ನ್ಯೂಸ್ ಚಾನಲ್​ಗಳ ಟಿಆರ್​ಪಿ ರೇಟಿಂಗ್ ಮೂರು ತಿಂಗಳ ಕಾಲ ಸ್ಥಗಿತ

ಮೂರು ತಿಂಗಳ ಕಾಲ ಟಿವಿ ನ್ಯೂಸ್ ಚಾನೆಲ್​ಗಳಿಗೆ ಟಿಆರ್​ಪಿ ನೀಡದಿರಲು ಬಾರ್ಕ್ ಸಂಸ್ಥೆ ನಿರ್ಧರಿಸಿದೆ. ಈ ಅವಧಿಯಲ್ಲಿ ತನ್ನ ಟಿಆರ್​ಪಿ ವ್ಯವಸ್ಥೆಯ ಲೋಪ ಸರಿಪಡಿಸಲು ನಿಶ್ಚಯಿಸಿದೆ. ಆದರೆ, ಬೇರೆ ವಿಭಾಗದ ಟಿವಿ ವಾಹಿನಿಗಳ ಟಿಆರ್​ಪಿ ಮುಂದುವರಿಯಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • News18
 • Last Updated :
 • Share this:
  ನವದೆಹಲಿ(ಅ. 15): ಇತ್ತೀಚೆಗೆ ಮುಂಬೈನಲ್ಲಿ ಟಿಆರ್​ಪಿ ಗೋಲ್ಮಾಲ್ ಬೆಳಕಿಗೆ ಬಂದ ಬೆನ್ನಲ್ಲೇ ಬಾರ್ಕ್ ಸಂಸ್ಥೆ ಎಲ್ಲಾ ಸುದ್ದಿ ವಾಹಿನಿಗಳ ಟಿಆರ್​ಪಿಯನ್ನು ಮೂರು ತಿಂಗಳ ಕಾಲ ಸ್ಥಗಿತಗೊಳಿಸಲು ನಿರ್ಧರಿಸಿದೆ. ಆದರೆ, ರಾಜ್ಯವಾರು ಮತ್ತು ಭಾಷಾವಾರು ನ್ಯೂಸ್ ವಿಭಾಗಕ್ಕೆ ಬರುವ ವೀಕ್ಷಕರ ಸಂಖ್ಯೆಯನ್ನು ನೀಡುವ ಕಾರ್ಯ ಮುಂದುವರಿಯುತ್ತದೆ ಎಂದು ಬ್ರಾಡ್​ಕ್ಯಾಸ್ಟ್ ಆಡಿಯನ್ಸ್ ರೀಸರ್ಚ್ ಕೌನ್ಸಿಲ್ (ಬಾರ್ಕ್) ಸ್ಪಷ್ಟಪಡಿಸಿದೆ. ಅಂದರೆ, ಒಂದು ನ್ಯೂಸ್ ಚಾನೆಲ್​ಗೆ ಪ್ರತ್ಯೇಕವಾಗಿ ಟಿಆರ್​ಪಿ ರೇಟಿಂಗ್ ಮಾಹಿತಿ ಇರುವುದಿಲ್ಲ. ಈ ಮೂರು ತಿಂಗಳಲ್ಲಿ ಟಿಆರ್​ಪಿ ವ್ಯವಸ್ಥೆಯನ್ನ ಮರುಪರಿಶೀಲಿಸಿ ಲೋಪಸರಿಪಡಿಸುವ ಕೆಲಸ ಮಾಡಲಾಗುತ್ತದೆ ಎಂದು ಆ ಸಂಸ್ಥೆ ಹೇಳಿದೆ. ಸುದ್ದಿ ಬಿಟ್ಟು ಬೇರೆ ಎಂಟರ್​ಟೈನ್ಮೆಂಟ್, ಸ್ಪೋರ್ಟ್ಸ್​ನಂಥ ಬೇರೆ ವಿಭಾಗಗಳ ವಾಹಿನಿಗಳ ಟಿಆರ್​ಪಿ ಯಥಾಪ್ರಕಾರ ಮುಂದುವರಿಯಲಿದೆ. ಸುದ್ದಿ ಬಿಟ್ಟು ಬೇರೆ ಎಂಟರ್​ಟೈನ್ಮೆಂಟ್, ಸ್ಪೋರ್ಟ್ಸ್​ನಂಥ ಬೇರೆ ವಿಭಾಗಗಳ ವಾಹಿನಿಗಳ ಟಿಆರ್​ಪಿ ಯಥಾಪ್ರಕಾರ ಮುಂದುವರಿಯಲಿದೆ.

  ಸುದ್ದಿವಾಹಿನಿಗಳ ಟಿಆರ್​ಪಿಯನ್ನು 3 ತಿಂಗಳು ನಿಲ್ಲಿಸುವ ಬಾರ್ಕ್ ಸಂಸ್ಥೆಯ ನಿರ್ಧಾರವನ್ನು ನ್ಯೂಸ್ ಬ್ರಾಡ್​ಕ್ಯಾಸ್ಟರ್ಸ್ ಅಸೋಷಿಯೇಶನ್ (ಎನ್​ಬಿಎ) ಸ್ವಾಗತಿಸಿದೆ. ಟಿವಿ ರೇಟಿಂಗ್​ನ ಮಾಹಿತಿ ಪಡೆಯುವ ವ್ಯವಸ್ಥೆಯನ್ನು ಸರಿಪಡಿಸಲು ಈ 12 ವಾರಗಳನ್ನ ಬಾರ್ಕ್ ಉಪಯೋಗಿಸಬೇಕು ಎಂದು ಎನ್​ಬಿಎ ಕೂಡ ಸಲಹೆ ನೀಡಿದೆ.

  ಇದನ್ನೂ ಓದಿ: Watch Video: ಟ್ರಾಫಿಕ್​ನಲ್ಲಿ ಕಾರನ್ನು ನಿಲ್ಲಿಸಲು ವಾಹನದ ಬಾನೆಟ್​ ಮೇಲೆ ಹಾರಿದ ಕಾನ್ಸ್​ಟೇಬಲ್; 400 ಮೀಟರ್​ ಎಳೆದೊಯ್ದ ಚಾಲಕ

  ಟಿಆರ್​ಪಿ ಎಂದರೆ ಟೆಲಿವಿಶನ್ ರೇಟಿಂಗ್ ಪಾಯಿಂಟ್ಸ್. ಇದು ನ್ಯೂಸ್ ಚಾನೆಲ್​ಗಳನ್ನೂ ಸೇರಿ ಟಿವಿ ವಾಹಿನಿಗಳನ್ನು ಎಷ್ಟು ಮಂದಿ ವೀಕ್ಷಿಸುತ್ತಾರೆ ಎಂದು ಅಂದಾಜು ಮಾಡುವ ಸ್ವಯಂಚಾಲಿತ ಸಮೀಕ್ಷಾ ವ್ಯವಸ್ಥೆಯಾಗಿದೆ. ಬಾರ್ಕ್ ಸಂಸ್ಥೆ ಈ ಕಾರ್ಯವನ್ನ ನಿರ್ವಹಿಸುತ್ತದೆ. ದೇಶದ ಅನೇಕ ನಗರ, ಪಟ್ಟಣ, ಗ್ರಾಮಗಳಲ್ಲಿ ಸೆಟ್ ಟಾಪ್ ಬಾಕ್ಸ್ ಇರುವ ಕೆಲ ಆಯ್ದ ಮನೆಗಳಲ್ಲಿ ರಹಸ್ಯವಾಗಿ ಟಿಆರ್​ಪಿ ಮೀಟರ್​ಗಳನ್ನ ಅಳವಡಿಸಲಾಗುತ್ತದೆ. ಈ ಮೀಟರ್​ಗಳಿರುವುದು ಆ ಮನೆಗಳವರಿಗೂ ಗೊತ್ತಿರುವುದಿಲ್ಲ. ಆ ಮನೆಗಳಲ್ಲಿ ಏನು ವೀಕ್ಷಣೆ ಮಾಡುತ್ತಾರೆ ಅದರ ಮೇಲೆ ಟಿಆರ್​ಪಿ ನಿರ್ಧಾರವಾಗುತ್ತದೆ.

  ಇದನ್ನೂ ಓದಿ: ಕೇರಳದ ಚಿನ್ನದ ಸ್ಮಗ್ಲಿಂಗ್​ಗೂ ದಾವೂದ್​ ಇಬ್ರಾಹಿಂಗೂ ನಂಟು; ಶಾಕಿಂಗ್ ವಿಚಾರ ಬಿಚ್ಚಿಟ್ಟ ಎನ್​ಐಎ

  ತನಗೆ ಸಬ್​ಸ್ಕ್ರೈಬ್ ಆಗುವ ಟಿವಿ ವಾಹಿನಿಗಳು, ಜಾಹೀರಾತುದಾರರಿಗೆ ಬಾರ್ಕ್ ಸಂಸ್ಥೆ ಟಿಆರ್​ಪಿ ಸೇವೆ ನೀಡುತ್ತದೆ. ಆದರೆ, ತನ್ನ ಟಿಆರ್​ಪಿ ಮೀಟರ್​ಗಳ ದುರುಪಯೋಗವಾಗುತ್ತಿದೆ ಎಂದು ಆರೋಪಿಸಿ ಬಾರ್ಕ್ ಸಂಸ್ಥೆ ಕೆಲ ದಿನಗಳ ಹಿಂದೆ ಮೂರು ಸುದ್ದಿವಾಹಿನಿಗಳ ವಿರುದ್ಧ ದೂರು ದಾಖಲಿಸಿತ್ತು. ನಂತರ ಮುಂಬೈ ಪೊಲೀಸ್ ಕಮಿಷನರ್ ಪರಮ್ ಬೀರ್ ಸಿಂಗ್ ಅವರು ಈ ವಿಚಾರ ಪ್ರಸ್ತಾಪಿಸಿ ಒಂದು ರಾಷ್ಟ್ರೀಯ ಸುದ್ದಿ ವಾಹಿನಿಯ ಹೆಸರನ್ನು ಬಹಿರಂಗಪಡಿಸಿದ್ದರು. ಆದರೆ, ಬಾರ್ಕ್ ಫೈಲ್ ಮಾಡಿದ ಕಂಪ್ಲೇಂಟ್​ನಲ್ಲಿ ಬೇರೆ ರಾಷ್ಟ್ರೀಯ ವಾಹಿನಿಯೊಂದರ ಹೆಸರು ಇತ್ತು. ಇವೆಲ್ಲವೂ ದೊಡ್ಡ ವಿವಾದ ಮತ್ತು ಚರ್ಚೆಗೆ ಕಾರಣವಾಗಿವೆ.
  Published by:Vijayasarthy SN
  First published: