• Home
 • »
 • News
 • »
 • national-international
 • »
 • Rishi Sunak: ನಮ್ಮ ರಿಷಿ ಸುನಕ್​; ಬೆಂಗಳೂರು ಮತ್ತು ಬ್ರಿಟನ್​ ಪ್ರಧಾನಿ ನಂಟಿನ ಬಗ್ಗೆ ಮೆಲುಕು

Rishi Sunak: ನಮ್ಮ ರಿಷಿ ಸುನಕ್​; ಬೆಂಗಳೂರು ಮತ್ತು ಬ್ರಿಟನ್​ ಪ್ರಧಾನಿ ನಂಟಿನ ಬಗ್ಗೆ ಮೆಲುಕು

ರಿಷಿ ಸುನಕ್

ರಿಷಿ ಸುನಕ್

ರಿಷಿ ಸುನಕ್ ಹಠಾತ್ ಬ್ರಿಟನ್ ಪ್ರಧಾನ ಮಂತ್ರಿಯಾದ ನಂತರ ಅವರು ಬೆಂಗಳೂರಿನ ಜೊತೆ ಹೊಂದಿರುವ ನಂಟು, ಅವರು ಅಲ್ಲಿಗೆ ಬಂದಾಗ ಇರುತ್ತಿದ್ದ ರೀತಿ, ಅವರ ವ್ಯಕ್ತಿತ್ವ ಎಲ್ಲವೂ ಈಗ ಬೆಂಗಳೂರಿನಲ್ಲಿ ಚರ್ಚೆಯಾಗುತ್ತಿದೆ.

 • Trending Desk
 • Last Updated :
 • Karnataka, India
 • Share this:

  ಹಲವು ತಿಂಗಳುಗಳಿಂದ ಎಲ್ಲಾ ಸುದ್ದಿ ಮಾಧ್ಯಮಗಳ ಸೆನ್ಸೇಷನಲ್‌ ವ್ಯಕ್ತಿಯಾಗಿದ್ದ ರಿಷಿ ಸುನಕ್‌ (Rishi Sunak) ಅವರು ಹೆಸರು ಈಗ ಎಲ್ಲೆಡೆ ಇನ್ನಷ್ಟು ಜನಪ್ರಿಯಗೊಂಡಿದೆ. ಕನ್ಸರ್ವೇಟಿವ್ ಪಕ್ಷದ ನಾಯಕರಾಗಿ ಬ್ರಿಟನ್ ‌ಪ್ರಧಾನ ಮಂತ್ರಿಯಾಗಿ (British Prime Minister) ಸೋಮವಾರ ಗದ್ದುಗೆ ಏರಿರುವ ರಿಷಿ ಸುನಕ್ ಭಾರತದ ಗರಿಮೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಅದರಲ್ಲೂ ಬೆಂಗಳೂರಿಗರಿಗೆ (Bengaluru), ರಾಜ್ಯಕ್ಕೆ ರಿಷಿ ಸುನಕ್ ಗರ್ವದ ಹೆಸರಾಗಿದೆ.‌ ಎಲ್ಲರೂ ಇವರನ್ನು ಕರ್ನಾಟಕದ (Karnataka) ಅಳಿಯ, ನಮ್ಮೋರು, ನಮ್ಮವ ಅಂತಲೇ ಭಾವಿಸುತ್ತಿದ್ದಾರೆ ಮತ್ತು ಪ್ರೀತಿ ತೋರುತ್ತಿದ್ದಾರೆ.


  ರಿಷಿ ಸುನಕ್ ಹಠಾತ್ ಬ್ರಿಟನ್ ಪ್ರಧಾನ ಮಂತ್ರಿಯಾದ ನಂತರ ಅವರು ಬೆಂಗಳೂರಿನ ಜೊತೆ ಹೊಂದಿರುವ ನಂಟು, ಅವರು ಅಲ್ಲಿಗೆ ಬಂದಾಗ ಇರುತ್ತಿದ್ದ ರೀತಿ, ಅವರ ವ್ಯಕ್ತಿತ್ವ ಎಲ್ಲವೂ ಈಗ ಬೆಂಗಳೂರಿನಲ್ಲಿ ಚರ್ಚೆಯಾಗುತ್ತಿದೆ.


  ರಿಷಿ ಸುನಕ್


  ಕರ್ನಾಟಕದ ಅಳಿಯ ರಿಷಿ ಸುನಕ್‌ ನಮ್ಮ ಹೆಮ್ಮೆ


  ಭಾರತೀಯ ಮೂಲದ ಕುಟುಂಬದಲ್ಲಿ ಜನಿಸಿದ್ದಾರೆ ಎಂಬುದಕ್ಕಿಂತ ಮಿಗಿಲಾಗಿ ಸುನಕ್ ಅವರು ಟೆಕ್‌ ದೈತ್ಯ ಇನ್ಫೋಸಿಸ್ ಸಹ-ಸಂಸ್ಥಾಪಕ ಮತ್ತು ಅಧ್ಯಕ್ಷ ನಾರಾಯಣ ಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿ ಅವರ ಪತಿ ಎಂಬುದು ಮತ್ತೊಂದು ವಿಶೇಷ ಸಂಗತಿ. ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಅಕ್ಷತಾ ಮತ್ತು ರಿಷಿ ಎಂಬಿಎ ಓದುತ್ತಿರುವಾಗ ಭೇಟಿಯಾಗಿ 2009ರಲ್ಲಿ ಬೆಂಗಳೂರಿನ ಲೀಲಾ ಪ್ಯಾಲೇಸ್‌ ಹೊಟೇಲ್ ನಲ್ಲಿ ಸರಳವಾಗಿ ಹಸೆಮಣೆ ಏರಿದರು. ಕೆಲವೇ ಮಂದಿಗಳ ಉಪಸ್ಥಿತಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಕುಟುಂಬ ಮತ್ತು ಸ್ನೇಹಿತರು, ಉದ್ಯಮಮಿಗಳು ಹಾಜರಿದ್ದರು.


  ರಿಷಿ ಸುನಕ್ ಬಗ್ಗೆ ನೆನಪುಗಳನ್ನು ಮೆಲುಕು ಹಾಕಿದ ಬೆಂಗಳೂರಿಗರು


  ರಿಷಿ ಸುನಕ್ ಅವರ ಭೇಟಿ ಮತ್ತು ಅವರ ಜೊತೆ ನಡೆಸಿದ ಮಾತುಕತೆ ಬಗ್ಗೆ ಕೆಲವರು ಮೆಲುಕು ಹಾಕಿದ್ದಾರೆ. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಮತ್ತು ಮಣಿಪಾಲ ವಿಶ್ವವಿದ್ಯಾನಿಲಯದ ಪ್ರಸ್ತುತ ಅಧ್ಯಕ್ಷರೂ ಆಗಿರುವ ಟಿ ವಿ ಮೋಹನ್‌ದಾಸ್ ಪೈ ಸುನಕ್‌ ಅವರನ್ನು 'ಅತ್ಯಂತ ಶ್ರದ್ಧೆ, ಸೌಮ್ಯ ವ್ಯಕ್ತಿಯ ಯುವಕ' ಎಂದು ಹೊಗಳಿದ್ದಾರೆ. "ಅಕ್ಷತಾ ಅವರ ಮದುವೆಯ ಸಮಯದಲ್ಲಿ ನಾನು ಅವರನ್ನು ಭೇಟಿ ಮಾಡಿದ್ದೇನೆ, ಅವರು ತುಂಬಾ ಆತ್ಮವಿಶ್ವಾಸದ ವ್ಯಕ್ತಿ, ಎಲ್ಲರನ್ನೂ ಗೌರವದಿಂದ ಮಾತನಾಡಿಸುತ್ತಿದ್ದರು ಎಂದು ಇನ್ಫೋಸಿಸ್‌ನಲ್ಲಿ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ ಪೈ ಹೇಳಿದರು.


  ಇದನ್ನೂ ಓದಿ: ಆರ್ಥಿಕವಾಗಿ ಕಂಗಾಲಾದ ಬ್ರಿಟನ್; ರಿಷಿ ಸುನಕ್ ಮುಂದಿರುವ ಸವಾಲು ಒಂದೆರಡಲ್ಲ


  ʼವಿದ್ಯಾರ್ಥಿ ಭವನʼಕ್ಕೆ ದೋಸೆ ತಿನ್ನಲು ಬಂದಿದ್ದ ಬ್ರಿಟನ ಪ್ರಧಾನಿ


  ಕೆಲವು ವರ್ಷಗಳ ಹಿಂದೆ ಭಾರತಕ್ಕೆ ಕುಟುಂಬ ಭೇಟಿಯ ಸಂದರ್ಭದಲ್ಲಿ, ಸುನಕ್ ಬೆಂಗಳೂರಿಗೆ ಬಂದಾಗ ಇಲ್ಲಿನ ಅತ್ಯಂತ ಪ್ರಸಿದ್ಧ ಹೊಟೇಲ್‌ ʼವಿದ್ಯಾರ್ಥಿ ಭವನʼಕ್ಕೆ ಭೇಟಿ ನೀಡಿದ್ದರು ಮತ್ತು ಅವರ ಕುಟುಂಬದೊಂದಿಗೆ ಇಲ್ಲಿ ದಕ್ಷಿಣ ಭಾರತೀಯ ಭಕ್ಷ್ಯಗಳನ್ನು ಸವಿದರು. “ರಿಷಿ ಅವರು 2019ರಲ್ಲಿ ಪತ್ನಿ ಅಕ್ಷತಾ, ಮಾವ ನಾರಾಯಣ ಮೂರ್ತಿ ಮತ್ತು ಅವರ ಅತ್ತೆ ಸುಧಾ ಮೂರ್ತಿ ಮತ್ತು ಮಕ್ಕಳ ಜೊತೆ ಬಂದಿದ್ದರು.


  ಅನೇಕ ಸಂದರ್ಭಗಳಲ್ಲಿ ಅವರು ವಿದ್ಯಾರ್ಥಿ ಭವನಕ್ಕೆ ಭೇಟಿ ನೀಡಿದ್ದಾರೆ' ಎಂದು ವಿದ್ಯಾರ್ಥಿ ಭವನದ ಮಾಲೀಕ ಅರುಣ್ ಅಡಿಗ ಹೇಳುತ್ತಾರೆ. "ಹೀಗೆ ಒಂದಿನ ಇಡೀ ಕುಟುಂಬದೊಂದಿಗೆ ರಿಷಿ ಸುನಕ್ ಸಂಜೆ ಹೊತ್ತಲ್ಲಿ ಇಲ್ಲಿಗೆ ಟಿಫಿನ್‌ ಮಾಡಲು ಬಂದಿದ್ದರು. ಆಗ ನಮ್ಮಲ್ಲಿ ರವಾ ವಡೆ, ಮಸಾಲೆ ದೋಸೆ ಮತ್ತು ಖಾರಾ ಬಾತ್ ಸವಿದಿದ್ದರು ಎಂದರ ಅರುಣ್ ಅಡಿಗ.


  ಸುನಕ್ ಅವರು ಯುಕೆಯ ಪ್ರಧಾನಿಯಾಗಿದ್ದು ಸದ್ಯ ಅಡಿಗಾ ಅವರಿಗೆ ಅಚ್ಚರಿ ಮತ್ತು ಸಂತೋಷದ ವಿಷಯವಾಗಿದೆ. ನಮ್ಮ ಹೊಟೇಲ್ ಗೆ ಭೇಟಿ ನೀಡಿದಾಗ ಅವರ ಬಗ್ಗೆ ಈ ಬಗ್ಗೆ ಸ್ವಲ್ಪವೂ ಕಲ್ಪನೆ ಇರಲಿಲ್ಲ. "ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಆ ಸಮಯದಲ್ಲಿ ಯುಕೆಯ ಮುಂದಿನ ಪ್ರಧಾನಿಯಾಗುತ್ತಾರೆ ಎಂದು ಬಿಡಿ, ನಮಗೆ ರಿಷಿ ಸುನಕ್ ಯಾರೆಂದೂ ಸಹ ಗೊತ್ತಿರಲಿಲ್ಲ. ಅವರು ಲಂಡನ್‌ನಲ್ಲಿ ರಾಜಕೀಯ ವ್ಯಕ್ತಿ ಎಂದು ಸುಧಾ ಮೂರ್ತಿ ಹೇಳಿದರು ಎಂದು ಅರುಣ್ ಅಡಿಗ ನೆನಪಿಸಿಕೊಂಡರು.


  ಇದನ್ನೂ ಓದಿ: ಬ್ರಿಟನ್​ ಪಿಎಂ ಭಾರತ ಮೂಲದವರಾಗಿರುತ್ತಾರೆ, 2015ರಲ್ಲಿ ಮೋದಿ ಎದುರೇ ಆಗಿತ್ತು ಈ ಭವಿಷ್ಯವಾಣಿ!


  ರಿಷಿ ಸುನಕ್‌ ಪ್ರಧಾನಿಯಾಗಿದ್ದು ಸಂತೋಷ ತಂದಿದೆ - ಅನಿಲ್ ಶೆಟ್ಟಿ


  ಬೆಂಗಳೂರಿನ ಕಾರ್ಯಕರ್ತ ಮತ್ತು ರಾಜಕಾರಣಿ ಅನಿಲ್ ಶೆಟ್ಟಿ ಅವರು ಲಂಡನ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುನಕ್ ಅವರನ್ನು ಹಿಂದೆ ಭೇಟಿಯಾದ ಸಮಯದಲ್ಲಿ ನಡೆದ ಚರ್ಚೆಗಳನ್ನು ನೆನಪಿಸಿಕೊಳ್ಳುತ್ತಾರೆ. "ನಾನು ಸುನಕ್ ಅವರನ್ನು ಮೊದಲ ಬಾರಿಗೆ ಭೇಟಿ ಮಾಡಿದಾಗ, ಅವರು ಇನ್ನೂ ಬೋರಿಸ್ ಜಾನ್ಸನ್ ಸರ್ಕಾರದಲ್ಲಿ ಕುಲಪತಿಯಾಗಿದ್ದರು" ಎಂದು ಲಂಡನ್‌ನಲ್ಲಿ ಈ ವರ್ಷದ ಆರಂಭದಲ್ಲಿ ಆಯೋಜಿಸಲಾದ ಇಂಡಿಯನ್ ಗ್ಲೋಬಲ್ ಫೋರಂನಲ್ಲಿ ಭಾರತೀಯ ನಿಯೋಗದ ಭಾಗವಾಗಿದ್ದ ಶೆಟ್ಟಿ ಹೇಳುತ್ತಾರೆ. ನಾನು ಒಂದು ದಿನ ನೀವು ಪ್ರಧಾನಿಯಾಗಬೇಕು ಎಂದು ಹೇಳಿದ್ದೆ ಅದಕ್ಕೆ ಅವರು ಸಮಯ ಇನ್ನೂ ಬರಬೇಕು ಎಂದು ಹೇಳಿದ್ದರು. ಈಗ ಎಲ್ಲವೂ ನಿಜವಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದರು.

  Published by:ಪಾವನ ಎಚ್ ಎಸ್
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು