Bengal Monitor Lizard: ಹಲ್ಲಿಯನ್ನೂ ಬಿಡದ ಕಾಮುಕರು: ನಾಲ್ವರಿಂದ ಗ್ಯಾಂಗ್​​ರೇಪ್​​!

ಸಹ್ಯಾದ್ರಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೆಂಗಾಲ್ ಪ್ರಭೇದದ ದೈತ್ಯ ಹಲ್ಲಿಯೊಂದರ ಮೇಲೆ ನಾಲ್ಕು ಜನ ಕಾಮುಕರು ಅತ್ಯಾಚಾರ ಮಾಡಿರುವ ಅಸಹ್ಯಕರ ಘಟನೆ ಬೆಳಕಿಗೆ ಬಂದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ನಿಜಕ್ಕೂ ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಅಸಹ್ಯಕರ ಘಟನೆಯೊಂದು (Bizarre Incident) ಮಹಾರಾಷ್ಟ್ರದಿಂದ (Maharashtra) ವರದಿಯಾಗಿದೆ. ನಾವು ಈ ಹಿಂದೆ ಮಹಿಳೆಯರ ಮೇಲೆ ಕಾಮಾಂಧರು ಸಾಮೂಹಿಕ ಬಲಾತ್ಕಾರ (Gangrape) ಮಾಡಿರುವ ಅನೇಕ ಘಟನೆಗಳನ್ನು ಕೇಳಿದ್ದೇವೆ. ಅಷ್ಟೇ ಏಕೆ, ನಾಚಿಕೆಯಿಲ್ಲದ ಕಾಮ ಪಿಶಾಚಿಗಳು ಪ್ರಾಣಿಗಳ ಮೇಲೆಯೂ ಅತ್ಯಾಚಾರ ಮಾಡಿರುವ ಅಸಭ್ಯ ಘಟನೆಗಳೂ ಸಹ ವರದಿಯಾಗಿವೆ. ಆದರೆ, ಮಹಾರಾಷ್ಟ್ರದ ಗೋಥನೆ ಎಂಬ ಗ್ರಾಮದ ಬಳಿ ಇರುವ ಸಹ್ಯಾದ್ರಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೆಂಗಾಲ್ ಪ್ರಭೇದದ ದೈತ್ಯ ಹಲ್ಲಿಯೊಂದರ ಮೇಲೆ ನಾಲ್ಕು ಜನ ಕಾಮುಕರು ಅತ್ಯಾಚಾರ ಮಾಡಿರುವ ಅಸಹ್ಯಕರ ಘಟನೆ ಬೆಳಕಿಗೆ ಬಂದಿದೆ.

  ಇದನ್ನೂ ಓದಿ: Wild Mushrooms: ಅಣಬೆ ಪ್ರಿಯರೇ ಎಚ್ಚರ: ಅಸ್ಸಾಂನಲ್ಲಿ ಅಣಬೆ ತಿಂದು 13 ಮಂದಿ ದಾರುಣ ಸಾವು!

  ಈಗಾಗಲೇ ಈ ಬಗ್ಗೆ ಬಂದಿರುವ ವರದಿಯ ಅನುಸಾರ, ಸಹ್ಯಾದ್ರಿ ಹುಲಿ ಸಂರಕ್ಷಿತ ಪ್ರದೇಶದ ಗಾಭಾ ಎಂಬ ಪ್ರದೇಶದಲ್ಲಿ ನಾಲ್ಕು ಜನ ಬೇಟೆಗಾರರು ಪ್ರವೇಶಿಸಿದ್ದು ಅವರು ಅಲ್ಲಿ ಕಂಡುಬಂದ ಮಾನಿಟರ್ ಹಲ್ಲಿಯೊಂದರ ಮೇಲೆ ಅತ್ಯಾಚಾರ ಎಸಗಿದ್ದಾರೆಂದು ಹೇಳಲಾಗಿದೆ. ಈ ನಾಲ್ವರನ್ನು ಸಂದೀಪ್ ತುಕಾರಾಮ್ ಪವಾರ್, ಮಂಗೇಶ್ ಕಾಮ್ಟೇಕರ್, ಅಕ್ಷಯ್ ಕಾಮ್ಟೇಕರ್ ಹಾಗೂ ರಮೇಶ್ ತುಕಾರಾಮ್ ಘಗ್ ಎಂದು ಹೇಳಲಾಗಿದೆ.

  ಸಿಸಿಟಿವಿಯಲ್ಲಿ ಕೃತ್ಯ ಸೆರೆ

  ಅಸಲಿಗೆ ಈ ನಾಲ್ಕು ಜನ ಆರೋಪಿಗಳು ಸಹ್ಯಾದ್ರಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅಲೆದಾಡುವಾಗ ಸಿಸಿಟಿವಿಯಲ್ಲಿ ಇವರ ದೃಶ್ಯಾವಳಿಗಳು ಸೆರೆಹಿಡಿಯಲ್ಪಟ್ಟಿದ್ದವು. ಇದನ್ನು ಗಮನಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಆ ನಾಲ್ಕೂ ಜನರನ್ನು ಮೊದಲಿಗೆ ಅಕ್ರಮ ಬೇಟೆ ಪ್ರಕರಣದಲ್ಲಿ ವಶಕ್ಕೆ ಪಡೆದರೆನ್ನಲಾಗಿದೆ. ಅನಂತರ ಅರಣ್ಯ ಅಧಿಕಾರಿಗಳು ಅವರ ಮೊಬೈಲ್ ಫೋನ್ ಪರಿಶೀಲಿಸಿದಾಗ ಈ ಪೈಶಾಚಿಕ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ. ಅವರು ಮಾಡಿದ್ದ ಮೊಬೈಲ್ ಚಿತ್ರೀಕರಣದಲ್ಲಿ ಆರೋಪಿಗಳು ಬೆಂಗಾಲ್ ಪ್ರಭೇದದ ನಾಲ್ಕುವರೆ ಅಡಿ ಉದ್ದದ ದೈತ್ಯ ಹಲ್ಲಿಯೊಂದರ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದರು ಎನ್ನಲಾಗಿದೆ. ಅಲ್ಲದೆ ಅರಣ್ಯ ಪೊಲೀಸ್ ಅಧಿಕಾರಿಗಳು ಹೇಳಿರುವಂತೆ ಆರೋಪಿಗಳಿಂದ ವಶಪಡಿಸಿಕೊಳ್ಳಲಾದ ಮೊಬೈಲ್‌ನಲ್ಲಿ ಮೊಲಗಳು, ಮುಳ್ಳುಹಂದಿ ಹಾಗೂ ಜಿಂಕೆಗಳ ಚಿತ್ರಗಳು ಕಂಡುಬಂದಿರುವುದಾಗಿ ಹೇಳಿದ್ದಾರೆ.

  ಮೊಬೈಲ್‌ನಲ್ಲಿ ಈ ಅತ್ಯಾಚಾರದ ದೃಶ್ಯ

  ಸಾಂಗ್ಲಿ ಸಂರಕ್ಷಿತ ಪ್ರದೇಶದಲ್ಲಿ ಸ್ಥಿತವಿರುವ ಅರಣ್ಯ ಅಧಿಕಾರಿಗಳು ಸಿಸಿಟಿವಿ ದೃಶ್ಯ ವೀಕ್ಷಿಸಿದ ನಂತರ ಈ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆ ಸಿಸಿಟಿವಿ ದೃಶ್ಯದಲ್ಲಿ ವಶಕ್ಕೆ ಪಡೆಯಲಾಗಿರುವ ಆರೋಪಿಗಳು ಅಲೆದಾಡುತ್ತಿರುವುದನ್ನು ಕಾಣಬಹುದಾಗಿದೆ. ಕಾಡಿನೊಳಗೆ ಆರೋಪಿಗಳು ಅಲೆದಾಡುತ್ತಿದ್ದ ದೃಶ್ಯ ಕಂಡುಬಂದೊಡನೆಯೇ ಅರಣ್ಯ ರಕ್ಷಕರು ಕೂಡಲೇ ಗೋಥಾನೆ ಗ್ರಾಮದ ಬಳಿಯ ಗಾಭಾ ಪ್ರದೇಶಕ್ಕೆ ಧಾವಿಸಿದ್ದಾರೆ. ಇದನ್ನು ಗಮನಿಸಿರುವ ಆರೋಪಿಗಳು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರಾದರೂ ಕೊನೆಯಲ್ಲಿ ಆ ನಾಲ್ಕು ಆರೋಪಿಗಳ ಪೈಕಿ ಒಬ್ಬಾತ ಅಧಿಕಾರಿಗಳ ಕೈಗೆ ಸಿಲುಕಿ ಹಾಕಿಕೊಂಡಿದ್ದಾನೆ. ತದನಂತರ ಆ ಸಿಕ್ಕಿಬಿದ್ದ ಆರೋಪಿಯ ಮೊಬೈಲ್‌ನಲ್ಲಿ ಈ ಅತ್ಯಾಚಾರದ ದೃಶ್ಯ ಕಂಡುಬಂದಿದ್ದು ಆತನೂ ಸಹ ಅತ್ಯಾಚಾರ ಎಸಗಿದ್ದು ಕಂಡುಬಂದಿದೆ.

  ಇದನ್ನೂ ಓದಿ: Amy Wax: ಬ್ರಾಹ್ಮಣ ಮಹಿಳೆಯರೇ ಶ್ರೇಷ್ಠ ಎನ್ನುತ್ತಾರೆ: ಭಾರತೀಯ ವಲಸಿಗರ ಬಗ್ಗೆ ವಿವಾದಾತ್ಮಕ ಹೇಳಿಕೆ

  ಮುಂದೆ, ಸಿಕ್ಕಿಬಿದ್ದಿದ್ದ ಆರೋಪಿಯ ವಿಚಾರಣೆ ನಡೆಸಿದ ಅಧಿಕಾರಿಗಳು ಕೆಲವೇ ಸಮಯದಲ್ಲಿ ಮಿಕ್ಕ ಮೂರು ಆರೋಪಿಗಳನ್ನು ರತ್ನಾಗಿರಿ ಜಿಲ್ಲೆಯ ಹಾತಿವ್ ಎಂಬ ಗ್ರಾಮದಲ್ಲಿ ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡಿದ್ದಾರೆನ್ನಲಾಗಿದೆ. ಈಗಾಗಲೇ ಆರೋಪಿಗಳಿಂದ ಅರಣ್ಯ ಅಧಿಕಾರಿಗಳು ಎರಡು ಬಂದೂಕು ಹಾಗೂ ಎರಡು ಮೋಟರ್ ಸೈಕಲ್‌ಗಳನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ತಿಳಿದುಬಂದಿದೆ. ಅಧಿಕಾರಿಗಳು ನೀಡಿರುವ ಹೇಳಿಕೆ ಪ್ರಕಾರ, ಈ ನಾಲ್ಕು ಜನ ಆರೋಪಿಗಳು ಕೊಂಕಣ ಪ್ರದೇಶದಿಂದ ಕೊಲ್ಹಾಪುರದ ಚಾಂದೋಲಿ ಎಂಬ ತಾಣಕ್ಕೆ ಬೇಟೆಯಾಡಲು ಬಂದಿದ್ದರೆನ್ನಲಾಗಿದೆ.

  ಕಾಡು ಪ್ರಾಣಿಯ ಮೇಲೆ ಅತ್ಯಾಚಾರ

  ಪ್ರಸ್ತುತ, ಅಧಿಕಾರಿಗಳು ಬೇಟೆ ಪ್ರಕರಣವಲ್ಲದೆ ಕಾಡು ಪ್ರಾಣಿಯ ಮೇಲೆ ಪೈಶಾಚಿಕವಾದಂತಹ ಅತ್ಯಾಚಾರ ಎಸಗಿರುವುದಕ್ಕೆ ಸಂಬಂಧಿಸಿದಂತೆ ಸೂಕ್ತವಾದ ಪ್ರಕರಣ ದಾಖಲಿಸಿ ಶಿಕ್ಷೆ ಕೊಡಿಸುವ ಉದ್ದೇಶದಿಂದ ಕಾನೂನು ಅಧಿಕಾರಿಗಳೊಂದಿಗೆ ಚರ್ಚೆಯಲ್ಲಿದ್ದಾರೆಂದು ತಿಳಿದುಬಂದಿದೆ. ಅಧಿಕಾರಿಗಳ ಪ್ರಕಾರ, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಮುಂದೆ ತಕ್ಕ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದ್ದಾರೆ.

  ಬೆಂಗಾಲ್ ಮಾನಿಟರ್ ಲಿಜಾರ್ಡ್ ಒಂದು ದೈತ್ಯಾಕಾರದ ಹಲ್ಲಿ ಜಾತಿಯ ಪ್ರಾಣಿಯಾಗಿದ್ದು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಅಡಿ ಸಂರಕ್ಷಿತ ಪ್ರಭೇದ ಎಂದು ಘೋಷಿಸಲ್ಪಟ್ಟಿದೆ. ಆರೋಪ ಸಾಬೀತಾದರೆ ಏನಿಲ್ಲವೆಂದರೂ ಏಳು ವರ್ಷಗಳ ಕಾರಾಗೃಹವಾಸದ ಶಿಕ್ಷೆ ಅವರಿಗೆ ಸಿಗಲಿದೆ ಎಂದು ಹೇಳಬಹುದಾಗಿದೆ.
  Published by:Kavya V
  First published: