ಬಿ.ಸಿ. ಅಂದರೆ ಬಿಫೋರ್ ಕಾಂಗ್ರೆಸ್​, ಎ.ಡಿ. ಅಂದರೆ ಆಫ್ಟರ್​ ಡೈನೆಸ್ಟಿ; ಸಂಸತ್​ ಕೊನೇ ಭಾಷಣದಲ್ಲೂ ಕಾಂಗ್ರೆಸ್​ ಟೀಕಿಸಿದ ಪ್ರಧಾನಿ ಮೋದಿ

ಸಂಸತ್ತಿನ ಕೊನೆಯ ಭಾಷಣದಲ್ಲೂ ಕಾಂಗ್ರೆಸ್​ ಟೀಕಿಸಿದ ಮೋದಿ, ಬಿಸಿ ಅಂದರೆ ಬಿಫೋರ್​ ಕಾಂಗ್ರೆಸ್​ (ಹಿಂದಿನ ಕಾಂಗ್ರೆಸ್​) ಎಸಿ ಅಂದರೆ ಆಫ್ಟರ್​ ಡೈನೆಸ್ಟಿ ಎಂದ ಮೋದಿ,  ನಿರಾಶೆಯಲ್ಲಿದ್ದವರು ಈಗಲೂ ನಿರಾಶೆಯಲ್ಲಿದ್ದಾರೆ. ಆಶಾವಾದ ಇಟ್ಟುಕೊಂಡವರಿಗೆ ಆಶ್ವಾಸನೆಗಳು ಬೇಕಿಲ್ಲ ಎಂದರು.

HR Ramesh | news18
Updated:February 7, 2019, 7:11 PM IST
ಬಿ.ಸಿ. ಅಂದರೆ ಬಿಫೋರ್ ಕಾಂಗ್ರೆಸ್​, ಎ.ಡಿ. ಅಂದರೆ ಆಫ್ಟರ್​ ಡೈನೆಸ್ಟಿ; ಸಂಸತ್​ ಕೊನೇ ಭಾಷಣದಲ್ಲೂ ಕಾಂಗ್ರೆಸ್​ ಟೀಕಿಸಿದ ಪ್ರಧಾನಿ ಮೋದಿ
ಸಂಸತ್ತಿನಲ್ಲಿ ಕೊನೆಯ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ
HR Ramesh | news18
Updated: February 7, 2019, 7:11 PM IST
ನವದೆಹಲಿ: ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯ ಭಾಷಣ ಮಾಡಿದ ಪ್ರಧಾನಿ ಮೋದಿ, ಇದು ನನ್ನ ಬದುಕಿನಲ್ಲಿ ಮರೆಯಲಾಗದ ಕ್ಷಣ. ಐದು ವರ್ಷಗಳ ಆಡಳಿತದಲ್ಲಿ ಕಳಂಕರಹಿತನಾಗಿದ್ದೇನೆ. ನೀಡಿದ ಆಶ್ವಾಸನೆಗಳನ್ನು ಈಡೇರಿಸಲು ಪಣತೊಟ್ಟಿದ್ದೇನೆ. ಕೇಂದ್ರ ಸರ್ಕಾರ ಬಡವರ ಪರ ಕೆಲಸ ಮಾಡಿದೆ. ನಮ್ಮ ಸರ್ಕಾರದ ಸಾಧನೆ ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ ಎಂದು ಹೇಳಿದರು. ಜೊತೆಗೆ ಕಾಂಗ್ರೆಸ್​ ಅನ್ನು ಪ್ರತಿ ಹಂತದಲ್ಲೂ ಟೀಕಿಸಿದರು.

ಈ ಐದು ವರ್ಷಗಳ ಆಡಳಿತದಲ್ಲಿ ದೇಶ ಸಾಕಷ್ಟು ಪ್ರಗತಿ ಸಾಧಿಸಿದೆ. ಕಬ್ಬಿಣ ಉತ್ಪಾದನೆಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಹಾಲು ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದ್ದೇವೆ. ಮೇಕ್​ ಇನ್​ ಇಂಡಿಯಾ ಭಾರತದ ಹೆಮ್ಮೆಯ ಪ್ರತೀಕ. ಕಡಿಮೆ ದರದಲ್ಲಿ ಇಂಟರ್​ನೆಟ್​ ನೀಡಿದ್ದೇವೆ ಎಂದು ತಮ್ಮ ಸರ್ಕಾರದ ಸಾಧನೆ ಬಣ್ಣಿಸಿದರು.

ಸಂಸತ್ತಿನ ಕೊನೆಯ ಭಾಷಣದಲ್ಲೂ ಕಾಂಗ್ರೆಸ್​ ಟೀಕಿಸಿದ ಮೋದಿ, ಬಿಸಿ ಅಂದರೆ ಬಿಫೋರ್​ ಕಾಂಗ್ರೆಸ್​ (ಹಿಂದಿನ ಕಾಂಗ್ರೆಸ್​) ಎಸಿ ಅಂದರೆ ಆಫ್ಟರ್​ ಡೈನೆಸ್ಟಿ ಎಂದ ಮೋದಿ,  ನಿರಾಶೆಯಲ್ಲಿದ್ದವರು ಈಗಲೂ ನಿರಾಶೆಯಲ್ಲಿದ್ದಾರೆ. ಆಶಾವಾದ ಇಟ್ಟುಕೊಂಡವರಿಗೆ ಆಶ್ವಾಸನೆಗಳು ಬೇಕಿಲ್ಲ ಎಂದರು.

ಈಡೀ ವಿಶ್ವಕ್ಕೆ ದೇಶದ ಚುನಾವಣಾ ಆಯೋಗ ಬಲುದೊಡ್ಡ ಸಂಸ್ಥೆ. ಇಡೀ ವಿಶ್ವವೇ ನಮ್ಮ  ಚುನಾವಣಾ ಆಯೋಗವನ್ನು ಹೊಗಳುತ್ತಿದೆ. ಆದರೆ, ಇವಿಎಂ ಹ್ಯಾಕ್​ ಆಗಿದೆ ಎಂದು ಕಾಂಗ್ರೆಸ್​ನವರು ಅದರ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿ, ಅಪಮಾನ ಮಾಡಿದರು. ನ್ಯಾಯಾಂಗವನ್ನು ಟೀಕಿಸಿದರು. ಭಾರತೀಯ ಸೇನೆಗೆ ಅಪಮಾನ ಮಾಡಿದರು.  ಈಡೀ ವಿಶ್ವಕ್ಕೆ ನಮ್ಮ ಚುನಾವಣಾ ಆಯೋಗ ಬಲುದೊಡ್ಡ ಸಂಸ್ಥೆ. ಇಡೀ ವಿಶ್ವವೇ ನಮ್ಮ  ಚುನಾವಣಾ ಆಯೋಗವನ್ನು ಹೊಗಳುತ್ತಿದೆ. ಆದರೆ, ಇವಿಎಂ ಹ್ಯಾಕ್​ ಆಗಿದೆ ಎಂದು ಕಾಂಗ್ರೆಸ್​ನವರು ಅದರ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿ, ಅಪಮಾನ ಮಾಡಿದರು. ಮೋದಿ ಸಂಸ್ಥಾನವನ್ನು ಖತಂ ಮಾಡ್ತಿವಿ, ಬರ್ಬಾತ್​ ಮಾಡ್ತರಿವಿ ಅಂತಿದ್ದಾರೆ. ಶಾಸನಬದ್ಧವಾಗಿ ಅಧಿಕಾರ ಕೊಟ್ಟ ದೇಶದ ಜನರಿಗೆ ಮಾಡಿದ ಅವಮಾನ ಇದು ಎಂದು ಮೋದಿ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನು ಓದಿ: ಮಲ್ಲಿಕಾರ್ಜುನ ಖರ್ಗೆಗೆ ಖೆಡ್ಡಾ ತೋಡಲು 2 ವರ್ಷದ ಹಿಂದೆಯೇ ಪ್ರಧಾನಿ ಮೋದಿ ಸ್ಕೆಚ್..? ಈ ಬಾರಿ ಸೋಲ್ತಾರಾ ಖರ್ಗೆ?

ನಾನು ಸಾರ್ವಜನಿಕ ಭಾಷಣದಲ್ಲೂ ಸತ್ಯ ಹೇಳುತ್ತೇನೆ. ಲೋಕಸಭೆಯಲ್ಲೂ ಸತ್ಯವನ್ನೇ ಹೇಳುತ್ತೇನೆ. ಬಜೆಟ್​ನಲ್ಲಿ ಅನ್ಯಾಯ ಆಗಿದೆ ಅಂತಾರೆ. ಈ ಕಾಂಗ್ರೆಸ್ ನಾಯಕರಿಗೆ ಏನಾಗಿದೆ.  ಐದು ಲಕ್ಷದವರೆಗೆ ತೆರಿಗೆ ಮುಕ್ತಗೊಳಿಸಿದ್ದೇವೆ. ಶಿಕ್ಷಣ ಕ್ಷೇತ್ರದ ಬ್ಯಾಂಕ್​ ಲೋನ್​ಗೂ ತೆರಿಗೂ ಇಲ್ಲ. ಬಡ, ಮಧ್ಯಮ ವರ್ಗದ ಜನರಿಗೆ ಅನುಕೂಲ ಕಲ್ಪಿಸಿದ್ದೇವೆ. ಇಲ್ಲಿ ಕಳ್ಳನೇ ಪೊಲೀಸರನ್ನು ನಿಂದಿಸುವಂತಾಗಿದೆ. ಇಂದಿರಾ ಗಾಂಧಿ 50 ಸರ್ಕಾರಗಳನ್ನು ಉರುಳಿಸಿದ್ದಾರೆ. ಯೋಜನಾ ಆಯೋಗವನ್ನು ಜೋಕರ್ ಎಂದು ಕರೆದರು. ಅವರು ನಮ್ಮ ಬಗ್ಗೆ ಟೀಕಿಸುತ್ತಾರೆ ಎಂದು ಕಿಡಿಕಾರಿದರು.

ಕಾಂಗ್ರೆಸ್​ ಈ ದೇಶವನ್ನು 55 ವರ್ಷ ಆಳಿದರು. ನಾನು 55 ತಿಂಗಳು ಆಳಿದ್ದೇನೆ. ಈ ನಾಲ್ಕೂವರೆ ವರ್ಷದಲ್ಲಿ 10 ಕೋಟಿ ಶೌಚಾಲಯ ನಿರ್ಮಾಣವಾಗಿವೆ. ಬಡವರ ಪರವಾಗಿ ನಾನು ಜೀವಿಸಿದ್ದೇನೆ. ದಿಲ್ಲಿಯ ಗಲ್ಲಿ ನೋಡದ ನಾನು ಇಷ್ಟೆಲ್ಲಾ ಮಾಡುತ್ತಿದ್ದೇನೆ. ಇಷ್ಟೆಲ್ಲಾ ಮಾಡುತ್ತಿದ್ದೇನಲ್ಲಾ ಎಂದು ಅವರೆಲ್ಲ ಒದ್ದಾಡುತ್ತಿದ್ದಾರೆ. ಈಗ ಎಲ್ಲ ಒಟ್ಟಾಗಿ ಸೇರಿದ್ದಾರೆ. ಈ ಮಹಾಘಟ್​ಬಂಧನ್​ ಸ್ಥಿತಿ ಏನಾಗುತ್ತದೆ ನೋಡಿ ಎಂದು ಮಹಾಮೈತ್ರಿ ಬಗ್ಗೆ ವ್ಯಂಗ್ಯವಾಡಿದರು.
Loading...

 

First published:February 7, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ