• Home
  • »
  • News
  • »
  • national-international
  • »
  • ಸರ್ಕಾರಿ ಬಂಗಲೆ ಖಾಲಿ ಮಾಡುವ ಮುನ್ನ ಬಿಜೆಪಿ ನಾಯಕನನ್ನು ಚಹಾ ಕೂಟಕ್ಕೆ ಆಹ್ವಾನಿಸಿದ ಪ್ರಿಯಾಂಕಾ ಗಾಂಧಿ

ಸರ್ಕಾರಿ ಬಂಗಲೆ ಖಾಲಿ ಮಾಡುವ ಮುನ್ನ ಬಿಜೆಪಿ ನಾಯಕನನ್ನು ಚಹಾ ಕೂಟಕ್ಕೆ ಆಹ್ವಾನಿಸಿದ ಪ್ರಿಯಾಂಕಾ ಗಾಂಧಿ

ಪ್ರಿಯಾಂಕಾ ಗಾಂಧಿ

ಪ್ರಿಯಾಂಕಾ ಗಾಂಧಿ

ಸರ್ಕಾರದ ಆದೇಶಕ್ಕೆ ಕಾಂಗ್ರೆಸ್ ನಾಯಕರು ಸಕಾರಾತ್ಮಕವಾಗಿಯೇ ಸ್ಪಂದಿಸಿದ್ದೇವೆ. ಅಲ್ಲದೆ, ನಿಗದಿತ ಸಮಯದ ಒಳಗಾಗಿ ಸರ್ಕಾರಿ ವಸತಿಯನ್ನು ಖಾಲಿ ಮಾಡಲು ನಾವು ಸಿದ್ದರಿದ್ದೇವೆ ಎಂದು ಪ್ರಿಯಾಂಕಾ ಗಾಂಧಿ ತಿಳಿಸಿದ್ಧಾರೆ.

  • Share this:

ನವ ದೆಹಲಿ (ಜುಲೈ 27); ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ದೆಹಲಿಯಲ್ಲಿ ತನಗೆ ನೀಡಿರುವ ಸರ್ಕಾರಿ ಬಂಗಲೆಯನ್ನು ತೆರವುಗೊಳಿಸುವ ಮುನ್ನ, ಆ ಬಂಗೆಲೆಯಲ್ಲೇ ವಾಸ್ಥವ್ಯ ಹೂಡಲಿರುವ ಬಿಜೆಪಿ ನಾಯಕ ಅನಿಲ್ ಬಲೂನಿ ಮತ್ತು ಅವರ ಕುಟುಂಬವನ್ನು ಚಹಾ ಕೂಟಕ್ಕೆ ಆಹ್ವಾನಿಸಿದ್ದಾರೆ ಎಂದು ತಿಳಿದುಬಂದಿದೆ.


ಪ್ರಿಯಾಂಕಾ ಗಾಂಧಿ ಮತ್ತು ಕುಟುಂಬ 1997 ರಿಂದ 35 ಲೋಧಿ ರಾಜ್ಯ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ. ಆದರೆ, ಇತ್ತೀಚೆಗೆ ಗೃಹ ವ್ಯವಹಾರ ಸಚಿವಾಲಯವು ಪ್ರಿಯಾಂಕಾ ಗಾಂಧಿಗೆ ನೀಡುತ್ತಿದ್ದ ವಿಶೇಷ ರಕ್ಷಣಾ ಪಡೆಯನ್ನು (ಎಸ್‌ಪಿಜಿ) ಹಿಂಪಡೆದಿತ್ತು. ಗೃಹ ಸಚಿವಾಲಯ ಇಂತಹದ್ದೊಂದು ನಿರ್ಧಾರಕ್ಕೆ ಮುಂದಾಗುತ್ತಿದ್ದಂತೆ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಪ್ರಿಯಾಂಕಾ ಗಾಂಧಿ ಕೂಡಲೇ ಸರ್ಕಾರಿ ವಸತಿ ಸೌಕರ್ಯವನ್ನು ಖಾಲಿ ಮಾಡುವಂತೆ ನೊಟೀಸ್ ಜಾರಿ ಮಾಡಿತ್ತು.


ಜುಲೈ 01ಕ್ಕೆ ನೊಟೀಸ್ ಜಾರಿ ಮಾಡಿರುವ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಆಗಸ್ಟ್ 01ರ ಒಳಗಾಗಿ ಮನೆಯನ್ನು ಖಾಲಿ ಮಾಡುವಂತೆ ಸೂಚಿಸಿದೆ. ಹೀಗಾಗಿ ಭವಿಷ್ಯದಲ್ಲಿ ಆ ಮನೆಯಲ್ಲಿ ವಾಸ್ತವ್ಯ ಹೂಡಲಿರುವ ಅನಿಲ್ ಬಲೂನಿ ಅವರ ಜೊತೆ ಒಂದು ಚಹಾ ಕೂಟ ಏರ್ಪಡಿಸಲು ಪ್ರಿಯಾಂಕ ಮುಂದಾಗಿದ್ದಾರೆ. ಈ ಸಂಬಂಧ ಬಿಜೆಪಿ ನಾಯಕ ಅನಿಲ್ ಬಲೂನಿ ಅವರ ಕಚೇರಿಗೆ ಪತ್ರ ಬರೆದು ಫೋನ್ ಮೂಲಕ ಆಹ್ವಾನ ನೀಡಿದ್ದಾರೆ. ಆದರೆ, ಈ ಕರೆಗೆ ಅನಿಲ್ ಬಲೂನಿ ಈವರೆಗೆ ಸ್ಪಂದಿಸಿಲ್ಲ ಎಂದು ತಿಳಿದುಬಂದಿದೆ.


ಈ ನಡುವೆ ಎಎನ್ಐ ಸುದ್ದಿ ಸಂಸ್ಥೆಗೆ ಈ ಕುರಿತು ಮಾಹಿತಿ ನೀಡಿರುವ ಪ್ರಿಯಾಂಕಾ ಗಾಂಧಿ, “ಸರ್ಕಾರದ ಆದೇಶಕ್ಕೆ ಕಾಂಗ್ರೆಸ್ ನಾಯಕರು ಸಕಾರಾತ್ಮಕವಾಗಿಯೇ ಸ್ಪಂದಿಸಿದ್ದೇವೆ. ಅಲ್ಲದೆ, ನಿಗದಿತ ಸಮಯದ ಒಳಗಾಗಿ ಸರ್ಕಾರಿ ವಸತಿಯನ್ನು ಖಾಲಿ ಮಾಡಲು ನಾವು ಸಿದ್ದರಿದ್ದೇವೆ” ಎಂದು ತಿಳಿಸಿದ್ಧಾರೆ.


ಪ್ರಿಯಾಂಕಾ ಗಾಂಧಿ ತಮಗೆ ನೀಡಿರುವ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಬೇಕು ಎಂದು ಕೇಂದ್ರ ಸರ್ಕಾರ ಅವರಿಗೆ ನೊಟೀಸ್ ನೀಡುತ್ತಿದ್ದಂತೆ ಕಾಂಗ್ರೆಸ್ ನಾಯಕರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು. ಆದರೆ, ಕೇಂದ್ರ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿದಿರಲಿಲ್ಲ.


ಇದನ್ನೂ ಓದಿ : ರಾಜಸ್ಥಾನದಲ್ಲಿ ಕಾಂಗ್ರೆಸ್‌ ವಿರುದ್ಧ ಮತ ಚಲಾಯಿಸಿ; ಬಿಎಸ್‌ಪಿ ಪಕ್ಷದ 6 ಜನ ಶಾಸಕರಿಗೆ ಮಾಯಾವತಿ ಸೂಚನೆ"ಗೃಹ ಸಚಿವಾಲಯ ತಮಗೆ ನೀಡಿರುವ ಎಸ್‌ಪಿಜಿ ರಕ್ಷಣೆಯನ್ನು ಹಿಂತೆಗೆದುಕೊಂಡ ಕಾರಣದಿಂದಾಗಿ ಭದ್ರತಾ ಆಧಾರದ ಮೇಲೆ ಸರ್ಕಾರಿ ಬಂಗಲೆ ಅಥವಾ ಸೌಕರ್ಯಗಳನ್ನು ಉಳಿಸಿಕೊಳ್ಳಲು ಅವಕಾಶ ಇಲ್ಲ. ಹೀಗಾಗಿ ಆಗಸ್ಟ್ 01ರ ವರೆಗೆ ರಿಯಾಯಿತಿ ನೀಡಲಾಗಿದ್ದು, ಅಷ್ಟರಲ್ಲಿ ಸರ್ಕಾರಿ ಬಂಗಲೆಯನ್ನು ತೆರವುಗೊಳಿಸಿ. ಆಗಸ್ಟ್ 01ರ ನಂತರವೂ ಅಲ್ಲೇ ವಾಸ್ತವ್ಯ ಇದ್ದರೆ ನಿಯಮಗಳ ಪ್ರಕಾರ ದಂಡ ಶುಲ್ಕ ವಿಧಿಸಲಾಗುವುದು” ಎಂದು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ತನ್ನ ನೊಟೀಸ್‌ನಲ್ಲಿ ಉಲ್ಲೇಖಿಸಿದೆ.

Published by:MAshok Kumar
First published: