ಭಿಕ್ಷುಕಿಯ ಚೆಕ್ ನೋಡಿದ ಬ್ಯಾಂಕ್​ ಅಧಿಕಾರಿಗಳು ಶಾಕ್; ಭಿಕ್ಷೆ ಬೇಡಿ ಆಕೆ ಸಂಪಾದಿಸಿದ್ದು 5.62 ಕೋಟಿ ರೂ!

ಲೆಬನನ್​ ದೇಶದ ವಾಫಾ ಮಹಮದ್ ಅವಾದ್​ ಎಂಬ ಮಹಿಳೆಯ ಹೆಸರಿನಲ್ಲಿ ಬ್ಯಾಂಕ್​ಗೆ ಚೆಕ್​ ಬಂದಾಗ ಪರಿಶೀಲಿಸಿದ ಸಿಬ್ಬಂದಿಗೆ ಆಕೆಯ ಖಾತೆಯಲ್ಲಿ ಸುಮಾರು 6 ಕೋಟಿ ರೂ. ಇರುವ ವಿಷಯ ತಿಳಿದು ಶಾಕ್ ಆಗಿದ್ದಾರೆ.

Sushma Chakre | news18-kannada
Updated:October 8, 2019, 1:35 PM IST
ಭಿಕ್ಷುಕಿಯ ಚೆಕ್ ನೋಡಿದ ಬ್ಯಾಂಕ್​ ಅಧಿಕಾರಿಗಳು ಶಾಕ್; ಭಿಕ್ಷೆ ಬೇಡಿ ಆಕೆ ಸಂಪಾದಿಸಿದ್ದು 5.62 ಕೋಟಿ ರೂ!
ಕೋಟ್ಯಧಿಪತಿ ಭಿಕ್ಷುಕಿ ವಾಫಾ ಮಹಮದ್
  • Share this:
ಮುಂಬೈನಲ್ಲಿ ರೈಲ್ವೆ ಹಳಿ ದಾಟುವಾಗ ಸಾವನ್ನಪ್ಪಿದ ಭಿಕ್ಷುಕನ ಮನೆಯಲ್ಲಿ ಒಟ್ಟು 10 ಲಕ್ಷಕ್ಕೂ ಅಧಿಕ ಹಣ ಪತ್ತೆಯಾದ ಬೆನ್ನಲ್ಲೇ ಅದೇ ರೀತಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಅರಬ್ ದೇಶವಾದ ಲೆಬನನ್​ನಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ಭಿಕ್ಷುಕಿಯೊಬ್ಬಳ ಖಾತೆಯಲ್ಲಿ ಬರೋಬ್ಬರಿ 5.62 ಕೋಟಿ ರೂ. ಪತ್ತೆಯಾಗಿದೆ.

ಲೆಬನನ್​ನ ಜಮ್ಮಲ್ ಟ್ರಸ್ಟ್​ ಬ್ಯಾಂಕ್​ (ಜೆಟಿಬಿ)ನಲ್ಲಿ ಹಣವಿಟ್ಟಿದ್ದ ವಾಫಾ ಮಹಮ್ಮದ್ ಎಂಬ ಭಿಕ್ಷುಕಿ ಈಗ ಕೋಟ್ಯಧಿಪತಿ. ತನ್ನ ಖಾತೆಯಲ್ಲಿ ಎಷ್ಟು ಹಣವಿದೆ ಎಂಬ ವಿಷಯ ಆ ಭಿಕ್ಷುಕಿಗೇ ಗೊತ್ತಿರಲಿಲ್ಲ ಎಂಬುದು ಇನ್ನೊಂದು ವಿಶೇಷ. ಈ ಹಿನ್ನೆಲೆಯಲ್ಲಿ ಜೆಟಿಬಿ ಬ್ಯಾಂಕ್​ನ ಅಧಿಕಾರಿಗಳು ತಮ್ಮ ಬ್ಯಾಂಕ್​ನ ಗ್ರಾಹಕರ ಹಣ ಸುರಕ್ಷಿತವಾಗಿದೆಯೇ ಎಂಬುದನ್ನು ಖಾತರಿಪಡಿಸಿಕೊಂಡಿದ್ದಾರೆ.

ವಾಫಾ ಮಹಮದ್ ಅವಾದ್​ ಎಂಬ ಮಹಿಳೆಯ ಹೆಸರಿನಲ್ಲಿ ಬ್ಯಾಂಕ್​ಗೆ ಚೆಕ್​ ಬಂದಾಗ ಪರಿಶೀಲಿಸಿದ ಸಿಬ್ಬಂದಿಗೆ ಆಕೆಯ ಖಾತೆಯಲ್ಲಿ ಸುಮಾರು 6 ಕೋಟಿ ರೂ. ಇರುವ ವಿಷಯ ತಿಳಿದು ಶಾಕ್ ಆಗಿದ್ದಾರೆ. ಆಸ್ಪತ್ರೆಯ ಮುಂದೆ ದಿನವಿಡೀ ಭಿಕ್ಷೆ ಬೇಡುತ್ತಿರುವ ವಾಫಾ ಅಲ್ಲಿನ ಸಿಬ್ಬಂದಿಗೆಲ್ಲ ಬಹಳ ಪರಿಚಿತಳು. ಸುಮಾರು 10 ವರ್ಷಗಳಿಂದ ಆಕೆ ಅಲ್ಲೇ ಭಿಕ್ಷೆ ಬೇಡುತ್ತಿರುವುದು ವಿಶೇಷ.


ತನ್ನ ಹೆಸರಿನಲ್ಲಿದ್ದ ಹಣವನ್ನು ಬೇರೆ ಖಾತೆಗೆ ಡ್ರಾನ್ಸ್​ಫರ್ ಮಾಡಲು ವಾಫಾ ಚೆಕ್ ನೀಡಿದ್ದಳು. ಆಗ ಬ್ಯಾಂಕ್​ ಸಿಬ್ಬಂದಿಗೆ ಆಕೆ ಕೋಟ್ಯಧಿಪತಿ ಎಂಬ ವಿಷಯ ಗೊತ್ತಾಗಿದೆ. ಸೆಪ್ಟೆಂಬರ್ 30 ದಿನದಂದು ಆಕೆ ಬ್ಯಾಂಕ್​ಗೆ ನೀಡಿರುವ ಚೆಕ್​ನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

First published: October 8, 2019, 1:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading