• Home
  • »
  • News
  • »
  • national-international
  • »
  • Bengal Minister Arrested: ಆಪ್ತನ ಮನೆಯಲ್ಲಿ 20 ಕೋಟಿ! ಶಿಕ್ಷಕರ ನೇಮಕಾತಿ ಹಗರಣದಲ್ಲಿ ಸಚಿವ ಅರೆಸ್ಟ್

Bengal Minister Arrested: ಆಪ್ತನ ಮನೆಯಲ್ಲಿ 20 ಕೋಟಿ! ಶಿಕ್ಷಕರ ನೇಮಕಾತಿ ಹಗರಣದಲ್ಲಿ ಸಚಿವ ಅರೆಸ್ಟ್

ಜಾರಿ ನಿರ್ದೇಶನಾಲಯ (Enforcement Directorate) ಬಂಗಾಳ ಸಚಿವ (Bengal Minister) ಪಾರ್ಥ ಚಟರ್ಜಿ ಅವರನ್ನು ಬಂಧಿಸಿದೆ. ಶುಕ್ರವಾರ ಬೆಳಗ್ಗೆ ಆರಂಭವಾದ 26 ಗಂಟೆಗಳ ಕಾಲ ವಿಚಾರಣೆಯ ನಂತರ ಚಟರ್ಜಿಯ ಬಂಧನವಾಗಿದೆ.

ಜಾರಿ ನಿರ್ದೇಶನಾಲಯ (Enforcement Directorate) ಬಂಗಾಳ ಸಚಿವ (Bengal Minister) ಪಾರ್ಥ ಚಟರ್ಜಿ ಅವರನ್ನು ಬಂಧಿಸಿದೆ. ಶುಕ್ರವಾರ ಬೆಳಗ್ಗೆ ಆರಂಭವಾದ 26 ಗಂಟೆಗಳ ಕಾಲ ವಿಚಾರಣೆಯ ನಂತರ ಚಟರ್ಜಿಯ ಬಂಧನವಾಗಿದೆ.

ಜಾರಿ ನಿರ್ದೇಶನಾಲಯ (Enforcement Directorate) ಬಂಗಾಳ ಸಚಿವ (Bengal Minister) ಪಾರ್ಥ ಚಟರ್ಜಿ ಅವರನ್ನು ಬಂಧಿಸಿದೆ. ಶುಕ್ರವಾರ ಬೆಳಗ್ಗೆ ಆರಂಭವಾದ 26 ಗಂಟೆಗಳ ಕಾಲ ವಿಚಾರಣೆಯ ನಂತರ ಚಟರ್ಜಿಯ ಬಂಧನವಾಗಿದೆ.

  • Share this:

ದೆಹಲಿ(ಜು.23): ಶಿಕ್ಷಕರ ನೇಮಕಾತಿ (Teachers Recruitment) ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (Enforcement Directorate) ಬಂಗಾಳ ಸಚಿವ (Bengal Minister) ಪಾರ್ಥ ಚಟರ್ಜಿ ಅವರನ್ನು ಬಂಧಿಸಿದೆ. ಶುಕ್ರವಾರ ಬೆಳಗ್ಗೆ ಆರಂಭವಾದ 26 ಗಂಟೆಗಳ ಕಾಲ ವಿಚಾರಣೆಯ ನಂತರ ಚಟರ್ಜಿಯ ಬಂಧನವಾಗಿದೆ. ಶುಕ್ರವಾರ ಬೆಳಗ್ಗೆಯಿಂದ ವಿಚಾರಣೆ ನಡೆಸುತ್ತಿದ್ದ ನಮ್ಮ ಅಧಿಕಾರಿಗಳಿಗೆ ಆತ ಸಹಕರಿಸುತ್ತಿಲ್ಲ. ಹಗಲಿನಲ್ಲಿ ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಇಡಿ ಅಧಿಕಾರಿಯೊಬ್ಬರು (ED Officer) ತಿಳಿಸಿದ್ದಾರೆ.


ಸಚಿವರ ಆಪ್ತ ಸಹಾಯಕಿ ಅರ್ಪಿತಾ ಮುಖರ್ಜಿ ಅವರನ್ನೂ ಬಂಧಿಸಲಾಗಿದೆ. ಇಡಿ ಒಂದು ದಿನದ ಹಿಂದೆ ದಕ್ಷಿಣ ಕೋಲ್ಕತ್ತಾದಲ್ಲಿರುವ ಮುಖರ್ಜಿ ಅವರ ನಿವಾಸದಿಂದ ಲೆಕ್ಕಕ್ಕೆ ಸಿಗದ 20 ಕೋಟಿ ರೂ. ಸೀಜ್ (20 Crore Seized) ಮಾಡಿದ ನಂತರ ಈ ಬಂಧನ ನಡೆದಿದೆ. ಬಂಧನದ ನಂತರ ಟಿಎಂಸಿ ಸಚಿವರನ್ನು ಜೋಕಾ ಇಎಸ್‌ಐ (ESI) ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಪರೀಕ್ಷೆಗೆ ಕರೆದೊಯ್ಯಲಾಯಿತು.


ವಿಚಾರಣೆ ಸಾಧ್ಯತೆ ಎಲ್ಲೆಲ್ಲಿ?


ಇಡಿ ಕಚೇರಿ ಇರುವ ಈಶಾನ್ಯ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ಸಿಜಿಒ ಸಂಕೀರ್ಣಕ್ಕೆ  ಅವರನ್ನು ಕರೆತರುವ ಸಾಧ್ಯತೆಯಿದೆ. ಹೆಚ್ಚಿನ ವಿಚಾರಣೆಗಾಗಿ ಅವರನ್ನು ಮುಖರ್ಜಿ ಅವರ ನಿವಾಸಕ್ಕೆ ಅಥವಾ ಅವರ ವಿಧಾನಸಭಾ ಕ್ಷೇತ್ರವಾದ ಬೆಹಾಲಾ ಪಶ್ಚಿಮದ ಕೆಲವು ಸ್ಥಳಗಳಿಗೆ ಕರೆದೊಯ್ಯಬಹುದು.


ಕೋರ್ಟಿಗೆ ಹಾಜರು


ಚಟರ್ಜಿ ಅವರನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಆಪಾದಿತ ಹಗರಣ ನಡೆದಾಗ ಚಟರ್ಜಿ ಅವರು ರಾಜ್ಯ ಶಿಕ್ಷಣ ಸಚಿವರಾಗಿದ್ದರು. ಇಡಿ ಅದರಲ್ಲಿ ಭಾಗಿಯಾಗಿರುವವರ ಮನಿ ಲಾಂಡರಿಂಗ್ ಅಂಶವನ್ನು ತನಿಖೆ ನಡೆಸುತ್ತಿದೆ.
20 ಕೋಟಿ ರೂ ಸೀಝ್


ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಸಚಿವ ಪಾರ್ಥ ಚಟರ್ಜಿ ಅವರ ನಿಕಟವರ್ತಿ ಅರ್ಪಿತಾ ಮುಖರ್ಜಿ ಅವರ ನಿವಾಸದ ಮೇಲೆ ದಾಳಿ ನಡೆಸಿ 20 ಕೋಟಿ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ಶುಕ್ರವಾರ ತಿಳಿಸಿದೆ.


ಇದನ್ನೂ ಓದಿ: Bengal SSC Scam: ಟಿಎಂಸಿ ಮುಖಂಡನ ಆಪ್ತನ ಮನೆಯಲ್ಲಿ ಸಿಕ್ಕಿತು 20 ಕೋಟಿ! ಹಣದ ರಾಶಿ ನೋಡಿ ಅಧಿಕಾರಿಗಳೇ ಶಾಕ್


ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗದ (ಎಸ್‌ಎಸ್‌ಸಿ) ಮಾಜಿ ಸಲಹೆಗಾರ ಶಾಂತಿ ಪ್ರಸಾದ್ ಸಿನ್ಹಾ, ಪಶ್ಚಿಮ ಬಂಗಾಳದ ಪ್ರೌಢ ಶಿಕ್ಷಣ ಮಂಡಳಿಯ ಮಾಜಿ ಅಧ್ಯಕ್ಷ ಕಲ್ಯಾಣ್‌ಮೋಯ್ ಗಂಗೂಲಿ ಮತ್ತು ಇತರ ಒಂಬತ್ತು ಜನರ ಮನೆಗಳಲ್ಲಿ ಏಜೆನ್ಸಿ ಶುಕ್ರವಾರ ಏಕಕಾಲದಲ್ಲಿ ದಾಳಿ ನಡೆಸಿತು.


ಶಿಕ್ಷಕರ ನೇಮಕಾತಿಯಲ್ಲಿ ಹಗರಣ


ಕಲ್ಕತ್ತಾ ಉಚ್ಚ ನ್ಯಾಯಾಲಯದ ನಿರ್ದೇಶನದಂತೆ ಸಿಬಿಐ, ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗದ ಶಿಫಾರಸಿನ ಮೇರೆಗೆ ಸರ್ಕಾರಿ ಪ್ರಾಯೋಜಿತ ಮತ್ತು ಅನುದಾನಿತ ಶಾಲೆಗಳಲ್ಲಿ ಗ್ರೂಪ್-ಸಿ ಮತ್ತು ಡಿ ಸಿಬ್ಬಂದಿ ಹಾಗೂ ಶಿಕ್ಷಕರ ನೇಮಕಾತಿಯಲ್ಲಿ ನಡೆದಿರುವ ಆರೋಪದ ಅಕ್ರಮಗಳ ಬಗ್ಗೆ ತನಿಖೆ ನಡೆಸುತ್ತಿದೆ. ಇಡಿ ಹಗರಣದಲ್ಲಿ ಹಣದ ಜಾಡು ಹಿಡಿಯುತ್ತಿದೆ.
ಈ ಹಿಂದೆಯೂ ವಿಚಾರಣೆ


ಪ್ರಸ್ತುತ ಕೈಗಾರಿಕೆಗಳು ಮತ್ತು ವಾಣಿಜ್ಯ ಸಚಿವರಾಗಿರುವ ಚಟರ್ಜಿ ಅವರನ್ನು ಸಿಬಿಐ ಎರಡು ಬಾರಿ ಮೊದಲು ಏಪ್ರಿಲ್ 26 ರಂದು ಒಮ್ಮೆ ಮತ್ತು ನಂತರ ಮೇ 18 ರಂದು ವಿಚಾರಣೆಗೆ ಒಳಪಡಿಸಿತ್ತು.


ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮವಾಗುವುದು ಇದೇ ರಾಜ್ಯದಲ್ಲಿ ಮೊದಲಲ್ಲ. ಈ ಹಿಂದೆ ಬಿಹಾರದಲ್ಲಿಯೂ ಇದೇ ರೀತಿಯ ಘಟನೆ ವರದಿಯಾಗಿತ್ತು. ಲಂಚ ಪಡೆದು ಉದ್ಯೋಗ ನೀಡುವ ಹಗರಣ ಹೊರಬಿದ್ದಿದ್ದು ಟಿಎಂಸಿ ಸರ್ಕಾರಕ್ಕೆ ತೀವ್ರ ಮುಖಭಂಗವಾಗಿದೆ.

Published by:Divya D
First published: