ಶಾರದಾ ಚಿಟ್​ಫಂಡ್ ಹಗರಣ​; ಬಂಗಾಳದ ಐಪಿಎಸ್​ ಅಧಿಕಾರಿಗೆ ಸಿಬಿಐ ಬಂಧನದಿಂದ ನೀಡಿದ್ದ ರಕ್ಷಣೆ ಹಿಂಪಡೆದ ಕೋಲ್ಕತ್ತ ಹೈಕೋರ್ಟ್​

ನ್ಯಾಯಾಲಯದಿಂದ ಈ ಆದೇಶ ಹೊರಬಿದ್ದಾಕ್ಷಣ ಸಿಬಿಐ ಅಧಿಕಾರಿಗಳು ರಾಜೀವ್​ ಕುಮಾರ್​ ಮನೆಗೆ ತೆರಳಿದ್ದರು. ಆದರೆ, ಈ ವೇಳೆ ಅವರು ಮನೆಯಲ್ಲಿ ಇರಲಿಲ್ಲ. ಮೂಲಗಳ ಪ್ರಕಾರ, ರಾಜೀವ್ ಕುಮಾರ್ ಅವರಿಗೆ ಸಿಬಿಐ ಮತ್ತೊಮ್ಮೆ ಅಧಿಕೃತವಾಗಿ ಸಮನ್ಸ್​ ಜಾರಿ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

HR Ramesh | news18-kannada
Updated:September 13, 2019, 7:29 PM IST
ಶಾರದಾ ಚಿಟ್​ಫಂಡ್ ಹಗರಣ​; ಬಂಗಾಳದ ಐಪಿಎಸ್​ ಅಧಿಕಾರಿಗೆ ಸಿಬಿಐ ಬಂಧನದಿಂದ ನೀಡಿದ್ದ ರಕ್ಷಣೆ ಹಿಂಪಡೆದ ಕೋಲ್ಕತ್ತ ಹೈಕೋರ್ಟ್​
ರಾಜೀವ್ ಕುಮಾರ್ ಜೊತೆ ಮಮತಾ ಬ್ಯಾನರ್ಜಿ
  • Share this:
ಕೋಲ್ಕತ್ತ: ಶಾರದಾ ಚಿಟ್​ ಫಂಡ್​ ಪ್ರಕರಣದಲ್ಲಿ ಕೋಲ್ಕತ್ತ ಮಾಜಿ ಪೊಲೀಸ್ ಕಮಿಷನರ್ ರಾಜೀವ್​ ಕುಮಾರ್​ ಅವರು ಸಿಬಿಐ ಬಂಧನದಿಂದ ಪಡೆದಿದ್ದ ಮಧ್ಯಂತರ ರಕ್ಷಣೆಯನ್ನು ಶುಕ್ರವಾರ ಕೋಲ್ಕತ್ತ ಹೈಕೋರ್ಟ್​ ಹಿಂಪಡೆದುಕೊಂಡಿದೆ. ಇದರೊಂದಿಗೆ ಪಶ್ಚಿಮಬಂಗಾಳದ ಉನ್ನತ ಮಟ್ಟದ ಪೊಲೀಸ್​ ಅಧಿಕಾರಿಗೆ ಬಂಧನ ಭೀತಿ ಎದುರಾಗಿದೆ.

ಅಷ್ಟೇ ಅಲ್ಲದೇ, ವಿಚಾರಣೆ ಹಾಜರಾಗುವಂತೆ ಸಿಬಿಐ ನೀಡಿದ್ದ ನೋಟಿಸ್​ಅನ್ನು ರದ್ದುಗೊಳಿಸುವಂತೆ ರಾಜೀವ್​ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್​ ವಜಾಗೊಳಿಸಿದೆ.

ನ್ಯಾಯಾಲಯದಿಂದ ಈ ಆದೇಶ ಹೊರಬಿದ್ದಾಕ್ಷಣ ಸಿಬಿಐ ಅಧಿಕಾರಿಗಳು ರಾಜೀವ್​ ಕುಮಾರ್​ ಮನೆಗೆ ತೆರಳಿದ್ದರು. ಆದರೆ, ಈ ವೇಳೆ ಅವರು ಮನೆಯಲ್ಲಿ ಇರಲಿಲ್ಲ. ಮೂಲಗಳ ಪ್ರಕಾರ, ರಾಜೀವ್ ಕುಮಾರ್ ಅವರಿಗೆ ಸಿಬಿಐ ಮತ್ತೊಮ್ಮೆ ಅಧಿಕೃತವಾಗಿ ಸಮನ್ಸ್​ ಜಾರಿ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಶಾರದಾ ಚಿಟ್​ ಫಂಡ್​ ಪ್ರಕರಣದಲ್ಲಿ ಸತ್ಯಗಳನ್ನು ಮರೆಮಾಚಿದ ಆರೋಪ ಎದುರಿಸುತ್ತಿರುವ ರಾಜೀವ್​ ಕುಮಾರ್​ ಅವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲು ಅವಕಾಶ ನೀಡಬೇಕು ಎಂದು ಈ ಹಿಂದೆ ಸಿಬಿಐ ಮನವಿ ಮಾಡಿತ್ತು. ಹಗರಣದ ಹಲವು ದಾಖಲೆಗಳು ಮತ್ತು ಕಡತಗಳು ಕಾಣೆಯಾಗಿರುವ ಸಂಬಂಧ ರಾಜೀವ್​ಕುಮಾರ್​ ಅವರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಸಿಬಿಐ ಹೇಳಿತ್ತು.First published: September 13, 2019, 7:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading