ಉತ್ತರಪ್ರದೇಶದಲ್ಲಿ ಪ್ರಕ್ಷುಬ್ಧ ವಾತಾವರಣಕ್ಕೆ ಕಾರಣವಾದ ಇವಿಎಂ ಯಂತ್ರಗಳ ರವಾನೆ ವದಂತಿ ; ಸಮಸ್ಯೆ ನಿವಾರಿಸಿದ ಆಯೋಗ

ಉತ್ತರಪ್ರದೇಶದ ಗಾಜಿಪುರ್, ಚಂದೌಲಿ, ದೊಮರಿಗಂಜ್ ಹಾಗೂ ಝಾನ್ಸಿ ಸೇರಿದಂತೆ ಅನೇಕ ಲೋಕಸಭಾ ಕ್ಷೇತ್ರದಲ್ಲಿ ಇವಿಎಂ ಯಂತ್ರಗಳನ್ನು ತಿದ್ದುಪಡಿ ಮಾಡಲಾಗುತ್ತಿದೆ. ಅಲ್ಲದೆ ಇವಿಎಂ ಯಂತ್ರಗಳನ್ನುಟ್ರಕ್ ಮೂಲಕ ಬೇರೆಡೆ ಸಾಗಿಸಿ ಸ್ಟ್ರಾಂಗ್​ ರೂಮ್​ನಲ್ಲಿ ನಕಲಿ ಯಂತ್ರಗಳನ್ನು ಜೋಡಿಸಿಡಲಾಗಿದೆ ಎಂಬ ವದಂತಿ ಹರಡಿದ್ದು ಪ್ರಕ್ಷುಬ್ಧ ವಾತಾವರಣಕ್ಕೆ ಕಾರಣವಾಗಿತ್ತು.

MAshok Kumar | news18
Updated:May 21, 2019, 1:46 PM IST
ಉತ್ತರಪ್ರದೇಶದಲ್ಲಿ ಪ್ರಕ್ಷುಬ್ಧ ವಾತಾವರಣಕ್ಕೆ ಕಾರಣವಾದ ಇವಿಎಂ ಯಂತ್ರಗಳ ರವಾನೆ ವದಂತಿ ; ಸಮಸ್ಯೆ ನಿವಾರಿಸಿದ ಆಯೋಗ
ಇವಿಎಂ ಕುರಿತ ವದಂತಿಗೆ ಕಾರಣವಾದ ಚಿತ್ರ.
  • News18
  • Last Updated: May 21, 2019, 1:46 PM IST
  • Share this:
ನವ ದೆಹಲಿ (ಮೇ.21): ಕಳೆದ ಹಲವು ವರ್ಷಗಳಿಂದಲೇ ಇವಿಎಂ ಯಂತ್ರಗಳ ವಿರುದ್ಧ ವಿರೋಧ ಪಕ್ಷಗಳು ನಿರಂತರವಾಗಿ ಅನುಮಾನ ವ್ಯಕ್ತಪಡಿಸುತ್ತಲೇ ಇವೆ. ಪಾರದರ್ಶಕ ಚುನಾವಣೆಗಾಗಿ ಇವಿಎಂ ಪ್ಯಾಟ್ ಯಂತ್ರಗಳನ್ನು ಪರಿಚಯಿಸಿದ್ದರೂ ಅನುಮಾನ ಮಾತ್ರ ತಣ್ಣಗಾಗುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಪರಿಣಾಮ ಇವಿಎಂ ಹ್ಯಾಕ್ ಮತ್ತು ಬೇರೆಡೆ ರವಾನೆ ಕುರಿತು ಉತ್ತರಪ್ರದೇಶದ ಹರಡಿದ ಸಣ್ಣ ವದಂತಿ ಇದೀಗ ದೊಡ್ಡ ಮಟ್ಟದ ಸಮಸ್ಯೆಗೆ ಕಾರಣವಾಗಿದೆ.

ಉತ್ತರಪ್ರದೇಶದ ಗಾಜಿಪುರ್, ಚಂದೌಲಿ, ದೊಮರಿಗಂಜ್ ಹಾಗೂ ಝಾನ್ಸಿ ಸೇರಿದಂತೆ ಅನೇಕ ಲೋಕಸಭಾ ಕ್ಷೇತ್ರದಲ್ಲಿ ಇವಿಎಂ ಯಂತ್ರಗಳನ್ನು ತಿದ್ದುಪಡಿ ಮಾಡಲಾಗುತ್ತಿದೆ. ಅಲ್ಲದೆ ಇವಿಎಂ ಯಂತ್ರಗಳನ್ನುಟ್ರಕ್ ಮೂಲಕ ಬೇರೆಡೆ ಸಾಗಿಸಿ ಸ್ಟ್ರಾಂಗ್​ ರೂಮ್​ನಲ್ಲಿ ನಕಲಿ ಯಂತ್ರಗಳನ್ನು ಜೋಡಿಸಿಡುವ ಹುನ್ನಾರ ನಡೆಯುತ್ತಿದೆ ಎಂದು ವದಂತಿ ಹಬ್ಬಿತ್ತು. ಪರಿಣಾಮ ಗಾಜಿಪುರ್ ಲೋಕಸಭಾ ಕ್ಷೇತ್ರದ ಉತ್ತರಪ್ರದೇಶದ ಸಮಾಜವಾದಿ ಅಭ್ಯರ್ಥಿ ಅಫ್ಜಲ್ ಅನ್ಸಾರಿ ತನ್ನ ಬೆಂಬಲಿಗರ ಜೊತೆಗೆ ಇವಿಎಂ ಯಂತ್ರಗಳ ಭದ್ರತಾ ಕೊಠಡಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದಾರೆ.

ಚಂದೌಲಿ ಲೋಕಸಭಾ ಕ್ಷೇತ್ರದಲ್ಲೂ ಇದೇ ರೀತಿಯ ಪ್ರತಿಭಟನೆಗಳು ನಡೆದಿದ್ದು ಎಸ್​ಪಿ-ಬಿಎಸ್​ಪಿ ಕಾರ್ಯಕರ್ತರು ಇವಿಎಂ ಯಂತ್ರಗಳಿರುವ ಸ್ಟ್ರಾಂಗ್​ ರೂಮ್​ಗೆ ಮುತ್ತಿಗೆ ಹಾಕಿದ್ದಾರೆ. ಪರಿಸ್ಥಿತಿ ಕೈ ಮೀರುವುದಕ್ಕೂ ಮುಂಚೆಯೇ ಸ್ಥಳಕ್ಕೆ ಆಗಮಿಸಿದ ಚುನಾವಣಾ ಆಯೋಗದ ಅಧಿಕಾರಿಗಳು ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಿದ್ದಾರೆ.

ಇದನ್ನೂ ಓದಿ : ಚುನಾವಣಾ ಸಮೀಕ್ಷೆ, ವದಂತಿಗಳಿಗೆ ಕಿವಿಗೊಡಬೇಡಿ; ಕಾರ್ಯಕರ್ತರಿಗೆ ಪ್ರಿಯಾಂಕ ಗಾಂಧಿ ಆಡಿಯೋ ಸಂದೇಶ

ಅಲ್ಲದೆ “ಇವಿಎಂ ಯಂತ್ರಗಳನ್ನು ತಿದ್ದುಪಡಿ ಮಾಡುವ ಅಥವಾ ಇತರೆಡೆ ಸ್ಥಳಾಂತರಿಸುವ ವದಂತಿಗಳಿಗೆ ಕಿವಿಗೊಡಬೇಡಿ” ಎಂದು ಪ್ರತಿಭಟನಾಕಾರರಿಗೆ ತಿಳಿಸಿರುವ ಚುನಾವಣಾ ಆಯೋಗದ ಅಧಿಕಾರಿಗಳು. ಲೋಕಸಭಾ ಅಭ್ಯರ್ಥಿಗಳಿಗೆ ಮತ್ತೊಮ್ಮೆ ಸ್ಟ್ರಾಂಗ್​ ರೂಮ್​ಗೆ ಪ್ರವೇಶ ಕಲ್ಪಿಸಿ ಎಲ್ಲಾ ಇವಿಎಂ ಯಂತ್ರಗಳನ್ನು ತೋರಿಸಿದ್ದಾರೆ. ಅಲ್ಲದೆ “ಎಲ್ಲೆಡೆ ಸಿಸಿ ಕ್ಯಾಮೆರಾ ಅಳವಡಿಸಿದ್ದು ಯಾವುದೇ ಅನುಮಾನ ಬೇಡ” ಎಂದು ಮನವೋಲಿಸಿದ್ದಾರೆ ಎಂದು ತಿಳಿದುಬಂದಿದೆ.

ಪಿಎಲ್​ಐ ವಜಾ ಮಾಡಿದ ಸುಪ್ರೀಂ : ಚುನಾವಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ಸಲುವಾಗಿ ಈ ಬಾರಿ ಇವಿಎಂ ಯಂತ್ರಗಳ ಜೊತೆಗೆ ಮತದಾರರು ಯಾವ ಅಭ್ಯರ್ಥಿಗೆ ಮತ ಚಲಾಯಿಸಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ವಿವಿ ಪ್ಯಾಟ್ ಮೆಷಿನ್ ಪರಿಚಯಿಸಲಾಯಿತು.

ಆದರೆ, ಫಲಿತಾಂಶದ ವೇಳೆ ಇವಿಎಂನಲ್ಲಿ ದಾಖಲಾಗಿರುವ ಮತಗಳನ್ನು ಮಾತ್ರ ಎಣಿಸಲಾಗುತ್ತದೆ. ವಿವಿ ಪ್ಯಾಟ್​ನಲ್ಲಿ ದಾಖಲಾಗಿರುವ ಬ್ಯಾಲೆಟಿನ್​ ಪೇಪರ್​ಗಳ ಜೊತೆ ತಾಳೆ ಹಾಕುವ ಪದ್ಧತಿ ಇಲ್ಲ. ಹೀಗಾಗಿ ವಿರೋಧ ಪಕ್ಷಗಳ ಆಯೋಗ ಕಳೆದ ತಿಂಗಳು ಇವಿಎಂ ಹಾಗೂ ವಿವಿ ಪ್ಯಾಟ್​ ತಾಳೆ ಹಾಕಿ ಫಲಿತಾಂಶ ಘೋಷಿಸಬೇಕು ಎಂದು ಒತ್ತಾಯಿಸಿ ಸುಪ್ರೀಂ ಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿತ್ತು. ಆದರೆ, ಈ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿತ್ತು.ಇದನ್ನೂ ಓದಿ : ಮುಲಾಯಂ, ಅಖಿಲೇಶ್​ಗೆ ಬಿಗ್​ ರಿಲೀಫ್​; ಅಕ್ರಮ ಆಸ್ತಿ ಪ್ರಕರಣ, ಕ್ಲೀನ್​ ಚಿಟ್​ ನೀಡಿದ ಸಿಬಿಐ

ಇದೀಗ ಎರಡೂ ಯಂತ್ರಗಳನ್ನು ತಾಳೆ ಹಾಕಬೇಕು ಎಂದು ಒತ್ತಾಯಿಸಿ ಮತ್ತೊಂದು ಸಾರ್ವಜನಿಕ ಹಿತಾಸಕ್ತಿಯನ್ನು ಅರ್ಜಿಯೊಂದನ್ನು ಸುಪ್ರೀಂ ಕೋರ್ಟ್​ಗೆ ಸಲ್ಲಿಸಲಾಗಿದೆ. ಈ ಕುರಿತು ಗರಂ ಆಗಿರುವ ಸುಪ್ರೀಂ, “ಇಂತಹ ಅಪ್ರಬುದ್ಧ ಅರ್ಜಿಗಳನ್ನು ಮತ್ತೆ ಮತ್ತೆ ವಿಚಾರಣೆ ನಡೆಸಲು ಸಾಧ್ಯವಿಲ್ಲ. ಮತದಾರರು ಯಾರಿಗೆ ಮತ ಹಾಕಿರುತ್ತಾರೆಯೋ ಅವರೆ ಆಯ್ಕೆಯಾಗುತ್ತಾರೆ” ಎಂದು ಖಾರವಾಗಿ ಪ್ರತಿಕ್ರಿಯಿಸಿದೆ.

First published:May 21, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading