BEL Recruitment 2019: ಭಾರತ್ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ನಲ್ಲಿ ಉದ್ಯೋಗಾವಕಾಶ

BEL Recruitment 2019: ಅರ್ಹ ಅಭ್ಯರ್ಥಿಗಳಿಗೆ ಮೊದಲು ನೇರ ಸಂದರ್ಶನ ಮಾಡಲಾಗುತ್ತದೆ. ನಂತರ ಲಿಖಿತ ಪರೀಕ್ಷೆ ನೀಡುವುದರ ಮೂಲಕ ಆಯ್ಕೆ ಮಾಡಲಾಗುತ್ತದೆ.

news18
Updated:November 9, 2019, 3:21 PM IST
BEL Recruitment 2019: ಭಾರತ್ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ನಲ್ಲಿ ಉದ್ಯೋಗಾವಕಾಶ
ಭಾರತ್ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌
news18
Updated: November 9, 2019, 3:21 PM IST
ಕೇಂದ್ರ ರಕ್ಷಣಾ ಸಚಿವಾಲಯ ಅಧೀನದ ಭಾರತ್​ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್​ನಲ್ಲಿ ಅಪ್ರೆಂಟಿಸ್​ ಹುದ್ದೆಗಳಿಗೆ ನೇಮಕ ಮಾಡಲು ಅರ್ಹ ಅಭ್ಯರ್ಥಿಗಳಿಗೆ ಅರ್ಜಿ ಅಹ್ವಾನಿಸಲಾಗಿದೆ.

ಬಿಇಎಲ್​ ಅಪ್ರೆಂಟಿಸ್​ ಹುದ್ದೆಗಳಿಗೆ ಗ್ರಾಜುಯೇಟ್​ ಮತ್ತು ಡಿಪ್ಲೋಮ ಟೆಕ್ನಿಷಿಯನ್​ ವಿಭಾಗದಲ್ಲಿ ವಿದ್ಯಾರ್ಹತೆ ಪಡೆದವರು ನೇರ ಸಂದಶಕ್ಕೆ ಹಾಜರಾಗಬಹುದಾಗಿದೆ. ಅರ್ಹ ಅಭ್ಯರ್ಥಿಗಳಿಗೆ ಮಚಲಿಪಟ್ಟಣಂ ವಿಭಾಗದಲ್ಲಿ ನೇಮಕ ಮಾಡಲಾಗುತ್ತದೆ.

ನೇಮಕಾತಿ ವಿಭಾಗ:

ಗ್ರಾಜುಯೇಟ್​ ಅಪ್ರೆಂಟಿಸ್​​ ಹುದ್ದೆಗಳು: ಎಲೆಕ್ಟ್ರಾನಿಕ್ಸ್​, ಮೆಕ್ಯಾನಿಕಲ್​, ಕಂಪ್ಯೂಟರ್​ ಸೈನ್ಸ್​, ಸಿವಿಲ್​ ಕೋರ್ಸಿನಲ್ಲಿ ವಿದ್ಯಾರ್ಹತೆ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಟೆಕ್ನಿಷಿಯನ್​ ಅಪ್ರೆಂಟಿಸ್ (ಡಿಪ್ಲೊಮ)​​ ಹುದ್ದೆಗಳು: ಎಲೆಕ್ಟ್ರಾನಿಕ್ಸ್​, ಮೆಕ್ಯಾನಿಕಲ್​, ಕಂಪ್ಯೂಟರ್​ ಸೈನ್ಸ್​, ಸಿವಿಲ್​, ಇಲೆಕ್ಟ್ರಿಕಲ್​ ಕೋರ್ಸಿನಲ್ಲಿ ವಿದ್ಯಾರ್ಹತೆ ಪದೆದವರು ಅರ್ಜಿ ಸಲ್ಲಿಸಬಹುದಾಗಿದೆ.

ಆಯ್ಕೆ ಪ್ರಕ್ರಿಯೆ:

ಅರ್ಹ ಅಭ್ಯರ್ಥಿಗಳಿಗೆ ಮೊದಲು ನೇರ ಸಂದರ್ಶನ ಮಾಡಲಾಗುತ್ತದೆ. ನಂತರ ಲಿಖಿತ ಪರೀಕ್ಷೆ ನೀಡುವುದರ ಮೂಲಕ ಆಯ್ಕೆ ಮಾಡಲಾಗುತ್ತದೆ. ಈ ಹುದ್ದೆಗಳಿಗಾಗಿ www.mhrdnats.gov.in  ಗೆ ಭೇಟಿ ನೀಡಿ ಆನ್​ಲೈನ್​ ರಿಜಿಸ್ಟ್ರೇಷನ್​ ಮಾಡಿಕೊಳ್ಳಬೇಕು.
Loading...

ಆನ್​ಲೈನ್​ ರಿಜಿಸ್ಟ್ರೇಷನ್​ ಮಾಡಿಸಿಕೊಳ್ಳುವಾಗ ಅರ್ಹತೆ, ಪ್ರಾಥಮಿಕ ಮಾಹಿತಿಗಳನ್ನು ನಮೂದಿಸಬೇಕು. ನಂತರ ರಿಜಿಸ್ಟರ್​ ನಂಬರ್​ ಜನರೇಟ್​ ಆಗುತ್ತದೆ. ಅಪ್ಲಿಕೇಶನ್​ ಅನ್ನು ಡೌನ್​ಲೋಡ್​ ಮಾಡಿಕೊಂಡು ನೇರ ಸಂದರ್ಶನಕ್ಕೆ ಹೋಗಬಹುದು.

ಸಂದರ್ಶನ: ನವೆಂಬರ್​ 10 ರಂದು ಭಾರತ್​ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್​, ರವೀಂದ್ರನಾಥ್​ ಟ್ಯಾಗೋರ್​ ರೋಡ್​ ಮಚಲಿಪಟ್ಟಣಂನಲ್ಲಿ ಸಂದರ್ಶನ ನಡೆಯಲಿದೆ.

ಇದನ್ನೂ ಓದಿ:Bigg Boss Kannada 7 elimination: ಬಿಗ್ ಬಾಸ್ ಮನೆಯಿಂದ ಹೊರಬಿದ್ದ 4ನೇ ಸ್ಪರ್ಧಿ ಇವರೇ..!

ಇದನ್ನೂ ಓದಿ: Happy Birthday Shankar Nag: ಆಟೋರಾಜ ಶಂಕ್ರಣ್ಣನಿಗೆ 65ನೇ ಹುಟ್ಟುಹಬ್ಬ

ಇದನ್ನೂ ಓದಿ: UPSC 2019: ಐಎಫ್​ಎಸ್​ ಮುಖ್ಯ ಪರೀಕ್ಷೆ ಬಗ್ಗೆ ಇಲ್ಲಿದೆ ಹೊಸ ಅಪ್ಡೇಟ್​​

First published:November 9, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...