News18 India World Cup 2019

ಪೆಟ್ರೋಲ್​​, ಡೀಸೆಲ್​​ ದರ ಏರಿಕೆ ಖಂಡಿಸಿ ಪ್ರತಿಭಟನೆ​​: ಕೇಂದ್ರದ ವಿರುದ್ಧ ಸೆ.10 ರಂದು ಕಾಂಗ್ರೆಸ್​ ‘ಭಾರತ್​ ಬಂದ್​’ಗೆ ಕರೆ


Updated:September 6, 2018, 7:52 PM IST
ಪೆಟ್ರೋಲ್​​, ಡೀಸೆಲ್​​ ದರ ಏರಿಕೆ ಖಂಡಿಸಿ ಪ್ರತಿಭಟನೆ​​: ಕೇಂದ್ರದ ವಿರುದ್ಧ ಸೆ.10 ರಂದು ಕಾಂಗ್ರೆಸ್​ ‘ಭಾರತ್​ ಬಂದ್​’ಗೆ ಕರೆ

Updated: September 6, 2018, 7:52 PM IST
ನ್ಯೂಸ್​​-18 ಕನ್ನಡ

ನವದೆಹಲಿ(ಆಗಸ್ಟ್​​.06): ಪೆಟ್ರೋಲ್​, ಡೀಸೆಲ್​ ಬೆಲೆ ಏರಿಕೆ ವಿರುದ್ಧ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್​​ ಭಾರತ್​​ ಬಂದ್​ಗೆ​ ಕರೆ ನೀಡಿದೆ. ಇದೇ ತಿಂಗಳು ಸೆಪ್ಟೆಂಬರ್​​.10ಕ್ಕೆ ಕಾಂಗ್ರೆಸ್​​ ದೇಶಾದ್ಯಂತ ಬಂದ್​​ ಆಚರಿಸಲು ನಿರ್ಣಯಿಸಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ವಿರುದ್ಧ ರಣಕಹಳೆ ಮೊಳಗಿಸಲು ಸಿದ್ಧತೆ ನಡೆಸಿಕೊಂಡಿದೆ.

ಅಖಿಲ ಭಾರತೀಯ ಕಾಂಗ್ರೆಸ್​​ ಪ್ರಾದೇಶಿಕ ಸಮಿತಿಯ ಖಜಾಂಚಿ, ರಾಜ್ಯಸಭಾ ಸದಸ್ಯ ಅಹಮ್ಮದ್​ ಪಟೇಲ್​​ ನೇತೃತ್ವದಲ್ಲಿ ಇಂದು ಕಾಂಗ್ರೆಸ್​​ ಅಧ್ಯಕ್ಷರ ಸಭೆ ನಡೆಯಿತು. ದೆಹಲಿಯಲ್ಲಿ ಇಂದು ನಡೆದ ಸಭೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಜನಾಭಿಪ್ರಾಯ ಮೂಡಿಸಲು ಬಂದ್​ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್​​ ಗುಂಡೂರಾವ್ ತಿಳಿಸಿದ್ಧಾರೆ. ​​

ಈ ವೇಳೆ ದರ‌ ಏರಿಕೆಯಾಗುತ್ತಿದ್ದರೂ‌ ಪ್ರಧಾನಿ‌ ಮೋದಿ ಮೌನವಾಗಿದ್ದಾರೆ. ಮೋದಿ ಹೃದಯ‌ ಇಲ್ಲದಂತೆ, ಕರುಣೆ ಇಲ್ಲದಂತೆ ವರ್ತಿಸುತ್ತಿದ್ದಾರೆ. ಜನರ ಈ ಆಕ್ರೋಶವನ್ನು ಕೇಂದ್ರ ಸರ್ಕಾರಕ್ಕೆ ತಿಳಿಸಬೇಕಿದೆ. ಹೀಗಾಗಿ, ಸೆಪ್ಟೆಂಬರ್​​. 10ರಂದು ಭಾರತ್ ಬಂದ್ ಮಾಡುತ್ತಿದ್ದೇವೆ ಎಂದು ಗುಂಡೂರಾವ್​​ ಆಕ್ರೋಶ ವ್ಯಕ್ತಪಡಿಸಿದ್ಧಾರೆ.

ಪೆಟ್ರೋಲ್​​ & ಡೀಸೆಲ್​ ದರ ಏರಿಕೆ: ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಗಣನೀಯವಾಗಿ ಏರಿಕೆ ಕಂಡು ಬಂದಿದೆ. ತೈಲೋತ್ಪನ್ನಗಳ ದರ ಸಾರ್ವಕಾಲಿಕವಾಗಿ ಗರಿಷ್ಠ ಮಟ್ಟ ತಲುಪಿದೆ. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಪ್ರತೀ ಬ್ಯಾರೆಲ್ ತೈಲ ದರ ಏರಿಕೆಯಾಗಿರುವ ಕಾರಣಕ್ಕೆ ಡಾಲರ್ ಎದರು ರೂಪಾಯಿ ಮೌಲ್ಯ ಕುಸಿದಿದೆ. ಅಲ್ಲದೇ ತೈಲ ದರ ಏರಿಕೆಗೂ ಇದೇ ಕಾರಣ ಎನ್ನಲಾಗುತ್ತಿದೆ.

ದೆಹಲಿಯಲ್ಲಿ ಪೆಟ್ರೋಲ್‌ ದರ ಲೀಟರ್ ಗೆ 79.40 ರೂ ಮತ್ತು ಡೀಸೆಲ್ 71.34 ರೂ, ಬೆಂಗಳೂರು ಪೆಟ್ರೋಲ್‌ 81.98 ರೂ ಮತ್ತು ಡೀಸೆಲ್‌ ದರ 73.72 ರೂ, ಕೋಲ್ಕತಾದಲ್ಲಿ ಪೆಟ್ರೋಲ್ ಬೆಲೆ 82.31 ರೂ ಮತ್ತು ಡೀಸೆಲ್ ಬೆಲೆ 74.27 ರೂ. ಗಳಾಗಿವೆ. ಇನ್ನು ಮುಂಬೈನಲ್ಲಿ ಪೆಟ್ರೋಲ್‌ 86.80 ರೂ ಮತ್ತು ಡೀಸೆಲ್ ಬೆಲೆ 75.82 ರೂ ಆಗಿದೆ. ಅಲ್ಲದೇ ಚೆನ್ನೈನಲ್ಲಿಯೂ ಪೆಟ್ರೋಲ್‌ ಬೆಲೆ 82.51 ರೂ,  ಡೀಸೆಲ್‌ ಬೆಲೆ 75.48 ರೂಪಾಯಿಗಳಾಗಿದ್ದು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ.
First published:September 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...