Bengaluru Rains: ಬೆಂಗಳೂರನ್ನು ಅಪಹಾಸ್ಯ ಮಾಡಬೇಡಿ; ತೆಲಂಗಾಣ ಸಚಿವರ ಮನವಿ

ಇದೀಗ ಮಳೆಯಿಂದ ಬೆಂಗಳೂರಿನಲ್ಲಿ ಉಂಟಾದ ಪರಿಸ್ಥಿತಿಯನ್ನು ಮುಂದಿಟ್ಟುಕೊಂಡು ತೆಲಂಗಾಣ ಸಚಿವ ಕೆಟಿ ರಾಮರಾವ್ ಮಾತನಾಡಿದ್ದಾರೆ.

ಬೆಂಗಳೂರು ಮಳೆ

ಬೆಂಗಳೂರು ಮಳೆ

  • Share this:
    ಬೆಂಗಳೂರು ಭಾರೀ ಮಳೆಯಿಂದ ತತ್ತರಿಸಿಹೋಗಿದೆ. ಬೆಂಗಳೂರು ಮಳೆ (Bengaluru Rains) ರಾಷ್ಟ್ರಮಟ್ಟದಲ್ಲಿ ಟೀಕೆ-ಟ್ರೋಲ್​ಗಳ ಸುರಿಮಳೆಯನ್ನೇ ಹುಟ್ಟುಹಾಕಿದೆ. ಇದು ಈ ಮೊದಲಿಂದಲೂ ನಡೆಯುತ್ತಿದ್ದ ಬೆಂಗಳೂರು-ಹೈದರಾಬಾದ್ ನಡುವಿನ ಐಟಿ ಹಬ್ ಹಗ್ಗಜಗ್ಗಾಟಕ್ಕೂ ಕಾರಣವಾಗಿದೆ. ದೇಶದ ಐಟಿ ಹಬ್ (IT Hub Bengaluru) ಸ್ಟಾರ್ಟ್​ಅಪ್ ರಾಜಧಾನಿ ಎಂದೇ ಖ್ಯಾತಿಗೊಂಡಿದ್ದ ಬೆಂಗಳೂರಿನ ಕುರಿತು ತೆಲಂಗಾಣ-ಆಂಧ್ರಪ್ರದೇಶಕ್ಕೆ ಮೊದಲಿಂದಲೂ ಕೊಂಚ ಅಸೂಯೆ ಇತ್ತು. ಇದು ಪದೇ ಪದೇ ಸಾಬೀತಾಗುತ್ತಿತ್ತು. ಹೈದರಾಬಾದ್ ಬೆಂಗಳೂರಿಗಿಂತ (Bengaluru vs Hyderabad) ಒಳ್ಳೆ ಮೂಲಸೌಕರ್ಯ ಹೊಂದಿದೆ ಎಂದು ತೆಲಂಗಾಣ ಸರ್ಕಾರ (Telangana Government) ವಾದಿಸುತ್ತಿತ್ತು. ಇದೀಗ ಮಳೆಯಿಂದ ಬೆಂಗಳೂರಿನಲ್ಲಿ ಉಂಟಾದ ಪರಿಸ್ಥಿತಿಯನ್ನು ಮುಂದಿಟ್ಟುಕೊಂಡು ತೆಲಂಗಾಣ ಸಚಿವ ಕೆಟಿ ರಾಮರಾವ್ (KT Ramarao) ಮಾತನಾಡಿದ್ದಾರೆ.

    ಬೆಂಗಳೂರಿನಲ್ಲಿ ಮಳೆಯಿಂದ ಉಂಟಾದ ದುಸ್ಥಿತಿಯನ್ನು ಮುಂದಿಟ್ಟುಕೊಂಡು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ನಗರ ಅಭಿವೃದ್ಧಿಯಲ್ಲಿ ಸುಧಾರಿತ ಯೋಜನೆಗಳನ್ನು ಹಮ್ಮಿಕೊಳ್ಳಿ ಎಂದು ಒತ್ತಾಯಿಸಿದ್ದಾರೆ. ಅಲ್ಲದೇ ನಗರಗಳ ಅಭಿವೃದ್ಧಿ ಕುರಿತು ಕೇಂದ್ರ ಸಚಿವರನ್ನು ಒತ್ತಾಯಿಸಿದ್ದಾರೆ.

    ಕೆಟಿ ರಾಮರಾವ್


    ಮೂಲಭೂತ ಸೌಕರ್ಯದ ಹೂಡಿಕೆಯೂ ಮುಳುಗಿಹೋಗಿದೆ
    ನೀರಿನಿಂದ ಮುಳುಗಿರುವ ಬೆಂಗಳೂರನ್ನು ಅಪಹಾಸ್ಯ ಮಾಡುವ ಎಲ್ಲರೂ ಈ ಸಂದೇಶವನ್ನು ತಿಳಿದುಕೊಳ್ಳಿ. ನಮ್ಮ ನಗರಗಳು ಆರ್ಥಿಕ ಇಂಜಿನ್‌ಗಳಾಗಿ ಕೆಲಸ ಮಾಡಿ ರಾಜ್ಯಗಳ/ದೇಶದ ಬೆಳವಣಿಗೆಗೆ ಚಾಲನೆ ನೀಡುತ್ತವೆ. ಕ್ಷಿಪ್ರ ನಗರೀಕರಣ ಮತ್ತು ಉಪ-ನಗರೀಕರಣದಿಂದಾಗಿ ನಾವು ಸೌಲಭ್ಯಗಳನ್ನು ನವೀಕರಣ ಮಾಡಲು ಸಾಕಷ್ಟು ಬಂಡವಾಳವನ್ನು ಹೂಡದ ಕಾರಣ ಮೂಲಸೌಕರ್ಯವು ಕುಸಿಯುತ್ತಿದೆ ”ಎಂದು ತೆಲಂಗಾಣ ಐಟಿ ಸಚಿವ ಕೆಟಿ ರಾಮರಾವ್ ಟ್ವೀಟ್ ಮಾಡಿದ್ದಾರೆ.

    ಐಟಿ ಹಬ್ ಆಗಲು ಬೆಂಗಳೂರು vs ಹೈದರಾಬಾದ್ ಪೈಪೋಟಿಯ ನಡುವೆ ತೆಲಂಗಾಣ ಐಟಿ ಸಚಿವ ಕೆಟಿ ರಾಮರಾವ್ ಟ್ವೀಟ್ ಮಹತ್ವ ಪಡೆದಿದೆ.

    ಇದನ್ನೂ ಓದಿ: Tejasvi Surya: ಬೆಂಗಳೂರು ಮಂದಿಗೆ ಮಳೆ ಟೆನ್ಶನ್​ ಆದ್ರೆ, ಈ ಸಂಸದರಿಗೆ ಬೆಣ್ಣೆ ಮಸಾಲೆ ದೋಸೆಯದ್ದೇ ಚಿಂತೆಯಂತೆ!

    ಯಾವುದೇ ನಗರಕ್ಕೂ ಆ ಶಕ್ತಿ ಇಲ್ಲ
    ಬೆಂಗಳೂರು, ಹೈದರಾಬಾದ್ ಸೇರಿದಂತೆ ಇಂದು ಯಾವುದೇ ಭಾರತೀಯ ನಗರವು ಹವಾಮಾನ ಬದಲಾವಣೆಯ ಅನಾಹುತಕಾರಿ ಪರಿಣಾಮಗಳನ್ನು ತಡೆದುಕೊಳ್ಳುವಷ್ಟು ಸದೃಢವಾಗಿಲ್ಲ. ದೇಶಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಂಘಟಿತ ಬಂಡವಾಳ ಹಂಚಿಕೆಗಳ ಮೂಲಕ ಮೂಲಸೌಕರ್ಯದಲ್ಲಿ ಆಮೂಲಾಗ್ರ ಸುಧಾರಣೆಗೆ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

    ಇನ್ನೂ ಮಳೆಯಾಗಲಿದೆ ಎಚ್ಚರ
    ಬೆಂಗಳೂರಿನಲ್ಲಿ ಇನ್ನೂ ಭಾರೀ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಇನ್ನು ಮುಂದಿನ 4 ದಿನ ಭಾರಿ ಮಳೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಸೆಪ್ಟೆಂಬರ್ 9 ಶುಕ್ರವಾರದವರೆಗೆ ಕರ್ನಾಟಕದಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಬೆಂಗಳೂರಿನಲ್ಲಿ ಇಂದಿನಿಂದ 2 ದಿನ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಸೆಪ್ಟೆಂಬರ್ 7ರಿಂದ 9ರವರೆಗೆ ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

    ಇದನ್ನೂ ಓದಿ: Bengaluru Rain: ಭೀಕರ ಮಳೆಗೆ ಬೆಚ್ಚಿಬಿದ್ದಿದೆ ಬೆಂಗಳೂರು! ರಾಜಧಾನಿ ಅವಾಂತರಕ್ಕೆ ಕಾರಣ ಯಾರು?

    ಫೋನ್ ಅಥವಾ ವಾಟ್ಸ್​ಆ್ಯಪ್ ಮೂಲಕ ಮಾಹಿತಿ ನೀಡಿ
    ಬೆಂಗಳೂರಿನ ನಾಗರಿಕರು 1533 ಗೂ ಕರೆ ಮಾಡಿ ಮಳೆ ಅನಾಹುತ ಬಗ್ಗೆ ಮಾಹಿತಿ ನೀಡಬಹುದು. ಸಹಾಯಕ್ಕಾಗಿ ಮನವಿ ಮಾಡಬಹುದು. ಅಥವಾ 2266 0000 ಸಂಖ್ಯೆಯನ್ನೂ ಸಂಪರ್ಕಿಸಬಹುದು. WhatsApp ಮೂಲಕ 94806 85700 ಈ ಸಂಖ್ಯೆಗೆ ನಿಮ್ಮ ಸಮಸ್ಯೆ ತಿಳಿಸಬಹುದು.
    Published by:guruganesh bhat
    First published: