಸ್ ಎನ್ಫೋರ್ಸ್ಮೆಂಟ್ ಕಲೆಕ್ಟರೇಟ್ (ಸಿಸಿಇ) ಯುಕೆ ನ್ಯಾಷನಲ್ ಕ್ರೈಮ್ ಏಜೆನ್ಸಿಯಿಂದ ಮಾಹಿತಿಯನ್ನು ಪಡೆಯುತ್ತಾರೆ. ಇದರ ಅನ್ವಯ ನಗರದ ಡಿಎಚ್ಎ ಪ್ರದೇಶದ ಐಷಾರಾಮಿ ಮನೆಯೊಂದರ ಬಳಿ ನಿಲ್ಲಿಸಲಾಗಿದೆ ಎಂಬ ಸುಳಿವು ಸಿಕ್ಕಿತು. ಹೀಗಾಗಿ ಅಧಿಕಾರಿಗಳು ಆ ಮನೆಗೆ ದಾಳಿ ನಡೆಸುತ್ತಾರೆ. ಈ ವೇಳೆ ದುಬಾರಿ ಬೆಲೆಯ ಕದ್ದ ಬೆಂಟ್ಲಿ ಕಾರು ಸಿಕ್ಕಿದೆ.

  ಕಳ್ಳರು ನಾಜೂಕಾಗಿ ಈ ಕಾರನ್ನು ಲಂಡನ್​ನಿಂದ ಪಾಕಿಸ್ತಾನಕ್ಕೆ ಸಾಗಿದ್ದಾರೆ. ಆದರೆ ಬೆಂಟ್ಲಿ ಕಾರಿನಲ್ಲಿರುವ ಅಳವಡಿಸಿರುವ ಟ್ರೇಸಿಂಗ್ ಟ್ರ್ಯಾಕರ್ ಅನ್ನು ತೆಗೆದು ಹಾಕಲು ವಿಫಲರಾಗಿದ್ದರು ಇದರಿಂದಾಗಿ ಕಾರು ಕದ್ದ ಕಳ್ಳರು ಸಿಕ್ಕಿಬಿದ್ದಿದ್ದಾರೆ.

  ಕಳ್ಳರಿಗೆ ಟ್ರೇಸಿಂಗ್ ಟ್ರ್ಯಾಕರ್ ಅನ್ನು ಸ್ವಿಚ್ ಆಫ್ ಮಾಡಲು ಸಾಧ್ಯವಾಗಿರಲಿಲ್ಲ. ಇದು ಸುಧಾರಿತ ಸಿಸ್ಟಂ ಆಗಿದ್ದು, ವಾಹನ ಯಾವುದೇ ಪ್ರದೇಶದಲ್ಲಿದ್ದರು ಟ್ರ್ಯಾಕ್ ಮಾಡಲು ಆಗುತ್ತದೆ. ಅದರಂತೆಯೇ ಕದ್ದ ಬೆಂಟ್ಲಿ ಕಾರನ್ನು ಪತ್ತೆಹಚ್ಚಲು ಯುಕೆ ಅಧಿಕಾರಿಗಳ ಸಹಾಯ ಕೇಳಿತು. ನಂತರ ಟ್ರ್ಯಾಕ್ ಮಾಡಿದಂತೆ ಕಾರು ಪಾಕಿಸ್ತಾನದ ಕರಾಚಿಯಲ್ಲಿದೆ ಎಂದು ತಿಳಿದುಬರುತ್ತದೆ.

  ಇದನ್ನೂ ಓದಿ: FIFA World Cup 2022: ಫುಟ್​ಬಾಲ್​ ಪಂದ್ಯ ವೀಕ್ಷಕರಿಗೆ ಬಿಯರ್​ ಸೇವಿಸಲು ಅನುಮತಿ ನೀಡಿದ ಕತಾರ್​ ಸರ್ಕಾರ!  ದಾಳಿಯ ಸಮಯದಲ್ಲಿ, ಅಧಿಕಾರಿಗಳು ಪಾಕಿಸ್ತಾನಿ ನೋಂದಣಿ ಮತ್ತು ನಂಬರ್ ಪ್ಲೇಟ್ ಹೊಂದಿರುವ ಬೆಂಟ್ಲಿಯನ್ನು ಕಂಡುಕೊಂಡರು. ತಪಾಸಣೆಯ ನಂತರ, ಕಾರಿನ ಚಾಸಿಸ್ ಸಂಖ್ಯೆಯು ಯುಕೆ ಅಧಿಕಾರಿಗಳು ಒದಗಿಸಿದ ಕದ್ದ ವಾಹನದ ವಿವರಗಳಿಗೆ ಹೊಂದಿಕೆಯಾಗಿದೆ. ಬಳಿಕ ಕದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
  ಮನೆಯ ಮಾಲೀಕರಿಗೆ ಕದ್ದ ಬೆಂಟ್ಲಿ ಕಾರಿನ ಸಮರ್ಪಕವಾದ ದಾಖಲೆ ನೀಡುವಂತೆ ಅಧಿಕಾರಿಗಳು ಕೇಳಿದರು. ಆದರೆ ಕದ್ದ ಕಾರು ಆಗಿರುವುದರಿಂದ ಮಾಲೀಕನ ಬಳಿ ಕಾರಿನ ಡಾಕ್ಯುಮೆಂಟ್ ಇರಲಿಲ್ಲ. ಕೊನೆಗೆ ಅಧಿಕಾರಿಗಳು ವಾಹನ ವಶಪಡಿಸಿಕೊಂಡಿದ್ದಾರೆ. ಜೊತೆಗೆ ಮನೆಯ ಮಾಲೀಕ ಮತ್ತು ದಾಳಿ ಮಾಡಿದ ದಲ್ಲಾಳಿಯನ್ನೂ ಬಂಧಿಸಲಾಗಿದೆ. ವಾಹನದ ನೋಂದಣಿ ನಕಲಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  ಇದನ್ನೂ ಓದಿ: Viral Video: ನ್ಯೂಸ್​ ಓದುವ ವೇಳೆ ಆ್ಯಂಕರ್​ ಬಾಯಿಯೊಳಕ್ಕೆ ಹೋದ ನೊಣ! ನಗು ತರಿಸುತ್ತೆ ಈ ವಿಡಿಯೋ

  ಇಡೀ ದಂಧೆಯಲ್ಲಿ ಭಾಗಿಯಾಗಿರುವವರು ಪೂರ್ವ ಯುರೋಪಿಯನ್ ದೇಶದ ಉನ್ನತ ರಾಜತಾಂತ್ರಿಕರ ದಾಖಲೆಗಳನ್ನು ಬಳಸಿಕೊಂಡು ಕಾರನ್ನು ಪಾಕಿಸ್ತಾನಕ್ಕೆ ಆಮದು ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

  ಕಳ್ಳರು ಪೂರ್ವ ಯುರೋಪಿಯನ್ ದೇಶದ ಉನ್ನತ ರಾಜತಾಂತ್ರಿಕರ ದಾಖಲೆಗಳನ್ನು ಬಳಸಿಕೊಂಡು ಕಾರನ್ನು ಕದ್ದಿದ್ದಾರೆ. ಅದರಲ್ಲೂ ದೂರದ ಲಂಡನ್ನಿಂದ ಪಾಕಿಸ್ತಾನಕ್ಕೆ ಆಮದು ಮಾಡಿಕೊಳ್ಳುವ ಮೂಲಕ ಯಶಸ್ವಿಯಾಗಿದರು. ಆದರೆ ಕದ್ದ ಕಳ್ಳರಿಗೆ ಕಾರಿನಲ್ಲಿ ಟ್ರ್ಯಾಕರ್ ಇದೆ ಎಂದು ತಿಳಿದಿಲ್ಲ. ಕೊನೆಗೆ ಅಧಿಕಾರಿಗಳು ದಾಳಿ ಮಾಡಿ ವಶಪಡಿಸಿಕೊಂಡಿದ್ದಾರೆ. ಕಳ್ಳರು ಜೈಲು ಪಾಲಾಗಿದ್ದಾರೆ. ಇನ್ನು ದುಬಾರಿ ಬೆಂಟ್ಲಿ ಕಾರು ಮತ್ತೆ ಲಂಡನ್ ಮಾಲೀಕನನ್ನು ಸೇರಿದೆ.
  Published by:Harshith AS
  First published: