• Home
  • »
  • News
  • »
  • national-international
  • »
  • Mehbooba Mufti: ಮೂಲಭೂತ ಹಕ್ಕುಗಳು ಈಗ ದುಬಾರಿಯಾಗಿದೆ; ಜಮ್ಮು-ಕಾಶ್ಮೀರ ಸ್ಥಿತಿ ಬಗ್ಗೆ ಮೆಹಬೂಬಾ ಮುಫ್ತಿಯಿಂದ ಸಿಜೆಐಗೆ ಪತ್ರ!

Mehbooba Mufti: ಮೂಲಭೂತ ಹಕ್ಕುಗಳು ಈಗ ದುಬಾರಿಯಾಗಿದೆ; ಜಮ್ಮು-ಕಾಶ್ಮೀರ ಸ್ಥಿತಿ ಬಗ್ಗೆ ಮೆಹಬೂಬಾ ಮುಫ್ತಿಯಿಂದ ಸಿಜೆಐಗೆ ಪತ್ರ!

ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೆ ಮೆಹಬೂಬಾ ಮುಫ್ತಿ

ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೆ ಮೆಹಬೂಬಾ ಮುಫ್ತಿ

ಭಾರತೀಯ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಮತ್ತು ಎಲ್ಲಾ ಭಾರತೀಯ ನಾಗರಿಕರಿಗೆ ಖಾತರಿಪಡಿಸಿದ ಮೂಲಭೂತ ಹಕ್ಕುಗಳ ಮೇಲೆ ನಿರ್ಬಂಧ ಹೇರಲಾಗುತ್ತಿದೆ. ದುರದೃಷ್ಟವಶಾತ್, ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ವಿಚಾರಗಳಲ್ಲಿ ಸರ್ಕಾರದ ರೇಖೆಯನ್ನು ಅನುಸರಿಸುವ ಈ ಮೂಲಭೂತ ಹಕ್ಕುಗಳು ಈಗ ದುಬಾರಿಯಾಗಿದ್ದು, ಅವುಗಳನ್ನು ಆಯ್ದ ನಾಗರಿಕರು ಮಾತ್ರ ಪಡೆಯಲು ಅರ್ಹರಾಗಿದ್ದಾರೆ ಎಂದು ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಆರೋಪಿಸಿದ್ದಾರೆ

ಮುಂದೆ ಓದಿ ...
  • News18 Kannada
  • Last Updated :
  • Jammu and Kashmir, India
  • Share this:

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿನ (Jammu and Kashmir) ಪರಿಸ್ಥಿತಿಯ ಬಗ್ಗೆ ಭಾರತದ ಮುಖ್ಯ ನ್ಯಾಯಮೂರ್ತಿಗಳಿಗೆ ( Chief Justice of India) ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೆ ಮೆಹಬೂಬಾ ಮುಫ್ತಿ (People's Democratic Party president Mehbooba Mufti)  ಅವರು ಪತ್ರ ಬರೆದಿದ್ದಾರೆ. ಪತ್ರದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿನ ಪರಿಸ್ಥಿತಿಯನ್ನು ನ್ಯಾಯಾಂಗವು (Judiciary) ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾರೆ. ಕೇಂದ್ರಾಡಳಿತ ಪ್ರದೇಶದಲ್ಲಿರುವ (Union Territory) ಜನರನ್ನು ಕ್ರೌರ್ಯಕ್ಕೆ ಗುರಿಪಡಿಸಲಾಗುತ್ತಿದೆ ಮತ್ತು ಅವರ ಮೂಲಭೂತ ಹಕ್ಕುಗಳನ್ನು (Fundamental Rights) ಉಲ್ಲಂಘಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಅಲ್ಲದೇ ಪತ್ರದಲ್ಲಿರುವ ವಿಚಾರವನ್ನು ಮೆಹಬೂಬಾ ಮುಫ್ತಿ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಭಾರತೀಯ ಸಂವಿಧಾನದಲ್ಲಿ ( Indian constitution) ಪ್ರತಿಪಾದಿಸಲಾದ ಮತ್ತು ಎಲ್ಲಾ ಭಾರತೀಯ ನಾಗರಿಕರಿಗೆ ಖಾತರಿಪಡಿಸಿದ ಮೂಲಭೂತ ಹಕ್ಕುಗಳ ಮೇಲೆ ನಿರ್ಬಂಧ ಹೇರಲಾಗುತ್ತಿದೆ. ದುರದೃಷ್ಟವಶಾತ್, ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ವಿಚಾರಗಳಲ್ಲಿ ಸರ್ಕಾರದ ರೇಖೆಯನ್ನು ಅನುಸರಿಸುವ ಮೂಲಭೂತ ಹಕ್ಕುಗಳು ಈಗ ದುಬಾರಿಯಾಗಿದ್ದು, ಅವುಗಳನ್ನು ಆಯ್ದ ನಾಗರಿಕರು ಮಾತ್ರ ಪಡೆಯಲು ಅರ್ಹರಾಗಿದ್ದಾರೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.


2019 ರಿಂದ ಜಮ್ಮು ಮತ್ತು ಕಾಶ್ಮೀರ ನಿವಾಸಿಗಳ ಮೂಲಭೂತ ಹಕ್ಕುಗಳನ್ನು ನಿರಂಕುಶವಾಗಿ ಅಮಾನತುಗೊಳಿಸಲಾಗಿದೆ ಹಾಗೂ ಜಮ್ಮು- ಕಾಶ್ಮೀರಕ್ಕೆ ಬಂದ ಸಮಯದಲ್ಲಿ ನೀಡಲಾದ ಸಾಂವಿಧಾನಿಕ ಖಾತರಿಗಳನ್ನು ಹಠಾತ್ ಮತ್ತು ಅಸಾಂವಿಧಾನಿಕವಾಗಿ ರದ್ದುಗೊಳಿಸಲಾಯಿತು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.


Basic rights now luxuries: Mehbooba Mufti writes to CJI about Jammu and Kashmir
ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೆ ಮೆಹಬೂಬಾ ಮುಫ್ತಿ


ನನ್ನ ಮಗಳು, ತಾಯಿಯ ಪಾಸ್​ಪೋರ್ಟ್ ತಡೆಹಿಡಿಯಲಾಗಿದೆ


ಇಷ್ಟೇ ಅಲ್ಲದೇ ಸರ್ಕಾರ ನನ್ನ ಮಗಳು ಮತ್ತು ತಾಯಿಯ ಪಾಸ್​ಪೋರ್ಟ್​​​ಗಳನ್ನು ತಡೆಹಿಡಿದಿದೆ ಎಂದು ತಿಳಿಸಿದ್ದಾರೆ.ಸಾಮಾನ್ಯ ನಾಗರಿಕರು, ಪತ್ರಕರ್ತರು, ವಾಹಿನಿಯ ಮುಖ್ಯಸ್ಥರು, ರಾಜಕೀಯ ಕಾರ್ಯಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರ ಮೂಲಭೂತ ಹಕ್ಕುಗಳು ಮತ್ತು ಸ್ವಾತಂತ್ರ್ಯವನ್ನು ತುಳಿಯುವಂತಹ ದಬ್ಬಾಳಿಕೆಯ ಅನಿಯಂತ್ರಿತ ನಿರ್ಧಾರಗಳ ಭಾರವನ್ನು ಹೊತ್ತಿರುವ ಲೆಕ್ಕವಿಲ್ಲದಷ್ಟು ಉದಾಹರಣೆಗಳಿವೆ ಎಂದಿದ್ದಾರೆ.


ಭಾರತ ಮತ್ತು ಚೀನಾ ಉದ್ವಿಗ್ನತೆ ಬಗ್ಗೆ ಮುಫ್ತಿ ಕಿಡಿ


ಅಲ್ಲದೇ ಈ ತಿಂಗಳ ಆರಂಭದಲ್ಲಿ, ಅರುಣಾಚಲ ಪ್ರದೇಶದ ಗಡಿಯಲ್ಲಿ ಭಾರತ ಮತ್ತು ಚೀನಾ ನಡುವಿನ ಉದ್ವಿಗ್ನತೆಯ ಬಗ್ಗೆಯೂ ಪ್ರತಿಕ್ರಿಯಿಸಿದ ಮುಫ್ತಿ ಅವರು, ಇದೊಂದು ಅತ್ಯಂತ ವಿಷಾದನೀಯ ಸ್ಥಿತಿ. ಇದರ ಬಗ್ಗೆ ಬಿಜೆಪಿ ಏನನ್ನು ಮಾಡದೇ ಇರುವುದು ದುರದೃಷ್ಟಕರ ಎಂದು ಹೇಳಿದ್ದಾರೆ.


ಸಾಂದರ್ಭಿಕ ಚಿತ್ರ


ಲಡಾಕ್‌ನಲ್ಲಿ ನಮ್ಮ ಭೂಮಿಯನ್ನು ಚೀನಾದವರು ಆಕ್ರಮಿಸಿಕೊಂಡಿದ್ದಾರೆ. ಬಿಜೆಪಿ ಸಂಸದರೊಬ್ಬರು ನೀಡಿರುವ ಹೇಳಿಕೆಯಂತೆಯೇ ಅರುಣಾಚಲ ಪ್ರದೇಶದಲ್ಲಿಯೂ ಭೂಮಿಯನ್ನು ವಶಪಡಿಸಿಕೊಂಡಿದ್ದಾರೆ. ಆದರೆ, ದುರದೃಷ್ಟವಶಾತ್, ಬಿಜೆಪಿ ಈ ಬಗ್ಗೆ ಏನನ್ನೂ ಮಾಡುತ್ತಿಲ್ಲ ಎಂದು ಕಿಡಿಕಾರಿದ್ದಾರೆ.


ಇದನ್ನೂ ಓದಿ: The Kashmir Files: ಕಾಶ್ಮೀರ್ ಫೈಲ್ಸ್‌ ಅಸಭ್ಯ ಚಿತ್ರ ಎಂದ ನಾದವ್​​ ಲ್ಯಾಪಿಡ್​ಗೆ ನಿರ್ದೇಶಕ ಅಗ್ನಿಹೋತ್ರಿ ವಾರ್ನಿಂಗ್


ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಲು ಮುಫ್ತಿ ಒಪ್ಪಿಗೆ


ಇನ್ನೂ ಇತ್ತೀಚೆಗಷ್ಟೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನಡೆಸುತ್ತಇರುವ ಭಾರತ್​ ಜೋಡೋ ಯಾತ್ರೆಯಲ್ಲಿ ಭಾಗವಹಿಸಲು ಮೆಹಬೂಬಾ ಮುಫ್ತಿ  ಅವರು ಒಪ್ಪಿಕೊಂಡಿದ್ದಾರೆ. ರಾಹುಲ್ ಗಾಂಧಿ ನನ್ನನ್ನು ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಿದ್ದಾರೆ. ಫ್ಯಾಸಿಸ್ಟ್ ಶಕ್ತಿಗಳಿಗೆ ಸವಾಲು ಹಾಕುವ ಧೈರ್ಯವಿರುವ ಯಾರೊಂದಿಗಾದರೂ ನಿಲ್ಲುವುದು ನನ್ನ ಕರ್ತವ್ಯ ಎಂದು ನಾನು ಭಾವಿಸಿದ್ದೇನೆ. ಹಾಗಾಗಿ ಭಾರತ್ ಜೋಡೋ ಯಾತ್ರೆಗೆ ಜೊತೆಯಾಗುತ್ತೇನೆ. ಭಾರತದ ಪ್ರಗತಿಗಾಗಿ ಹೆಜ್ಜೆ ಇಡುತ್ತೇನೆ ಎಂದು ಟ್ವೀಟ್ ಮಾಡುವ ಮೂಲಕ ಸ್ಪಷ್ಟನೆ ನೀಡಿದರು.
ಕಾಶ್ಮೀರದಲ್ಲಿ ಅಲ್ಪಸಂಖ್ಯಾತರನ್ನು ರಕ್ಷಿಸುವಲ್ಲಿ ಬಿಜೆಪಿ ವಿಫಲ


ಈ ಮುನ್ನ ಅನಂತನಾಗ್​ ಜಿಲ್ಲೆಯ ಖಾಜಿಗುಂಡ್​ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಶ್ಮೀರದಲ್ಲಿರುವ ಅಲ್ಪಸಂಖ್ಯಾತ ಸಮುದಾಯವನ್ನು ರಕ್ಷಿಸುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ. ಅಲ್ಲದೇ ಕಾಶ್ಮೀರಿ ಪಂಡಿತರ ನೋವು, ಸಂಕಟವನ್ನು ಬಿಜೆ‍ಪಿ ತನ್ನ ಅನುಕೂಲಕ್ಕೆ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದರು.

Published by:Monika N
First published: