Cabinet Expansion: ಪಶ್ಚಿಮ ಬಂಗಾಳ ಸಂಪುಟ ವಿಸ್ತರಣೆ: ಬಾಬುಲ್ ಸುಪ್ರಿಯೊ ಸೇರಿದಂತೆ ಐವರಿಗೆ ಸಚಿವ ಸ್ಥಾನ

Babul Supriyo: ಹೊಸಬರಲ್ಲಿ ದೊಡ್ಡ ಮಟ್ಟದಲ್ಲಿ ಕೇಳಿ ಬರುತ್ತಿರುವ ಹೆಸರು ಬಾಬುಲ್ ಸುಪ್ರಿಯೊ. ಬಿಜೆಪಿಯ ಮಾಜಿ ಕೇಂದ್ರ ಸಚಿವರಾದ ಸುಪ್ರಿಯೊ ಕಳೆದ ವರ್ಷ ರಾಜ್ಯದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು.  

ಪ್ರಮಾಣವಚನ ಸಮಾರಂಭ

ಪ್ರಮಾಣವಚನ ಸಮಾರಂಭ

  • Share this:
ಕೋಲ್ಕತ್ತಾ: 2011 ರಲ್ಲಿ ಪಕ್ಷವು ಅಧಿಕಾರಕ್ಕೆ ಬಂದ ನಂತರದ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ (Chief Minister Mamata Banerjee) ಈಗಿನ ಸಂಪುಟ ವಿಸ್ತರಣೆ (Cabinet Expansion) ಅತಿದೊಡ್ಡ ಬೆಳವಣಿಗೆ ಎಂದು ಬಿಂಬಿಸಲಾಗಿದೆ. ಎಸ್​ಎಸ್​​ಸಿ ಹಗರಣದಿಂದ (SSC SCAM) ಪಾರ್ಥ ಚಟರ್ಜಿ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿದ ಬಳಿಕ ದೀದಿ ಸಂಪುಟದಲ್ಲಿ ಐವರು ಹೊಸ ಮುಖಗಳಿಗೆ ಅವಕಾಶ ನೀಡಿದ್ದಾರೆ. ಸಂಪುಟ ವಿಸ್ತರಣೆ ನಂತರ ಸಚಿವ ಸಂಪುಟ ಪುನಾರಚನೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಹೊಸಬರಲ್ಲಿ ದೊಡ್ಡ ಮಟ್ಟದಲ್ಲಿ ಕೇಳಿ ಬರುತ್ತಿರುವ ಹೆಸರು ಬಾಬುಲ್ ಸುಪ್ರಿಯೊ. ಬಿಜೆಪಿಯ ಮಾಜಿ ಕೇಂದ್ರ ಸಚಿವರಾದ ಸುಪ್ರಿಯೊ ಕಳೆದ ವರ್ಷ ರಾಜ್ಯದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು.  

ಹೊಸದಾಗಿ ಯಾರು ಸಂಪುಟಕ್ಕೆ ಸೇರ್ಪಡೆ? 

ಬಾಬುಲ್ ಸುಪ್ರಿಯೊ ಅವರೊಂದಿಗೆ ಸ್ನೇಹಶಿಶ್ ಚಕ್ರವರ್ತಿ, ಪಾರ್ಥ ಭೌಮಿಕ್, ಉದಯನ್ ಗುಹಾ ಮತ್ತು ಪ್ರದೀಪ್ ಮಜುಂದಾರ್ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡಲಾಗುವುದು. ನಾಲ್ವರು ಕಿರಿಯ ಮಂತ್ರಿಗಳಾಗಿ ಬಿರ್ಬಹಾ ಹನ್ಸ್ದಾ, ಬಿಪ್ಲಬ್ ರಾಯ್ ಚೌಧರಿ, ತಜ್ಮುಲ್ ಹೊಸೈನ್ ಮತ್ತು ಸತ್ಯಜಿತ್ ಬರ್ಮನ್ ಸ್ಥಾನ ಪಡೆಯಲಿದ್ದಾರೆ.

ಇದನ್ನೂ ಓದಿ: China Taiwan Crisis: ಯಾರು ಈ ನ್ಯಾನ್ಸಿ ಪೆಲೋಸಿ? ಈಕೆಯನ್ನು ಕಂಡ್ರೆ ಚೀನಾಗೇಕೆ ಅಷ್ಟೊಂದು ಉರಿ?

ಪ್ರಮಾಣ ವಚನ ಸ್ವೀಕಾರ

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮುಖ್ಯಮಂತ್ರಿಯವರ ಆಪ್ತ ಸಹಾಯಕ ಪಾರ್ಥ ಚಟರ್ಜಿ ಅವರನ್ನು ಬಂಧಿಸಿದ ದಿನಗಳ ನಂತರ ಐವರು ಹೊಸ ಸಚಿವರು ಇಂದು ಮಧ್ಯಾಹ್ನ ಪ್ರಮಾಣ ವಚನ ಸ್ವೀಕರಿಸಿದರು. ಅವರ ಸಹಾಯಕಿ ಅರ್ಪಿತಾ ಮುಖರ್ಜಿಗೆ ಸೇರಿದ ಎರಡು ಆಸ್ತಿಗಳಿಂದ ನಗದು ರಾಶಿಯನ್ನು ವಶಪಡಿಸಿಕೊಳ್ಳಲಾಗಿದ್ದು, ಸರ್ಕಾರವು ಹೆಚ್ಚಿನ ಟೀಕೆಗೆ ಗುರಿಯಾಗಿದೆ. ಪಾರ್ಥ ಚಟರ್ಜಿ ಬಂಧನದ ನಂತರ ಸಚಿವ ಸ್ಥಾನದಿಂದ ವಜಾಗೊಳಿಸಲಾಯಿತು. ಚಟರ್ಜಿ ಅವರು ಕೈಗಾರಿಕೆ, ವಾಣಿಜ್ಯ ಮತ್ತು ಉದ್ಯಮಗಳು ಮತ್ತು ಸಂಸದೀಯ ವ್ಯವಹಾರಗಳು ಸೇರಿದಂತೆ ಐದು ಪ್ರಮುಖ ಇಲಾಖೆಗಳ ಉಸ್ತುವಾರಿ ವಹಿಸಿದ್ದರು.

ದೀದಿ ಮಾತು

ಮೊನ್ನೆ ಸಂಪುಟ ವಿಸ್ತರಣೆಯನ್ನು ಘೋಷಿಸುವಾಗ, ಮಮತಾ ಬ್ಯಾನರ್ಜಿ ಅವರು ರಾಜ್ಯದ ಜಿಲ್ಲೆಗಳ ಸಂಖ್ಯೆಯು 23 ರಿಂದ 30 ಕ್ಕೆ ಏರಿದೆ. ಇದು ದೊಡ್ಡ ಕೆಲಸದ ಹೊರೆಯನ್ನು ಉಂಟುಮಾಡುತ್ತದೆ ಎಂದು ಹೇಳಿದ್ದರು. ನಾವು ಸಚಿವರಾದ ಸುಬ್ರತಾ ಮುಖರ್ಜಿ, ಸಾಧನ್ ಪಾಂಡೆ ಅವರನ್ನು ಕಳೆದುಕೊಂಡಿದ್ದೇವೆ. ಪಾರ್ಥ ಜೈಲಿನಲ್ಲಿರುವುದರಿಂದ ಅವರ ಎಲ್ಲಾ ಕೆಲಸ ಆಗಬೇಕಿದೆ. ನಾನು ಒಬ್ಬಂಟಿಯಾಗಿ ನಿಭಾಯಿಸಲು ಸಾಧ್ಯವಿಲ್ಲ, ಎಂದು ಅವರು ಹೇಳಿದರು.

ಇದನ್ನೂ ಓದಿ: AICC President: ರಾಹುಲ್ ನಿರಾಕರಿಸಿದರೆ ಈ ಹಿರಿಯ ನಾಯಕನೇ ಮುಂದಿನ ಕಾಂಗ್ರೆಸ್​ ಅಧ್ಯಕ್ಷ!

ಪಾರ್ಥ ಚಟರ್ಜಿ ಮೇಲೆ ಚಪ್ಪಲಿ ಎಸೆತ

ಎಸ್​ಎಸ್​ಸಿ ಹಗರಣ (SSC Scam) ಪಶ್ಚಿಮ ಬಂಗಾಳದಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದೆ. ಆಡಳಿತಾರೂಢ ಟಿಎಂಸಿ ಸರ್ಕಾರಕ್ಕೆ (TMC Govt) ತೀವ್ರ ಮುಖಭಂಗವಾಗಿದೆ. ಪ್ರಕರಣದಲ್ಲಿ ಬಂಧಿತರಾಗಿರುವ ಪಾರ್ಥ ಚಟರ್ಜಿ (Partha Chatterjee) ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವ ಮೂಲಕ ಸಿಎಂ ಮಮತಾ ಬ್ಯಾನರ್ಜಿ ಡ್ಯಾಮೇಜ್​ ಕಂಟ್ರೋಲ್​​ ಮಾಡಿದ್ದಾರೆ. ಸದ್ಯ ಪೊಲೀಸರ ವಶದಲ್ಲಿರುವ ಮಾಜಿ ಸಚಿವ ಪಾರ್ಥ ಚಟರ್ಜಿ ಆರೋಗ್ಯ ತಪಾಸಣೆಗೆ ಆಸ್ಪತ್ರೆಗೆ ಬಂದಾಗ ಮಹಿಳೆಯೊಬ್ಬರು ಅವರ ಮೇಲೆ ಚಪ್ಪಲಿ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಪ್ಪಲಿ ಎಸೆದ ಮಹಿಳೆಯ ಹೆಸರು ಸುಭ್ರಾ ಘಡುಯಿ ಹಾಗೂ ಆಕೆ ದಕ್ಷಿಣ 24 ಪರಗಣ ಜಿಲ್ಲೆಯ ಅಮತಾಲಾ ನಿವಾಸಿ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಚಟರ್ಜಿ ಅಧಿಕಾರಿಗಳ ವಶಪಡಿಸಿಕೊಂಡಿರುವ ಹಣ ನನ್ನದಲ್ಲ, ಸರಿಯಾದ ಸಮಯದಲ್ಲಿ ಸತ್ಯ ಹೊರಬರಲಿದೆ ಎಂದು ಹೇಳಿದ್ದರು.
Published by:Kavya V
First published: