BEL Recruitment 2020: ಭಾರತ್​​​ ಎಲೆಕ್ಟ್ರಾನಿಕ್ಸ್​​ ಲಿಮಿಟೆಡ್​ನಲ್ಲಿದೆ ಉದ್ಯೋಗಾವಕಾಶ

ಪ್ರಾಜೆಕ್ಟ್‌ ಇಂಜಿನಿಯರ್ ಹುದ್ದೆಗಳಿಗೆ ಗರಿಷ್ಠ 28 ವರ್ಷ,  ಟ್ರೈನಿ ಇಂಜಿನಿಯರ್ ಹುದ್ದೆಗಳಿಗೆ ಗರಿಷ್ಠ 25 ವರ್ಷ ಮೀರಿರಬಾರದು. ಹಾಗೆಯೇ ಮೀಸಲಾತಿ ವಿಭಾಗಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.

Jobs

Jobs

  • Share this:
    ಭಾರತ್ ಇಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ (BEL)ನಲ್ಲಿ ಖಾಲಿ ಇರುವ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಇಲ್ಲಿ ಪ್ರಾಜೆಕ್ಟ್‌ ಇಂಜಿನಿಯರ್ ಮತ್ತು ಟ್ರೇನಿ ಇಂಜಿನಿಯರ್‌ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳ ಕುರಿತಾದ ಮತ್ತಷ್ಟು ಮಾಹಿತಿಗಳು ಈ ಕೆಳಗಿನಂತಿವೆ.

    ಹುದ್ದೆಗಳ ಹೆಸರು ಮತ್ತು ಸಂಖ್ಯೆ:

    ಪ್ರಾಜೆಕ್ಟ್‌ ಇಂಜಿನಿಯರ್-I- 37 ಹುದ್ದೆಗಳು

    ಟ್ರೇನಿ ಇಂಜಿನಿಯರ್- 54 ಹುದ್ದೆಗಳು

    ಪ್ರಾಜೆಕ್ಟ್‌ ಇಂಜಿನಿಯರ್- 55 ಹುದ್ದೆಗಳು

    ವಿದ್ಯಾರ್ಹತೆ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಇ / ಬಿ.ಟೆಕ್, ಸಿವಿಲ್‌, ಇಲೆಕ್ಟ್ರಿಕಲ್, ಮೆಕ್ಯಾನಿಕಲ್, ಕಂಪ್ಯೂಟರ್‌ ಸೈನ್ಸ್‌, ಇಲೆಕ್ಟ್ರಾನಿಕ್ಸ್‌ ಕಂಮ್ಯೂನಿಕೇಷನ್‌ , ಇಲೆಕ್ಟ್ರಾನಿಕ್ಸ್‌ ಅಂಡ್‌ ಟೆಲಿಕಂಮ್ಯೂನಿಕೇಷನ್‌ ವಿಭಾಗಗಳಲ್ಲಿ ಉತ್ತೀರ್ಣರಾಗಿರಬೇಕು.

    ವಯೋಮಿತಿ:  ಪ್ರಾಜೆಕ್ಟ್‌ ಇಂಜಿನಿಯರ್ ಹುದ್ದೆಗಳಿಗೆ ಗರಿಷ್ಠ 28 ವರ್ಷ,  ಟ್ರೈನಿ ಇಂಜಿನಿಯರ್ ಹುದ್ದೆಗಳಿಗೆ ಗರಿಷ್ಠ 25 ವರ್ಷ ಮೀರಿರಬಾರದು. ಹಾಗೆಯೇ ಮೀಸಲಾತಿ ವಿಭಾಗಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.

    ವೇತನ: ಟ್ರೈನಿ ಇಂಜಿಯರ್​ಗಳಿಗೆ 25,000 ದಿಂದ 31,000 ರವರೆಗೆ ವೇತನ ನೀಡಲಾಗುತ್ತದೆ. ಪ್ರಾಜೆಕ್ಟ್​ ಇಂಜಿಯರ್​ಗಳಿಗೆ 35 ಸಾವಿರದಿಂದ 50 ಸಾವಿರದವರೆಗೆ ವೇತನ ನಿಗದಿಪಡಿಸಲಾಗಿದೆ.

    ಅರ್ಜಿ ಶುಲ್ಕ: ಪ್ರಾಜೆಕ್ಟ್‌ ಇಂಜಿನಿಯರ್ ಹುದ್ದೆಗಳ ಅಪ್ಲಿಕೇಶನ್​ಗೆ - 500 ರೂ.  ಹಾಗೂ ಟ್ರೈನಿ ಇಂಜಿನಿಯರ್ ಹುದ್ದೆಗಳಿಗೆ -  200 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.

    ಪ್ರಮುಖ ದಿನಾಂಕ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- 27-09-2020

    ಈ ಹುದ್ದೆಗಳ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಈ ಲಿಂಕ್​ನ್ನು ಕ್ಲಿಕ್ ಮಾಡಿ.
    Published by:zahir
    First published: