BEL Recruitment 2020: ಬಿಇಎಲ್​ನಲ್ಲಿ ಖಾಲಿ ಇರುವ 145 ಹುದ್ದೆಗಳಿಗೆ ಅರ್ಜಿ ಆಹ್ವಾನ

ಅರ್ಹ ಆಭ್ಯರ್ಥಿಗಳು ಸೆಪ್ಟೆಂಬರ್​​ 27ರ ಒಳಗೆ ಅಧಿಕೃತ ವೆಬ್​ಸೈಟ್​​​​ bel-india.in ತೆರಳಿ ಅಧಿಸೂಚನೆಯನ್ನು ಓದಿ ನಂತರ ಹುದ್ದೆಗಳಿಗೆ ಅರ್ಜಿಸಲ್ಲಿಸಬಹುದಾಗಿದೆ

JOB

JOB

  • Share this:
    Bharat Electronics Limited Recruitment 2020: ಭಾರತ್​​​ ಎಲೆಕ್ಟ್ರಾನಿಕ್ಸ್​​ ಲಿಮಿಟೆಡ್​​ (ಬಿಇಎಲ್​) ಖಾಲಿ ಇರುವ  ಪಾಜೆಕ್ಟ್​ ಇಂಜಿನಿಯರ್​ ಮತ್ತು ತರಬೇತಿ ಇಂಜಿನಿಯರ್​ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 145 ಹುದ್ದೆಗಳು ಖಾಲಿ ಇದ್ದು, ಆಸಕ್ತ ಆಭ್ಯರ್ಥಿಗಳು ಅಧಿಕೃತ ವೆಬ್​ಸೈಟ್​​​ಗೆ ತೆರಳಿ ಅರ್ಜಿ ಸಲ್ಲಿಸಲು ತಿಳಿಸಿದೆ.  ಸೆಪ್ಟೆಂಬರ್​​ 27 ರ ಒಳಗೆ ಅರ್ಜಿ ಸಲ್ಲಿಬೇಕಾಗಿದೆ.

    ಖಾಲಿ ಇರುವ ಹುದ್ದೆಗಳು:

    ಟ್ರೈನಿ ಇಂಜಿನಿಯರ್​  - 54 ಹುದ್ದೆ  (ಬೆಂಗಳೂರು)

    ಪ್ರಾಜೆಕ್ಟ್​ ಇಂಜಿನಿಯರ್​ - 33 ಹುದ್ದೆ (ಬೆಂಗಳೂರು / ಹೈದರಾಬಾದ್​​)

    ಪ್ರಾಜೆಕ್ಟ್ ಇಂಜಿನಿಯರ್​ - 22 ಹುದ್ದೆ (ಬೆಂಗಳೂರು/ಚಂಡೀಪುರ್​, ಒಡಿಸ್ಸಾ)

    ಪ್ರಾಜೆಕ್ಟ್ ಇಂಜಿನಿಯರ್​-I - 37 ಹುದ್ದೆ (ಗಾಂಧಿನಗರ, ಗುಜರಾತ್​, ಮುಂಬೈ-ಮಹರಾಷ್ಟ್ರ, ಮಂಗಳೂರು- ಕರ್ನಾಟಕ, ಕೊಚ್ಚಿ, ಅಝಿಕೋಡ್​ - ಕೇರಳ, ಚೆನ್ನೈ, ಪುದುಚೇರಿ– ತಮಿಳುನಾಡು, ವಿಶಾಖ್​, ಮಚಲಿಪಟ್ಟಣ – ಆಂಧ್ರ ಪ್ರದೇಶ, ಹರಿಕುದ್​​– ಒಡಿಸ್ಸಾ, ಕೊಲ್ಕತ್ತಾ –ಬಂಗಾಳ , ಕವರತ್ತಿ, ಅಮಿನಿ – ಲಕ್ಷದೀಪ, ಚಾಪೆಲ್​ ಬೇ, ದಿಗಿಲ್​ಪುರ್​ – ಅಂಡಮಾಣ್​ ಮತ್ತು ನಿಕೋಬಾರ್​ ಮತ್ತು ದೆಹಲಿ )

    ವಿದ್ಯಾರ್ಹತೆ:

    -ಟ್ರೈನಿ ಇಂಜಿನಿಯರ್​ ಹುದ್ದೆಗಳಿಗೆ ಬಿ.ಇ/ ಬಿ.ಟೆಕ್​ (ಕಂಪ್ಯೂಟರ್​​ ಸೈನ್ಸ್​​)​ ವಿದ್ಯಾರ್ಹತೆ ಪಡೆದಿರಬೇಕು

    -ಪ್ರಾಜೆಕ್ಟ್​ ಇಂಜಿನಿಯರ್​ ಹುದ್ದೆಗೆ  ಬಿ.ಇ/ ಬಿಟೆಕ್​ (ಮೆಕ್ಯಾನಿಕಲ್​/ಕಂಪ್ಯೂಟರ್​ ಸೈನ್ಸ್​/ ಎಲೆಕ್ಟ್ರಾನಿಕ್ಸ್​/ ಎಲೆಕಕ್ಟ್ರಾನಿಕ್ಸ್​​  ಮತ್ತು ಟೆಲಿಕಮ್ಯುನಿಕೇಷನ್ ​)

    -ಪ್ರಾಜೆಕ್ಟ್​​​  ಇಂಜಿನಿಯರ್​ 1: ಬಿ.ಇ, ಬಿಟೆಕ್​  (ಸಿವಿಲ್​/ಮೆಕ್ಯಾನಿಕಲ್​​) ವಿದ್ಯಾರ್ಹತೆ ಹೊಂದಿದವರು ಅರ್ಜಿಸಲ್ಲಿಸಬಹುದಾಗಿದೆ. ಅದರ ಜೊತೆಗೆ ಎಸ್​ಸಿ/ಎಸ್​ಟಿ/ ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೂ ಅವಕಾಶ ನೀಡಿದೆ.

    ಸಂಬಳ:

    ಟ್ರೈನಿ ಇಂಜಿನಿಯರ್​- ಮೊದಲ ವರ್ಷ 25 ಸಾವಿರ ರೂ, 2ನೇ ವರ್ಷ 28 ಸಾವಿರ ರೂ, 3ನೇ ವರ್ಷ 31 ಸಾವಿರ ರೂ.

    ಪ್ರಾಜೆಕ್ಟ್​ ಇಂಜಿನಿಯರ್​- ಮೊದಲ ವರ್ಷ 35 ಸಾವಿರ, 2ನೇ ವರ್ಷ 40 ಸಾವಿರ, 3ನೇ ವರ್ಷ 45 ಸಾವಿರ, 4ನೇ ವರ್ಷ 50 ಸಾವಿರ

    ಆಯ್ಕೆ ಪ್ರಕಿಯೆ ಹೇಗೆ?: ಬಿ.ಇ /ಬಿಟೆಕ್​​ ವೇಳೆ ಪಡೆದ ಅಂಕದ ಆಧಾರದಲ್ಲಿ ಮತ್ತು ಕೆಲಸದ ಎಕ್ಸ್​ಪೀರಿಯನ್ಸ್​​ ಆಧಾರ ಮೇಲೆ ಮೆರಿಟ್​​ ಪಟ್ಟಿ ತಯಾರಿಸಿ ಆಯ್ಕೆ ನಡೆಸಲಾಗುತ್ತದೆ.

    ಅರ್ಜಿ ಸಲ್ಲಿಸುವುದು ಹೇಗೆ?:

    ಅರ್ಹ ಆಭ್ಯರ್ಥಿಗಳು ಸೆಪ್ಟೆಂಬರ್​​ 27ರ ಒಳಗೆ ಅಧಿಕೃತ ವೆಬ್​ಸೈಟ್​​​​ bel-india.in ತೆರಳಿ ಅಧಿಸೂಚನೆಯನ್ನು ಓದಿ ನಂತರ ಹುದ್ದೆಗಳಿಗೆ ಅರ್ಜಿಸಲ್ಲಿಸಬಹುದಾಗಿದೆ
    Published by:Harshith AS
    First published: