ಸುಪ್ರೀಂ ವಿವಾದದಿಂದ ದೂರ ಉಳಿಯಲು ರಾಜಕೀಯ ಪಕ್ಷಗಳಿಗೆ ವಕೀಲರ ಪರಿಷತ್ ಮನವಿ


Updated:January 14, 2018, 12:36 PM IST
ಸುಪ್ರೀಂ ವಿವಾದದಿಂದ ದೂರ ಉಳಿಯಲು ರಾಜಕೀಯ ಪಕ್ಷಗಳಿಗೆ ವಕೀಲರ ಪರಿಷತ್ ಮನವಿ
ಮನನ್ ಕುಮಾರ್ ಮಿಶ್ರಾ, ಭಾರತೀಯ ವಕೀಲರ ಪರಿಷತ್ ಅಧ್ಯಕ್ಷ

Updated: January 14, 2018, 12:36 PM IST
- ನ್ಯೂಸ್18

ನವದೆಹಲಿ(ಜ.13): ಸುಪ್ರೀಂಕೋರ್ಟ್​ನ ನಾಲ್ವರು ಹಿರಿಯ ನ್ಯಾಯಾಧೀಶರ ಸುದ್ದಿಗೋಷ್ಠಿಯಿಂದ ಉದ್ಬವಿಸಿರುವ ವಿವಾದದಿಂದ ದೂರ ಉಳಿಯುವಂತೆ ರಾಜಕೀಯ ಪಕ್ಷಗಳಿಗೆ ಭಾರತೀಯ ವಕೀಲರ ಪರಿಷತ್ ಮನವಿ ಮಾಡಿದೆ. ಇದು ಸರ್ವೋಚ್ಛ ನ್ಯಾಯಾಲಯದ ಆಂತರಿಕ ವಿಷಯವಾಗಿದ್ದು, ಆದಷ್ಟು ಶೀಘ್ರ ಮತ್ತು ಶಾಂತಿಯುತವಾಗಿ ಸಮಸ್ಯೆ ಬಗೆಹರಿಸಿಕೊಳ್ಳುವುದಾಗಿ ವಕೀಲರ ಪರಿಷತ್ತಿನ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ

ನ್ಯಾಯಾಂಗದ ಬಗ್ಗೆ ಮಾತನಾಡಲು ರಾಹುಲ್ ಗಾಂಧಿ ಮತ್ತು ರಾಜಕೀಯ ಪಕ್ಷಗಳಿಗೆ ಅವಕಾಶ ಮಾಡಿಕೊಟ್ಟಿದ್ದು ದುರದೃಷ್ಟಕರ. ರಾಹುಲ್ ಗಾಂಧಿ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳು ಈ ಘಟನೆಯನ್ನ ರಾಜಕೀಕರಣಗೊಳಿಸದಿರಿ ಎಂದು ಮಿಶ್ರಾ ಮನವಿ ಮಾಡಿದ್ಧಾರೆ.

ಸುಪ್ರೀಂಕೋರ್ಟ್ ವಿಚಾರಗಳನ್ನ ನ್ಯಾಯಾಧೀಶರು ಬಹಿರಂಗವಾಗಿ ಹೇಳಬಾರದಿತ್ತು. ಇಂತಹ ವಿವಾದಗಳನ್ನ ಬಗೆಹರಿಸಲು ಸುಪ್ರೀಂಕೋರ್ಟ್​ನಲ್ಲಿ ಪ್ರತ್ಯೇಕ ವ್ಯವಸ್ಥೆ ಇದೆ. ನ್ಯಾಯಾಧಿಶರು ನೀಡಿರುವ ಪತ್ರದಲ್ಲಿರುವ ವಿಷಯಗಳ ಕುರಿತಂತೆ ಚರ್ಚಿಸಿ ಮಧ್ಯಸ್ಥಿಕೆಗೆ 7 ಸದಸ್ಯರ ಸಮಿತಿ ರಚನೆ ಮಾಡಲು ನಿರ್ಧರಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಸುಪ್ರೀಂಕೋರ್ಟ್ ವಿವಾದದಲ್ಲಿ ಮೂಗು ತೂರಿಸದ ಕೇಂದ್ರ ಸರ್ಕಾರದ ನಿರ್ಧಾರವನ್ನ ಮಿಶ್ರಾ ಸ್ವಾಗತಿಸಿದ್ದಾರೆ. ಕೇಂದ್ರ ಸರ್ಕಾರದ ಈ ನಿರ್ಧಾರವನ್ನ ನಾವು ಪ್ರಶಂಸಿಸುತ್ತೇವೆ. ಸುಪ್ರೀಂಕೋರ್ಟ್ ವಿವಾದದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಕಾನೂನು ಸಚಿವ ರವಿಶಂಕರ್ ಪ್ರಸಾದ್ ತಿಳಿಸಿರುವುದು ಸ್ವಾಗತಾರ್ಹ ಎಂದು ತಿಳಿಸಿದ್ದಾರೆ.

ಇದೇವೇಳೆ, ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಜೊತೆಗಿನ ನಾಲ್ವರು ಹಿರಿಯ ನ್ಯಾಯಾಧೀಶರ ಭಿನ್ನಮತದ ವಿಚಾರವನ್ನ ಸುಪ್ರೀಂಕೋರ್ಟ್ ಪೂರ್ಣ ಪೀಠದ ಮುಂದೆ ತರಲು ವಕೀಲರ ಪರಿಷತ್ ನಿರ್ಣಯ ಕೈಗೊಂಡಿದೆ.
First published:January 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ