ಆನ್ಲೈನ್ ವಂಚನೆಗಳು ಹೆಚ್ಚಾಗುತ್ತಿವೆ. ಅನೇಕರು ಈ ಬಗ್ಗೆ ತಿಳುವಳಿಕೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಿದ್ದಾರೆ. ವಂಚನೆಗಾರರ ಮೋಸಕ್ಕೆ ಸಿಲುಕಿ ಕ್ಷಣಾರ್ಧದಲ್ಲಿ ಬ್ಯಾಂಕ್ ಖಾತೆಯಿಂದ ಲಕ್ಷಗಟ್ಟಲೆ ಹಣವನ್ನು ಕಳೆದುಕೊಂಡವರಿದ್ದಾರೆ. ಆದರೆ ಇಂತಹ ವಂಚನೆಗಳಿಗೆ ಸಿಲುಕಿಕೊಳ್ಳುವ ಮುನ್ನ ಕೊಂಚ ಎಚ್ಚರವಾಗಿರುವುದು ಒಳಿತು. ಸ್ಮಾರ್ಟ್ಫೋನ್ಗೆ ಬರುವ ಒಟಿಪಿ ನಂಬರ್ ಕಳುಹಿಸಿ ಹಣ ಕಳೆದುಕೊಂಡ ಅದೆಷ್ಟೋ ಪ್ರಕರಣಗಳು ಕಣ್ಣಮುಂದಿವೆ. ಆದರೀಗ ಕ್ಯೂಆರ್ ಕೋಡ್ಗ್ ಬಳಸಿ ವಂಚನೆ ನಡೆಸುತ್ತಿದ್ದಾರೆ.
ವ್ಯಕ್ತಿಯೊಬ್ಬ ಒಎಲ್ಎಕ್ಸ್ನಲ್ಲಿ ತನ್ನ ಸ್ಮಾರ್ಟ್ಫೋನ್ ಮಾರಾಟ ಮಾಡಲು ಮುಂದಾಗಿದ್ದಾನೆ. ಇದನ್ನು ತಿಳಿದ ವಂಚನೆಗಾರನೊಬ್ಬ ಆತನಿಗೆ ಕರೆ ಮಾಡುತ್ತಾನೆ. ಭಾರತೀಯ ಸೇನೆಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಸುಳ್ಳು ಹೇಳಿ ನಂಬಿಸುತ್ತಾನೆ. ಮಾತ್ರವಲ್ಲದೆ, ನಾನೊಂದು ಕ್ಯೂಆರ್ ಕೋಡ್ ಕಳುಹಿಸುತ್ತೇನೆ ಅದರ ಮೂಲಕ ಬ್ಯಾಂಕ್ ಖಾತೆಯನ್ನು ಸ್ಕ್ಯಾನ್ ಮಾಡಿ ಮಾಹಿತಿಯನ್ನು ಕಳುಹಿಸಿ ನಂತರ ನಿಮ್ಮ ಖಾತೆಗೆ ಹಣ ವರ್ಗಾಯಿಸುತ್ತೇನೆ ಎಂದು ಹೇಳುತ್ತಾನೆ.
ಇದರಿಂದ ಎಚ್ಚೆತ್ತುಕೊಂಡ ವ್ಯಕ್ತಿಗೆ ಇದೊಂದು ವಂಚನೆಯ ಕರೆ ಎಂದು ತಿಳಿಯುತ್ತದೆ. ಆತನ ಬಳಿ ನೀನೊಬ್ಬ ವಂಚನೆಗಾರ ಎಂದು ನನಗೆ ತಿಳಿದಿದೆ. ಇದರಿಂದ ತಿಂಗಳಿಗೆ ಎಷ್ಟು ಹಣವನ್ನು ದುಡಿಯುತ್ತಿದ್ದಾಯಾ? ಎಂದು ಕೇಳುತ್ತಾನೆ. ಆದರೆ ವಂಚನೆಗಾರ ತಿಂಗಳಿಗೆ 3 ರಿಂದ 4 ಲಕ್ಷ ರೂ ಇದರಿಂದ ಸಂಪಾದಿಸುತ್ತೇನೆ. ನೀನು ಸಿಗದೆ ಹೋದ್ರೆ ಮತ್ತೊಬ್ಬ ಸಿಗುತ್ತಾನೆ ಎಂದಿದ್ದಾನೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ