Malleshwara: ಬೆಂಗಳೂರಿನ ಮಲ್ಲೇಶ್ವರಕ್ಕಿದೆ ಕುತೂಹಲಕರ ಇತಿಹಾಸ! ಜನರ ಜೊತೆಗಿದೆ ಅವಿನಾಭಾವ ಸಂಬಂಧ

ಈ ಮಲ್ಲೇಶ್ವರ ಬೆಂಗಳೂರಿಗರೊಂದಿಗೆ ಒಂದು ರೀತಿಯ ಅವಿನಾಭಾವ ಸಂಬಂಧವನ್ನು ಹೊಂದಿದೆ ಎಂದು ಹೇಳಿದರೆ ತಪ್ಪಾಗದು. ಈ ಮಲ್ಲೇಶ್ವರದ ಶತಮಾನಗಳಷ್ಟು ಹಳೆಯ ವಸತಿ ಪ್ರದೇಶ ಮತ್ತು ನಗರದ ಅತ್ಯಂತ ಹಳೆಯ ನೆರೆಹೊರೆ ಸ್ಥಳಗಳಲ್ಲಿ ಒಂದಾಗಿದೆ.

ಮಲ್ಲೇಶ್ವರ (ಸಾಂದರ್ಭಿಕ ಚಿತ್ರ)

ಮಲ್ಲೇಶ್ವರ (ಸಾಂದರ್ಭಿಕ ಚಿತ್ರ)

  • Share this:
ಬೆಂಗಳೂರು (Bengaluru) ಎಂದ ತಕ್ಷಣ ಮೊದಲು ನೆನಪಿಗೆ ಬರೋದೆ ಆ ಮಲ್ಲೇಶ್ವರ (Malleshwaram), ವಿವಿಧ ರೀತಿಯ ಆಹಾರ ಮಳಿಗೆಗಳು. ಈ ಹಿಂದಿನ ಮೈಸೂರು ಸಾಮ್ರಾಜ್ಯದಲ್ಲಿದ್ದ ಸದಸ್ಯರು ಬೆಂಗಳೂರನ್ನು ತಮ್ಮ ಮನೆ ಎಂದು ಕರೆಯುತ್ತಿದ್ದರು. ಅಲ್ಲಿನ ಹೂವಿನ ಮಾರುಕಟ್ಟೆಗಳು (Flower Market) ಅಭಿವೃದ್ಧಿ ದಾರಿ ಹಿಡಿದಿವೆ ಇನ್ನು ಈ ಪಾರಂಪರಿಕ ಕಟ್ಟಡಗಳು ಮತ್ತು ಆಹಾರ (Food) ಸ್ಥಳಗಳು ಒಂದು ರೀತಿಯ ಭಾವನೆಗಳಾಗಿ ಬದಲಾಗಿವೆ. ಈ ಮಲ್ಲೇಶ್ವರಂ ಬೆಂಗಳೂರಿಗರೊಂದಿಗೆ ಒಂದು ರೀತಿಯ ಅವಿನಾಭಾವ ಸಂಬಂಧವನ್ನು ಹೊಂದಿದೆ ಎಂದು ಹೇಳಿದರೆ ತಪ್ಪಾಗದು. ಈ ಮಲ್ಲೇಶ್ವರ ಶತಮಾನಗಳಷ್ಟು ಹಳೆಯ ವಸತಿ ಪ್ರದೇಶ ಮತ್ತು ನಗರದ ಅತ್ಯಂತ ಹಳೆಯ ನೆರೆಹೊರೆ ಸ್ಥಳಗಳಲ್ಲಿ ಒಂದಾಗಿದೆ.

ಮಲ್ಲಿಕಾರ್ಜುನ ದೇವಾಲಯ
ಮಲ್ಲೇಶ್ವರ ತನ್ನ ಶ್ರೀಮಂತ ಇತಿಹಾಸ ಮತ್ತು ಸಂಸ್ಕೃತಿಗೆ ಹೆಸರುವಾಸಿಯಾಗಿದೆ. ಇದರ ಆರಂಭ ಹೇಗೆ ಆಯಿತು ಎಂಬುದಕ್ಕೆ ಉತ್ತರವಾಗಿ 1669 ರಲ್ಲಿ ನಿರ್ಮಾಣವಾದ ಕಾಡು ಮಲ್ಲಿಕಾರ್ಜುನ ದೇವಾಲಯದೊಂದಿಗೆ ಇದನ್ನು ಗುರುತಿಸಬಹುದು. ಇಲ್ಲಿ ಅನೇಕ ಲೇಔಟ್‌ಗಳು 19 ನೇ ಶತಮಾನದ ಕೊನೆಯಲ್ಲಿ ಅಸ್ತಿತ್ವಕ್ಕೆ ಬಂದವು.  ತದನಂತರ ಅವು ತೀವ್ರ ಬದಲಾವಣೆಗಳಿಗೆ ಒಳಗಾಗಿ ನಶಿಸಿ ಹೋದವು. ಆದರೂ, ಅದು ತನ್ನ ಅಂತರ್ಗತ ಸಂಸ್ಕೃತಿ, ಪರಿಮಳ ಮತ್ತು ಸಂಪ್ರದಾಯ ಮತ್ತು ಆಧುನಿಕತೆಯ ಮಿಶ್ರಣವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಮಲ್ಲೇಶ್ವರ ನಿರ್ಮಾಣದ ಹಿಂದಿನ ಕಥೆಯೇನು?
ವರದಿಗಳ ಪ್ರಕಾರ ಮಲ್ಲೇಶ್ವರ ಅನ್ನು ಮೈಸೂರು ಸಾಮ್ರಾಜ್ಯದ ಒಡೆಯರ್‌ಗಳು ಮಾರುಕಟ್ಟೆ ಪ್ರದೇಶವನ್ನು ಕಡಿಮೆ ಮಾಡಲು ಮತ್ತು ಎಲ್ಲಾ ವರ್ಗದವರಿಗೂ ಉತ್ತಮ ಮತ್ತು ಆಧುನಿಕ ಜೀವನಶೈಲಿಯನ್ನು ಒದಗಿಸಲು ನಿರ್ಮಿಸಿದ್ದಾರೆ. ಕೆಲವರ ಪ್ರಕಾರ 1848 ರಲ್ಲಿ ಬೆಂಗಳೂರು ಪ್ಲೇಗ್ ತರಹದ ಸಾಂಕ್ರಾಮಿಕ ರೋಗಕ್ಕೆ ತುತ್ತಾದಾಗ ಮಲ್ಲೇಶ್ವರವನ್ನು ನಿರ್ಮಿಸಲಾಯಿತು.

ಮೈಸೂರಿನ ಮಹಾರಾಜ 4 ನೇ ಕೃಷ್ಣರಾಜ ಒಡೆಯರ್ ಮತ್ತು ಮೈಸೂರಿನ ದಿವಾನ ಶೇಷಾದ್ರಿ ಅಯ್ಯರ್ ಅವರು ಮಲ್ಲೇಶ್ವರ ಮತ್ತು ಬಸವನಗುಡಿ ಸ್ಥಳಗಳನ್ನು ನಿರ್ಮಿಸಿದ್ದಾರೆ. ಇದರ ಜೊತೆ ನಗರದಲ್ಲಿ ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಹೊಸ ಮತ್ತು ಸ್ವಚ್ಛ ಉಪನಗರಗಳನ್ನು ರಚಿಸುವುದು ಮತ್ತೊಂದು ದೃಷ್ಟಿಕೋನವನ್ನು ಹೊಂದಿತ್ತು.

HVN ಬಂಗಲೆ
ಮಲ್ಲೇಶ್ವರ ಮೈಸೂರು ಸಾಮ್ರಾಜ್ಯದೊಂದಿಗೆ ನಿಕಟ ಸಂಪರ್ಕವನ್ನು ಹೊಂದಿತ್ತು ಎಂದು ಈಗೀರುವ ನಿವಾಸಗಳು ಮತ್ತು ಪಾರಂಪರಿಕ ಕಟ್ಟಡಗಳನ್ನು ನೋಡಿದರೆ ಸಾಕು ನಮಗೆ ತಿಳಿಯುತ್ತದೆ. ಉದಾಹರಣೆಗೆ, HVN ಬಂಗಲೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ-ಅಧ್ಯಕ್ಷರಾದ HV ನಂಜುಂಡಯ್ಯ ಅವರು ನಿರ್ಮಿಸಿದರು.

ಮಲ್ಲೇಶ್ವರದ ಸರ್ಕಾರಿ ಬಾಲಕಿಯರ ಶಾಲೆ
ಹೆಣ್ಣು ಮಗುವಿನ ಶಿಕ್ಷಣದ ಬಗ್ಗೆ ಉತ್ಸುಕರಾಗಿದ್ದರಿಂದ ಬಾಲಕಿಯರ ಪ್ರೌಢಶಾಲೆಯನ್ನು ಪ್ರಾರಂಭಿಸಲು ಅವರು ತಮ್ಮ ಬಂಗಲೆ ಮತ್ತು ಆವರಣವನ್ನು ಸರ್ಕಾರಕ್ಕೆ ದಾನ ಮಾಡಿದರು. ಇದರಿಂದ ಮಲ್ಲೇಶ್ವರದ ಸರ್ಕಾರಿ ಬಾಲಕಿಯರ ಶಾಲೆ ಹುಟ್ಟಿಕೊಂಡಿದೆ. ಇದನ್ನು ಹೊರತು ಪಡಿಸಿ, ನಂಜುಂಡಯ್ಯ ಅವರು ಆಗ ಮೈಸೂರಿನ ಹಂಗಾಮಿ ದಿವಾನರೂ ಆಗಿದ್ದರು, ಮೈಸೂರು ವಿಶ್ವವಿದ್ಯಾನಿಲಯದ ಸಂಸ್ಥಾಪಕರು ಮತ್ತು ಮೊದಲ ಉಪಕುಲಪತಿಗಳು ಮತ್ತು ಮೈಸೂರು ರಾಜ್ಯ ಉಚ್ಚ ನ್ಯಾಯಾಲಯದ ಹಿರಿಯ ನ್ಯಾಯಾಧೀಶರು ಕೂಡ ಆಗಿದ್ದರು.

ಇದನ್ನೂ ಓದಿ:  Chola Temple: ಕರ್ನಾಟಕದಲ್ಲಿ ಚೋಳರು ನಿರ್ಮಿಸಿದ್ದ 1,000 ವರ್ಷ ಹಳೆಯ ದೇಗುಲ ನಾಪತ್ತೆ!?

ಮಲ್ಲೇಶ್ವರ ಅತ್ಯಂತ ದೃಢವಾದ ವಿಜ್ಞಾನ ಕಟ್ಟಡಕ್ಕೆ ಒಂದು ನೆಲೆಯಾಗಿದೆ ಮತ್ತು ಇದು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನಿಂದ ಕೇವಲ ಒಂದೂವರೆ ಕಿಲೋಮೀಟರ್ ದೂರದಲ್ಲಿದೆ. ಕರ್ನಾಟಕದವರೇ ಆದ ನೊಬೆಲ್ ಪ್ರಶಸ್ತಿ ಪುರಸ್ಕೃತ ಭೌತಶಾಸ್ತ್ರಜ್ಞ ಸಿ.ವಿ.ರಾಮನ್ ಇಲ್ಲಿ ನೆಲೆಸಿದ್ದರು.

120 ವರ್ಷಗಳ ಹಳೆಯ ಕಟ್ಟಡ 
ವರದಿಗಳ ಪ್ರಕಾರ 15 ನೇ ಕ್ರಾಸ್‌ನಲ್ಲಿರುವ 120 ವರ್ಷಗಳ ಹಳೆಯ ಕಟ್ಟಡವನ್ನು ಈಗ ರಾಮನ್ ಟ್ರಸ್ಟ್ ನಿರ್ವಹಿಸುತ್ತದೆ. 1903 ರಲ್ಲಿ ಅಂದಿನ ಡೆಪ್ಯುಟಿ ಕಮಿಷನರ್ ಜಗದೇವ್ ನಾಯ್ಕ್ ನಿರ್ಮಿಸಿದ ಈ ಮನೆಯನ್ನು ರಾಮನ್ ಅವರು 1940 ರ ದಶಕದಲ್ಲಿ IISc ನಲ್ಲಿ ಕೆಲಸ ಮಾಡುತ್ತಿದ್ದಾಗ ಖರೀದಿ ಮಾಡಿದರು ಎಂದು ಹೇಳಲಾಗುತ್ತದೆ.

ಅಲ್ಲದೆ ಮಲ್ಲೇಶ್ವರದ ಮೈಸೂರು ಸಾಮ್ರಾಜ್ಯದ ಅನೇಕ ಇತರ ಸದಸ್ಯರಿಗೆ ಒಂದು ಮನೆ ತರಹ ಆಗಿತ್ತು. ಇದರಲ್ಲಿ ಎಂ .ಎ ಶ್ರೀನಿವಾಸನ್ (ಮೈಸೂರು ರಾಜಪ್ರಭುತ್ವದ ಮಂತ್ರಿ), ವೆಂಕಟರಂಗ ಅಯ್ಯಂಗಾರ್ (ಮೈಸೂರು ಹೈಕೋರ್ಟ್‌ನಲ್ಲಿ ವಕೀಲರು), ಪೂರ್ಣಯ್ಯ (ಮೈಸೂರು ಸಾಮ್ರಾಜ್ಯದ ದಿವಾನರು) ವಂಶಸ್ಥರು ಹೀಗೆ ಇನ್ನಿತರರು ಇಲ್ಲಿ ವಾಸ ಮಾಡುತ್ತಿದ್ದರು.

ಗೋಥಿಕ್ ವಾಸ್ತುಶಿಲ್ಪದಿಂದ ಪ್ರೇರಿತವಾದ ಪಾರಂಪರಿಕ ಕಟ್ಟಡಗಳು
ಪ್ರಸ್ತುತವಾಗಿ HVN ಬಂಗಲೆಯ ಪುನಃಸ್ಥಾಪನೆ ಕಾರ್ಯವನ್ನು ಕೈಗೊಳ್ಳುತ್ತಿರುವ ವಾಸ್ತುಶಿಲ್ಪಿ ಮತ್ತು ಇತಿಹಾಸಕಾರ ಯಶಸ್ವಿನಿ ಶರ್ಮಾ, “ಮಲ್ಲೇಶ್ವರದಲ್ಲಿರುವ ಪಾರಂಪರಿಕ ಕಟ್ಟಡಗಳು ಗೋಥಿಕ್ ವಾಸ್ತುಶಿಲ್ಪದಿಂದ ಪ್ರೇರಿತವಾಗಿವೆ ಮತ್ತು ದೊಡ್ಡ ಬಂಗಲೆಗಳು ತಮ್ಮದೇ ಆದ ಸೋಕ್ ಪಿಟ್‌ಗಳನ್ನು ಹೊಂದಿವೆ.

ಇದನ್ನೂ ಓದಿ:  Hubballi: ಖಾದಿ ಬದಲು ಪಾಲಿಸ್ಟರ್ ಬಟ್ಟೆಯಲ್ಲಿ ಧ್ವಜ ತಯಾರಿ; ರಾಷ್ಟ್ರೀಯ ಧ್ವಜ ತಯಾರಿಕಾ ಘಟಕಕ್ಕೆ ಬೀಗ ಬೀಳೋ ಭೀತಿ

ಮೈಸೂರು ಸಾಮ್ರಾಜ್ಯದ ಉನ್ನತ ದರ್ಜೆಯ ಎಂಜಿನಿಯರ್‌ಗಳ ಮಾರ್ಗದರ್ಶನದಲ್ಲಿ ಈ ಕಟ್ಟಡಗಳನ್ನು ನಿರ್ಮಿಸಲಾಗಿರುವುದರಿಂದ, ಇಂದಿನ ಎಂಜಿನಿಯರ್‌ಗಳಿಗೆ ಅವುಗಳನ್ನು ಹೇಗೆ ನಿರ್ವಹಿಸಬೇಕೆಂಬುದರ ಬಗ್ಗೆ ತಿಳಿದಿಲ್ಲ. ಇದು ಮಲ್ಲೇಶ್ವರದಲ್ಲಿರುವ ಅನೇಕ ಪಾರಂಪರಿಕ ಕಟ್ಟಡಗಳು ಶಿಥಿಲಗೊಳ್ಳಲು ಕಾರಣವಾಗಿದೆ ಎಂದು ಶರ್ಮಾ ಹೇಳುತ್ತಾರೆ.
Published by:Ashwini Prabhu
First published: