ಬಂಗಾಳದ ಹನುಮ, 2019ರ ಚುನಾವಣೆಯ ಬಿಜೆಪಿ ಸ್ಟಾರ್ ಪ್ರಚಾರಕ ಆತ್ಮಹತ್ಯೆಗೆ ಶರಣು

ಬಂಗಾಳ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಅವರು ಕೂಡ ಎನ್​ಆರ್​ಸಿ ವಿಷಯವಾಗಿ ನಿಭಾಸ್​ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದನ್ನು ಅಲ್ಲಗೆಳೆದಿದ್ದಾರೆ. ಕೆಲವು ವ್ಯಕ್ತಿಗಳು ಸಾಮಾಜಿಕ ಜಾಲತಾಣದಲ್ಲಿ ಸುಳ್ಳುಸುದ್ದಿಗಳನ್ನು ಹರಡುತ್ತಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ ಎಂದು ದಿಲೀಪ್ ಘೋಷ್ ಹೇಳಿದರು.

HR Ramesh | news18-kannada
Updated:October 5, 2019, 4:35 PM IST
ಬಂಗಾಳದ ಹನುಮ, 2019ರ ಚುನಾವಣೆಯ ಬಿಜೆಪಿ ಸ್ಟಾರ್ ಪ್ರಚಾರಕ ಆತ್ಮಹತ್ಯೆಗೆ ಶರಣು
ಆತ್ಮಹತ್ಯೆಗೆ ಶರಣಾದ ಹನುಮ ವೇಷಧಾರಿ ಬಿಜೆಪಿ ಪ್ರಚಾರಕ ನಿಭಾಸ್ ಸರ್ಕಾರ್
  • Share this:
ಕೋಲ್ಕತ್ತ: ಬಿಜೆಪಿ ಬೆಂಬಲಿಗ ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ಹನುಮಾನ ವೇಷ ಹಾಕುವ ಮೂಲಕ  ಸ್ಟಾರ್ ಪ್ರಚಾರಕರಾಗಿದ್ದ ನಿಭಾಸ್ ಸರ್ಕಾರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. 

ಆರ್​ಎಸ್​ಎಸ್​ ಕಾರ್ಯಕರ್ತ ಕೂಡ ಆಗಿದ್ದ ನಿಭಾಸ್​ ಸರ್ಕಾರ್, ಲೋಕಸಭೆ ಚುನಾವಣೆ ವೇಳೆ ರನಾಘಾಟ್​ ಕ್ಷೇತ್ರದಲ್ಲಿ ಹನುಮನ ವೇಷ ಧರಿಸಿ ಪ್ರಚಾರದಲ್ಲಿ ಭಾಗಿಯಾಗಿದ್ದ ಫೋಟೋಗಳನ್ನು ಬಂಗಾಳ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ತಮ್ಮ ಟ್ವೀಟರ್ ಖಾತೆಯಲ್ಲಿ ಪ್ರಕಟಿಸಿದ ನಂತರ ಪ್ರಖ್ಯಾತಿಗೆ ಬಂದಿದ್ದರು.
ಗುರುವಾರ ಮಧ್ಯಾಹ್ನ ನಿಭಾಸ್​ ಶೌಚಾಲಯಕ್ಕೆ ತೆರಳಿದರು. ಕೆಲವು ನಿಮಿಷಗಳ ಬಳಿಕ ಕೈಯಲ್ಲಿ ಚಿಕ್ಕ ಲೋಟ ಹಿಡಿದು ಹೊರಗೆ ಬಂದರು. ಜೀವನದಲ್ಲಿ ಬೇಸರಗೊಂಡು ವಿಷ ಸೇವಿಸಿರುವುದಾಗಿ ತಮ್ಮ ಸಹೋದರನಿಗೆ ತಿಳಿಸಿದ್ದಾರೆ. ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದರು ಎಂದು ಬಿಜೆಪಿ ನಾಯಕ ತಪಾಸ್​ ಘೋಷ್​ ತಿಳಿಸಿದ್ದಾರೆ.ರನಾಘಟ್​ನಲ್ಲಿರುವ ಬಗುಲಾದಲ್ಲಿ ನಿಭಾಷ್​ ಮನೆಯಿದೆ. ಆದರೆ, ನಿಭಾಸ್ ಕುಟುಂಬಸಮೇತ ರಾಜಸ್ಥಾನದ ಉದಯ್​ಪುರ್​ಗೆ ಸ್ಥಳಾಂತರಗೊಂಡಿದ್ದರು. ಎನ್​ಆರ್​ಸಿ ವಿಷಯವಾಗಿ ನಿಭಾಸ್ ಸರ್ಕಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲು ಆರಂಭಿಸಿದವು. ಆದರೆ, ಈ ವದಂತಿಯನ್ನು ಅಲ್ಲಗೆಳೆದಿರುವ ನಿಭಾಸ್ ಸಹೋದರ ಪ್ರಲಾಬ್​ ಸರ್ಕಾರ್, ಇದು ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ರನಾಘಾಟ್​ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದ ನಿಭಾಸ್​ ಸಾವಿಗೆ ಆ ಕ್ಷೇತ್ರದ ಸಂಸದ ಜಗನ್ನಾಥ್ ಸರ್ಕಾರ್ ಸಂತಾಪ ಸೂಚಿಸಿದ್ದಾರೆ.

ನನಗೆ ನಿಭಾಸ್​ ಬಹಳ ವೈಯಕ್ತಿಕವಾಗಿ ಪರಿಚಯವಿದ್ದ ನಂಬಿಕಸ್ಥ ಕಾರ್ಯಕರ್ತ. ನನಗಾಗಿ ಆತ ಪ್ರಚಾರ ಮಾಡಿದ್ದ ಮತ್ತು ಹನುಮದ ವೇಷ ಧರಿಸಿದ್ದ. ರಾಜಸ್ಥಾನ ಮತ್ತು ಕೋಲ್ಕತ್ತ ನಡುವೆ ಸಂಚರಿಸುತ್ತಿದ್ದ. ಇಂತಹ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದು ತುಂಬಾ ದುಃಖದ ಸಂಗತಿ. ಆದರೆ, ಈತ ಎನ್​ಆರ್​ಸಿ ವಿಷಯವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ಶುದ್ಧ ಸುಳ್ಳು ಎಂದು ಜಗನ್ನಾಥ್ ಸರ್ಕಾರ್ ಹೇಳಿದ್ದಾರೆ.ಇದನ್ನು ಓದಿ:ಹರಿಯಾಣ ಕಾಂಗ್ರೆಸ್​ನಲ್ಲಿ ತಲ್ಲಣ; ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ರೆಬೆಲ್ ಲೀಡರ್ ಅಶೋಕ್ ತನ್ವರ್

ಬಂಗಾಳ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಅವರು ಕೂಡ ಎನ್​ಆರ್​ಸಿ ವಿಷಯವಾಗಿ ನಿಭಾಸ್​ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದನ್ನು ಅಲ್ಲಗೆಳೆದಿದ್ದಾರೆ. ಕೆಲವು ವ್ಯಕ್ತಿಗಳು ಸಾಮಾಜಿಕ ಜಾಲತಾಣದಲ್ಲಿ ಸುಳ್ಳುಸುದ್ದಿಗಳನ್ನು ಹರಡುತ್ತಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ ಎಂದು ದಿಲೀಪ್ ಘೋಷ್ ಹೇಳಿದರು.

First published: October 5, 2019, 4:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading