Kisan Credit card: ರೈತರು ಕಿಸಾನ್​ ಕ್ರೆಡಿಟ್​ ಕಾರ್ಡ್​ ಪಡೆಯೋದು ಹೇಗೆ, ಇದರ ಲಾಭಗಳೇನು?; ಇಲ್ಲಿದೆ ಮಾಹಿತಿ

How To Apply Kisan Credit Card: ಮೀನುಗಾರಿಕೆ ಮತ್ತು ಪಶುಸಂಗೋಪನೆ ವೃತ್ತಿಯಲ್ಲಿರುವವರಿಗೂ ಕಿಸಾನ್ ಕ್ರೆಡಿಟ್ ಕಾರ್ಡ್ ಕೊಡುವುದಾಗಿ ಸರ್ಕಾರ ಹೇಳಿದೆ. ರೈತರಿಗೆ ಸಾಕಷ್ಟು ಲಾಭಗಳಿರುವ ಈ ಕಾರ್ಡನ್ನು ಪಡೆಯೋದು ಹೇಗೆ? ಆ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

news18-kannada
Updated:May 15, 2020, 11:00 AM IST
Kisan Credit card: ರೈತರು ಕಿಸಾನ್​ ಕ್ರೆಡಿಟ್​ ಕಾರ್ಡ್​ ಪಡೆಯೋದು ಹೇಗೆ, ಇದರ ಲಾಭಗಳೇನು?; ಇಲ್ಲಿದೆ ಮಾಹಿತಿ
ಕಿಸಾನ್​ ಕಾರ್ಡ್​
  • Share this:
ನವದೆಹಲಿ (ಮೇ 15): ದೇಶಾದ್ಯಂತ 2.5 ಕೋಟಿ ಜನರು ಕಿಸಾನ್​ ಕಾರ್ಡ್ ಹೊಂದಿದ್ದಾರೆ. ಕಿಸಾನ್​ ಕಾರ್ಡ್​ ಹೊಂದಿರುವವರಿಗೆ ಸಾಲು ನೀಡಲು ಕೇಂದ್ರ ಸರ್ಕಾರ 2 ಲಕ್ಷ ಕೋಟಿ ಹಣವನ್ನು ಮುಡಿಪಿಟ್ಟಿದೆ. ಇನ್ನು, ಮೀನುಗಾರಿಕೆ ಮತ್ತು ಪಶುಸಂಗೋಪನೆ ವೃತ್ತಿಯಲ್ಲಿರುವವರಿಗೂ ಕಿಸಾನ್ ಕ್ರೆಡಿಟ್ ಕಾರ್ಡ್ ಕೊಡುವುದಾಗಿ ಸರ್ಕಾರ ಹೇಳಿದೆ. ರೈತರಿಗೆ ಸಾಕಷ್ಟು ಲಾಭಗಳಿರುವ ಈ ಕಾರ್ಡನ್ನು ಪಡೆಯೋದು ಹೇಗೆ? ಆ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಕಿಸಾನ್​ ಕಾರ್ಡ್​ಗೆ ಅರ್ಜಿ ಸಲ್ಲಿಸೋದು ಹೇಗೆ?:


  • ಹಂತ 1- ನಿಮ್ಮ ಬ್ಯಾಂಕ್​ನ ಅಧಿಕೃತ ವೆಬ್​ ಸೈಟ್​ಗೆ ಭೇಟಿ ನೀಡಿ ಅಥವಾ ನಿಮ್ಮ ಬ್ಯಾಂಕ್​ಗೆ ಭೇಟಿ ನೀಡಿ.

  • ಹಂತ 2: ಲೋನ್​ ಆಯ್ಕೆ ಕ್ಲಿಕ್​ ಮಾಡಿದ ನಂತರ ‘Apply for KCC’ ಎಂದು ಸರ್ಚ್​ ಮಾಡಿ

  • ಹಂತ 3- ಅಲ್ಲಿ ಸಿಗುವ ಫಾರ್ಮ್​ಅನ್ನು ಸಂಪೂರ್ಣವಾಗಿ ಭರ್ತಿ ಮಾಡಿ

  • ಹಂತ 4: ನಂತರ  ‘submit’ ಬಟನ್​ ಕ್ಲಿಕ್​ ಮಾಡಿ
  •  ಹಂತ 5- ಸಬ್​ಮಿಟ್ ಮಾಡದ ನಂತರ ನಿಮಗೆ ಒಂದು ಸಂಖ್ಯೆ ಸಿಗುತ್ತದೆ.

  • ಹಂತ 6: ಆ ನಂಬರ್​ ಅನ್ನು ಸೇವ್​ ಮಾಡಿಟ್ಟುಕೊಳ್ಳಿ


ಕಿಸಾನ್​ ಕ್ರೆಡಿಟ್​ ಕಾರ್ಡ್​ಗೆ ಯಾವ ಯಾವ ದಾಖಲೆಗಳು ಬೇಕು?

  • ಸಂಪೂರ್ಣವಾಗಿ ಭರ್ತಿ ಮಾಡಲಾದ ಫಾರ್ಮ್​ ಹಾಗೂ ಅದರ ಮೇಲೆ ನಿಮ್ಮ ಸಹಿ.

  • ಆಧಾರ್,​ ಪಾನ್​,  ವೋಟಿಂಗ್ ಕಾರ್ಡ್​ ಅಥವಾ ಡ್ರೈವಿಂಗ್​ ಲೈಸೆನ್ಸ್​​ನ ಪ್ರತಿ

  • ವಿಳಾಸ ಖಚಿತಪಡಿಸಲು ದಾಖಲೆಗಳು ಅಗತ್ಯ. (ಆಧಾರ್​ ಕಾರ್ಡ್​, ವೋಟರ್​ ಐಡಿ, ವಾಹನ ಪರವಾನಿಗೆ ಹೊರತುಪಡಿಸಿ)

  • ಭೂ ಪತ್ರ

  • ಎರಡು ಪಾಸ್​ಪೋರ್ಟ್​ ಸೈಜ್​ನ ಫೋಟೋ


ಕಿಸಾನ್​ ಕಾರ್ಡ್​ ಲಾಭಗಳು:

  •  ಸಾಲ ಮರುಪಾವತಿ ಸುಲಭ

  • ಸುಲಭವಾಗಿ ದೀರ್ಘಾವಧಿ ಸಾಲ ಲಭ್ಯ

  • ಗೊಬ್ಬರ, ಬಿತ್ತನೆ ಬೀಜಗಳ ಖರೀದಿಯಲ್ಲಿ ಸಹಕಾರಿ

  • ಕಡಿಮೆ ದಾಖಲೆ ಮತ್ತು ಹೆಚ್ಚಿನ ಲಾಭ

First published: May 15, 2020, 11:00 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading