BEL Recruitment 2020: ಇಂಜಿನಿಯರ್​ ಮತ್ತು ಪ್ರಾಜೆಕ್ಟ್​ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ!

ಬಿ.ಇ/ಬಿ.ಟೆಕ್, ಬಿಎಸ್ಸಿ, ಎಂಬಿಎ ಮತ್ತು ಎಂಎಸ್‌ಡಬ್ಲ್ಯೂ ವಿದ್ಯಾರ್ಹತೆಯನ್ನು ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

work, Job

work, Job

 • Share this:
  ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಪ್ರಕಟನೆ ಹೊರಡಿಸಿದೆ.  ಟ್ರೈನಿ ಇಂಜಿನಿಯರ್, ಟ್ರೈನಿ ಅಧಿಕಾರಿ, ಪ್ರಾಜೆಕ್ಟ್ ಇಂಜಿನಿಯರ್ ಮತ್ತು ಪ್ರಾಜೆಕ್ಟ್ ಅಧಿಕಾರಿ ಹುದ್ದೆಗಳಿಗೆ ಖಾಲಿ ಇದ್ದು, ಆಸಕ್ತರು ಅಕ್ಟೋಬರ್ 21,2020ರೊಳಗೆ ಅರ್ಜಿ ಸಲ್ಲಿಸಬಹುದಾಗಿ ತಿಳಿಸಿದೆ.  

  ಹುದ್ದೆಗಳ ವಿವರ:
  ಟ್ರೈನಿ ಇಂಜಿನಿಯರ್ - 19 ಹುದ್ದೆಗಳು
  ಪ್ರಾಜೆಕ್ಟ್ ಇಂಜಿನಿಯರ್ - 11 ಹುದ್ದೆಗಳು
  ಟ್ರೈನಿ ಅಧಿಕಾರಿ - 2 ಹುದ್ದೆಗಳು
  ಪ್ರಾಜೆಕ್ಟ್ ಅಧಿಕಾರಿ - 1 ಹುದ್ದೆ
  ಒಟ್ಟು 33 ಹುದ್ದೆಗಳು

  ವಿದ್ಯಾರ್ಹತೆ:

  ಬಿ.ಇ/ಬಿ.ಟೆಕ್, ಬಿಎಸ್ಸಿ, ಎಂಬಿಎ ಮತ್ತು ಎಂಎಸ್‌ಡಬ್ಲ್ಯೂ ವಿದ್ಯಾರ್ಹತೆಯನ್ನು ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

  ವಯೋಮಿತಿ:

  ಗರಿಷ್ಟ 25 ಮತ್ತು 28 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಪ.ಜಾ/ಪ.ಪಂಗಡ ಅಭ್ಯರ್ಥಿಗಳಿಗೆ 5 ವರ್ಷ, ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

  ವೇತನ:

  ಪ್ರಾಜೆಕ್ಟ್ ಇಂಜಿನಿಯರ್ ಮತ್ತು ಪ್ರಾಜೆಕ್ಟ್ ಅಧಿಕಾರಿ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 35,000/- ರಿಂದ 50,000/-ರೂ ವೇತನವನ್ನು ನೀಡಲಾಗುವುದು. ಟ್ರೈನಿ ಇಂಜಿನಿಯರ್ ಮತ್ತು ಟ್ರೈನಿ ಅಧಿಕಾರಿ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 25,000/- ರಿಂದ 31,000/-ರೂ ವೇತನ ಸಿಗಲಿದೆ.  ಅರ್ಜಿ ಶುಲ್ಕ:

  ಟ್ರೈನಿ ಇಂಜಿನಿಯರ್ ಅಥವಾ ಟ್ರೈನಿ ಅಧಿಕಾರಿ ಹುದ್ದೆಗಳಿಗೆ 200/-ರೂ ಅರ್ಜಿ ಶುಲ್ಕ ಪಾವತಿಸಬೇಕು. ಪ್ರಾಜೆಕ್ಟ್ ಇಂಜಿನಿಯರ್ ಅಥವಾ ಪ್ರಾಜೆಕ್ಟ್ ಅಧಿಕಾರಿ ಹುದ್ದೆಗಳಿಗೆ 500/-ರೂ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕಿರುತ್ತದೆ. ಪ.ಜಾ/ಪ.ಪಂಗಡ/ಅಂಗವಿಕಲ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.

  ಅರ್ಜಿ ಸಲ್ಲಿಸುವುದು ಹೇಗೆ?:

  ಆಸಕ್ತ ಅಭ್ಯರ್ಥಿಗಳು ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ ನ ಅಧಿಕೃತ ವೆಬ್‌ಸೈಟ್ https://bel-india.in/ ಗೆ ಭೇಟಿ ನೀಡಿ. ಅಲ್ಲಿ ನೀಡಲಾಗಿರುವ ಮಾಹಿತಿಯನ್ನು ಓದಿ ನಂತರ ಭರ್ತಿ ಮಾಡುವ ಮೂಲಕ ಅರ್ಜಿ ಸಲ್ಲಿಬೇಕಾಗಿದೆ. ಅಕ್ಟೋಬರ್ 21,2020ರೊಳಗೆ ಅರ್ಜಿ ಸಲ್ಲಿಸಲು ಕಕೊನೆಯ ದಿನಾಂಕವಾಗಿದೆ.
  Published by:Harshith AS
  First published: