HOME » NEWS » National-international » BARACK OBAMA WRITES ABOUT RAHUL SONIA GANDHI MANMOHAN IN HIS MEMOIR SNVS

Barack Obama: ‘ಕಲಿತ ಪಾಠ ಒಪ್ಪಿಸುವ ತವಕದ ವಿದ್ಯಾರ್ಥಿಯಂತೆ…’; ರಾಹುಲ್ ಬಗ್ಗೆ ಬರಾಕ್ ಒಬಾಮ ಅನಿಸಿಕೆ

Obama on Rahul Gandhi: ಪಠ್ಯವನ್ನು ಓದಿ ಮುಗಿಸಿ ಶಿಕ್ಷಕರನ್ನ ಒಪ್ಪಿಸುವ ತವಕದಲ್ಲಿರುವ ವಿದ್ಯಾರ್ಥಿಯಂತೆ ಕಂಡರೂ ಪಠ್ಯವಿಷಯವನ್ನ ಸಂಪೂರ್ಣ ಕರಗತ ಮಾಡಿಕೊಳ್ಳುವ ಚಾತುರ್ಯತೆ ಅಥವಾ ಅಭಿಲಾಷೆ ಇಲ್ಲದವರಂತೆ ರಾಹುಲ್ ತೋರುತ್ತಾರೆ ಎಂದು ಬರಾಕ್ ಒಬಾಮ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆನ್ನಲಾಗಿದೆ.

news18
Updated:November 13, 2020, 12:26 PM IST
Barack Obama: ‘ಕಲಿತ ಪಾಠ ಒಪ್ಪಿಸುವ ತವಕದ ವಿದ್ಯಾರ್ಥಿಯಂತೆ…’; ರಾಹುಲ್ ಬಗ್ಗೆ ಬರಾಕ್ ಒಬಾಮ ಅನಿಸಿಕೆ
ಬರಾಕ್ ಒಬಾಮ
  • News18
  • Last Updated: November 13, 2020, 12:26 PM IST
  • Share this:
ನವದೆಹಲಿ(ನ. 13): ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು ತಮ್ಮ ನೂತನ ಪುಸ್ತಕದಲ್ಲಿ ವಿಶ್ವದ ಹಲವು ನಾಯಕರ ಬಗ್ಗೆ ಅಭಿಪ್ರಾಯಗಳನ್ನ ಹಂಚಿಕೊಂಡಿದ್ದಾರೆ. ‘ಎ ಪ್ರಾಮಿಸ್ಡ್ ಲ್ಯಾಂಡ್’ ಪುಸ್ತಕದಲ್ಲಿ ಒಬಾಮ ತಮ್ಮ ನೆನಪುಗಳನ್ನ ಮೆಲುಕು ಹಾಕಿದ್ದಾರೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮನಮೋಹನ್ ಸಿಂಗ್, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸೇರಿದಂತೆ ಹಲವು ನಾಯಕರ ಬಗ್ಗೆ ಒಬಾಮ ಈ ಪುಸ್ತಕದಲ್ಲಿ ನೇರ ಅಭಿಪ್ರಾಯಗಳನ್ನ ವ್ಯಕ್ತಪಡಿಸಿ ಬರೆದಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ತನ್ನ ವಿಮರ್ಶೆಯಲ್ಲಿ ಉಲ್ಲೇಖಿಸಿದೆ. ರಾಹುಲ್ ಅವರು ತಾವು ಕಲಿತ ಪಾಠವನ್ನು ಶಿಕ್ಷಕರಿಗೆ ಒಪ್ಪಿಸುವ ತವಕದಲ್ಲಿರುವ ವಿದ್ಯಾರ್ಥಿಯಂತೆ ಒಬಾಮ ಕಣ್ಣಿಗೆ ಕಂಡಿದ್ದಾರೆ.

“ಪಠ್ಯವನ್ನು ಓದಿ ಮುಗಿಸಿ ಶಿಕ್ಷಕರನ್ನ ಒಪ್ಪಿಸುವ ತವಕದಲ್ಲಿರುವ ವಿದ್ಯಾರ್ಥಿಯಂತೆ ಕಂಡರೂ ಪಠ್ಯವಿಷಯವನ್ನ ಸಂಪೂರ್ಣ ಕರಗತ ಮಾಡಿಕೊಳ್ಳುವ ಚಾತುರ್ಯತೆ ಅಥವಾ ಅಭಿಲಾಷೆ ಇಲ್ಲದ ವಿದ್ಯಾರ್ಥಿಯಾಗಿ ತೋರುವ ರಾಹುಲ್ ಅವರಲ್ಲಿ ಒಂದು ತಳಮಳದ, ಅಸ್ಪಷ್ಟ ಗುಣ ಇದೆ” ಎಂದು ಬರಾಕ್ ಒಬಾಮ ಹೇಳಿದ್ಧಾರೆನ್ನಲಾಗಿದೆ.

ಇದನ್ನೂ ಓದಿ: Gold Rate: ಚಿನ್ನ ಖರೀದಿಸೋಕೆ ಈ ದೀಪಾವಳಿ ಸೂಕ್ತ ಸಮಯವೇ?; ಇಲ್ಲಿದೆ ಆಭರಣ ದರ

ಸೋನಿಯಾ ಗಾಂಧಿ: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನ ಒಬಾಮ ಸೌಂದರ್ಯಗಾತಿ ಎಂದು ಹೊಗಳಿದ್ದಾರೆ. “ಚಾರ್ಲಿ ಕ್ರಿಸ್ಟ್ ಮತ್ತು ರಹಮ್ ಇಮ್ಯಾನುಯೆಲ್ ಅವರಂಥ ಪುರುಷರ ಸೌಂದರ್ಯದ ಬಗ್ಗೆ ನಮಗೆ ಹೇಳಲಾಗುತ್ತಿತ್ತೇ ಹೊರತು, ಮಹಿಳೆಯರ ಸೌಂದರ್ಯದ ಬಗ್ಗೆ ಅಲ್ಲ. ಇದಕ್ಕೆ ಸೋನಿಯಾ ಗಾಂಧಿ ಅವರಂಥ ಒಬ್ಬಿಬ್ಬರು ಅಪವಾದ” ಎಂದು ಬರಾಕ್ ಒಬಾಮ ಅವರ ಅನಿಸಿಕೆ ಎಂದು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಬರೆದಿದೆ.

ಮನಮೋಹನ್ ಸಿಂಗ್ ಬಗ್ಗೆ: ಭಾರತದ ಮಾಜಿ ಪ್ರಧಾನಿ ಅವರದ್ದು ಬಹಳ ಗಟ್ಟಿಯಾದ ಪ್ರಾಮಾಣಿಕ ವ್ಯಕ್ತತ್ವ ಎಂದು ಒಬಾಮ ಹೊಗಳಿದ್ದಾರೆ. “ಅಮೆರಿಕದ ರಕ್ಷಣಾ ಸಚಿವ ಬಾಬ್ ಗೇಟ್ಸ್ ಮತ್ತು ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಇಬ್ಬರೂ ಬಹಳ ಪ್ರಾಮಾಣಿಕ ವ್ಯಕ್ತದವರಾಗಿದ್ದಂತೆ ಕಂಡರು” ಎಂದು ಒಬಾಮ ತಮ್ಮ ಎ ಪ್ರಾಮಿಸ್ಡ್ ಲ್ಯಾಂಡ್ ಪುಸ್ತಕದಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: ಲಡಾಖ್​ ಬದಲು ಲೇಹ್​ ಅನ್ನು ಜಮ್ಮು ಮತ್ತು ಕಾಶ್ಮೀರದ ಭಾಗ ಎಂದ ಟ್ವಿಟರ್​; ಸರ್ಕಾರದಿಂದ ನೋಟಿಸ್​ ಜಾರಿ

ಬರಾಕ್ ಒಬಾಮ ಅವರು 2009ರಿಂದ 2017ರವರೆಗೂ ಎಂಟು ವರ್ಷಗಳ ಕಾಲ ಅಮೆರಿಕದ ಅಧ್ಯಕ್ಷರಾಗಿದ್ದರು. 2013-14ರವರೆಗೂ ಯುಪಿಎ ಸರ್ಕಾರ ಭಾರತದಲ್ಲಿ ಆಡಳಿತದಲ್ಲಿದ್ದರಿಂದ ಮನಮೋಹನ್ ಸಿಂಗ್, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರೊಂದಿಗೆ ಒಬಾಮ ಸಂಪರ್ಕ ಇತ್ತಾದ್ದರಿಂದ ಅವರ ಬಗ್ಗೆ ತಮ್ಮ ಅನಿಸಿಕೆಗಳನ್ನ ನೇರವಾಗಿ ಹಂಚಿಕೊಂಡಿದ್ದಾರೆ.ನರೇಂದ್ರ ಮೋದಿ ಅವರು ಭಾರತದ ಪ್ರಧಾನಿ ಆದ ಬಳಿಕ ಒಬಾಮ ಭಾರತಕ್ಕೆ ಬಂದಿದ್ದಾರಾದರೂ ಅವರನ್ನು ಕೆಲ ಬಾರಿ ಭೇಟಿಯಾಗಿದ್ದಾರಾದರೂ ತಮ್ಮ ಪುಸ್ತಕದಲ್ಲಿ ಅಭಿಪ್ರಾಯ ಹಂಚಿಕೊಂಡಿಲ್ಲ. ಆದರೆ, 2015ರಲ್ಲಿ ಟೈಮ್ಸ್ ಮ್ಯಾಗಜಿನ್​ಗೆ ಬರೆದ ಲೇಖನದಲ್ಲಿ ನರೇಂದ್ರ ಮೋದಿ ಅವರನ್ನು ಒಬಾಮ ಶ್ಲಾಘಿಸಿದ್ದರು. ಟೀ ಮಾರಿ ಕುಟುಂಬದ ನಿರ್ವಹಣೆಗೆ ಸಹಾಯವಾಗುತ್ತಿದ್ದ ಒಬ್ಬ ಹುಡುಗ ಇವತ್ತು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶದ ಪ್ರಧಾನಿಯಾಗಿದ್ದಾರೆ ಎಂದು ಒಬಾಮ ಹೇಳಿದ್ದರು.

ಇದನ್ನೂ ಓದಿ: ಒಂದು ದೇಶ ಒಂದು ಪಡಿತರ ಚೀಟಿ ಯೋಜನೆ 28 ರಾಜ್ಯಗಳಲ್ಲೂ ಜಾರಿಯಾಗಲಿದೆ; ನಿರ್ಮಲಾ ಸೀತಾರಾಮನ್

ಇದೇ ವೇಳೆ, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಬಹಳ ಟಫ್ ಮತ್ತು ಸ್ಟ್ರೀಟ್ ಸ್ಮಾರ್ಟ್ ಎಂದು ಒಬಾಮ ತಮ್ಮ ನೂತನ ಪುಸ್ತಕದಲ್ಲಿ ಬಣ್ಣಿಸಿದ್ದಾರೆ.

ಒಬಾಮ ಬರೆದಿರುವ “ಎ ಪ್ರಾಮಿಸ್ಡ್ ಲ್ಯಾಂಡ್” ಪುಸ್ತಕ 768 ಪುಟಗಳಿದ್ದು, ನವೆಂಬರ್ 17ರಂದು ಬಿಡುಗಡೆಗೊಳ್ಳಲಿದೆ. ಇದರಲ್ಲಿ ಅವರು ತಮ್ಮ ಬಾಲ್ಯಾವಸ್ಥೆಯಿಂದ ಹಿಡಿದು ರಾಜಕೀಯವಾಗಿ ಉತ್ತುಂಗಕ್ಕೇರಿದ ಘಟನೆಗಳನ್ನ ಮೆಲುಕು ಹಾಕಿದ್ದಾರೆ.
Published by: Vijayasarthy SN
First published: November 13, 2020, 12:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories