Hawala Money| ವಿದೇಶಿ ಹಣ ಸಾಗಿಸಲು ಹೋಗಿ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳಿಗೆ ಸಿಕ್ಕಿಬಿದ್ದ ಖದೀಮರು

ತನಿಖಾಧಿಕಾರಿಗಳು ಭಯೋತ್ಪಾದಕ ಧನ ಸಹಾಯಕ್ಕಾಗಿ ಈ ಕಳ್ಳಸಾಗಣಿಕೆ ಮಾಡಿರಬಹುದೆಂದು ಶಂಕಿಸಿದ್ದಾರೆ ಎಂದು ವರದಿ ಸೂಚಿಸುತ್ತದೆ. ಇಬ್ಬರೂ ಆರೋಪಿಗಳ ಗುರುತುಗಳನ್ನು ಬಹಿರಂಗಪಡಿಸಲಾಗಿಲ್ಲ ಎಂದು ಕೆಐಎ ಮೂಲಗಳು ತಿಳಿಸಿವೆ.

ಡಾಲರ್​​.

ಡಾಲರ್​​.

  • Share this:
ನಮ್ಮ ದೇಶದಿಂದ ಹವಾಲಾ ಹಣವನ್ನು (Hawala Money) ತಮ್ಮ ಲಗೇಜ್ ಬ್ಯಾಗುಗಳಲ್ಲಿ ಬಟ್ಟೆಯಲ್ಲಿ ಸುತ್ತಿಕೊಂಡು ಬೇರೆ ದೇಶಕ್ಕೆ ಕೊಂಡೊಯ್ಯುವ ಮತ್ತು ಬೇರೆ ದೇಶದಿಂದ ಆ ವಿದೇಶಿ ಹಣವನ್ನು ನಮ್ಮ ದೇಶಕ್ಕೆ ಸಾಗಿಸುವುದು ಕಾನೂನು ಬಾಹಿರವೆಂದು ಎಂದು ತಿಳಿದಿದ್ದರೂ ಸಹ ಈಗಲೂ ಈ ಕೃತ್ಯಕ್ಕೆ ಕೈ ಹಾಕಿ ವಿಮಾನ ನಿಲ್ದಾಣಗಳಲ್ಲಿರುವ ಅಧಿಕಾರಿಗಳ ಕೈಯಲ್ಲಿ ಸಿಕ್ಕಿ ಹಾಕಿಕೊಳ್ಳುವುದನ್ನು ನಾವು ನೋಡುತ್ತಲೇ ಇರುತ್ತೇವೆ.ಜನರು ವಿಭಿನ್ನವಾದ ರೀತಿ ಅನುಸರಿಸಿ ಯಾರಿಗೂ ತಿಳಿಯದಂತೆ ಅಧಿಕಾರಿಗಳ ಕಣ್ಣಿಗೆ ಮಣ್ಣೆರಚಿದಂತೆ ಈ ಕೃತ್ಯ ಮಾಡುತ್ತಾ ಇರುತ್ತಾರೆ. ಇಲ್ಲಿ ನಡೆದ ಒಂದು ಘಟನೆಯಲ್ಲಿ ಸಹ ಹೀಗೆ ಹಣವನ್ನು ಹೇಗೆ ಯಾವುದರಲ್ಲಿ ಮುಚ್ಚಿಟ್ಟುಕೊಂಡು ಸಾಗಿಸಲು ಪ್ರಯತ್ನಿಸಿ, ಆ ಪ್ರಯತ್ನದಲ್ಲಿ ಹೇಗೆ ವಿಫಲರಾಗಿದ್ದಾರೆ ಎಂದು ನೀವು ನೋಡಿದರೆ ನಿಜಕ್ಕೂ ನಿಮ್ಮನ್ನು ಬೆಚ್ಚಿ ಬೀಳಿಸುತ್ತೆ ಈ ಸುದ್ದಿ.

ಹೀಗೆ ಕಳ್ಳಸಾಗಣೆ ತಡೆಗಟ್ಟುವ ಮತ್ತು ತನಿಖೆ ನಡೆಸುವ ಜವಾಬ್ದಾರಿ ಹೊಂದಿರುವ ಭಾರತದ ಗುಪ್ತಚರ ಸಂಸ್ಥೆಯಾಗಿರುವ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಬೆಂಗಳೂರಿನ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ದಲ್ಲಿ ಇಬ್ಬರು ತಮಿಳುನಾಡು ಮೂಲದ ಪುರುಷರನ್ನು ಇತ್ತೀಚೆಗೆ ಬಂಧಿಸಿದೆ.

ವರದಿಯ ಪ್ರಕಾರ, ಇಬ್ಬರೂ ಯುಎಸ್ ಡಾಲರ್‌, ಸೌದಿ ರಿಯಾಲ್ ಮತ್ತು ಯುಎಇ ದಿರ್ಹಾಮ್ ಸೇರಿದಂತೆ ವಿದೇಶಿ ಹಣವನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸುತ್ತಿದ್ದರು. ವಿದೇಶಿ ಕರೆನ್ಸಿಗಳನ್ನು ಕಳ್ಳಸಾಗಣೆ ಮಾಡುವ ಸಾಧ್ಯತೆಯಿದೆ ಎಂಬ ಸುಳಿವಿನ ಆಧಾರದ ಮೇಲೆ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಕಟ್ಟುನಿಟ್ಟಾದ ಜಾಗರೂಕತೆಯನ್ನು ಕಾಯ್ದುಕೊಂಡು ಈ ಇಬ್ಬರನ್ನು ಕೂಡಲೇ ಬಂಧಿಸಿದ್ದಾರೆ.

ಕೆಐಎ ಮೂಲಗಳ ಪ್ರಕಾರ, ಇಬ್ಬರೂ ಆರೋಪಿಗಳು ಅಕ್ಟೋಬರ್ 1ರಂದು ದುಬೈಗೆ ವಿಮಾನ ಹತ್ತಲು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದ್ದಾರೆ. ಅವರು ತಮ್ಮ ಮನೆ ಬಳಕೆಗಾಗಿ ಮಿಕ್ಸರ್ ಗ್ರೈಂಡರ್ ಸಾಗಿಸುತ್ತಿದ್ದರು ಎಂದು ಆ ಇಬ್ಬರು ವ್ಯಕ್ತಿಗಳು ಹೇಳಿದ್ದಾರೆ. ಗುಪ್ತಚರ ಮಾಹಿತಿಯ ಆಧಾರದ ಮೇಲೆ, ಇಬ್ಬರೂ ಬ್ಯಾಗೇಜ್‌ನಲ್ಲಿ ಕರೆನ್ಸಿ ಅಡಗಿಸಿ ಕಳ್ಳಸಾಗಣೆ ಮಾಡಲು ಪ್ರಯತ್ನಿಸಿದರು.

ಕಂದಾಯ ಗುಪ್ತಚರ ನಿರ್ದೇಶನಾಲಯದ ಬೆಂಗಳೂರು ಘಟಕದ ಅಧಿಕಾರಿಗಳು ಈ ಇಬ್ಬರು ಪುರುಷರನ್ನು ವಿಮಾನ ನಿಲ್ದಾಣದಲ್ಲಿ ತಡೆದು ಅವರ ವಸ್ತುಗಳನ್ನು ಪರಿಶೀಲಿಸಿತು. ಮಿಕ್ಸರ್ ಗ್ರೈಂಡರ್ ತೆಗೆದು ಹಾಕಿದ ನಂತರ ಅವರ ಬ್ಯಾಕ್‌ಪ್ಯಾಕ್‌ಗಳನ್ನು ಶೋಧಿಸಿದಾಗ, ಪ್ರಕರಣದ ತನಿಖೆ ನಡೆಸುತ್ತಿರುವ ತಂಡಕ್ಕೆ ಪತ್ರಿಕೆಗಳಲ್ಲಿ ಸುತ್ತಿದ ಡಾಲರ್, ದಿರ್ಹಾಮ್‌ ಮತ್ತು ರಿಯಾಲ್‌ಗಳು ಸಿಕ್ಕವು. ಈ ಎಲ್ಲಾ ಕರೆನ್ಸಿಗಳು ಸುಮಾರು 1 ಕೋಟಿ ರೂಪಾಯಿ ಮೌಲ್ಯದ್ದು ಇರಬೇಕೆಂದು ಅಂದಾಜಿಸಲಾಗಿದೆ.

ವಿಚಾರಣೆ ಪ್ರಕ್ರಿಯೆಯಲ್ಲಿ, ಇಬ್ಬರು ಆರೋಪಿಗಳು ಹಣವನ್ನು ದುಬೈನಲ್ಲಿರುವ ಹವಾಲಾ ಹ್ಯಾಂಡ್ಲರ್‌ಗಳಿಗೆ ಹಸ್ತಾಂತರಿಸಲು ಕಳ್ಳಸಾಗಣೆ ಮಾಡುತ್ತಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ ಎಂದು ಜನಪ್ರಿಯ ದಿನಪತ್ರಿಕೆಯೊಂದು ವರದಿ ಮಾಡಿದೆ.

ಇದನ್ನೂ ಓದಿ: Jammu Kashmir| ಜಮ್ಮು ಕಾಶ್ಮೀರದಲ್ಲಿ ನಾಗರಿಕರ ಹತ್ಯೆ: 700ಕ್ಕೂ ಹೆಚ್ಚು ಉಗ್ರರ ಬೆಂಬಲಿಗರ ವಶಕ್ಕೆ

ತನಿಖಾಧಿಕಾರಿಗಳು ಭಯೋತ್ಪಾದಕ ಧನ ಸಹಾಯಕ್ಕಾಗಿ ಈ ಕಳ್ಳಸಾಗಣಿಕೆ ಮಾಡಿರಬಹುದೆಂದು ಶಂಕಿಸಿದ್ದಾರೆ ಎಂದು ವರದಿ ಸೂಚಿಸುತ್ತದೆ. ಇಬ್ಬರೂ ಆರೋಪಿಗಳ ಗುರುತುಗಳನ್ನು ಬಹಿರಂಗಪಡಿಸಲಾಗಿಲ್ಲ ಎಂದು ಕೆಐಎ ಮೂಲಗಳು ತಿಳಿಸಿವೆ.
First published: