• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Vande Bharat Train: ಕಲ್ಲು ತೂರುವ ಮುನ್ನ ಎಚ್ಚರ! ವಂದೇ ಭಾರತ್ ರೈಲಿಗೆ ಹಾನಿ ಮಾಡಿದವರಿಗೆ 5 ವರ್ಷ ಜೈಲು ಶಿಕ್ಷೆ ಗ್ಯಾರಂಟಿ

Vande Bharat Train: ಕಲ್ಲು ತೂರುವ ಮುನ್ನ ಎಚ್ಚರ! ವಂದೇ ಭಾರತ್ ರೈಲಿಗೆ ಹಾನಿ ಮಾಡಿದವರಿಗೆ 5 ವರ್ಷ ಜೈಲು ಶಿಕ್ಷೆ ಗ್ಯಾರಂಟಿ

ವಂದೇ ಭಾರತ್ ಎಕ್ಸ್​ಪ್ರೆಸ್​

ವಂದೇ ಭಾರತ್ ಎಕ್ಸ್​ಪ್ರೆಸ್​

ವಂದೇ ಭಾರತ್ ರೈಲುಗಳ ಮೇಲೆ ಕಲ್ಲು ತೂರಾಟದಂತಹ ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಂತೆ ದಕ್ಷಿಣ ಮಧ್ಯ ರೈಲ್ವೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ, ಒಂದು ವೇಳೆ ಈ ರೀತಿಯ ಹಾನಿಯನ್ನು ಮಾಡಿದ್ರೆ ಐದು ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

  • Share this:

ವಂದೇ ಭಾರತ್ ರೈಲಿನ (Vande Bharat Trains) ಕಿಟಕಿ ಗಾಜುಗಳಿಗೆ ಕಲ್ಲು ತೂರಾಟ (Stone Throwing) ನಡೆಸಿ ಹಾನಿ ಮಾಡಿದ್ದಕ್ಕಾಗಿ ತಮಿಳುನಾಡಿನ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ (Tamilnadu) ತಿರುಮಂಜೋಲೈ ಮೂಲದ 21 ವರ್ಷದ ಯುವಕ ಗುಬೇಂದ್ರನ್‌ ಎಂಬುವವನೇ ವಂದೇ ಭಾರತ್ ರೈಲಿನ ಕಿಟಕಿಯ ಗಾಜಿನ ಮೇಲೆ ಕಲ್ಲು ತೂರಾಟ ನಡೆಸಿದವನಾಗಿದ್ದಾನೆ. ವಂದೇ ಭಾರತ್ ರೈಲು ಚೆನ್ನೈನಿಂದ ಮೈಸೂರಿಗೆ ತೆರಳುತ್ತಿದ್ದ ವೇಳೆ ಪುದೂರು ಬಳಿ ಕಿಟಕಿ ಗಾಜು ಒಡೆದಿರುವುದನ್ನು ಗಮನಿಸಿದ ಸಿಬ್ಬಂದಿ ಪೊಲೀಸರಿಗೆ (Police) ಮಾಹಿತಿ ನೀಡಿದ್ದಾರೆ.


ತಕ್ಷಣ ಪೊಲೀಸರು ತನಿಖೆ ಕೈಗೊಂಡು ರೈಲ್ವೆ ಹಳಿ ಬಳಿ ಮದ್ಯ ಸೇವಿಸುತ್ತಿದ್ದ ಗುಬೇಂದ್ರನ್‌ನನ್ನು ಬಂಧಿಸಿದ್ದಾರೆ. ಇನ್ನು ಆರೋಪಿ ವಂದೇ ಭಾರತ್ ರೈಲಿಗೆ ಕಲ್ಲು ತೂರಾಟ ನಡೆಸಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.


ಕಲ್ಲು ತೂರಾಟ ನಡೆಸಿ ಹಾನಿ ಮಾಡಿದರೆ 5 ವರ್ಷ ಜೈಲು!


ಈ ಮಧ್ಯೆ ವಂದೇ ಭಾರತ್ ರೈಲುಗಳ ಮೇಲೆ ಕಲ್ಲು ತೂರಾಟ ನಡೆಸುವುದು, ಹಾನಿ ಮಾಡುವುದು ಸೇರಿದಂತೆ ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಂತೆ ದಕ್ಷಿಣ ಮಧ್ಯ ರೈಲ್ವೆ (ಎಸ್‌ಸಿಆರ್)ಸಾರ್ವಜನಿಕರಿಗೆ ಮನವಿ ಮಾಡಿದೆ. ಅಲ್ಲದೇ ಇಂಥ ಅಪರಾಧಕ್ಕೆ ಐದು ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. ರೈಲುಗಳ ಮೇಲೆ ಕಲ್ಲು ತೂರಾಟವು ಕ್ರಿಮಿನಲ್ ಅಪರಾಧವಾಗಿದ್ದು, ಅಪರಾಧಿಗಳ ವಿರುದ್ಧ ರೈಲ್ವೆ ಕಾಯ್ದೆಯ ಸೆಕ್ಷನ್ 153 ರ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು.


ಇದನ್ನೂ ಓದಿ: ನೂತನ ಸಂಸತ್ ಭವನ ಕಟ್ಟಡಕ್ಕೆ ದಿಢೀರ್ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದ ಪ್ರಧಾನಿ ಮೋದಿ!


ಇದು 5 ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆಗೆ ಗುರಿಯಾಗುತ್ತದೆ ಎಂದು ಎಸ್‌ಸಿಆರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.‌ ಇನ್ನು, ತೆಲಂಗಾಣದ ವಿವಿಧ ಸ್ಥಳಗಳಲ್ಲಿ ವಂದೇ ಭಾರತ್ ರೈಲುಗಳ ಮೇಲೆ ಕಲ್ಲು ತೂರಾಟದ ಹಲವಾರು ಘಟನೆಗಳು ವರದಿಯಾದ ನಂತರ ಈ ಎಚ್ಚರಿಕೆ ನೀಡಲಾಗಿದೆ.


ವಂದೇ ಭಾರತ್‌ ರೈಲನ್ನು ಗುರಿಯಾಗಿಸಿಕೊಂಡ ಕಿಡಿಗೇಡಿಗಳು!


ಇತ್ತೀಚಿನ ದಿನಗಳಲ್ಲಿ ವಂದೇ ಭಾರತ್ ರೈಲುಗಳನ್ನು ಕಿಡಿಗೇಡಿಗಳು ಗುರಿಯಾಗಿಸಿಕೊಂಡಿದ್ದಾರೆ. ಒಂದಲ್ಲ, ಎರಡಲ್ಲ... ಅಂತಹ ಒಂಬತ್ತು ಘಟನೆಗಳು ಇದುವರೆಗೆ ನಡೆದಿವೆ. ಈ ವರ್ಷದ ಜನವರಿಯಿಂದ ವರದಿಯಾಗಿದೆ ಎಂದು ಪಿಟಿಐ ವರದಿ ಮಾಡಿದೆ.


ಫೆಬ್ರವರಿ 2019 ರಲ್ಲಿ ಪ್ರಾರಂಭವಾದಾಗಿನಿಂದ, ವಂದೇ ಭಾರತ್ ಎಕ್ಸ್‌ಪ್ರೆಸ್ ಮೇಲೆ ತೆಲಂಗಾಣ, ಬಿಹಾರ, ಉತ್ತರ ಪ್ರದೇಶ, ಛತ್ತೀಸ್‌ಗಢ ಮತ್ತು ಪಶ್ಚಿಮ ಬಂಗಾಳದಲ್ಲಿ ದಾಳಿ ಮಾಡಲಾಗಿದೆ. ಹಲವಾರು ಪ್ರಕರಣಗಳನ್ನು ದಾಖಲಿಸಿದ ನಂತರ ಇದುವರೆಗೆ 39 ಜನರನ್ನು ರೈಲ್ವೇ ರಕ್ಷಣಾ ಪಡೆ (ಆರ್‌ಪಿಎಫ್) ಬಂಧಿಸಿದೆ.


ಜಾಗೃತಿ ಅಭಿಯಾನ


ಈ ಕುರಿತು ರೈಲ್ವೇ ಸಂರಕ್ಷಣಾ ಪಡೆ (ಆರ್‌ಪಿಎಫ್) ಹಲವಾರು ಜಾಗೃತಿ ಅಭಿಯಾನಗಳನ್ನು ನಡೆಸುತ್ತಿದೆ. ಹಳಿಗಳ ಸಮೀಪವಿರುವ ಗ್ರಾಮಗಳ ಸರಪಂಚರೊಂದಿಗೆ ಸಮನ್ವಯ ಸಾಧಿಸುವುದು ಮತ್ತು ಅವರನ್ನು ಗ್ರಾಮ ಮಿತ್ರರನ್ನಾಗಿ ಮಾಡುವುದು ಸೇರಿದಂತೆ ಹಲವಾರು ತಡೆಗಟ್ಟುವ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಎಸ್‌ಸಿಆರ್ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸಿ.ಎಚ್ ರಾಕೇಶ್ ತಿಳಿಸಿದ್ದಾರೆ.


ವಂದೇ ಭಾರತ್ ಎಕ್ಸ್​ಪ್ರೆಸ್​


ಮೊದಲು ರಾಜಧಾನಿ ಎಕ್ಸ್‌ಪ್ರೆಸ್‌ , ಶತಾಬ್ದಿ ಎಕ್ಸ್‌ಪ್ರೆಸ್‌ ಗಳಿಗೆ ಮಾಡುವಂತೆಯೇ ಈಗ ವಂದೇ ಭಾರತ್‌ ರೈಲನ್ನು ಗುರಿಯಾಗಿಸಿಕೊಂಡಿದ್ದಾರೆ. ಮಾರ್ಚ್ 11 ರಂದು, ಹೌರಾ-ಹೊಸ ಜಲಪೈಗುರಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಕಲ್ಲು ತೂರಲಾಗಿತ್ತು. ಅದರ ಕೋಚ್‌ಗಳಲ್ಲಿ ಒಂದರ ಕಿಟಕಿ ಗಾಜುಗಳನ್ನು ಹಾನಿಗೊಳಿಸಲಾಗಿತ್ತು.


"ಇಂತಹ ನಾಚಿಕೆಗೇಡಿನ, ವಂದೇ ಭಾರತ್ ರೈಲುಗಳ ಮೇಲೆ ಕಲ್ಲು ತೂರಾಟವು ರಾಜಕೀಯ ರಾಜಕೀಯಪ್ರೇರಿತವಲ್ಲ ಎನ್ನಲಾಗದು. ನೀವೂ ರಾಷ್ಟ್ರಕ್ಕೆ ಒಳ್ಳೆಯದನ್ನು ಮಾಡುವುದಿಲ್ಲ; ಒಳ್ಳೆಯದನ್ನು ಮಾಡಲು ಬೇರೆ ಯಾರಿಗೂ ಅವಕಾಶ ನೀಡುವುದಿಲ್ಲ” ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಹಿರಿಯ ಸಲಹೆಗಾರ ಕಾಂಚನ್ ಗುಪ್ತಾ ಅವರು ಪಶ್ಚಿಮ ಬಂಗಾಳ ದಾಳಿಯ ಬಗ್ಗೆ ಟ್ವೀಟ್ ಮಾಡಿದ್ದರು.




ಅದೇ ರೀತಿ, ಉತ್ತರ ರೈಲ್ವೇ ಕೂಡ ರೈಲ್ವೆ ಆಸ್ತಿ ನಿರ್ವಹಣೆ ಸಾಮೂಹಿಕ ಜವಾಬ್ದಾರಿ ಎಂದು ಒತ್ತಿ ಹೇಳಿತ್ತು."ರೈಲ್ವೆ ಆಸ್ತಿಯ ನಿರ್ವಹಣೆ ಸಾಮೂಹಿಕ ಜವಾಬ್ದಾರಿಯಾಗಿದೆ. ಅವುಗಳ ನಿರ್ವಹಣೆಗೆ ರೈಲ್ವೆ ಸಿಬ್ಬಂದಿ ಮಾತ್ರವಲ್ಲ, ಪ್ರಯಾಣಿಕರು ಸಹ ಸಮಾನವಾಗಿ ಕೊಡುಗೆ ನೀಡಬಹುದು. ಅಂದಾಗ ಮಾತ್ರ ನಾವು ಎಲ್ಲಾ ಪ್ರಯಾಣಿಕರಿಗೆ ಉತ್ತಮ ಸೇವೆಗಳನ್ನು ಒದಗಿಸಬಹುದು” ಉತ್ತರ ರೈಲ್ವೆ ಟ್ವೀಟ್ ಮಾಡಿತ್ತು.

First published: