Belgian Vice PM: ಅಸ್ವಸ್ಥ ಗಂಡನ ಕಾಳಜಿ ವಹಿಸಲು ರಾಜೀನಾಮೆ ಕೊಟ್ಟ ಬೆಲ್ಜಿಯಂ ಪ್ರಧಾನಿ

Belgian Vice PM: ಅಸ್ಪಸ್ಥನಾದ ತನ್ನ ಗಂಡನ ಕಾಳಜಿ ವಹಿಸುವುದಕ್ಕಾಗಿ ಉಪ ಪ್ರಧಾನಿ ಹಾಗೂ ಸಚಿವೆ ಹುದ್ದೆಗೆ ರಾಜೀನಾಮೆ ನೀಡಿರುವ ಘಟನೆ ನಡೆದಿದೆ. ಬೆಲ್ಜಿಯಂನ ಸಚಿವೆಯಾಗಿದ್ದ ಸೋಫಿ ಗಂಡನಿಗಾಗಿ ಉಪ ಪ್ರಧಾನಿ ಹುದ್ದೆಗೆ ರಾಜೀನಾಮೆ ಕೊಟ್ಟಿದ್ದಾರೆ.

ಸೋಫಿ ವಿಲ್ಮ್ಸ್

ಸೋಫಿ ವಿಲ್ಮ್ಸ್

  • Share this:
ಮಹಿಳೆಯರೇ ಹಾಗೆ. ಅವರ ನಿರ್ಧಾರ, ನಂಬಿಕೆಗಳು, ಶ್ರದ್ಧೆ ವಿಧೇಯತೆ ವಿಶೇಷವಾಗಿರುತ್ತದೆ. ಯಾವುದೇ ಹುದ್ದೆ, ಸ್ಥಾನ ಅಲಂಕರಿಸಿದರೂ ಅವರೊಳಗಿನ ಮಾತೃತ್ವ ಮಾತ್ರ ಯಾವಾಗಲೂ ಜಾಗೃತವಾಗಿರುತ್ತದೆ. ಭಾರತದಲ್ಲಿ ಸುಷ್ಮಾ ಸ್ವರಾಜ್ ಅವರಂತಹ ಸಚಿವೆಯನ್ನು ಎಲ್ಲರೂ ಪ್ರೀತಿಸುತ್ತಿದ್ದರು. ಇದೀಗ ಬೆಲ್ಜಿಯಂನ ಉಪ ಪ್ರಧಾನಿ ಗಂಡನ ಕಾಳಜಿ ವಹಿಸುವುದಕ್ಕಾಗಿ ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟಿರುವುದು ಭಾರೀ ಸುದ್ದಿಯಾಗಿದೆ. ಬೆಲ್ಜಿಯಂ (Belgium) ವಿದೇಶಾಂಗ ಸಚಿವೆ ಮತ್ತು ಉಪಪ್ರಧಾನಿ (Vice Prime Minister) ಸೋಫಿ ವಿಲ್ಮ್ಸ್ (Sophie Wilmes) ಅವರು ತಮ್ಮ ಪತಿ, ಆಸ್ಟ್ರೇಲಿಯಾದ ಮಾಜಿ ಫುಟ್ಬಾಲ್ ಆಟಗಾರ ಕ್ರಿಸ್ ಸ್ಟೋನ್ ಅವರು ಮೆದುಳಿನ ಕ್ಯಾನ್ಸರ್​ನಿಂದ (Brain Cancer) ಬಳುತ್ತಿರುವಾಗ ಅವರನ್ನು ನೋಡಿಕೊಳ್ಳಲು ತಮ್ಮ ಹುದ್ದೆಗೆ ರಾಜೀನಾಮೆ (Resign) ನೀಡಿದ್ದಾರೆ ಎಂದು ಕ್ಯಾಬಿನೆಟ್ ಗುರುವಾರ ಪ್ರಕಟಿಸಿದೆ.

2019-20ರಲ್ಲಿ ಬೆಲ್ಜಿಯಂನ ಪ್ರಧಾನ ಮಂತ್ರಿಯಾಗಿದ್ದ ಅವರು ಮೊದಲ ಮಹಿಳಾ ಪ್ರಧಾನಿ ಎಂದು ಸುದ್ದಿಯಾಗಿದ್ದರು. ವಿಲ್ಮ್ಸ್, ಪತಿಯ ಅನಾರೋಗ್ಯದ ಕಾರಣಕ್ಕಾಗಿ ಈಗಾಗಲೇ ಏಪ್ರಿಲ್‌ನಲ್ಲಿ ತಾತ್ಕಾಲಿಕವಾಗಿ  ಸ್ಥಾನದಿಂದ ಕೆಳಗಿಳಿದಿದ್ದರು. ನಂತರ ಬೇಸಿಗೆಯಲ್ಲಿ ಪರಿಸ್ಥಿತಿಯನ್ನು ಮರು ಮೌಲ್ಯಮಾಪನ ಮಾಡಲಾಗುವುದು ಎಂದು ಹೇಳಿದ್ದಾರೆ. ಅಲ್ಲಿಯವರೆಗೂ ಅವರು ರಜೆ ತೆಗೆದುಕೊಳ್ಳಲಿದ್ದಾರೆ. ಕನಿಷ್ಠ ಈ ವರ್ಷ ಬೇಸಗೆ ತನಕವೂ ಅವರು ಹಿಂದಿರುಗುವ ಸೂಚನೆ ಇಲ್ಲ.

ಗಂಡನ ಜೊತೆ ನಿಂತ ವಿಲ್ಮ್ಸ್

ನನ್ನ ಗಂಡನ ಅನಾರೋಗ್ಯವು ಕಷ್ಟಕರವಾದ ಯುದ್ಧವಾಗಿದೆ. ನಾನು ಅವನೊಂದಿಗೆ ಮತ್ತು ನಮ್ಮ ಮಕ್ಕಳೊಂದಿಗೆ ಹೋರಾಡಲು ಬಯಸುತ್ತೇನೆ ಎಂದು ವಿಲ್ಮ್ಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಸರ್ಕಾರದಲ್ಲಿ ನನ್ನ ಪ್ರಸ್ತುತ ಕರ್ತವ್ಯಗಳು ನಾನು ಕುಟುಂಬದ ಜೊತೆ ಸಾಕಷ್ಟು ಸಮಯ ಕಳೆಯಲು ಅನುಮತಿಸುವುದಿಲ್ಲ ಎಂದಿದ್ದಾರೆ. ಅವರು ಏಪ್ರಿಲ್‌ನಲ್ಲಿ, ಪ್ರಧಾನ ಮಂತ್ರಿ ಅಲೆಕ್ಸಾಂಡರ್ ಡಿ ಕ್ರೂ ವಿಲ್ಮ್ಸ್ ಅವರ ವಿದೇಶಾಂಗ ವ್ಯವಹಾರಗಳ ಕರ್ತವ್ಯಗಳನ್ನು ತಾತ್ಕಾಲಿಕವಾಗಿ ವಹಿಸಿಕೊಂಡರು.

ಇದನ್ನೂ ಓದಿ: ತಿರುಮಲದ ಬೆಟ್ಟಗಳ ಮಧ್ಯೆ ಕಾಣಿಸುತ್ತಿದೆ ವಿಸ್ಮಯ; ಕಣ್ತುಂಬಿಕೊಂಡವರು ನಿಜಕ್ಕೂ ಧನ್ಯ

ಸೋಫಿ ವಿಲ್ಮೆಸ್ 15 ಜನವರಿ 1975ರಲ್ಲಿ ಜನಿಸಿದರು. ಅವರು ಒಬ್ಬ ಬೆಲ್ಜಿಯನ್ ರಾಜಕಾರಣಿ. ಅವರು 2020 ರಿಂದ ವಿದೇಶಾಂಗ ವ್ಯವಹಾರಗಳ ಸಚಿವರಾಗಿದ್ದರು. ಈ ಹಿಂದೆ 2019 ರಿಂದ 2020 ರವರೆಗೆ ಬೆಲ್ಜಿಯಂನ ಪ್ರಧಾನ ಮಂತ್ರಿಯಾಗಿದ್ದರು. ಸುಧಾರಣಾವಾದಿ ಚಳವಳಿಯ ಸದಸ್ಯೆಯಾದ ಅವರು ಎರಡೂ ಪ್ರಮುಖ ಸ್ಥಾನಗಳನ್ನು ಹೊಂದಿರುವ ಮೊದಲ ಮಹಿಳೆಯಾಗಿದ್ದಾರೆ.

ಬಜೆಟ್ ಸಚಿವೆಯಾಗಿದ್ದ ವಿಲ್ಮ್ಸ್

ವಿಲ್ಮೆಸ್ 2014 ರಲ್ಲಿ ಚೇಂಬರ್ ಆಫ್ ರೆಪ್ರೆಸೆಂಟೇಟಿವ್ಸ್‌ಗೆ ಚುನಾಯಿತರಾದರು. 2015 ರಿಂದ 2019 ರವರೆಗೆ ಚಾರ್ಲ್ಸ್ ಮೈಕೆಲ್ ಅವರ ಮೊದಲ ಮತ್ತು ಎರಡನೆಯ ಸರ್ಕಾರಗಳಲ್ಲಿ ಬಜೆಟ್ ಮಂತ್ರಿಯಾಗಿ ಸೇವೆ ಸಲ್ಲಿಸಿದರು. 2019 ರ ಬೆಲ್ಜಿಯನ್ ಫೆಡರಲ್ ಚುನಾವಣೆಯ ನಂತರ, ಬೆಲ್ಜಿಯಂನ ಫಿಲಿಪ್ ವಿಲ್ಮ್ಸ್ ಅವರನ್ನು ನೇಮಿಸಿದರು. COVID-19 ಸಾಂಕ್ರಾಮಿಕದ ಸಮಯದಲ್ಲಿ ಕೊರೋನಾ ನಿಭಾಯಿಸುವ ಮೂಲಕ ಎಲ್ಲೆಡೆ ಖ್ಯಾತಿ ಗಳಿಸಿದರು.

ಇದನ್ನೂ ಓದಿ: National Emblem: ಪ್ರಕಾಶ್ ರೈ vs ಅನುಪಮ್ ಖೇರ್; ಭಾರೀ ಜಿದ್ದಾಜಿದ್ದಿಗೆ ಕಾರಣವಾದ ರಾಷ್ಟ್ರೀಯ ಲಾಂಛನ

ಅಕ್ಟೋಬರ್ 2020 ರಲ್ಲಿ, ಅವರು ಪ್ರಧಾನ ಮಂತ್ರಿ ಅಲೆಕ್ಸಾಂಡರ್ ಡಿ ಕ್ರೂ ಅವರ ಸರ್ಕಾರದಲ್ಲಿ ವಿದೇಶಾಂಗ ಸಚಿವೆಯಾಗಿ ಮತ್ತು ಉಪ ಪ್ರಧಾನ ಮಂತ್ರಿಯಾಗಿ ಸೇರಿದರು. ಇದೀಗ ಆ ಹುದ್ದೆಗೆ ರಾಜೀನಾಮೆ ಕೊಟ್ಟಿದ್ದಾರೆ.

2002 ರಲ್ಲಿ, ವಿಲ್ಮೆಸ್ ಆಸ್ಟ್ರೇಲಿಯಾದ ಉದ್ಯಮಿ ಮತ್ತು ಮಾಜಿ ಫುಟ್ಬಾಲ್ ಆಟಗಾರ ಕ್ರಿಸ್ ಸ್ಟೋನ್ ಅವರನ್ನು ವಿವಾಹವಾದರು. ಅವರಿಗೆ ಮೂವರು ಪುತ್ರಿಯರಿದ್ದಾರೆ. ವಿಕ್ಟೋರಿಯಾ, ಷಾರ್ಲೆಟ್ ಮತ್ತು ಎಲಿಜಬೆತ್. ಹಿಂದಿನ ಸಂಬಂಧದಿಂದ ಸ್ಟೋನ್‌ಗೆ ಜೊನಾಥನ್ ಎಂಬ ಮಗನಿದ್ದಾನೆ.

17 ಅಕ್ಟೋಬರ್ 2020 ರಂದು ಪ್ರಧಾನಿಯಾಗಿ ಅವರ ಅವಧಿ ಮುಗಿದ ಸ್ವಲ್ಪ ಸಮಯದ ನಂತರ, ಅವರಿಗೆ COVID-19-ಪಾಸಿಟಿವ್ ಎಂದು ಟ್ವೀಟ್ ಮಾಡಿದ್ದರು. ಅಕ್ಟೋಬರ್ 22 ರಂದು, ಅವರು ತೀವ್ರ ನಿಗಾದಲ್ಲಿ ದಾಖಲಾಗಿದ್ದರು. ಅಕ್ಟೋಬರ್ 30 ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಯಿತು.
Published by:Divya D
First published: