ಒಪ್ಪಿಗೆ ಪಡೆಯದೇ ಗರ್ಭಿಣಿ ಹೆಂಡತಿ ಮೇಲೆ ಲೈಂಗಿಕ ಕ್ರಿಯೆ ನಡೆಸಿದ್ದಕ್ಕೆ ಗಂಡನ ವಿರುದ್ಧವೇ ಅತ್ಯಾಚಾರ ಆರೋಪ!

ಪತ್ನಿಯ ಜೊತೆ ನಿರಂತರವಾಗಿ ಲೈಂಗಿಕ ಸಂಪರ್ಕ ಹೊಂದಲು ಪತಿ ಯತ್ನಿಸುತ್ತಿದ್ದ. ಹಾಗಾಗಿ ಆಕೆ ಕೋರ್ಟ್​ ಮೆಟ್ಟಿಲೇರಿದ್ದು, ಗಂಡನಿಂದ ಅತ್ಯಾಚಾರವಾಗಿದೆ. ಆತ ವರದಕ್ಷಿಣೆ ನೀಡುವಂತೆ ಪೀಡಿಸುತ್ತಿದ್ದಾನೆ ಎಂದು ಆರೋಪಿಸಿದ್ದಾಳೆ.

Rajesh Duggumane | news18
Updated:December 6, 2018, 3:49 PM IST
ಒಪ್ಪಿಗೆ ಪಡೆಯದೇ ಗರ್ಭಿಣಿ ಹೆಂಡತಿ ಮೇಲೆ ಲೈಂಗಿಕ ಕ್ರಿಯೆ ನಡೆಸಿದ್ದಕ್ಕೆ ಗಂಡನ ವಿರುದ್ಧವೇ ಅತ್ಯಾಚಾರ ಆರೋಪ!
ಸಾಂದರ್ಭಿಕ ಚಿತ್ರ
Rajesh Duggumane | news18
Updated: December 6, 2018, 3:49 PM IST
ಕೋಲ್ಕತ್ತ (ಡಿ.06): ಒಪ್ಪಿಗೆ ಪಡೆಯದೇ ಲೈಂಗಿಕ್ರಿಯೆ ನಡೆಸಲು ಮುಂದಾದ ಪತಿ ವಿರುದ್ಧ ಆತನ ಪತ್ನಿಯೇ ಅತ್ಯಾಚಾರ ಆರೋಪ ಮಾಡಿದ್ದಾಳೆ. ಈ ಮೂಲಕ ಗಂಡನ ವಿರುದ್ಧವೇ ಕಾನೂನು ಹೋರಾಟಕ್ಕೆ ಮುಂದಾಗಿದ್ದಾಳೆ.

ಪಶ್ಚಿಮ ಬಂಗಾಳದಲ್ಲಿ ಈ ಪ್ರಕರಣ ನಡೆದಿದೆ. ಈ ಜೋಡಿ ಇತ್ತೀಚೆಗೆ ವಿವಾಹವಾಗಿತ್ತು. ಮದುವೆಗೂ ಮೊದಲು ವರ ಬ್ಯಾಂಕ್​ನಲ್ಲಿ ಉನ್ನತ ಹುದ್ದೆಯಲ್ಲಿದ್ದಾನೆ ಎಂದು ಕುಟುಂಬದವರು ಸುಳ್ಳು ಹೇಳಿದ್ದರು. ವಿವಾಹದ ನಂತರ, ಆತ ಚಿಕ್ಕ ಸಂಸ್ಥೆಯೊಂದರಲ್ಲಿ ಕ್ಲರ್ಕ್​ ಆಗಿದ್ದ ಎಂಬುದು ತಿಳಿದುಬಂದಿತ್ತು. ಮದುವೆ ಆದಮೇಲೆ ಆತ ಕೆಲಸಕ್ಕೆ ಹೋಗುವುದನ್ನೂ ನಿಲ್ಲಿಸಿದ್ದ.

ಈ ಕಾರಣಕ್ಕೆ ಆಕೆ ಗಂಡನಿಂದ ದೂರ ಇರಲು ಪ್ರಯತ್ನಿಸಿದ್ದಳು. ಅದಾಗಲೇ ಆಕೆ ಗರ್ಭ ಧರಿಸಿದ್ದಳು. ಆತ ಮಾತ್ರ ಪತ್ನಿಯ ಜೊತೆ ನಿರಂತರವಾಗಿ ಲೈಂಗಿಕ ಸಂಪರ್ಕ ಹೊಂದಲು ಯತ್ನಿಸುತ್ತಿದ್ದ. ಹಾಗಾಗಿ ಆಕೆ ಕೋರ್ಟ್​ ಮೆಟ್ಟಿಲೇರಿದ್ದು, ಗಂಡನಿಂದ ಅತ್ಯಾಚಾರವಾಗಿದೆ. ಆತ ವರದಕ್ಷಿಣೆ ನೀಡುವಂತೆ ಪೀಡಿಸುತ್ತಿದ್ದಾನೆ ಎಂದು ಆರೋಪಿಸಿದ್ದಾಳೆ. ಹಾಗಾಗಿ ಪತಿ ವಿರುದ್ಧ ವೈವಾಹಿಕ ಅತ್ಯಾಚಾರ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:  ಬಾಬ್ರಿ ಮಸೀದಿ ಧ್ವಂಸಕ್ಕೆ 26 ವರ್ಷ; ಅಯೋಧ್ಯೆಯಲ್ಲಿ ಬಿಗಿ ಭದ್ರತೆ

ಸಂತ್ರಸ್ತೆಯ ಕಾನೂನು ಹೋರಾಟಕ್ಕೆ ಮಹಿಳಾ ಸಂಘಟನೆಗಳು ಬೆಂಬಲ ನೀಡಿವೆ. ‘ಒಂದು ಪುರುಷ ಹೆಣ್ಣನ್ನು ಮದುವೆಯಾಗಿದ್ದಾನೆ ಎಂದ ಮಾತ್ರಕ್ಕೆ ಆಕೆಯ ಮೇಲೆ ಸಂಪೂರ್ಣ ಹಕ್ಕನ್ನು ಸಾಧಿಸಲು ಗಂಡಸಿಗೆ ಹಕ್ಕಿಲ್ಲ. ಹೆಂಡತಿಯ ದೇಹವನ್ನು ಸ್ಪರ್ಶಿಸುವುದಕ್ಕೂ ಮೊದಲು ಆಕೆಯ ಒಪ್ಪಿಗೆ ಪಡೆದುಕೊಳ್ಳಬೇಕು’ ಎಂದು ಮಹಿಳಾ ಸಂಘಟನೆಯ ಸದಸ್ಯರು ಹೇಳಿದ್ದಾರೆ.

First published:December 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ