ಸೆಪ್ಟೆಂಬರ್ ತಿಂಗಳಲ್ಲಿ ಆಗಸ್ಟ್ ತಿಂಗಳಂತೆ ಹೆಚ್ಚು ಬ್ಯಾಂಕ್ ರಜಾದಿನಗಳಿಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ (RBI) ನೀಡಿರುವ ಬ್ಯಾಂಕ್ ರಜಾ ಪಟ್ಟಿಯ ಪ್ರಕಾರ, ಏಳು ರಜಾದಿನಗಳು ಮಾತ್ರ ಇದೆ. ಈ ಏಳು ರಜಾದಿನಗಳು ರಾಜ್ಯವಾರು ಧಾರ್ಮಿಕ ಕಾರ್ಯಕ್ರಮಗಳು ಮತ್ತು ಹಬ್ಬದ ಆಚರಣೆಗಳನ್ನು ಆಧರಿಸಿದೆ. ಆರ್‌ಬಿಐ ರಜೆಯ ಪಟ್ಟಿಯ ಹೊರತಾಗಿ, ವಾರಾಂತ್ಯಗಳನ್ನು ಸಹ ಪರಿಗಣಿಸಬೇಕಾಗಿದ್ದು, ಒಟ್ಟು ಆರು ವಾರಾಂತ್ಯಗಳಿರುವ ಕಾರಣ, ಮುಂದಿನ ತಿಂಗಳು ಬ್ಯಾಂಕುಗಳಿಗೆ 12 ರಜಾದಿನಗಳಿವೆ.
ಆರ್‌ಬಿಐ ಸ್ವತಃ ಆಗಸ್ಟ್ ತಿಂಗಳ ರಜಾದಿನಗಳನ್ನು 'ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್' ಅಡಿಯಲ್ಲಿ ವರ್ಗೀಕರಿಸಿದೆ. ಆರ್‌ಬಿಐ ಪಟ್ಟಿಯ ಇತರ ವರ್ಗೀಕರಣಗಳೆಂದರೆ ‘ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಮತ್ತು ರಿಯಲ್ ಟೈಮ್ ಗ್ರಾಸ್ ಸೆಟಲ್‌ಮೆಂಟ್ ’ ಮತ್ತು ಅಕೌಂಟ್ಸ್ ಕ್ಲೋಸಿಂಗ್ .ಆದರೆ ಇದ್ಯಾವುದು ಸೆಪ್ಟೆಂಬರ್ ತಿಂಗಳಿಗೆ ಅನ್ವಯಿಸುವುದಿಲ್ಲ.
ಇನ್ನು ನೀವು ಮುಂದಿನ ಬಾರಿ ಬ್ಯಾಂಕ್ ಹೋಗುವಾಗ ಇವುಗಳನ್ನು ನೆನಪಿಟ್ಟುಕೊಳ್ಳಿ, ಹಾಗೆಯೇ ಈ ರಜಾದಿನಗಳು ಎಲ್ಲ ರಾಜ್ಯಗಳಿಗೆ ಅನ್ವಯಿಸುವುದಿಲ್ಲ. ವಾರಂತ್ಯದ ರಜಾದಿನಗಳನ್ನು ಹೊರತುಪಡಿಸಿ ಉಳಿದ ರಜಾದಿನಗಳು ರಾಜ್ಯಗಳ ಆಚರಣೆಯ ಮೇಲಿದೆ. ಮುಂಬರುವ ತಿಂಗಳಲ್ಲಿ, ಕೇವಲ ಒಂದು ಪ್ರಮುಖ ರಜಾದಿನವಿದೆ, ಸೆಪ್ಟೆಂಬರ್ 10 ರಂದು ಗಣೇಶ ಚತುರ್ಥಿ ಹಬ್ಬವಿದ್ದು, ಹೆಚ್ಚು ರಾಜ್ಯಗಳಲ್ಲಿ ಆಚರಣೆ ಮಾಡಲಾಗುತ್ತದೆ. ಅಹಮದಾಬಾದ್, ಬೇಲಾಪುರ, ಬೆಂಗಳೂರು, ಭುವನೇಶ್ವರ, ಚೆನ್ನೈ, ಹೈದರಾಬಾದ್, ಮುಂಬೈ, ನಾಗಪುರ, ಪಣಜಿ ಸೇರಿದಂತೆ ವಿವಿಧ ನಗರಗಲಲ್ಲಿ ಹಬ್ಬದ ಆಚರಣೆ ಇದ್ದು, ಅಂದು ಬ್ಯಾಂಕ್ ರಜಾದಿನವಾಗಿದೆ. ಅಲ್ಲದೆ, ಮರುದಿನ, ಸೆಪ್ಟೆಂಬರ್ 11ರಂದು ವಾರಾಂತ್ಯವಾಗಿರುವುದರಿಂದ ಅಂದು ಸಹ ರಜಾದಿನವಾಗಿದೆ.ಅಂದು ಗಣೇಶ ಚತುರ್ಥಿಯ ಎರಡನೇ ದಿನ, ಇದು ಪಣಜಿಯಲ್ಲಿ ಬ್ಯಾಂಕುಗಳಿಗೆ ಮಾತ್ರ ಹಬ್ಬದ ರಜೆ ಇದೆ.
ಇದನ್ನೂ ಓದಿ: ಲಾಮಾ ಪ್ರತಿಕಾಯಗಳು ಕೋವಿಡ್-19 ವಿರುದ್ಧ ಹೋರಾಡಲಿವೆ; ಅಧ್ಯಯನಗಳಿಂದ ಸಾಬೀತು
ಸೆಪ್ಟೆಂಬರ್ 5 ರ ಭಾನುವಾರವಾಗಿರುವುದರಿಂದ ವಾರಾಂತ್ಯದ ರಜೆಯ ಅಡಿಯಲ್ಲಿ ಬರುತ್ತದೆ. ಆರ್‌ಬಿಐ ನೀಡಿರುವ ರಜಾದಿನಗಳ ಪಟ್ಟಿಯು ಸೆಪ್ಟೆಂಬರ್ 21 ರಂದು ಶ್ರೀ ನಾರಾಯಣ ಗುರು ಸಮಾಧಿ ದಿನದೊಂದಿಗೆ ಕೊನೆಗೊಳ್ಳುತ್ತದೆ, ಇದನ್ನು ಕೊಚ್ಚಿ ಮತ್ತು ತಿರುವನಂತಪುರಂನಲ್ಲಿ ಆಚರಿಸಲಾಗುತ್ತದೆ. ಆದರೆ ಬ್ಯಾಂಕುಗಳು ಸೆಪ್ಟೆಂಬರ್ 25 ಮತ್ತು ಸೆಪ್ಟೆಂಬರ್ 26 ರಂದು ಎರಡು ವಾರಂತ್ಯದ ರಜಾದಿನಗಳು ಬರುತ್ತದೆ.
ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು, ಬ್ಯಾಂಕ್ ಹೋಗುವವರು ತಮ್ಮ ಮುಂದಿನ ಯೋಜನೆಗಳನ್ನು ಹಾಕಿಕೊಳ್ಳಬೇಕು. ರಜಾದಿನಗಳನ್ನು ನೋಡಿಕೊಂಡು ಮೊದಲೇ ಕೆಲಸವನ್ನು ಮುಗಿಸಿಕೊಳ್ಳುವುದು ಒಳ್ಳೆಯದು, ಆಗಸ್ಟ್ ತಿಂಗಳಿಗೆ ಹೋಲಿಕೆ ಮಾಡಿದರೆ ಸೆಪ್ಟೆಂಬರ್ ನಲ್ಲಿ ಹೆಚ್ಚು ಬ್ಯಾಂಕ್ ರಜಾ ದಿನಗಳು ಇರುವುದಿಲ್ಲ.
ಆರ್‌ಬಿಐ ಆದೇಶದಂತೆ ಸೆಪ್ಟೆಂಬರ್ 2021 ರ ರಜಾದಿನಗಳ ಸಂಪೂರ್ಣ ಪಟ್ಟಿ ಇಲ್ಲಿದೆ: (ಸೆಪ್ಟೆಂಬರ್ 5 ರಿಂದ ಆರಂಭ)
1) ಸೆಪ್ಟೆಂಬರ್ 5 - ಭಾನುವಾರ
2) ಸೆಪ್ಟೆಂಬರ್ 8 - ಶ್ರೀಮಂತ ಶಂಕರದೇವರ ತಿಥಿ - (ಗುವಾಹಟಿ)
3) ಸೆಪ್ಟೆಂಬರ್ 9 - ತೀಜ್ (ಹರಿತಾಳಿಕ) - (ಗ್ಯಾಂಗ್ಟಾಕ್)
4) ಸೆಪ್ಟೆಂಬರ್ 10 - ಗಣೇಶ ಚತುರ್ಥಿ (ಅಹಮದಾಬಾದ್, ಬೇಲಾಪುರ, ಬೆಂಗಳೂರು, ಭುವನೇಶ್ವರ, ಚೆನ್ನೈ, ಹೈದರಾಬಾದ್, ಮುಂಬೈ, ನಾಗ್ಪುರ, ಪಣಜಿ)
5) ಸೆಪ್ಟೆಂಬರ್ 11 - ಎರಡನೇ ಶನಿವಾರ / ಗಣೇಶ ಚತುರ್ಥಿ (2 ನೇ ದಿನ) - (ಪಣಜಿ)
6) ಸೆಪ್ಟೆಂಬರ್ 12 - ಭಾನುವಾರ
7) ಸೆಪ್ಟೆಂಬರ್ 17 - ಕರ್ಮ ಪೂಜೆ - (ರಾಂಚಿ)
8) ಸೆಪ್ಟೆಂಬರ್ 19 - ಭಾನುವಾರ
9) ಸೆಪ್ಟೆಂಬರ್ 20 - ಇಂದ್ರಜಾತ್ರೆ - (ಗ್ಯಾಂಗ್ಟಾಕ್)
10) ಸೆಪ್ಟೆಂಬರ್ 21 - ಶ್ರೀ ನಾರಾಯಣ ಗುರು ಸಮಾಧಿ ದಿನ - (ಕೊಚ್ಚಿ ಮತ್ತು ತಿರುವನಂತಪುರಂ)
11) ಸೆಪ್ಟೆಂಬರ್ 25 - ನಾಲ್ಕನೇ ಶನಿವಾರ
12) ಸೆಪ್ಟೆಂಬರ್ 26 - ಭಾನುವಾರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ