• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Sasthi Chowdhuri: ಬಂಗಾಳದ ಈ ಫೊರೆನ್ಸಿಕ್ ವಿಜ್ಞಾನಿಗೆ ನೂರರ ಸಂಭ್ರಮ; ಇವರ ಬಗ್ಗೆ ನೀವೂ ತಿಳಿದುಕೊಳ್ಳಿ

Sasthi Chowdhuri: ಬಂಗಾಳದ ಈ ಫೊರೆನ್ಸಿಕ್ ವಿಜ್ಞಾನಿಗೆ ನೂರರ ಸಂಭ್ರಮ; ಇವರ ಬಗ್ಗೆ ನೀವೂ ತಿಳಿದುಕೊಳ್ಳಿ

ಬಂಗಾಳದ ಫೊರೆನ್ಸಿಕ್ ವಿಜ್ಞಾನಿ ಸತೀಶ್ ಚೌಧುರಿ

ಬಂಗಾಳದ ಫೊರೆನ್ಸಿಕ್ ವಿಜ್ಞಾನಿ ಸತೀಶ್ ಚೌಧುರಿ

ಅಪರಾಧ ತನಿಖೆಯಲ್ಲಿ ವಿಧಿ-ವಿಜ್ಞಾನ ಪರಿಣಿತರ ಪಾತ್ರ ಬಹಳ ದೊಡ್ಡದು. ಹಲವಾರು ಪ್ರಕರಣಗಳಿಗೆ ಕರಾರುವಕ್ಕಾಗಿ ವರದಿ ನೀಡುವ ಇವರ ಹುದ್ದೆ ತುಂಬಾ ಜವಾಬ್ದಾರಿಯಿಂದ ಕೂಡಿರುತ್ತದೆ. ಹೀಗೆ ಇದೇ ವೃತ್ತಿಯಲ್ಲಿ ಸಾಕಷ್ಟು ಅನುಭವ, ಪರಿಣಿತಿ ಹೊಂದಿರುವ ಮತ್ತು 50ರ ದಶಕದಿಂದ ಕ್ಲಿಷ್ಟ ಅಪರಾಧಗಳನ್ನು ಪರಿಹರಿಸುವಲ್ಲಿ ಸೈ ಎನಿಸಿಕೊಂಡು ಹೆಸರು ಮಾಡಿದ್ದ ಬಂಗಾಳದ ಫೊರೆನ್ಸಿಕ್ ವಿಜ್ಞಾನಿಯೊಬ್ಬರು ಬಗ್ಗೆ ನಾವಿಲ್ಲಿ ತಿಳಿದುಕೊಳ್ಳೊಣ.

ಮುಂದೆ ಓದಿ ...
  • Share this:

ಕೋಲ್ಕತ್ತಾ: ಅಪರಾಧ ತನಿಖೆಯಲ್ಲಿ (Criminal investigation) ವಿಧಿ-ವಿಜ್ಞಾನ ಪರಿಣಿತರ ಪಾತ್ರ ಬಹಳ ದೊಡ್ಡದು. ಹಲವಾರು ಪ್ರಕರಣಗಳಿಗೆ ಕರಾರುವಕ್ಕಾಗಿ ವರದಿ ನೀಡುವ ಇವರ ಹುದ್ದೆ ತುಂಬಾ ಜವಾಬ್ದಾರಿಯಿಂದ ಕೂಡಿರುತ್ತದೆ. ಹೀಗೆ ಇದೇ ವೃತ್ತಿಯಲ್ಲಿ ಸಾಕಷ್ಟು ಅನುಭವ, ಪರಿಣಿತಿ ಹೊಂದಿರುವ ಮತ್ತು 50ರ ದಶಕದಿಂದ ಕ್ಲಿಷ್ಟ ಅಪರಾಧಗಳನ್ನು ಪರಿಹರಿಸುವಲ್ಲಿ ಸೈ ಎನಿಸಿಕೊಂಡು ಹೆಸರು ಮಾಡಿದ್ದ ಬಂಗಾಳದ ಫೊರೆನ್ಸಿಕ್ ವಿಜ್ಞಾನಿಯೊಬ್ಬರು (Forensic Scientist of Bengal) ಬಗ್ಗೆ ನಾವಿಲ್ಲಿ ತಿಳಿದುಕೊಳ್ಳೊಣ. 1954ರಲ್ಲಿ ಕೋಲ್ಕತ್ತಾವನ್ನು ಬೆಚ್ಚಿಬೀಳಿಸಿದ ಬೆಲರಾಣಿ ಕೊಲೆ ಪ್ರಕರಣ, 1964ರಲ್ಲಿ ಮೊಘಲ್ಸರಾಯ್ ಬಳಿ ಆರ್‌ಎಸ್‌ಎಸ್ ನಾಯಕ ದೀನ್ ದಯಾಳ್ ಉಪಾಧ್ಯಾಯ ಅವರ ನಿಗೂಢ ಸಾವು ಮತ್ತು 1970ರಲ್ಲಿ ಸೈನ್ ಬಾರಿ ಹತ್ಯೆ ಪ್ರಕರಣ (Murder case) ಸೇರಿದಂತೆ ಹಲವಾರು ನಿಗೂಢ ಮತ್ತು ಸಂವೇದನಾಶೀಲ ಅಪರಾಧಗಳನ್ನು ಪರಿಹರಿಸುವಲ್ಲಿ ಹೆಸರು ಮಾಡಿದ್ದಾರೆ.


ತಮ್ಮದೇ ಆದ ವೈಯಕ್ತಿಕ ಕೊಡುಗೆಯೊಂದಿಗೆ ವೃತ್ತಿಪರ ಜೀವನದಲ್ಲಿ ಮೈಲಿಗಲ್ಲು ಸಾಧಿಸಿರುವ ಫೋರೆನ್ಸಿಕ್ ವಿಜ್ಞಾನಿ ಸಸ್ತಿ ಚೌಧುರಿ ಸಾರ್ಥಕ ಬದಕನ್ನು ನಡೆಸುತ್ತಿದ್ದಾರೆ. ನೂರರ ಹರೆಯದಲ್ಲೂ ಸಹ ಅದೇ ಚುರುಕುತನ ಹೊಂದಿರುವ ಇವರು ಎಲ್ಲರಿಗೂ ಮಾದರಿಯಾಗಿದ್ದಾರೆ.


100ನೇ ವರ್ಷದ ಹುಟ್ಟುಹಬ್ಬದ ಆಚರಣೆ
ಫೋರೆನ್ಸಿಕ್ ಸೈನ್ಸ್‌ನಲ್ಲಿ ಪರಿಣತಿ ಪಡೆದ ಕೆಲವೇ ಕೆಲವರಲ್ಲಿ ವೃತ್ತಿಪರತೆ ಮತ್ತು ಶಿಸ್ತುಬದ್ಧ ಜೀವನಕ್ಕಾಗಿ ಚೌಧುರಿ ಅವರ ಹೆಸರು ಅಗ್ರ ಸ್ಥಾನ ಪಡೆದುಕೊಳ್ಳುತ್ತದೆ. ಕುಟುಂಬವೂ ಸಹ ಚೌಧರಿಯವರ 100ನೇ ವರ್ಷದ ಹುಟ್ಟುಹಬ್ಬದ ಆಚರಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರೆ, ಇತ್ತ ಸ್ವತಂಹ ಇಳಿವಯಸ್ಸಿನ ವಿಜ್ಞಾನಿ ಕೂಡ ಉತ್ಸುಕರಾಗಿದ್ದಾರೆ. “ನನ್ನ ತಂದೆ ಕಳೆದ ಎರಡು ವಾರಗಳಿಂದ ತನ್ನ ಹುಟ್ಟುಹಬ್ಬದಂದು ಪ್ರಸ್ತುತ ಪಡಿಸಲಿರುವ ಭಾಷಣ ಬರೆಯುವುದರಲ್ಲಿ ಬ್ಯುಸಿಯಾಗಿದ್ದಾರೆ. ನನ್ನ ತಂದೆ ಹಲವು ವರ್ಷಗಳಿಂದ ಗಂಟಲಿನ ಕ್ಯಾನ್ಸರ್ ನಿಂದ ಬಳಲುತ್ತಿದ್ದರೂ ಸಹ ಯಾವುದೇ ರೀತಿ ಧೈರ್ಯಗೆಡಲಿಲ್ಲ. ಸ್ವಾತಂತ್ರ್ಯ ಪೂರ್ವದಿಂದ ಹಿಡಿದು ಇಂಟರ್‌ನೆಟ್ ಯುಗದವರೆಗೂ ಅವರು ಕಾಲಕ್ಕೆ ತಕ್ಕಂತೆ ಹೊಂದಿಕೊಂಡಿದ್ದಾರೆ” ಎಂದು ಮಗ ಸುದೀಪ್ತೋ ಚೌಧುರಿ ತಂದೆಯನ್ನು ಹೊಗಳಿದರು.


ಇದನ್ನೂ ಓದಿ: Draupadi Murmu: ದ್ರೌಪದಿ ಮುರ್ಮು, ಬಿಜೆಪಿಯ ರಾಷ್ಟ್ರಪತಿ ಅಭ್ಯರ್ಥಿ; ಮಹಿಳೆಗೆ ಮಣೆ ಹಾಕಿದ ಬಿಜೆಪಿ


ತಮ್ಮ ತಂದೆ ಬಗ್ಗೆ ಮಾತು ಮುಂದುವರಿಸಿದ ಸುದೀಪ್ತೋ, ನನ್ನ ತಂದೇ ಈಗಲೂ ಬೆಳಿಗ್ಗೆ ಬೇಗ ಎದ್ದೇಳುತ್ತಾರೆ ಮತ್ತು ವಾಕಿಂಗ್ ಮಾಡುತ್ತಾರೆ. ವ್ಯಾಯಮ ಸಹ ಮಾಡುತ್ತಿದ್ದರೂ ಆದರೆ ಇತ್ತೀಚೆಗೆ ಅದನ್ನು ನಿರ್ಬಂಧಿಸಿದ್ದೇವೆ. ನಮ್ಮ ತಂದೆ ಅವರ ದೈನಂದಿನ ಕೆಲಸಗಳನ್ನು ಅವರೇ ಮಾಡಿಕೊಳ್ಳುತ್ತಾರೆ ಎನ್ನುತ್ತಾರೆ ಬಂಗಾಳದ ಫೊರೆನ್ಸಿಕ್ ವಿಜ್ಞಾನಿಯ ಪುತ್ರ ಸುದೀಪ್ತೋ.


ವಿದ್ಯಾಭ್ಯಾಸ ಮತ್ತು ವೃತ್ತಿ ಜೀವನ
ರಂಗಪುರದ ಕಾರ್ಮೈಕಲ್ ಕಾಲೇಜಿನಿಂದ ವಿಜ್ಞಾನ ಪದವೀಧರರಾದ ಚೌದುರಿ ನಂತರ 1949ರಲ್ಲಿ ಆರ್. ಜಿ. ಕಾರ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಪದವಿ ಪಡೆದರು. ನಂತರ ಸೂಕ್ಷ್ಮ ಜೀವವಿಜ್ಞಾನದಲ್ಲಿ ಪಿಎಚ್‌ಡಿ ಪಡೆಯಲು ಕಲ್ಕತ್ತಾ ವಿಶ್ವವಿದ್ಯಾಲಯಕ್ಕೆ ತೆರಳಿದರು. ವಿದ್ಯಾಭ್ಯಾಸದ ಬಳಿಕ ಸಹಾಯಕರಾಗಿ ಸೆಂಟ್ರಲ್ ಫೋರೆನ್ಸಿಕ್ ಸೈನ್ಸ್ ಲ್ಯಾಬೊರೇಟರಿಯಲ್ಲಿ ಕಾರ್ಯ ನಿರ್ವಹಿಸಿದರು.


ಭಾರತ ಸೇರಿ ಯುಕೆಗೆ ವರದಿಗಳನ್ನು ಕಳುಹಿಸುತ್ತಿದ್ದರು. ನಂತರ ನ್ಯಾಯ ವಿಜ್ಞಾನದಲ್ಲಿ ಸುಧಾರಿತ ತಂತ್ರವನ್ನು ಕಲಿಯಲು ಸರ್ಕಾರ ಆದೇಶ ನೀಡಿತು. 1968ರಲ್ಲಿ ರಾಜ್ಯ ವಿಧಿವಿಜ್ಞಾನ ಪ್ರಯೋಗಾಲಯದ ನಿರ್ದೇಶಕರಾಗಿ ನೇಮಕಗೊಂಡರು ಮತ್ತು ಇದೇ ವೃತ್ತಿಯಿಂದಲೇ ಫೋರೆನ್ಸಿಕ್ ವಿಜ್ಞಾನಿ ಸಸ್ತಿ ಚೌಧುರಿ 1980ರಲ್ಲಿ ನಿವೃತ್ತರಾದರು.


ಡಾ. ಚೌಧುರಿ ಅವರೊಂದಿಗಿನ ನೆನಪುಗಳನ್ನು ಅಜಯ್ ಗುಪ್ತಾ
“ನಾನು ಫೋರೆನ್ಸಿಕ್ ಮೆಡಿಸಿನ್ ನಲ್ಲಿ ಹಿರಿಯ ಪ್ರದರ್ಶಕನಾಗಿದ್ದಾಗ ನಾನು ಡಾ. ಚೌಧುರಿ ಅವರೊಂದಿಗೆ ಕೆಲಸ ಮಾಡಿದ್ದೇನೆ. ಚೌಧುರಿ ಅವರು ಸರಳ ಮತ್ತು ನೇರ ವ್ಯಕ್ತಿಯಾಗಿದ್ದರು. ಹಲವಾರು ಪ್ರಕರಣಗಳ ವರದಿಗಳನ್ನು ಕರಾರುವಕ್ಕಾಗಿ ನೀಡುತ್ತಿದ್ದರು” ಎಂದು ಚೌಧರಿಯವರ ಜೊತೆಗಿನ ಕೆಲಸದ ಅನುಭವಗಳನ್ನು ವಿಧಿವಿಜ್ಞಾನ ಔಷಧದ ಮಾಜಿ ಮುಖ್ಯಸ್ಥ ಅಜಯ್ ಗುಪ್ತಾ ಹಂಚಿಕೊಂಡರು.


ಇದನ್ನೂ ಓದಿ: Special Gift: ನವವಧುವಿಗೆ ವಿಶೇಷ ಗಿಫ್ಟ್ ಕೊಟ್ಟ ಬಿಜೆಪಿ ಸಂಸದ! ಮದುಮಗಳು ಖುಷ್


ಸಸ್ತಿ ಚೌಧುರಿ ಅವರು ಪ್ರಕರಣದ ಮಾನವ ಗುಣಲಕ್ಷಣಗಳಾದ ಕೂದಲು, ಸಸ್ಯ ಲೆಕ್ಟಿನ್‌ಗಳ ಪಾತ್ರ ಇಮ್ಯುನೊಲಾಜಿಯಲ್ಲಿ ವಿಶೇಷವಾಗಿ ಪರಿಣಿತರಾಗಿದ್ದರು. ಇವರು ವಿಧಿ ವಿಜ್ಞಾನ ಕುರಿತಾದ ಹಲವಾರು ಪ್ರಬಂಧಗಳ ಜೊತೆಗೆ ಪುಸ್ತಕಗಳನ್ನು ಸಹ ಬರೆದು ಪ್ರಕಟಿಸಿದ್ದಾರೆ.

Published by:Ashwini Prabhu
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು