ಗೌಪ್ಯ ಮಾಹಿತಿ ಸೋರಿಕೆ ಮಾಡಿ ತಪ್ಪಾಗಿ ಬಿಂಬಿಸಿದ್ದಕ್ಕೆ ರಿಪಬ್ಲಿಕ್ ಟಿವಿ ವಿರುದ್ಧ BARC ಆಕ್ರೋಶ

ಇಮೇಲ್ ಉಲ್ಲೇಖಿಸಿ ರಿಪಬ್ಲಿಕ್ ಟಿವಿ ಮುಂಬೈ ಪೊಲೀಸ್ ಆಯುಕ್ತರ ಆರೋಪವನ್ನು ಅಲ್ಲಗಳೆದ ಬೆನ್ನಲ್ಲೇ BARC ಅಸಮಾಧಾನಗೊಂಡಿದೆ. ರಿಪಬ್ಲಿಕ್ ಟಿವಿ ಗೌಪ್ಯ ಮಾಹಿತಿಯನ್ನು ತಪ್ಪಾಗಿ ಬಿಂಬಿಸಿದೆ ಎಂದು ಬಾರ್ಕ್ ದೂರಿದೆ.

news18
Updated:October 18, 2020, 8:21 PM IST
ಗೌಪ್ಯ ಮಾಹಿತಿ ಸೋರಿಕೆ ಮಾಡಿ ತಪ್ಪಾಗಿ ಬಿಂಬಿಸಿದ್ದಕ್ಕೆ ರಿಪಬ್ಲಿಕ್ ಟಿವಿ ವಿರುದ್ಧ BARC ಆಕ್ರೋಶ
ಸಾಂದರ್ಭಿಕ ಚಿತ್ರ
  • News18
  • Last Updated: October 18, 2020, 8:21 PM IST
  • Share this:
ನವದೆಹಲಿ(ಅ. 18): ಟಿವಿ ವಾಹಿನಿಗಳಿಗೆ ರೇಟಿಂಗ್ ನೀಡುವ ಬಾರ್ಕ್ ಇಂಡಿಯಾ ಸಂಸ್ಥೆ ರಿಪಬ್ಲಿಕ್ ವಾಹಿನಿ ವಿರುದ್ಧ ಗರಂ ಆಗಿದೆ. ರಿಪಬ್ಲಿಕ್ ನೆಟ್ವರ್ಕ್ ಗೌಪ್ಯ ವಿಚಾರವನ್ನು ಬಹಿರಂಗಪಡಿಸಿದ್ದಲ್ಲದೆ, ಅದನ್ನು ತಪ್ಪಾಗಿ ಬಿಂಬಿಸಿದೆ ಎಂಬುದು ಬ್ರಾಡ್​ಕ್ಯಾಸ್ಟ್ ಆಡಿಯನ್ಸ್ ರೀಸರ್ಚ್ ಕೌನ್ಸಿಲ್ (BARC) ಸಂಸ್ಥೆಯ ಆರೋಪ. ಇಂದು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಬಾರ್ಕ್ ಸಂಸ್ಥೆ ತಾನು ಈಗ ನಡೆಯುತ್ತಿರುವ ತನಿಖೆ ವಿಚಾರದಲ್ಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ತನಿಖಾ ಸಂಸ್ಥೆಗೆ ಅಗತ್ಯವಾದ ನೆರವು ಒದಗಿಸುತ್ತಿರುವುದಾಗಿ ಸ್ಪಷ್ಟಪಡಿಸಿದೆ.

“ಖಾಸಗಿಯಾಗಿ ಹೇಳಿದ ಮತ್ತು ಗೌಪ್ಯವಾಗಿರಬೇಕಾದ ಮಾಹಿತಿಯನ್ನು ರಿಪಬ್ಲಿಕ್ ನೆಟ್ವರ್ಕ್ ಬಹಿರಂಗಪಡಿಸುತ್ತಿದೆ. ಆ ಮಾಹಿತಿಯನ್ನು ತಪ್ಪಾಗಿ ಬಿಂಬಿಸುತ್ತಿದೆ. ಇದರಿಂದ ಬಾರ್ಕ್ ಇಂಡಿಯಾ ಸಂಸ್ಥೆಗೆ ಬಹಳ ನಿರಾಸೆಯಾಗಿದೆ. ಈಗ ನಡೆಯುತ್ತಿರುವ ತನಿಖೆಯ ವಿಚಾರದಲ್ಲಿ ಬಾರ್ಕ್ ಇಂಡಿಯಾ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ರಿಪಬ್ಲಿಕ್ ನೆಟ್​ವರ್ಕ್​ನ ವರ್ತನೆಯಿಂದ ಬಾರ್ಕ್ ಇಂಡಿಯಾ ಬೇಸರಗೊಂಡಿದೆ” ಎಂದು ಸಂಸ್ಥೆಯ ಹೇಳಿಕೆಯಲ್ಲಿ ದೂರಲಾಗಿದೆ.

ಇದನ್ನೂ ಓದಿ: ಕೊರೋನಾ ಸಮುದಾಯಿಕವಾಗಿ ಹರಡಿರುವುದನ್ನು ಕೊನೆಗೂ ಒಪ್ಪಿಕೊಂಡ ಕೇಂದ್ರ ಸರ್ಕಾರ

ಮುಂಬೈನಲ್ಲಿ ಕೆಲ ವಾಹಿನಿಗಳು ಟಿಆರ್​ಪಿ ವ್ಯವಸ್ಥೆಯನ್ನು ದುರುಪಯೋಗಿಸಿಕೊಳ್ಳುತ್ತಿವೆ ಎಂದು ಆರೋಪಿಸಿ ಬಾರ್ಕ್ ಇಂಡಿಯಾ ಸಂಸ್ಥೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು. ಮುಂಬೈ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಅವರು ಈ ವಿಚಾರದ ಬಗ್ಗೆ ಮಾತನಾಡಿ, ರಿಪಬ್ಲಿಕ್ ಟಿವಿ ಒಳಗೊಂಡಂತೆ ಮೂರು ವಾಹಿನಿಗಳಿಂದ ಟಿಆರ್​ಪಿ ಗೋಲ್ಮಾಲ್ ಆಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಅದೇ ದಿನ ರಿಪಬ್ಲಿಕ್ ಟಿವಿ ಮುಂಬೈ ಪೊಲೀಸ್ ಕಮಿಷನರ್ ಹೇಳಿಕೆಯನ್ನು ತಳ್ಳಿ ಹಾಕಿತ್ತು. ತನ್ನ ವಾಹಿನಿ ವಿರುದ್ಧ ದೂರು ನೀಡಿಲ್ಲ. ಬೇರೆ ರಾಷ್ಟ್ರೀಯ ವಾಹಿನಿ ವಿರುದ್ಧ ಬಾರ್ಕ್ ಇಂಡಿಯಾ ದೂರು ನೀಡಿದೆ ಎಂದು ಹೇಳಿ ಆ ಸಂಸ್ಥೆಯ ಇಮೇಲ್ ಕಮ್ಯೂನಿಕೇಶ್ ಉಲ್ಲೇಖಿಸಿ ರಿಪಬ್ಲಿಕ್ ಟಿವಿ ಪ್ರತ್ಯಾರೋಪ ಮಾಡಿತ್ತು. ಈ ಬೆಳವಣಿಗೆ ಬಗ್ಗೆ ಈಗ ಬಾರ್ಕ್ ಪ್ರತಿಕ್ರಿಯಿಸಿ, ಗೌಪ್ಯ ಮಾಹಿತಿಯನ್ನು ತಪ್ಪಾಗಿ ಬಹಿರಂಗಪಡಿಸಿದ್ದಕ್ಕೆ ರಿಪಬ್ಲಿಕ್ ಟಿವಿ ಮೇಲೆ ಅಸಂತುಷ್ಟಿ ವ್ಯಕ್ತಪಡಿಸಿದೆ.
Published by: Vijayasarthy SN
First published: October 18, 2020, 8:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading