• Home
 • »
 • News
 • »
 • national-international
 • »
 • Benjamin Netanyahu: 6ನೇ ಬಾರಿ ಇಸ್ರೇಲ್ ಪ್ರಧಾನಿಯಾದ ಬೆಂಜಮಿನ್ ನೆತನ್ಯಾಹು

Benjamin Netanyahu: 6ನೇ ಬಾರಿ ಇಸ್ರೇಲ್ ಪ್ರಧಾನಿಯಾದ ಬೆಂಜಮಿನ್ ನೆತನ್ಯಾಹು

ಬೆಂಜಮಿನ್ ನೆತನ್ಯಾಹು

ಬೆಂಜಮಿನ್ ನೆತನ್ಯಾಹು

120 ಸದಸ್ಯರ ನೆಸೆಟ್‌ ಅಥವಾ ಇಸ್ರೇಲಿ ಸಂಸತ್ತಿನಲ್ಲಿ 63 ಶಾಸಕರ ಬೆಂಬಲವನ್ನು ಬೆಂಜಮಿನ್ ನೆತನ್ಯಾಹು ಹೊಂದಿದ್ದಾರೆ.

 • News18 Kannada
 • 5-MIN READ
 • Last Updated :
 • New Delhi, India
 • Share this:

ಬೆಂಜಮಿನ್ ನೆತನ್ಯಾಹು (Benjamin Netanyahu) ಇಸ್ರೇಲ್‌ನ ಪ್ರಧಾನ ಮಂತ್ರಿಯಾಗಿ (Israel Prime Minister) ಆರನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. 73ರ ಹರೆಯದ ನೆತನ್ಯಾಹು, ಈಗಾಗಲೇ ಇಸ್ರೇಲ್‌ನ ದೀರ್ಘಾವಧಿಯ ಪ್ರಧಾನ ಮಂತ್ರಿಯಾಗಿದ್ದು, 120 ಸದಸ್ಯರ ನೆಸೆಟ್‌ ಅಥವಾ ಇಸ್ರೇಲಿ ಸಂಸತ್ತಿನಲ್ಲಿ 63 ಶಾಸಕರ ಬೆಂಬಲವನ್ನು ಬೆಂಜಮಿನ್ ನೆತನ್ಯಾಹು ಹೊಂದಿದ್ದಾರೆ. ಸದನದಲ್ಲಿ 54 ಶಾಸಕರು ಅವರ ಸರ್ಕಾರದ ವಿರುದ್ಧ ಮತ ಚಲಾಯಿಸಿದ್ದಾರೆ.


ಹೊಸ ಸರ್ಕಾರವನ್ನು ಬೆಂಬಲಿಸುವ ಎಲ್ಲಾ ಶಾಸಕರು ಬಲಪಂಥೀಯರಾಗಿದ್ದಾರೆ. ಬೆಂಜಮಿನ್ ನೆತನ್ಯಾಹು ಅವರ ಲಿಕುಡ್ ಪಕ್ಷಕ್ಕೆ ಅಲ್ಟ್ರಾ-ಆರ್ಥೊಡಾಕ್ಸ್ ಶಾಸ್, ಯುನೈಟೆಡ್ ಟೋರಾ ಜುದಾಯಿಸಂ, ಬಲಪಂಥೀಯ ಓಟ್ಜ್ಮಾ ಯೆಹೂದಿಟ್, ರಿಲಿಜಿಯಸ್ ಝಿಯೋನಿಸ್ಟ್ ಪಾರ್ಟಿ ಮತ್ತು ನೋಮ್ ಬೆಂಬಲವನ್ನು ಘೋಷಣೆ ಮಾಡಿವೆ.


ಹೊಸ ಸ್ಪೀಕರ್ ಆಯ್ಕೆ ಮಾಡಿದ ಇಸ್ರೇಲ್ ಸಂಸತ್
ಇಸ್ರೇಲ್‌ನ 37 ನೇ ಸರ್ಕಾರದ ವಿಶ್ವಾಸ ಮತಕ್ಕೆ ಸ್ವಲ್ಪ ಮೊದಲು ಇಸ್ರೇಲ್ ಸಂಸತ್ತು ತನ್ನ ಹೊಸ ಸ್ಪೀಕರ್ ಆಗಿ ಲಿಕುಡ್ ಶಾಸಕ ಅಮೀರ್ ಒಹಾನಾ ಅವರನ್ನು ಆಯ್ಕೆ ಮಾಡಿದೆ.


ಈ ಮುಂಚೆ ಚುನಾವಣೆಯ ಮತ ಎಣಿಕೆಯ ಸಂದರ್ಭದಲ್ಲಿ ಸರಿಸುಮಾರು 85 ಪ್ರತಿಶತ ಮತಗಳನ್ನು ಎಣಿಸಿದಾಗ ನೆತನ್ಯಾಹು ಅವರು "ಅತ್ಯಂತ ದೊಡ್ಡ ಗೆಲುವಿನ ಅಂಚಿನಲ್ಲಿರುವ ಕುರಿತು ಬೆಂಬಲಿಗರಿಗೆ ತಿಳಿಸಿದ್ದರು. ಅಲ್ಲದೇ ಅದೇ ಸಂದರ್ಭದಲ್ಲಿ ಇಸ್ರೇಲ್​ನಲ್ಲಿ "ಸ್ಥಿರ, ರಾಷ್ಟ್ರೀಯ ಸರ್ಕಾರ" ರಚಿಸುವುದಾಗಿ ಭರವಸೆ ನೀಡಿದರು.


ಉಸ್ತುವಾರಿ ಪ್ರಧಾನಿ ಯೈರ್ ಲ್ಯಾಪಿಡ್ ಸೋಲು
ಬೆಂಜಮಿನ್ ನೆತನ್ಯಾಹು ಪುನರಾಗಮನದಿಂದ ಇಸ್ರೇಲ್‌ನ ಉಸ್ತುವಾರಿ ಪ್ರಧಾನ ಮಂತ್ರಿ ಯೈರ್ ಲ್ಯಾಪಿಡ್ ಸೋಲನುಭವಿಸುವಂತಾಗಿದೆ. ತಮ್ಮ ಪ್ರತಿಸ್ಪರ್ಧಿ ಬೆಂಜಮಿನ್ ನೆತನ್ಯಾಹು ಅವರ ವಿಜಯಕ್ಕೆ ಇಸ್ರೇಲ್‌ನ ಉಸ್ತುವಾರಿ ಪ್ರಧಾನ ಮಂತ್ರಿ ಯೈರ್ ಲ್ಯಾಪಿಡ್ ಅಭಿನಂದನೆ ಸಲ್ಲಿಸಿದ್ದಾರೆ.


ಇದನ್ನೂ ಓದಿ: Benjamin Netanyahu: 6ನೇ ಬಾರಿ ಇಸ್ರೇಲ್ ಪ್ರಧಾನಿಯಾದ ಬೆಂಜಮಿನ್ ನೆತನ್ಯಾಹು


ಪ್ರಧಾನಿ ನರೇಂದ್ರ ಮೋದಿಯಿಂದ ಅಭಿನಂದನೆ
ಇಸ್ರೇಲ್ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದ ಬೆಂಜಮಿನ್ ನೆತನ್ಯಾಹು ಅವರನ್ನು ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಫಲಿತಾಂಶ ಬಂದ ಸಂದರ್ಭದಲ್ಲೇ ಅಭಿನಂದಿಸಿದ್ದರು. ಪ್ರಧಾನಿ ಮೋದಿ ಅವರು ಟ್ವಿಟರ್‌ನಲ್ಲಿ ಹೀಬ್ರೂ ಭಾಷೆಯಲ್ಲಿ ಬರೆದಿದ್ದು, "ಭಾರತ ಮತ್ತು ಇಸ್ರೇಲ್ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯನ್ನು ಗಾಢಗೊಳಿಸಲು ನಮ್ಮ ಜಂಟಿ ಪ್ರಯತ್ನಗಳನ್ನು ಮುಂದುವರಿಸಲು ನಾನು ಎದುರು ನೋಡುತ್ತಿದ್ದೇನೆ" ಎಂದು ಹೇಳಿದ್ದರು.


ಇದನ್ನೂ ಓದಿ: Heeraben Modi: ಪ್ರಧಾನಿ ಮೋದಿ ತಾಯಿ ಹೀರಾಬೆನ್​ ನಿಧನಕ್ಕೆ ಸಿಎಂ ಬೊಮ್ಮಾಯಿ ಸಂತಾಪ


ನಿರ್ಗಮಿತ ಪ್ರಧಾನಿಗೂ ಧನ್ಯವಾದ
ಭಾರತ ಮತ್ತು ಇಸ್ರೇಲ್‌ನ ಕಾರ್ಯತಂತ್ರದ ಸಹಭಾಗಿತ್ವಕ್ಕೆ ನೀಡಿದ ಪ್ರಮುಖ ಕೊಡುಗೆಗಾಗಿ ಪ್ರಧಾನಿ ನರೇಂದ್ರ ಮೋದಿ ನಿರ್ಗಮಿಸುತ್ತಿರುವ ಇಸ್ರೇಲಿ ಪ್ರಧಾನಿ ಯೈರ್ ಲ್ಯಾಪಿಡ್ ಅವರಿಗೆ ಧನ್ಯವಾದ ಅರ್ಪಿಸಿದ್ದರು. "ನಮ್ಮ ಜನರ ಪರಸ್ಪರ ಪ್ರಯೋಜನಕ್ಕಾಗಿ ನಮ್ಮ ಫಲಪ್ರದ ವಿಚಾರಗಳ ವಿನಿಮಯವನ್ನು ಮುಂದುವರಿಸಲು ನಾನು ಭಾವಿಸುತ್ತೇನೆ" ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದರು.

Published by:ಗುರುಗಣೇಶ ಡಬ್ಗುಳಿ
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು