ಪಾಸ್​ಪೋರ್ಟ್​​ಗೆ ಅರ್ಜಿ ಸಲ್ಲಿಸುತ್ತಿದ್ದೀರಾ?; ಹಣ ಮತ್ತು ಖಾಸಗಿ ಮಾಹಿತಿ ಕದಿಯುವ ವೆಬ್​ಸೈಟ್​ಗಳಿವೆ ಎಚ್ಚರ!

Passport Seva: ಕೆಲವು ವೆಬ್​ಸೈಟ್​ಗಳು ಕೇಂದ್ರ ವಿದೇಶಾಂಗ ಸಚಿವಾಲಯದ ವೆಬ್​ಸೈಟ್​ಗಳ ರೀತಿಯಲ್ಲೇ ಇರುತ್ತವೆ. ಮೇಲ್ನೋಟಕ್ಕೆ ಅವು ನಕಲಿ ಎಂದು ಗೊತ್ತಾಗುವುದೇ ಇಲ್ಲ. ಇದರಿಂದಲೇ ಸಾಕಷ್ಟು ಜನರು ಯಾಮಾರುತ್ತಾರೆ.

ಪಾಸ್​ಪೋರ್ಟ್​

ಪಾಸ್​ಪೋರ್ಟ್​

  • Share this:
ನೀವೇನಾದರೂ ಹೊಸ ಪಾಸ್​ಪೋರ್ಟ್​ಗೆ ಅರ್ಜಿ ಸಲ್ಲಿಸೇಕೆಂದು ಯೋಚಿಸುತ್ತಿದ್ದೀರಾ? ಅಥವಾ ನಿಮ್ಮವರು ಯಾರಾದರೂ ಪಾಸ್​ಪೋರ್ಟ್​ ಮಾಡಿಸಿಕೊಳ್ಳಲು ನಿರ್ಧರಿಸಿದ್ದಾರಾ? ಹಾಗಾದರೆ ನೀವು ಸ್ವಲ್ಪ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಏಕೆಂದರೆ ಕೆಲವು ವೆಬ್​ಸೈಟ್​ಗಳು ಪಾಸ್​ಪೋರ್ಟ್​ ಮಾಡಿಸಿಕೊಡುವ ಆಮಿಷವೊಡ್ಡಿ, ನಿಮ್ಮ ಡೇಟಾವನ್ನು ಕದ್ದು, ಹಣವನ್ನೂ ಲೂಟಿ ಮಾಡುತ್ತವೆ.

ಪಾಸ್​ಪೋರ್ಟ್​ಗಾಗಿ ಆನ್​ಲೈನ್ ಫಾರ್ಮ್ ತುಂಬುವ ಮೊದಲು ಎಚ್ಚರ ವಹಿಸಿ. ಪಾಸ್​ಪೋರ್ಟ್​ ಡಾಕ್ಯುಮೆಂಟ್​ ವೇರಿಫಿಕೇಷನ್​ಗೆ ಅಪಾಯಿಂಟ್​ಮೆಂಟ್ ತೆಗೆದುಕೊಳ್ಳಲು ಅರ್ಜಿ ತುಂಬುವಾಗ ಸ್ವಲ್ಪ ಯಾಮಾರಿದರೂ ನಿಮ್ಮ ಎಲ್ಲ ಖಾಸಗಿ ಮಾಹಿತಿಗಳೂ ಬೇರೆಯವರ ಕೈ ಸೇರುತ್ತವೆ. ಸಾಕಷ್ಟು ನಕಲಿ ವೆಬ್​ಸೈಟ್​ಗಳು ಪಾಸ್​ಪೋರ್ಟ್​​ಗೆ ಅಪ್ಲಿಕೇಷನ್ ಹಾಕಲು ನಿಮಗೆ ಆಯ್ಕೆಗಳನ್ನು ನೀಡುತ್ತವೆ. ಆದರೆ, ಈ ಲಿಂಕ್​ನಲ್ಲಿರುವ ವೆಬ್​ಸೈಟ್​ ಅಧಿಕೃತ ವೆಬ್​ಸೈಟ್ ಆಗಿದ್ದು, ಬೇರೆ ಸೈಟ್​ಗಳ ಮೂಲಕ ಮಾಹಿತಿ ಸೋರಿಕೆಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಇದನ್ನೂ ಓದಿ: Bihar Floods: ಬಿಹಾರದಲ್ಲಿ ಪ್ರವಾಹ ಹೆಚ್ಚಳ; 14 ಜಿಲ್ಲೆಗಳ 50 ಲಕ್ಷಕ್ಕೂ ಹೆಚ್ಚು ಜನರಿಗೆ ಸಂಕಷ್ಟ

ನಿಮಗೆ ಪಾಸ್​ಪೋರ್ಟ್​ ಸೇವಾ ಕೇಂದ್ರದಲ್ಲಿ ಅಪಾಯಿಂಟ್​ಮೆಂಟ್​ ಕೊಡಿಸುತ್ತೇವೆ ಎಂದು ಹಲವು ವೆಬ್​ಸೈಟ್​ಗಳು ಆನ್​ಲೈನ್​ನಲ್ಲಿ ಅರ್ಜಿ ತುಂಬುವಂತೆ ಕೇಳುತ್ತವೆ. ನಿಮ್ಮ ಆಧಾರ್, ಪಾನ್ ಕಾರ್ಡ್​, ಖಾಸಗಿ ವಿಳಾಸ, ಮೊಬೈಲ್ ನಂಬರ್ ಮುಂತಾದ ಮಾಹಿತಿಯನ್ನು ಅದರಲ್ಲಿ ಪೂರ್ತಿಗೊಳಿಸಿದ ಕೂಡಲೆ ಹಣ ಪಾವತಿ ಮಾಡುವಂತೆ ಸೂಚಿಸುತ್ತದೆ. ನೀವೇನಾದರೂ ಅಪಾಯಿಂಟ್​ಮೆಂಟ್​ಗೆ ಹಣ ಪಾವತಿ ಮಾಡಿದರೆ ನಿಮ್ಮ ಹಣವೂ ಹೋಯಿತು, ಮಾಹಿತಿಯೂ ಸೋರಿಕೆಯಾದಂತೆ.

ಹೀಗಾಗಿ, ಪಾಸ್​ಪೋರ್ಟ್​ ಸೇವೆಗೆ ಸಂಬಂಧಿಸಿದಂತೆ ನಕಲಿ ವೆಬ್​ಸೈಟ್​ಗಳ ಬಗ್ಗೆ ಎಚ್ಚರ ವಹಿಸುವಂತೆ ಸೂಚಿಸಲಾಗಿದೆ. ಕೆಲವು ವೆಬ್​ಸೈಟ್​ಗಳು ಕೇಂದ್ರ ವಿದೇಶಾಂಗ ಸಚಿವಾಲಯದ ವೆಬ್​ಸೈಟ್​ಗಳ ರೀತಿಯಲ್ಲೇ ಇರುತ್ತವೆ. ಮೇಲ್ನೋಟಕ್ಕೆ ಅವು ನಕಲಿ ಎಂದು ಗೊತ್ತಾಗುವುದೇ ಇಲ್ಲ. ಇದರಿಂದಲೇ ಸಾಕಷ್ಟು ಜನರು ಯಾಮಾರುತ್ತಾರೆ. ಸೈಬರ್​ ಕ್ರೈಂ ವಿಭಾಗ ನಕಲಿ ವೆಬ್​ಸೈಟ್​ಗಳ ಬಗ್ಗೆ ಜನರು ಎಚ್ಚರಿಕೆಯಿಂದ ಇರಬೇಕು, ಪಾಸ್​ಪೋರ್ಟ್​ ನೆಪದಲ್ಲಿ ಹಣ ಮತ್ತು ಡೇಟಾ ದುರುಪಯೋಗಪಡಿಸಿಕೊಳ್ಳುವುದು ನಮ್ಮ ಗಮನಕ್ಕೆ ಬಂದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.

ಇದನ್ನೂ ಓದಿ: Murder News: ಗಂಡನ ಲೈಂಗಿಕ ಗೀಳಿನಿಂದ ಬೇಸತ್ತು ಉಸಿರುಗಟ್ಟಿಸಿ ಕೊಂದ ಹೆಂಡತಿ!

ನೀವೇನಾದರೂ ಪಾಸ್​ಪೋರ್ಟ್​ಗೆ ಅಪ್ಲೈ ಮಾಡಬೇಕೆಂದಿದ್ದರೆ ಈ ವೆಬ್​ಸೈಟ್​ ಮೇಲೆ ಕ್ಲಿಕ್ ಮಾಡಿ. ಅಥವಾ MPassport Seva ಆ್ಯಪ್ ಕೂಡ ಆ್ಯಂಡ್ರಾಯ್ಡ್​ ಮೊಬೈಲ್ ಮತ್ತು ಐಫೋನ್​​ಗಳಲ್ಲಿ ಲಭ್ಯವಿದೆ. ಅದರ ಮೂಲಕ ಅಪಾಯಿಂಟ್​ಮೆಂಟ್​ಗಳನ್ನು ಪಡೆಯಬಹುದು.
Published by:Sushma Chakre
First published: