• Home
 • »
 • News
 • »
 • national-international
 • »
 • Benjamin Netanyahu: ಇಸ್ರೇಲ್​ನಲ್ಲಿ ಮತ್ತೆ ಬೆಂಜಮಿನ್ ನೆತನ್ಯಾಹು ಅಧಿಕಾರಕ್ಕೆ; ಪ್ರಧಾನಿ ಮೋದಿ ಅಭಿನಂದನೆ

Benjamin Netanyahu: ಇಸ್ರೇಲ್​ನಲ್ಲಿ ಮತ್ತೆ ಬೆಂಜಮಿನ್ ನೆತನ್ಯಾಹು ಅಧಿಕಾರಕ್ಕೆ; ಪ್ರಧಾನಿ ಮೋದಿ ಅಭಿನಂದನೆ

ಬೆಂಜಮಿನ್ ನೆತನ್ಯಾಹು

ಬೆಂಜಮಿನ್ ನೆತನ್ಯಾಹು

ಇಸ್ರೇಲ್ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದ ಬೆಂಜಮಿನ್ ನೆತನ್ಯಾಹು ಅವರನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ ಅಭಿನಂದಿಸಿದರು.

 • News18 Kannada
 • Last Updated :
 • New Delhi, India
 • Share this:

  ಇಸ್ರೇಲ್​ ಮಾಜಿ ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ನೇತೃತ್ವದ ಒಕ್ಕೂಟವು 120 ಸ್ಥಾನಗಳ ಸಂಸತ್ತಿನಲ್ಲಿ ಬಹುಪಾಲು ಸ್ಥಾನಗಳನ್ನು ಗೆದ್ದಿದೆ. ಒಕ್ಕೂಟವು ಗೆದ್ದಿರುವ 120 ಸ್ಥಾನಗಳ ಸಂಸತ್ತಿನಲ್ಲಿ 64 ಸ್ಥಾನಗಳಲ್ಲಿ 32 ಸ್ಥಾನಗಳು ನೆತನ್ಯಾಹು ಅವರ ಪಕ್ಷದ್ದಾಗಿದೆ. ಈ ಮೂಲಕ ಗುರುವಾರ ಪ್ರಕಟವಾದ ಅಂತಿಮ ಚುನಾವಣಾ ಫಲಿತಾಂಶವು (Israel  Election Results) ನೆತನ್ಯಾಹು ಮತ್ತು ಅವರ ಅಲ್ಟ್ರಾನ್ಯಾಶನಲಿಸ್ಟ್ ಮಿತ್ರರಾಷ್ಟ್ರಗಳನ್ನು ಮತ್ತೆ ಅಧಿಕಾರಕ್ಕೆ ಗದ್ದುಗೆಗೆ ತಂದಿದೆ. ಯೈರ್ ಲ್ಯಾಪಿಡ್ ನೇತೃತ್ವದ ಪ್ರಸ್ತುತ ಒಕ್ಕೂಟದಲ್ಲಿ ಅವರ ಎದುರಾಳಿಗಳು 51 ಸ್ಥಾನಗಳನ್ನು ಗೆದ್ದಿದ್ದರು. ಉಳಿದ ಸ್ಥಾನಗಳೂ ಅಷ್ಟೇನೂ ಮಹತ್ವ ಪಡೆಯದ ಅರಬ್ ಪಕ್ಷದ ಪಾಲಾಗಿತ್ತು.


  ಬುಧವಾರ ಸರಿಸುಮಾರು 85 ಪ್ರತಿಶತ ಮತಗಳನ್ನು ಎಣಿಸಿದಾಗ, ನೆತನ್ಯಾಹು ಅವರು "ಅತ್ಯಂತ ದೊಡ್ಡ ಗೆಲುವಿನ ಅಂಚಿನಲ್ಲಿರುವ ಕುರಿತು  ಬೆಂಬಲಿಗರಿಗೆ ತಿಳಿಸಿದ್ದರು. ಅಲ್ಲದೇ ಅದೇ ಸಂದರ್ಭದಲ್ಲಿ ಇಸ್ರೇಲ್​ನಲ್ಲಿ "ಸ್ಥಿರ, ರಾಷ್ಟ್ರೀಯ ಸರ್ಕಾರ" ರಚಿಸುವುದಾಗಿ ಭರವಸೆ ನೀಡಿದರು.


  ಉಸ್ತುವಾರಿ ಪ್ರಧಾನಿ ಯೈರ್ ಲ್ಯಾಪಿಡ್ ಸೋಲು
  ಬೆಂಜಮಿನ್ ನೆತನ್ಯಾಹು ಪುನರಾಗಮನದಿಂದ ಇಸ್ರೇಲ್‌ನ ಉಸ್ತುವಾರಿ ಪ್ರಧಾನ ಮಂತ್ರಿ ಯೈರ್ ಲ್ಯಾಪಿಡ್ ಸೋಲನುಭವಿಸುವಂತಾಗಿದೆ.  ತಮ್ಮ ಪ್ರತಿಸ್ಪರ್ಧಿ ಬೆಂಜಮಿನ್ ನೆತನ್ಯಾಹು ಅವರ ವಿಜಯಕ್ಕೆ  ಇಸ್ರೇಲ್‌ನ ಉಸ್ತುವಾರಿ ಪ್ರಧಾನ ಮಂತ್ರಿ ಯೈರ್ ಲ್ಯಾಪಿಡ್ ಅಭಿನಂದನೆ ಸಲ್ಲಿಸಿದ್ದಾರೆ.


  ಇದನ್ನೂ ಓದಿ: Imran Khan: ಇಮ್ರಾನ್ ಖಾನ್ ಮೇಲೆ ಗುಂಡಿನ ದಾಳಿ, ಪಾಕ್ ಮಾಜಿ ಪ್ರಧಾನಿಗೆ ಗಾಯ


  ಪ್ರಧಾನಿ ನರೇಂದ್ರ ಮೋದಿಯಿಂದ ಅಭಿನಂದನೆ
  ಇಸ್ರೇಲ್ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದ ಬೆಂಜಮಿನ್ ನೆತನ್ಯಾಹು ಅವರನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ ಅಭಿನಂದಿಸಿದರು. ಪ್ರಧಾನಿ ಮೋದಿ ಅವರು ಟ್ವಿಟರ್‌ನಲ್ಲಿ ಹೀಬ್ರೂ ಭಾಷೆಯಲ್ಲಿ ಬರೆದಿದ್ದು, "ಭಾರತ ಮತ್ತು ಇಸ್ರೇಲ್ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯನ್ನು ಗಾಢಗೊಳಿಸಲು ನಮ್ಮ ಜಂಟಿ ಪ್ರಯತ್ನಗಳನ್ನು ಮುಂದುವರಿಸಲು ನಾನು ಎದುರು ನೋಡುತ್ತಿದ್ದೇನೆ" ಎಂದು ಹೇಳಿದ್ದಾರೆ.  ಇದನ್ನೂ ಓದಿ: Virus: ಹಿಮನದಿಗಳಲ್ಲಿ 15,000 ವರ್ಷ ಹಳೆಯ ಪುರಾತನ ವೈರಸ್‌ ಪತ್ತೆ!


  ನಿರ್ಗಮಿತ ಪ್ರಧಾನಿಗೂ ಧನ್ಯವಾದ
  ಭಾರತ ಮತ್ತು ಇಸ್ರೇಲ್‌ನ ಕಾರ್ಯತಂತ್ರದ ಸಹಭಾಗಿತ್ವಕ್ಕೆ ನೀಡಿದ ಪ್ರಮುಖ ಕೊಡುಗೆಗಾಗಿ  ಪ್ರಧಾನಿ ನರೇಂದ್ರ ಮೋದಿ ನಿರ್ಗಮಿಸುತ್ತಿರುವ ಇಸ್ರೇಲಿ ಪ್ರಧಾನಿ ಯೈರ್ ಲ್ಯಾಪಿಡ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. "ನಮ್ಮ ಜನರ ಪರಸ್ಪರ ಪ್ರಯೋಜನಕ್ಕಾಗಿ ನಮ್ಮ ಫಲಪ್ರದ ವಿಚಾರಗಳ ವಿನಿಮಯವನ್ನು ಮುಂದುವರಿಸಲು ನಾನು ಭಾವಿಸುತ್ತೇನೆ" ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.


  ಹೊಸ ಸರ್ಕಾರ ರಚನೆಯ ಕುರಿತು ಈಗಾಗಲೇ ಮಾತುಕತೆ ಪ್ರಾರಂಭ
  ನೆತನ್ಯಾಹು ಅವರು ಈಗಾಗಲೇ ಹೊಸ ಸರ್ಕಾರದ ರಚನೆಯ ಕುರಿತು ಸಮ್ಮಿಶ್ರ ಪಾಲುದಾರರೊಂದಿಗೆ ಮಾತುಕತೆಗಳನ್ನು ಪ್ರಾರಂಭಿಸಿದ್ದಾರೆ ಎಂದು ಇಸ್ರೇಲಿ ಮಾಧ್ಯಮ ವರದಿ ಮಾಡಿದೆ. ಆದರೆ ಅವರ ಲಿಕುಡ್ ಪಕ್ಷದಿಂದ ಈ ಕುರಿತು ತಕ್ಷಣದ ದೃಢೀಕರಣ ದೊರೆತಿಲ್ಲ.


  ಸರ್ಕಾರ ರಚಿಸಲು 42 ದಿನಗಳ ಕಾಲಾವಕಾಶ
  ಗೆಲುವು ದೃಢಪಟ್ಟಿದ್ದರೂ, ಅಧ್ಯಕ್ಷ ಐಸಾಕ್ ಹೆರ್ಜೋಗ್ ಮುಂದಿನ ವಾರ ನೆತನ್ಯಾಹುಗೆ ಸರ್ಕಾರ ರಚಿಸಲು 42 ದಿನಗಳ ಕಾಲಾವಕಾಶ ನೀಡಲಿದ್ದಾರೆ. ಇಸ್ರೇಲ್‌ನ ಇತಿಹಾಸದಲ್ಲಿ ಅತಿ ಹೆಚ್ಚು ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿರುವ ಬೆಂಜಮಿನ್ ನೆತನ್ಯಾಹು, ನಂತರ ತಮ್ಮ ಸಮ್ಮಿಶ್ರ ಪಾಲುದಾರರೊಂದಿಗೆ ಕ್ಯಾಬಿನೆಟ್ ಹುದ್ದೆಗಳನ್ನು ಹಂಚಿಕೊಳ್ಳುವ ಕಾರ್ಯವನ್ನು ನಿರ್ವಹಿಸಲಿದ್ದಾರೆ.

  Published by:ಗುರುಗಣೇಶ ಡಬ್ಗುಳಿ
  First published: