Delhi: ಬೆಳಗಿನ ಜಾವ 3 ಗಂಟೆಯ ತನಕ ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟ ದೆಹಲಿ ಸರ್ಕಾರ

ಇಡೀ ಪ್ರಪಂಚದಲ್ಲೇ ಅತ್ಯಂತ ಹೆಚ್ಚು ಜನರು ಭೇಟಿ ನೀಡುವ ನಗರಗಳಲ್ಲಿ ದೆಹಲಿಗೆ 28ನೇ ಸ್ಥಾನವಿದ್ದು, ಇಡೀ ಭಾರತದಲ್ಲಿ ಮೊದಲನೇ ಸ್ಥಾನದಲ್ಲಇದೆ. ಹೆಚ್ಚಿನ ಸಂಖ್ಯೆಯ ವಿದೇಶಿಗರು ಭೇಟಿ ನೀಡುವುದು ಸಹ ರಾಷ್ಟ್ರ ರಾಜಧಾನಿ ದೆಹಲಿಗೆ ಆದ ಕಾರಣ ವಿದೇಶಿಗರನ್ನು ಗಮನದಲ್ಲಿ ಇಟ್ಟುಕೊಂಡು ಹಾಗೂ ಆದಾಯವನ್ನು ಹೆಚ್ಚಿಸುವ ಸಲುವಾಗಿ ಈ ಹೊಸಾ ನೀತಿ ಪ್ರಕಟಿಸಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ನವದೆಹಲಿ:​​ ಸರ್ಕಾರದ ಆದಾಯ ಹಾಗೂ  ಮೈಕ್ರೋ ಬೇವರಿಜ್​ಗಳನ್ನು ಉತ್ತೇಜಿಸುವ ಸಲುವಾಗಿ ದೆಹಲಿ ಸರ್ಕಾರ  ಹೋಟೆಲ್​ಗಳು, ಕ್ಲಬ್​ಗಳು, ಹಾಗೂ ರೆಸ್ಟೋರೆಂಟ್​ಗಳಲ್ಲಿ ಬೆಳಗಿನ ಜಾವ 3 ಗಂಟಯ ತನಕ ಮಧ್ಯ ಮಾರಾಟಕ್ಕೆ ಅವಕಾಶ ನೀಡಿದೆ.

  ಇದೆಲ್ಲದಕ್ಕಿಂತ ಹೆಚ್ಚಿನ ಗಮನವನ್ನು ಮದ್ಯ ಮಾಫಿಯಾವನ್ನು ತಡೆಗಟ್ಟುವ ಉದ್ದೇಶದಿಂದಾಗಿ 2021-20221ರ ಹೊಸ ಅಬಕಾರಿ ನೀತಿಯನ್ನು ಪ್ರಕಟಿಸಿದೆ.

  ಇಡೀ ಪ್ರಪಂಚದಲ್ಲೇ ಅತ್ಯಂತ ಹೆಚ್ಚು ಜನರು ಭೇಟಿ ನೀಡುವ ನಗರಗಳಲ್ಲಿ ದೆಹಲಿಗೆ 28ನೇ ಸ್ಥಾನವಿದ್ದು, ಇಡೀ ಭಾರತದಲ್ಲಿ ಮೊದಲನೇ ಸ್ಥಾನದಲ್ಲಇದೆ. ಹೆಚ್ಚಿನ ಸಂಖ್ಯೆಯ ವಿದೇಶಿಗರು ಭೇಟಿ ನೀಡುವುದು ಸಹ ರಾಷ್ಟ್ರ ರಾಜಧಾನಿ ದೆಹಲಿಗೆ ಆದ ಕಾರಣ ವಿದೇಶಿಗರನ್ನು ಗಮನದಲ್ಲಿ ಇಟ್ಟುಕೊಂಡು ಹಾಗೂ ಆದಾಯವನ್ನು ಹೆಚ್ಚಿಸುವ ಸಲುವಾಗಿ ಈ ಹೊಸಾ ನೀತಿ ಪ್ರಕಟಿಸಲಾಗಿದೆ.

  ರಾಷ್ಟ್ರ ರಾಜಧಾನಿಯಲ್ಲಿ ಮದ್ಯದಂಗಡಿ ಪರವಾನಗಿ ಪಡೆದ ಪರವಾನಗಿದಾರರು ಹೋಟೆಲ್, ಕ್ಲಬ್ ಮತ್ತು ರೆಸ್ಟೋರೆಂಟ್​ಗಳು ಮಾತ್ರ ಈ ರೀತಿ ಕಾರ್ಯನಿರ್ವಹಿಸಬಹುದಾಗಿದೆ.

  ದೆಹಲಿ ಸರ್ಕಾರವು ನಗರದಲ್ಲಿ ವಿಂಗಡಿಸಿರುವ 32 ವಲಯಗಳಲ್ಲಿ ಎಲ್-7ವಿ(ಭಾರತೀಯ ಮತ್ತು ವಿದೇಶಿ ಮದ್ಯ)ಪರವಾನಗಿಗಳಿಗೆ ಟೆಂಡರ್ ನೀಡಿದೆ. ಜೊತೆಗೆ ಮದ್ಯವನ್ನು ಡೋರ್ ಡೆಲಿವರಿ ಕೂಡ ಒದಗಿಸಲಾಗುತ್ತಿದ್ದು, ಈ ಕುರಿತ ಮಾಹಿತಿ ವೆಬ್‍ಸೈಟ್‍ಗಳಲ್ಲಿ ಸಿಗಲಿದೆ.

  ಅಬಕಾರಿಯ ಈ ಹೊಸ ನೀತಿಯನ್ನು ಜನರಿಗಾಗಿ ಜಾರಿಗೊಳಿಸಲಾಗಿದ್ದು, ಎಲ್-7ವಿ(ಭಾರತೀಯ ಮತ್ತು ವಿದೇಶಿ ಮದ್ಯ) ರೂಪದಲ್ಲಿ ಚಿಲ್ಲರೆ ಮಾರಾಟವನ್ನು ಯಾವುದೇ ಮಾರುಕಟ್ಟೆ, ಮಾಲ್, ಕಮರ್ಷಿಯಲ್ ರೋಡ್ ಮತ್ತು ಏರಿಯಾ, ಸ್ಥಳೀಯ ಶಾಪಿಂಗ್ ಕಾಂಪ್ಲೆಕ್ಸ್ ಮತ್ತು ಇನ್ನಿತರ ರಸ್ತೆಗಳಲ್ಲಿ ತೆರೆಯಬಹುದಾಗಿದೆ.

  ಈ ಹೊಸಾ ನೀತಿಯಲ್ಲಿ ಮನೆ, ಮನೆಗೆ ಮದ್ಯವನ್ನು ತಲುಪಿಸುವ ಪ್ರಸ್ತಾವನೆಯನ್ನು ಕೈ ಬಿಡಲಾಗಿದೆ. ಹದಿಹರೆಯದವರು ಇದರಿಂದ ಹೆಚ್ಚು ಪ್ರಭಾವಕ್ಕೆ ಒಳಗಾವುದರಿಂದ ಈ ಅಂಶಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿಲ್ಲ. ಅಲ್ಲದೇ ನೆರೆಯ ರಾಜ್ಯಗಳಲ್ಲಿ ಇರುವಂತೆ  ಮದ್ಯ ಖರೀದಿಗೆ ಇರುವ  ವಯಸ್ಸಿನ ಮಿತಿಯನ್ನು 25 ರಿಂದ 21 ಕ್ಕೆ ಇಳಿಸಬೆಕು ಎನ್ನುವ ಪ್ರಸ್ತಾವನೆಯೂ ಸಹ ತಿರಸ್ಕರಿಸಲ್ಪಟ್ಟಿದೆ.

  ಹೊಸಾ ನೀತಿಯ ಪ್ರಕಾರ ಗ್ರಾಹಕರಿಗೆ ಮದ್ಯದಂಗಡಿಯವರು ಎಲ್ಲಾ ರೀತಿಯ ಬ್ರಾಂಡ್​ ಪ್ರದರ್ಶಿಸುವ ವ್ಯವಸ್ಥೆ ಮಾಡಬೇಕು.  ಹವಾನಿಯಂತ್ರಿತ ಗಾಜಿನ ಬಾಗಿಲು ಇರಬೇಕು. ಕೌಂಟರ್​ನಲ್ಲಿ ನಿಂತು ಹಾಗೂ ಚಿಲ್ಲರೆಯಾಗಿ ಮಧ್ಯ ಖರೀದಿ ಮಾಡಲು ಅವಕಾಶ ಇರುವುದಿಲ್ಲ. ಗ್ರಾಹಕನಿಗೆ ಸಂಪೂರ್ಣ ಆಯ್ಕೆ ನೀಡಬೇಕು ಎಂದೂ ಸಹ ತಿಳಿಸಿದೆ.

  ಹೊಸಾ ನೀತಿಯ ಪ್ರಕಾರ ಡ್ರಾಟ್​ ಬಿಯರ್​ ಸಹ ಈಗ ಎಲ್ಲಾ ಕಡೆ ದೊರೆಯುತ್ತದೆ ಅಲ್ಲದೆ ಅದನ್ನು ಸ್ವಂತ ಬಾಟಲಿಗಳಿಗೆ ತುಂಬಿಕೊಂಡು ಹೋಗಬಹುದು. ಮಧ್ಯ ಸೇವಿಸಲು ಅವಕಾಶ ಇರುವ ರೆಸ್ಟೋರೆಂಟ್​ಗಳಲ್ಲಿ ಸಹ ಮೈಕ್ರೋ ಬೇವರಿಜ್​ಗಳನ್ನು ಪೂರೈಸಲು ಅವಕಾಶ ಮಾಡಿಕೊಡಲಾಗಿದೆ. ಒಟ್ಟಿನಲ್ಲಿ ಈ ಹೊಸಾ ನೀತಿ ಗ್ರಾಹನ ಸ್ನೇಹಿಯಾಗಿದೆ ಎಂದು ಹೇಳಬಹುದು.

  ಇದನ್ನೂ ಓದಿ: Thawar chand: ಸಾಹಿತ್ಯಾಸಕ್ತಿ, ವಿದ್ಯಾರ್ಥಿ ದೆಸೆಯಿಂದಲೇ ಆರ್​ಎಸ್​ಎಸ್​ ನಂಟು: ಇಲ್ಲಿದೆ ತಾವರ್​ ಚಂದ್​ ಅವರ ಕಿರು ಪರಿಚಯ

  ಎಲ್​- 38 ಎನ್ನುವ ನೂತನ ಪರವಾನಿಗೆಯನ್ನು ಪರಿಚಯಿಸಿದ್ದು ಬಾಂಕ್ವೆಟ್​ ಹಾಲ್​, ಪಾರ್ಟಿ, ಹಾಲ್​, ಫಾರ್ಮ್​ ಹೌಸ್​, ಮೋಟೆಲ್​ ಹಾಗೂ ಇನ್ನಿತರೇ ಸ್ಥಳಗಳಲ್ಲಿ ಭಾರತೀಯ ಹಾಗೂ ವಿದೇಶಿ ಮದ್ಯ ಪೂರೈಸಲು ಅವಕಾಶ ನೀಡಲಾಗಿದೆ. ಇದಕ್ಕೆ ವರ್ಷಕ್ಕೆ ಇಂತಿಷ್ಟು ಹಣ ಪಾವತಿಸಿ ಪರವಾನಿಗಿ ಪಡೆಯಬೇಕು ಎಂದು ಸಹ ತಿಳಿಸಿದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: