ಬಿಜೆಪಿಯನ್ನು ಗೆಲ್ಲಿಸಿ ನಿಮ್ಮ ಅಸ್ತಿತ್ವ ಉಳಿಸಿಕೊಳ್ಳಿ; ಸಿದ್ದರಾಮಯ್ಯಗೆ ಯತ್ನಾಳ್​ ಸಲಹೆ

ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿರುವವರೆಗೂ ಸಿದ್ದರಾಮಯ್ಯ ವಿಪಕ್ಷ ನಾಯಕರಾಗಿರಲಿದ್ದಾರೆ. ಇದರಿಂದಾಗಿ ರಾಜಕೀಯದಲ್ಲಿ ಅವರ ಅಸ್ತಿತ್ವಮುಂದುವರೆಯಲಿದೆ. ಒಂದು ವೇಳೆ ಬಿಜೆಪಿ ಸರ್ಕಾರ ಹೋದರೆ ಸಿದ್ದರಾಮಯ್ಯ ಕೂಡ ಅಧಿಕಾರದಿಂದ ಕೆಳಗಿಳಿದು, ಕಾಂಗ್ರೆಸ್​​ ಪಕ್ಷದಲ್ಲಿ ಮೂಲೆಗುಂಪಾಗಲಿದ್ದಾರೆ. ಈಗಾಗಲೇ ಅವರನ್ನು ಬದಿಗೊತ್ತುವ ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ

Seema.R | news18-kannada
Updated:December 3, 2019, 3:29 PM IST
ಬಿಜೆಪಿಯನ್ನು ಗೆಲ್ಲಿಸಿ ನಿಮ್ಮ ಅಸ್ತಿತ್ವ ಉಳಿಸಿಕೊಳ್ಳಿ; ಸಿದ್ದರಾಮಯ್ಯಗೆ ಯತ್ನಾಳ್​ ಸಲಹೆ
ಬಸವನಗೌಡ ರಾ. ಪಾಟೀಲ ಯತ್ನಾಳ
  • Share this:
ವಿಜಯಪುರ (ಡಿ.03): ಸಿದ್ದರಾಮಯ್ಯ ಅಸ್ತಿತ್ವ ಉಳಿಯಬೇಕೇಂದ್ರೆ ಬಿಜೆಪಿಯನ್ನು ಗೆಲ್ಲಿಸಬೇಕು. ಇಲ್ಲವಾದರೆ ಕಾಂಗ್ರೆಸ್​ನಲ್ಲಿ ಅವರಿಗೆ ಭವಿಷ್ಯವಿಲ್ಲದಂತೆ ಆಗುತ್ತದೆ ಎಂದು ಬಿಜೆಪಿ ನಾಯಕ ಬಸನಗೌಡ ಪಾಟೀಲ್​ ಯತ್ನಾಳ್​ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಸಲಹೆ ನೀಡಿದ್ದಾರೆ. 

ಅಥಣಿ ಕ್ಷೇತ್ರದ ದರೂರಿನಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅವರು, ಸಿದ್ದರಾಮಯ್ಯ ವಿರುದ್ಧ ಈಗಾಗಲೇ ಪಕ್ಷದಲ್ಲಿ ದೊಡ್ಡ ಸಂಚು ನಡೆದಿದೆ. ಸಿದ್ದರಾಮಯ್ಯ ಅವರನ್ನು ಹೊರಗಿಟ್ಟು ಸರ್ಕಾರ ರಚನೆ ಮಾಡುವ ಯತ್ನವನ್ನು ಪಕ್ಷದಲ್ಲಿ ನಡೆಸಲಾಗಿದೆ ಎಂದು ಆರೋಪಿಸಿದರು.

ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿರುವವರೆಗೂ ಸಿದ್ದರಾಮಯ್ಯ ವಿಪಕ್ಷ ನಾಯಕರಾಗಿರಲಿದ್ದಾರೆ. ಇದರಿಂದಾಗಿ ರಾಜಕೀಯದಲ್ಲಿ ಅವರ ಅಸ್ತಿತ್ವಮುಂದುವರೆಯಲಿದೆ. ಒಂದು ವೇಳೆ ಬಿಜೆಪಿ ಸರ್ಕಾರ ಹೋದರೆ ಸಿದ್ದರಾಮಯ್ಯ ಕೂಡ ಅಧಿಕಾರದಿಂದ ಕೆಳಗಿಳಿದು, ಕಾಂಗ್ರೆಸ್​​ ಪಕ್ಷದಲ್ಲಿ ಮೂಲೆಗುಂಪಾಗಲಿದ್ದಾರೆ. ಈಗಾಗಲೇ ಅವರನ್ನು ಬದಿಗೊತ್ತುವ ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ ಎಂದರು.

 

ಲಕ್ಷ್ಮೀ ಹೆಬ್ಬಾಳ್ಕರ್​ ಡ್ಯಾಶ್​ ಡ್ಯಾಶ್​ ಮಾತಿಗೆ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂಬ ಮಾತಿಗೆ ಪ್ರತಿಕ್ರಿಯಿಸಿದ ಅವರು ಫ್ರೌಡಿಮೆ ಬಂದಿದೆ. ಈ ಹಿನ್ನೆಲೆಯಲ್ಲಿ ಮೌನವನ್ನು ಕಾಯ್ದುಕೊಳ್ಳುತ್ತಿದ್ದಾರೆ ಎಂದರು.

ಇದನ್ನು ಓದಿ: ಡಿ.9ಕ್ಕೆ ಸಿಎಂ ಯಡಿಯೂರಪ್ಪ ರಾಜೀನಾಮೆ ನೀಡುತ್ತಾರೆ; ಮತ್ತೆ ಕಾಂಗ್ರೆಸ್​ ಸರ್ಕಾರ ಬರಲಿದೆ; ಸಿದ್ದರಾಮಯ್ಯ

ಬಿಜೆಪಿ ಹತ್ತು ಸೀಟು ಬರುವುದಿಲ್ಲ ಎಂದು ಜೆಡಿಎಸ್​ ಬೆಂಬಲಿಸಲು ಮುಂದಾಗಿದೆ. ಆದರೆ ನಮಗೆ ಜೆಡಿಎಸ್​ನ ಸಹಾಯ ಬೇಡ. ನಾವು ಏಕಾಂಗಿಯಾಗಿ ಸಮರ್ಥವಾಗಿ ಚುನಾವಣೆ ಗೆಲ್ಲುತ್ತೇವೆ ಎಂದರು.
Loading...

 
First published:December 3, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...