ನೋಟು ರದ್ದಿಗೂ ಮೊದಲು ರೂ.11, 21ರ ನೋಟು ಮುದ್ರಿಸಲು ರಿಸರ್ವ್ ಬ್ಯಾಂಕ್ಗೆ ಕೇಳಿದ್ದ ಮೋದಿ ಸರ್ಕಾರ
ನೋಟು ಅಮಾನ್ಯೀಕರಣದ ವೇಳೆ ಹೊಸ ಮುಖಬೆಲೆಯ ನೋಟುಗಳನ್ನು ಮುದ್ರಿಸುವ ಮೊದಲು ಶಕುನದ ಕಾರಣಕ್ಕೆ 11 ಮತ್ತು 21 ರೂ.ಗಳ ನೋಟುಗಳನ್ನು ಮುದ್ರಿಸಲು ಎನ್ಡಿಎ ಸರ್ಕಾರ ಆರ್ಬಿಐ ಮುಂದೆ ಪ್ರಸ್ತಾವನೆ ಇಟ್ಟಿತ್ತು.

ಸಾಂದರ್ಭಿಕ ಚಿತ್ರ
- News18
- Last Updated: January 7, 2019, 6:36 PM IST
ನವದೆಹಲಿ (ಜ. 7): ಎರಡು ವರ್ಷಗಳ ಹಿಂದೆ ದೇಶದಲ್ಲಿ ನೋಟು ಅಮಾನ್ಯೀಕರಣವಾಗಿ 1,000 ಮತ್ತು 500 ರೂ. ನೋಟುಗಳು ರದ್ದುಗೊಂಡಿತ್ತು. ಅದರ ಬೆನ್ನಲ್ಲೇ ರದ್ದಾದ ನೋಟಿನ ಜಾಗಕ್ಕೆ ರೂ. 200 ಮತ್ತು ರೂ. 2,000 ಹೊಸ ನೋಟುಗಳು ಚಾಲ್ತಿಗೆ ಬಂದಿತ್ತು.
2016ರಲ್ಲಿ ನೋಟು ಅಮಾನ್ಯೀಕರಣ ಮಾಡುವ ಸಂದರ್ಭದಲ್ಲಿ ನರೇಂದ್ರ ಮೋದಿ ಸರ್ಕಾರ 11 ಮತ್ತು 21 ರೂ.ಗಳ ಹೊಸ ನೋಟುಗಳನ್ನು ಮುದ್ರಣ ಮಾಡಲು ಯೋಜನೆ ರೂಪಿಸಿತ್ತು. ಸಾಮಾನ್ಯವಾಗಿ ಭಾರತೀಯರು ಯಾರಿಗಾದರೂ ಉಡುಗೊರೆ ಕೊಡುವಾಗ 101, 1001 ಹೀಗೆ ಬೆಸ ಸಂಖ್ಯೆಯ ಮೊತ್ತವನ್ನು ನೀಡುತ್ತಾರೆ. ಶೂನ್ಯ ಇರುವ ಮೊತ್ತವನ್ನು ನೀಡುವುದು ಶುಭಶಕುನ ಅಲ್ಲ ಎಂದು ಭಾವಿಸುತ್ತಾರೆ. ಹಾಗಾಗಿ, ಬೆಸ ಸಂಖ್ಯೆಯ 11 ಮತ್ತು 21 ರೂ.ಗಳ ನೋಟುಗಳನ್ನು ಮುದ್ರಣ ಮಾಡಲು ಸರ್ಕಾರ ನಿರ್ಧರಿಸಿತ್ತು ಎಂದು ದಿ ಪ್ರಿಂಟ್ ವರದಿ ಮಾಡಿದೆ.
ಇದನ್ನೂ ಓದಿ: ಮಾಜಿ ಪ್ರಧಾನಿ ಇಂದಿರಾ ಗಾಂಧಿಯನ್ನು ಬಿಜೆಪಿ ನಾಯಕ ನಿತಿನ್ ಗಡ್ಕರಿ ಹೊಗಳಿದ್ದೇಕೆ?ಸರ್ಕಾರದ ಉನ್ನತ ಮೂಲಗಳ ಪ್ರಕಾರ, ಧಾರ್ಮಿಕ ಭಾವನೆಯ ಹಿನ್ನೆಲೆಯಿಂದ ಈ ಹೊಸ ನೋಟುಗಳನ್ನು ಜಾರಿಗೊಳಿಸುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿತ್ತು. ಹಣಕಾಸು ಸಚಿವಾಲಯದೊಂದಿಗೆ ಈ ಬಗ್ಗೆ ಚರ್ಚಿಸಲಾಗಿತ್ತು. ಆದರೆ, ಕೊನೆಯ ಹಂತದಲ್ಲಿ ಈ ಯೋಚನೆಯನ್ನು ಕೈಬಿಡಲಾಯಿತು.
ಸರ್ಕಾರದ ಈ ಪ್ರಸ್ತಾವನೆಗೆ ಆರ್ಬಿಐ ವಿರೋಧ ವ್ಯಕ್ತಪಡಿಸಿತ್ತು. ಈ 11 ಮತ್ತು 21 ರೂ. ನೋಟುಗಳಿಂದ ಜನರಿಗೆ ಹೆಚ್ಚಿನ ಉಪಯೋಗವೇನೂ ಆಗುವುದಿಲ್ಲ ಹಾಗೂ ಈ ರೀತಿಯ ನೋಟುಗಳನ್ನು ಮುದ್ರಣ ಮಾಡುವುದರಿಂದ ಸಮಸ್ಯೆ ಇನ್ನಷ್ಟು ಹೆಚ್ಚುತ್ತದೆ ಎಂದು ಆರ್ಬಿಐ ಮನವರಿಕೆ ಮಾಡಿಕೊಟ್ಟಿತ್ತು.
ಇದನ್ನೂ ಓದಿ: ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ: ಜಾರಿಗೆ ಇರುವ ತಾಂತ್ರಿಕ ಅಡಚಣೆಗಳೇನು?
ನೋಟು ಅಮಾನ್ಯೀಕರಣದ ವೇಳೆ ಹೊಸ ನೋಟುಗಳು ಹೇಗಿರಬೇಕೆಂಬ ಬಗ್ಗೆ ಹಲವಾರು ಪ್ರಸ್ತಾವನೆಗಳು ಬಂದಿದ್ದವು. ಹಾಗಂತ ಅವೆಲ್ಲವನ್ನೂ ಪರಿಗಣಿಸಲಾಗಿತ್ತು ಎಂದು ಅರ್ಥವಲ್ಲ. ಅವೆಲ್ಲವೂ ಕೇವಲ ಸಲಹೆಗಳಷ್ಟೇ ಆಗಿದ್ದವು ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ದಿ ಪ್ರಿಂಟ್ ವರದಿ ಮಾಡಿದೆ.

Loading...
Loading...