HOME » NEWS » National-international » BENGAL POLL OFFICER SLEEPS OVER AT TRINAMOOL LEADERS HOUSE WITH EVM SUSPENDED LG

West Bengal: ಟಿಎಂಸಿ ನಾಯಕನ ಮನೆಯಲ್ಲಿ ಮತಯಂತ್ರ ಇಟ್ಟುಕೊಂಡು ಮಲಗಿದ್ದ ಚುನಾವಣಾಧಿಕಾರಿ ಅಮಾನತು

ಅಮಾನತುಗೊಂಡ ವಲಯ ಅಧಿಕಾರಿ ಸರ್ಕಾರ್, ಮತದಾನಕ್ಕಾಗಿ ಕಾಯ್ದಿರಿಸಲಾಗಿದ್ದ 4 ಇವಿಎಂ ಯಂತ್ರಗಳನ್ನು ಟಿಎಂಸಿ ನಾಯಕ ಗೌತಮ್ ಘೋಷ್ ಅವರ ಮನೆಗೆ ತೆಗೆದುಕೊಂಡು ಹೋಗಿ, ಸೋಮವಾರ ಇಡೀ ರಾತ್ರಿ ಅಲ್ಲಿಯೇ ಮಲಗಿದ್ದರು. ಬಳಿಕ ಕೇಂದ್ರೀಯ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಇವಿಎಂಗಳನ್ನು ವಶಪಡಿಸಿಕೊಂಡಿದೆ ಎಂದು ಹಿಂದೂಸ್ಥಾನ್ ಟೈಮ್ಸ್​ ವರದಿ ಮಾಡಿದೆ.

news18-kannada
Updated:April 6, 2021, 1:44 PM IST
West Bengal: ಟಿಎಂಸಿ ನಾಯಕನ ಮನೆಯಲ್ಲಿ ಮತಯಂತ್ರ ಇಟ್ಟುಕೊಂಡು ಮಲಗಿದ್ದ ಚುನಾವಣಾಧಿಕಾರಿ ಅಮಾನತು
ವಶಪಡಿಸಿಕೊಂಡ ಇವಿಎಂಗಳು
  • Share this:
ಪಶ್ಚಿಮ ಬಂಗಾಳ(ಏ.06): ಇಂದು ಪಂಚರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಪಶ್ಚಿಮ ಬಂಗಾಳದಲ್ಲಿ ಮತದಾನ ಬಿರುಸಿನಿಂದ ಸಾಗಿದೆ. ಈ ನಡುವೆಯೇ ಪಶ್ಚಿಮ ಬಂಗಾಳದಲ್ಲಿ ವಲಯ ಅಧಿಕಾರಿ ಎಸಗಿದ ತಪ್ಪಿಗೆ ಅಮಾನತು ಶಿಕ್ಷೆ ನೀಡಲಾಗಿದೆ. ಬಂಗಾಳದ ಚುನಾವಣಾಧಿಕಾರಿ ಮತಯಂತ್ರವನ್ನು ತನ್ನೊಂದಿಗೆ ಇರಿಸಿಕೊಂಡು ಟಿಎಂಸಿ ನಾಯಕನ ಮನೆಯಲ್ಲಿ ಇಡೀ ರಾತ್ರಿ ಮಲಗಿದ್ದ ಹಿನ್ನೆಲೆ, ಅವರನ್ನು ಚುನಾವಣಾ ಆಯೋಗವು ಅಮಾನತು ಮಾಡಿದೆ.

ತೃಣಮೂಲ ಕಾಂಗ್ರೆಸ್​ ನಾಯಕನ ಮನೆಯಲ್ಲಿ ಇವಿಎಂ ದೊರೆತಿದೆ ಎಂದು ತಿಳಿದು ಬಂದಿದೆ. ಪಶ್ಚಿಮ ಬಂಗಾಳದ ಉಲುಬೆರಿಯಾದಲ್ಲಿ ಟಿಎಂಸಿ ನಾಯಕನ ​ ಮನೆಯಲ್ಲಿ ಈ ಘಟನೆ ನಡೆದಿದೆ. ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಇವಿಎಂ ಹಾಗೂ ವಿವಿಪ್ಯಾಟ್​​ಗಳನ್ನು ವಶಕ್ಕೆ ಪಡೆದಿದ್ದಾರೆ. ಟಿಎಂಸಿ ನಾಯಕ​ ಗೌತಮ್​ ಘೋಷ್​​ ಚುನಾವಣಾಧಿಕಾರಿ ತಪನ್ ಸರ್ಕಾರ್​​​ಗೆ ಸಂಬಂಧಿಕನೆಂದು ತಿಳಿದು ಬಂದಿದೆ. ಒಟ್ಟಾರೆ ಚುನಾವಣಾಧಿಕಾರಿ ನಿಯಮ ಉಲ್ಲಂಘಿಸಿ ಮಾಡಿದ ತಪ್ಪಿಗೆ ಈಗ ಅಮಾನತುಗೊಂಡಿದ್ದಾರೆ. ಜೊತೆಗೆ ಮತದಾನಕ್ಕಾಗಿ ಕಾಯ್ದಿರಿಸಿದ್ದ ಇವಿಎಂ ಯಂತ್ರವನ್ನು ಅಲ್ಲಿಂದ ತೆರವುಗೊಳಿಸಲಾಗಿದೆ ಎಂದು ಚುನಾವಣಾ ಆಯೋಗವು ಹೇಳಿದೆ.

ಈ ಕೃತ್ಯದಲ್ಲಿ ಭಾಗಿಯಾಗಿರುವ ಚುನಾವಣಾಧಿಕಾರಿ ಹಾಗೂ ಇನ್ನಿತರರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮೇಲಾಧಿಕಾರಿಗಳು ತಿಳಿಸಿದ್ದಾರೆ.

“ಇದು ಭಾರತದ ಚುನಾವಣಾ ಆಯೋಗದ ಸೂಚನೆಗಳ ಸಂಪೂರ್ಣ ಉಲ್ಲಂಘನೆಯಾಗಿದ್ದು, ಇದಕ್ಕಾಗಿ ವಲಯ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ಆರೋಪಿಗೆ ಸೂಕ್ತ ಶಿಕ್ಷೆ ನೀಡಲಾಗುತ್ತದೆ. ಅಧಿಕಾರಿಗೆ ಒದಗಿಸಲಾಗಿದ್ದ ಸೆಕ್ಟರ್ ಪೊಲೀಸರನ್ನು ಸಹ ಅಮಾನತುಗೊಳಿಸುವಂತೆ ನಿರ್ದೇಶಿಸಲಾಗಿದೆ ” ಎಂದು ಚುನಾವಣಾ ಆಯೋಗ ತಿಳಿಸಿದೆ.

Bank Holiday: ಇಂದು ತಮಿಳುನಾಡಿನಲ್ಲಿ ಬ್ಯಾಂಕ್‌ ರಜೆ; ಏಪ್ರಿಲ್‌ 2021ರ ಬ್ಯಾಂಕ್‌ ರಜೆಗಳ ವಿವರ ಹೀಗಿದೆ..!

ಅಮಾನತುಗೊಂಡ ವಲಯ ಅಧಿಕಾರಿ ಸರ್ಕಾರ್, ಮತದಾನಕ್ಕಾಗಿ ಕಾಯ್ದಿರಿಸಲಾಗಿದ್ದ 4 ಇವಿಎಂ ಯಂತ್ರಗಳನ್ನು ಟಿಎಂಸಿ ನಾಯಕ ಗೌತಮ್ ಘೋಷ್ ಅವರ ಮನೆಗೆ ತೆಗೆದುಕೊಂಡು ಹೋಗಿ, ಸೋಮವಾರ ಇಡೀ ರಾತ್ರಿ ಅಲ್ಲಿಯೇ ಮಲಗಿದ್ದರು. ಬಳಿಕ ಕೇಂದ್ರೀಯ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಇವಿಎಂಗಳನ್ನು ವಶಪಡಿಸಿಕೊಂಡಿದೆ ಎಂದು ಹಿಂದೂಸ್ಥಾನ್ ಟೈಮ್ಸ್​ ವರದಿ ಮಾಡಿದೆ.

ಆದರೆ ವಲಯ ಅಧಿಕಾರಿ ಸರ್ಕಾರ್, ನಾನು ವಿಶ್ರಾಂತಿ ತೆಗೆದುಕೊಳ್ಳಲಷ್ಟೇ ಅವರ ಮನೆಗೆ ಹೋಗಿದ್ದೆ. ಇವಿಎಂಗಳನ್ನು ಕಾರಿನಲ್ಲೇ ಇರಿಸಿದ್ದೆ ಎಂದು ಸಮರ್ಥಿಸಿಕೊಂಡಿದ್ದಾರೆ.ಪಶ್ಚಿಮ ಬಂಗಾಳದಲ್ಲಿ ಇಂದು ವಿಧಾನಸಭಾ ಚುನಾವಣೆ ನಡೆಯುತ್ತಿದೆ. 8 ಹಂತಗಳಲ್ಲಿ ಮತದಾನ ನಡೆಯಲಿದೆ. ಒಟ್ಟು 31 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, 205 ಅಭ್ಯರ್ಥಿಗಳ ಹಣೆಬರಹ ನಿರ್ಧಾರವಾಗಲಿದೆ.

ಇತ್ತೀಚೆಗೆ ಅಸ್ಸಾಂನ ಬಿಜೆಪಿ ಅಭ್ಯರ್ಥಿ ಕೃಷ್ಣೇಂದು ಪೌಲ್​ ಕಾರಿನಲ್ಲಿ ಇವಿಎಂ ಪತ್ತೆಯಾಗಿತ್ತು. ಎರಡನೇ ಹಂತದ ಮತದಾನದ ವೇಳೆ ಈ ಘಟನೆ ಸಂಭವಿಸಿತ್ತು. ಆಗ ಚುನಾವಣಾ ಆಯೋಗವು 4 ಮಂದಿ ಚುನಾವಣಾಧಿಕಾರಿಗಳನ್ನು ಅಮಾನತುಗೊಳಿಸಿತ್ತು. ಜೊತೆಗೆ ವಿಧಾನಸಭಾ ಕ್ಷೇತ್ರ ಪತರ್ಕಂಡಿಯ ರಾತಬರಿ ಮತಗಟ್ಟೆಯಲ್ಲಿ ಮರು ಮತದಾನ ಮಾಡುವಂತೆ ಆದೇಶಿಸಿತ್ತು. ಇದಾದ ಬಳಿಕ ಪಶ್ಚಿಮ ಬಂಗಾಳದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.
Published by: Latha CG
First published: April 6, 2021, 12:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories