ಇಂದು ವಿಶ್ವದಲ್ಲಿ(World) ಬಹುತೇಕ ರಾಷ್ಟ್ರಗಳು(Country) ಬ್ರಿಟಿಷರ(British) ಆಳ್ವಿಕೆಯಲ್ಲಿ ಇದ್ದಂತಹ ರಾಷ್ಟ್ರಗಳು.. ಹೀಗಾಗಿಯೇ ಬ್ರಿಟಿಷ್ ಸಾಮ್ರಾಜ್ಯದ(Empire )ಆಡಳಿತವನ್ನ ಸೂರ್ಯ ಮುಳುಗದ ಸಾಮ್ರಾಜ್ಯ ಎಂದು ಕರೆಯಲಾಗುತ್ತಿತ್ತು.. ಆದರೆ ಜನರಲ್ಲಿ ಸ್ವಾತಂತ್ರ್ಯದ ಅರಿವು ಬಂದ ಬಳಿಕ ದಬ್ಬಾಳಿಕೆ ದಾಸ್ಯದ(Servitude)ವಿರುದ್ಧ ಹೋರಾಡಿ ಸ್ವಾತಂತ್ರ್ಯವನ್ನ ಪಡೆಯುತ್ತಿವೆ.. ನಮ್ಮ ಭಾರತ ಸಹ 1947ರಲ್ಲಿ ಬ್ರಿಟಿಷರ ದಾಸ್ಯ ಸಂಕೋಲೆಯಿಂದ ಮುಕ್ತವಾಯಿತು..ಭಾರತದ(India) ಬಳಿಕ ವಿಶ್ವದ ಹಲವು ರಾಷ್ಟ್ರಗಳು ಬ್ರಿಟಿಷರ ಆಡಳಿತಕ್ಕೆ ಸಡ್ಡು ಹೊಡೆದು ಸ್ವಾತಂತ್ರ್ಯ ಪಡೆದುಕೊಂಡಿವೆ.. ಆದರೆ ಈಗಲೂ ಸಹ ಹಲವು ರಾಷ್ಟ್ರಗಳು ಬ್ರಿಟಿಷ್ ರಾಜಮನೆತನದ ಅಧಿಪತ್ಯದಲ್ಲಿ ಇವೆ.. ಆದ್ರೆ ಈಗ ಬರೋಬ್ಬರಿ 400 ವರ್ಷಗಳ ಬಳಿಕ ಬ್ರಿಟಿಷ್ ರಾಜಮನೆತನದ ಅಧಿಪತ್ಯಕ್ಕೆ ಸೆಡ್ಡುಹೊಡೆದು ಕೆರಿಬಿಯನ್ ದ್ವೀಪ ರಾಷ್ಟ್ರವೊಂದು ಸ್ವಾತಂತ್ರ್ಯ ಘೋಷಿಸಿಕೊಂಡಿದೆ..
ದಾಸ್ಯದ ಸಂಕೋಲೆ ಕಳೆದುಕೊಂಡ ಬಾರ್ಬಡೋಸ್
ಕೆರಿಬಿಯನ್ ದ್ವೀಪ ಸಮೂಹದ ಪುಟ್ಟ ರಾಷ್ಟ್ರ
ಬಾರ್ಬಡೋಸ್ ತನ್ನ ದಾಸ್ಯದ ಸಂಕೋಲೆಗಳನ್ನು ಕಳಚಿದ್ದು, ಬ್ರಿಟನ್ ಮಹಾರಾಣಿ ಕ್ವೀನ್ ಎಲಿಜಬೆತ್ ಇನ್ನು ಮುಂದೆ ತನ್ನ ಮುಖ್ಯಸ್ಥೆ ಅಲ್ಲ ಎಂದು ಘೋಷಿಸಿದೆ.ಈ ಮೂಲಕ 400 ವರ್ಷಗಳ ಬ್ರಿಟನ್ ಅಧಿಪತ್ಯವನ್ನು ಬಾರ್ಬಡೋಸ್ ಕೊನೆಗಾಣಿಸಿದೆ. ಮಧ್ಯರಾತ್ರಿ ರಾಜಧಾನಿ ಬ್ರಿಡ್ಜ್ಟೌನ್ನಲ್ಲಿ ರಾಷ್ಟ್ರಗೀತೆ ಹಾಡು ಸಂಭ್ರಮಾಚರಣೆಯ ಮಾಡಿ ಸ್ವಾತಂತ್ರ್ಯವನ್ನು ಬಾರ್ಬಡೋಸ್ ಪ್ರಜೆಗಳು ಸಂಭ್ರಮಿಸಿದ್ದಾರೆ..
ಇದನ್ನೂ ಓದಿ :ಬಾರ್ಬಡೋಸ್ನಿಂದ ಯುಕೆಗೆ 7000 ಕಿಮೀ ಪ್ರಯಾಣಿಸಿದ ಹಲ್ಲಿ..! ಆಮೇಲೇನಾಯ್ತು ಗೊತ್ತಾ..?
ಬಾರ್ಬಡೋಸ್ ಮೊದಲ ಅಧ್ಯಕ್ಷೆಯಾಗಿ ಸಾಂಡ್ರಾ ಮೇಸನ್
ಇನ್ನು ಹೊಸ ಗಣರಾಜ್ಯವೆಂದು ಘೋಷಣೆ ಮಾಡಿಕೊಂಡಿರುವ ಬಾರ್ಬಡೋಸ್ ತನ್ನ ದೇಶದ ಮೊದಲ ಅಧ್ಯಕ್ಷೆಯನ್ನಾಗಿ ಸಾಂಡ್ರಾ ಮೇಸನ್ ಅವರನ್ನು ಆಯ್ಕೆ ಮಾಡಿದೆ..ಇನ್ನು ಬಾರ್ಬಡೋಸ್ ಈಗ ಗಣರಾಜ್ಯವಾಗಿದ್ದರೂ ಕಾಮನ್ವೆಲ್ತ್ ಸಂಘದಲ್ಲಿ ಉಳಿದುಕೊಳ್ಳಲಿದೆ. ಆಫ್ರಿಕಾ, ಏಷ್ಯಾ, ಅಮೆರಿಕ ಹಾಗೂ ಯೂರೋಪ್ನ ಸುಮಾರು 54 ರಾಷ್ಟ್ರಗಳು ಕಾಮನ್ವೆಲ್ತ್ ಸಂಘದಲ್ಲಿವೆ.ಇನ್ನು ಬಾರ್ಬಡೋಸ್ ಸ್ವಾತಂತ್ರ್ಯಕ್ಕೆ ಸಂತಸ ವ್ಯಕ್ತಪಡಿಸಿರುವ ಭಾರತ, ನೂತನ ಗಣರಾಜ್ಯದ ಭವಿಷ್ಯ ಉಜ್ವಲವಾಗಿಲಿ ಎಂದು ಹಾರೈಸಿದೆ.
ಸೂರ್ಯ ಮುಳುಗದ ಸಾಮ್ರಾಜ್ಯ ಎಂದು ಖ್ಯಾತಿ ಪಡೆದಿದ್ದ ಬ್ರಿಟಿಷ್ ಸಾಮ್ರಾಜ್ಯ
ವ್ಯಾಪಾರಕ್ಕಾಗಿ ಹಲವು ದೇಶಗಳಿಗೆ ಹೊರಟ ಬ್ರಿಟಿಷರು, ತಮ್ಮ ಒಡೆದು ಆಳುವ ನೀತಿಯಿಂದಲೇ ವಿಶ್ವದ ಹಲವು ರಾಷ್ಟ್ರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಅಧಿಪತ್ಯ ಶುರುಮಾಡಿದ ಮಾಡಿತು.1920ರ ಹೊತ್ತಿಗೆ ತನ್ನ ಉಚ್ಛ್ರಾಯ ಘಟ್ಟದಲ್ಲಿ 1.37 ಕೋಟಿ ಚದರ ಮೈಲು ಪ್ರದೇಶವು ಬ್ರಿಟಿಷ್ ಸಾಮ್ರಾಜ್ಯದ ವ್ಯಾಪ್ತಿಯಲ್ಲಿತ್ತು. ಆ ಕಾರಣಕ್ಕೆ, 'ಸೂರ್ಯ ಮುಳುಗದ ಸಾಮ್ರಾಜ್ಯ' ಎಂದು ಕರೆಯಲಾಗುತ್ತಿತ್ತು. ಅದಕ್ಕೆ ಕಾರಣವೂ ಪ್ರತಿ ಖಂಡದಲ್ಲೂ ಬ್ರಿಟಿಷರ ಆಳ್ವಿಕೆಗೆ ಒಳಪಟ್ಟ ಪ್ರದೇಶಗಳು ಇದ್ದವು.
ಇದನ್ನೂ ಓದಿ :ಡೊಮಿನಿಕ್ ಡ್ರೇಕ್ಸ್ ಆರ್ಭಟ; CPL ನಲ್ಲಿ ಪೇಟ್ರಿಯಾಟ್ಸ್ಗೆ ಚೊಚ್ಚಲ ಪಟ್ಟ
ದಕ್ಷಿಣ ಆಫ್ರಿಕಾ ಒಕ್ಕೂಟ, ಆಸ್ಟ್ರೇಲಿಯಾ, ಕೆನಡಾ, ನ್ಯೂಜಿಲೆಂಡ್, ಕೆನ್ಯಾ, ನೈಜೀರಿಯಾ, ಭಾರತ, ಈಜಿಪ್ಟ್, ಸೂಡಾನ್, ಬರ್ಮಾ, ಸಿಂಗಾಪೂರ್ ಹೀಗೆ ಆನೇಕ ದೇಶಗಳ ಮೇಲೆ ಲಂಡನ್ ನಿಂದಲೇ ಅಧಿಕಾರ ಚಲಾಯಿಸಲಾಗುತ್ತಿತ್ತು. 1913ನೇ ಇಸವಿ ಹೊತ್ತಿಗೆ ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿದ್ದ ಪ್ರದೇಶಗಳಲ್ಲಿ 41.2 ಕೋಟಿ ಮಂದಿ ವಾಸವಿದ್ದರು. ಅಂದರೆ ಆ ಸಮಯದಲ್ಲಿನ ವಿಶ್ವದ ಒಟ್ಟು ಜನಸಂಖ್ಯೆಯ ಶೇಕಡಾ 23ರಷ್ಟು ಮಂದಿ ಬ್ರಿಟಿಷರ ಆಳ್ವಿಕೆಯಲ್ಲಿ ಇದ್ದರು. ಬ್ರಿಟಿಷರ ದಬ್ಬಾಳಿಕೆ ದೌರ್ಜನ್ಯದಿಂದ ರೋಸಿ ಹೋಗಿದ್ದ ಹಲವು ದೇಶಗಳು ಹೋರಾಟದ ಮೂಲಕ ಸ್ವಾತಂತ್ರ್ಯವನ್ನು ಪಡೆದುಕೊಂಡವು..ಇನ್ನು 1992ರಲ್ಲಿ ಮಾರಿಷಸ್ ಬ್ರಿಟನ್ ಅಧಿಪತ್ಯವನ್ನು ಕೊನೆಗಾಣಿಸಿ ಗಣರಾಜ್ಯ ಎಂದು ಇತ್ತೀಚಿನ ವರ್ಷಗಳಲ್ಲಿ ಘೋಷಿಸಿಕೊಂಡಿದೆ.. ಇದನ್ನು ಹೊರತುಪಡಿಸಿ ಈಗ ಬಾರ್ಬಡೋಸ್ ಬ್ರಿಟಿಷ್ ಅಧಿಪತ್ಯವನ್ನು ಕೊನೆಗಾಣಿಸಿರುವುದು, ಬ್ರಿಟಿಷರ ಅಧಿಪತ್ಯದಲ್ಲಿ ಇರುವ ಮತ್ತಷ್ಟು ರಾಷ್ಟ್ರಗಳು ಸ್ವಾತಂತ್ರ್ಯ ಪಡೆಯಲು ಪ್ರೇರೇಪಣೆ ನೀಡಿದೆ..
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ