Bengaluru vs Hyderabad: ತೆಲಂಗಾಣ ಸಚಿವ ಕೆಟಿಆರ್, ಡಿಕೆ ಶಿವಕುಮಾರ್ ಮಧ್ಯೆ ಏನಿದು ಪೈಪೋಟಿ?

ಸಂಭಾಷಣೆ ಮುಂದುವರೆಸಿದ ಕೆ.ಟಿ.ರಾಮರಾವ್, ಅಣ್ಣಾ ನನಗೆ ಕರ್ನಾಟಕ ರಾಜಕೀಯ ಗೊತ್ತಿಲ್ಲ. ಆದರೆ ಹೈದ್ರಾಬಾದ್​ ಹಾಗೂ ಬೆಂಗಳೂರಿನ ಮಧ್ಯೆ ಅಭಿವೃದ್ಧಿ ವಿಷಯದಲ್ಲಿ ಆರೋಗ್ಯಕರ ಸ್ಪರ್ಧೆ ಇರಲಿ ಎಂದಿದ್ದಾರೆ.

ಕೆ.ಟಿ.ರಾಮರಾವ್ , ಡಿ.ಕೆ. ಶಿವಕುಮಾರ್

ಕೆ.ಟಿ.ರಾಮರಾವ್ , ಡಿ.ಕೆ. ಶಿವಕುಮಾರ್

  • Share this:
ನವದೆಹಲಿ: ಕಳೆದ ಕೆಲದ ದಿನಗಳಿಂದ ಕರ್ನಾಟಕ ಹಿಜಾಬ್(Hijab Controversy)​​, ಹಲಾಲ್​​ ಕಟ್​​​ vs ಜಟ್ಕಾ ಕಟ್​ (Halal cut vs Jhatka cut) ವಿವಾದಗಳಿಗೆ ಸಂಬಂಧಿಸಿದಂತೆ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗುತ್ತಲೇ ಇದೆ. ಈ ವಿಷಯಗಳ ರಾಜಕೀಯ ಪ್ರೇರಿತವಾಗಿರುವ ಬಗ್ಗೆ ಉದ್ಯಮಿಗಳು ಸಾಮಾಜಿಕ ಜಾಲತಾಣದಲ್ಲಿ ಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿಲಿಕಾನ್​​ ಸಿಟಿಗೆ ಅಭಿವೃದ್ಧಿಯ ಮಾತು ಬೇಕಾಗಿದೆ ಎಂದು ಟ್ವೀಟ್​ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ತೆಲಂಗಾಣ ಸಚಿವ ಕೆ.ಟಿ.ರಾಮರಾವ್ (Telangana Minister KT Rama Rao) ಕೂಡಲೇ ಬ್ಯಾಗ್​ ಪ್ಯಾಕ್​ ಮಾಡಿಕೊಂಡು ಹೈದ್ರಾಬಾದ್​​ಗೆ ಬಂದು ಬಿಡಿ. ನಮ್ಮಲ್ಲಿ ಎಲ್ಲಾ ರೀತಿಯ ಮೂಲಸೌಕರ್ಯಗಳು ಲಭ್ಯವಿದೆ ಎಂದು ಟ್ವೀಟ್​ ಮಾಡಿದ್ದರು. ಇದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ (Karnataka Congress chief DK Shivakumar) ಪ್ರತಿಕ್ರಿಯಿಸಿದ್ದು, ಮುಂದಿನ ವರ್ಷ ಕಾಂಗ್ರೆಸ್​ ಅಧಿಕಾರಕ್ಕೆ ಬರುತ್ತೆ. ಆಗ ನಿಮ್ಮ ಸವಾಲನ್ನು ಸ್ವೀಕರಿಸಿ ಬೆಂಗಳೂರನ್ನು ಅಭಿವೃದ್ಧಿಯೆಡೆಗೆ ತರಲಾಗುವುದು ಎಂದು ಟ್ವೀಟಿಸಿದ್ದಾರೆ. ಸಂಭಾಷಣೆ ಮುಂದುವರೆಸಿದ ಕೆ.ಟಿ.ರಾಮರಾವ್, ಅಣ್ಣಾ ನನಗೆ ಕರ್ನಾಟಕ ರಾಜಕೀಯ ಗೊತ್ತಿಲ್ಲ. ಆದರೆ ಹೈದ್ರಾಬಾದ್​ ಹಾಗೂ ಬೆಂಗಳೂರಿನ ಮಧ್ಯೆ ಅಭಿವೃದ್ಧಿ ವಿಷಯದಲ್ಲಿ ಆರೋಗ್ಯಕರ ಸ್ಪರ್ಧೆ ಇರಲಿ ಎಂದಿದ್ದಾರೆ. ಉಭಯ ರಾಜ್ಯಗಳ ರಾಜಕೀಯ ನಾಯಕರ ಟ್ವಿಟ್ಟರ್​​​ ಸಂಭಾಷಣೆ ಸದ್ಯ ಎಲ್ಲರ ಗಮನ ಸೆಳೆದಿದೆ.

ಇದನ್ನೂ ಓದಿ: ಹಿಜಾಬ್​, ಹಲಾಲ್ ಆಯ್ತು ಇದೀಗ ಮಸೀದಿ ಮೈಕ್​ ನಿಷೇಧಕ್ಕೆ ಆಗ್ರಹ; ನಿಮ್ಮ ಅಲ್ಲಾ ಕಿವುಡಾನಾ ಅಂದ್ರು ಈ ಸ್ವಾಮೀಜಿ

ಸವಾಲು ಸ್ವೀಕರಿಸಿದ ಡಿಕೆಶಿ

ಬೆಂಗಳೂರಿನ ಮೂಲಸೌಕರ್ಯ ಕುರಿತು ಹೌಸಿಂಗ್ ಡಾಟ್ ಕಾಮ್ ಮತ್ತು ಖಾತಾಬುಕ್ ಸಂಸ್ಥಾಪಕ ರವೀಶ್ ನರೇಶ್ ಅವರ ದೂರಿಗೆ ತೆಲಂಣಗಾಣ ಸಚಿವ ಕೆಟಿಆರ್ ನೀಡಿದ ಉತ್ತರಕ್ಕೆ ಡಿಕೆ ಶಿವಕುಮಾರ್, ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಐಟಿ ನಗರದ ವೈಭವವನ್ನು ಮರುಸ್ಥಾಪಿಸುತ್ತದೆ ಎಂದು ಹೇಳಿದರು.

ವಿರೋಧ ಪಕ್ಷಗಳ ವಾದ

ಬಿಜೆಪಿ ಆಡಳಿತದ ಕರ್ನಾಟಕ, ಐಟಿ ಮತ್ತು ಸ್ಟಾರ್ಟ್‌ಅಪ್ ಹಬ್ ಬೆಂಗಳೂರಿನ ತವರು. ಇತ್ತೀಚೆಗೆ ಬೆಳೆಯುತ್ತಿರುವ ಬಲಪಂಥೀಯ ಧಾರ್ಮಿಕ ಚಟುವಟಿಕೆಗಾಗಿ ಹೆಚ್ಚು ಸುದ್ದಿಯಲ್ಲಿದೆ. ಮುಸ್ಲಿಮರು ಏನು ಧರಿಸುತ್ತಾರೆ, ತಿನ್ನುತ್ತಾರೆ ಮತ್ತು ವ್ಯಾಪಾರ ಮಾಡುವುದನ್ನು ಬಿಜೆಪಿ ಟಾರ್ಗೆಟ್​​ ಮಾಡುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ.  ಬಲವಂತದ ಧಾರ್ಮಿಕ ಮತಾಂತರದ ಆರೋಪದ ಮೇಲೆ ರಾಜ್ಯದಲ್ಲಿ ಕ್ರಿಶ್ಚಿಯನ್ ಗುಂಪುಗಳು ದಾಳಿಗೆ ಒಳಗಾಗಿವೆ.

ಕಿರಣ್ ಮಜುಂದಾರ್ ಶಾ ಎಚ್ಚರಿಕೆ

ಕಳೆದ ವಾರ, ದೇವಸ್ಥಾನದ ಉತ್ಸವಗಳಿಂದ ಮುಸ್ಲಿಂ ವ್ಯಾಪಾರಿಗಳನ್ನು ನಿಷೇಧಿಸುವಂತೆ ಬಲಪಂಥೀಯ ಗುಂಪುಗಳ ಕರೆಗೆ ಸಂಬಂಧಿಸಿದಂತೆ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸಿ ರಾಜ್ಯದಲ್ಲಿ "ಹೆಚ್ಚುತ್ತಿರುವ ಧಾರ್ಮಿಕ ವಿಭಜನೆಯನ್ನು ಪರಿಹರಿಸಬೇಕು" ಎಂದು ಎಚ್ಚರಿಸಿದರು. ಟೆಕ್ ವಲಯವು ಕೋಮುವಾದವಾಗುತ್ತದೆ ಅದು ಅದರಲ್ಲಿ ಭಾರತದ ಜಾಗತಿಕ ನಾಯಕತ್ವವನ್ನು "ನಾಶ" ಮಾಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದರು.

ಇದನ್ನೂ ಓದಿ: AP New Districts: ಆಂಧ್ರದಲ್ಲಿ ಜಿಲ್ಲೆಗಳ ಸಂಖ್ಯೆ ದ್ವಿಗುಣ: ಹೊಸದಾಗಿ 13 ಜಿಲ್ಲೆಗಳ ಘೋಷಣೆ.. ಪಟ್ಟಿ ಇಲ್ಲಿದೆ

ಏಷ್ಯಾನಲ್ಲಿ ತಂತ್ರಜ್ಞಾನ ಉದ್ಯಮದ ಉನ್ನತ ಕೇಂದ್ರಗಳಲ್ಲಿ ಗುರುತಿಸಿಕೊಂಡಿರುವ ತೆಲಂಗಾಣದ ಹೈದರಾಬಾದ್ ಮತ್ತು ಕರ್ನಾಟಕದ ಬೆಂಗಳೂರು ಉದ್ಯಮಗಳು ಮತ್ತು ಪ್ರತಿಭೆಗಳನ್ನು ಸೆಳೆಯಲು ಪೈಪೋಟಿಯನ್ನು ನಡೆಸಿವೆ.  ಈ ನಿಟ್ಟಿನಲ್ಲಿ ಉಭಯ ರಾಜ್ಯಗಳು ಐಟಿ ವಲಯಕ್ಕೆ ಅಪಾರ ಪ್ರೋತ್ಸಾಹ ಮತ್ತು ಸಂಪನ್ಮೂಲಗಳನ್ನು ನೀಡುತ್ತಿದೆ.

ತೆಲಂಗಾಣದಲ್ಲಿ 13 ಹೊಸ ಜಿಲ್ಲೆಗಳು

ಆಂಧ್ರ ಪ್ರದೇಶವು ಸೋಮವಾರ ಹೊಸ ಆಡಳಿತಾತ್ಮಕ ನಕ್ಷೆಯನ್ನು ಪಡೆದುಕೊಂಡಿದೆ. 13 ಹೊಸ ಜಿಲ್ಲೆಗಳ ರಚನೆಯೊಂದಿಗೆ ಅವುಗಳ ಸಂಖ್ಯೆಯನ್ನು 26 ಕ್ಕೆ ದ್ವಿಗುಣಗೊಳಿಸಲಾಗಿದೆ. ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ಬೆಳಿಗ್ಗೆ ಸಮಾರಂಭದಲ್ಲಿ ಹೊಸ ಜಿಲ್ಲೆಗಳನ್ನು ಪ್ರಾರಂಭಿಸಿದರು. 2019 ರ ವಿಧಾನಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ, ತಮ್ಮ ಪಕ್ಷವು ಅಧಿಕಾರಕ್ಕೆ ಬಂದರೆ, 25 ಲೋಕಸಭಾ ಕ್ಷೇತ್ರಗಳಲ್ಲಿ ಪ್ರತಿಯೊಂದನ್ನು ಜಿಲ್ಲೆಯನ್ನಾಗಿ ಮಾಡುವುದಾಗಿ ಭರವಸೆ ನೀಡಿದ್ದರು.
Published by:Kavya V
First published: