HOME » NEWS » National-international » BANKS TO REMAIN OPEN TODAY HERES A FULL LIST OF HOLIDAYS IN APRIL 2021 STG LG

Bank Holiday: ಇಂದು ತಮಿಳುನಾಡಿನಲ್ಲಿ ಬ್ಯಾಂಕ್‌ ರಜೆ; ಏಪ್ರಿಲ್‌ 2021ರ ಬ್ಯಾಂಕ್‌ ರಜೆಗಳ ವಿವರ ಹೀಗಿದೆ..!

ಇಂದು ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆ ಅಲ್ಲಿ ಮಾತ್ರ ನಿರ್ದಿಷ್ಟವಾಗಿ ರಜೆ ಘೋಷಣೆ ಮಾಡಲಾಗಿದೆ. ಆದರೆ ಉಳಿದೆಡೆ, ಎಲ್ಲಾ ಖಾಸಗಿ ಮತ್ತು ಸಾರ್ವಜನಿಕ ಬ್ಯಾಂಕುಗಳು ಏಪ್ರಿಲ್ 6, 2021 ರಂದು ತೆರೆದಿರುತ್ತವೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ರಜಾದಿನಗಳ ಕ್ಯಾಲೆಂಡರ್‌ನಲ್ಲಿ ತಿಳಿಸಿದೆ.

news18-kannada
Updated:April 6, 2021, 11:17 AM IST
Bank Holiday: ಇಂದು ತಮಿಳುನಾಡಿನಲ್ಲಿ ಬ್ಯಾಂಕ್‌ ರಜೆ; ಏಪ್ರಿಲ್‌ 2021ರ ಬ್ಯಾಂಕ್‌ ರಜೆಗಳ ವಿವರ ಹೀಗಿದೆ..!
ಬ್ಯಾಂಕ್
  • Share this:
ಪ್ರತಿಯೊಬ್ಬರಿಗೂ ತಿಂಗಳಲ್ಲಿ ಒಂದಲ್ಲ ಒಂದು ದಿನ ಸಾಮಾನ್ಯವಾಗಿ ಬ್ಯಾಂಕ್‌ನಲ್ಲಿ ಕೆಲಸವಿರುತ್ತದೆ. ಆದರೆ, ಹಲವು ದಿನಗಳ ಕಾಲ ಬ್ಯಾಂಕ್‌ ಸೇವೆ ಮುಚ್ಚುವುದರಿಂದ ಆ ದಿನ ಗ್ರಾಹಕರು ತಮ್ಮ ಬ್ಯಾಂಕ್‌ ಶಾಖೆಗಳಿಗೆ ಹೋದರೆ ಸುಮ್ಮನೇ ಟೈಮ್‌ ವೇಸ್ಟ್‌ ಆಗುತ್ತದೆ. ಈ ಹಿನ್ನೆಲೆ ಆರ್‌ಬಿಐ ಪ್ರತಿ ತಿಂಗಳು ಬ್ಯಾಂಕ್‌ ರಜಾ ದಿನಗಳ ಪಟ್ಟಿಯನ್ನು ಘೋಷಣೆ ಮಾಡುತ್ತದೆ. ಆದರೆ, ಕೆಲವು ಬ್ಯಾಂಕಿಂಗ್ ರಜಾ ದಿನಗಳು ಆಯಾಯ ರಾಜ್ಯಗಳಿಗೆ ಮಾತ್ರ ಅನ್ವಯವಾಗುತ್ತವೆ. ಇದೇ ರೀತಿ, ಏಪ್ರಿಲ್‌ 6 ರಂದು ಬ್ಯಾಂಕ್‌ ರಜಾ ದಿನವನ್ನಾಗಿ ಆರ್‌ಬಿಐ ಘೋಷಣೆ ಮಾಡಿತ್ತು. ಅದರೆ, ವಿಧಾನಸಭಾ ಚುನಾವಣೆ ಹಿನ್ನೆಲೆ ತಮಿಳುನಾಡಿಗೆ ಮಾತ್ರ ಈ ಬ್ಯಾಂಕ್‌ ರಜಾ ದಿನ ಅನ್ವಯಿಸುತ್ತದೆ.

ಇಂದು ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆ ಅಲ್ಲಿ ಮಾತ್ರ ನಿರ್ದಿಷ್ಟವಾಗಿ ರಜೆ ಘೋಷಣೆ ಮಾಡಲಾಗಿದೆ. ಆದರೆ ಉಳಿದೆಡೆ, ಎಲ್ಲಾ ಖಾಸಗಿ ಮತ್ತು ಸಾರ್ವಜನಿಕ ಬ್ಯಾಂಕುಗಳು ಏಪ್ರಿಲ್ 6, 2021 ರಂದು ತೆರೆದಿರುತ್ತವೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ರಜಾದಿನಗಳ ಕ್ಯಾಲೆಂಡರ್‌ನಲ್ಲಿ ತಿಳಿಸಿದೆ. ಇನ್ನು, ಮೂರು ಅಂಶಗಳನ್ನು ಆಧರಿಸಿ ನಿರ್ದಿಷ್ಟ ದಿನಗಳನ್ನು ಬ್ಯಾಂಕ್​ ರಜಾದಿನವನ್ನಾಗಿ ಘೋಷಣೆ ಮಾಡಲಾಗುತ್ತದೆ. ಇವುಗಳ ಪೈಕಿ ನೆಗೋಶಿಯಬಲ್‌ ಇನ್ಸ್ಟ್ರುಮೆಂಟ್ಸ್ ಆ್ಯಕ್ಟ್ ಅಡಿಯಲ್ಲಿ ರಜೆ, ರಿಯಲ್ ಟೈಮ್ ಗ್ರಾಸ್ ಸೆಟಲ್‌ಮೆಂಟ್‌ ರಜೆ ಹಾಗೂ ಅಕೌಂಟ್‌ಗಳನ್ನು ಕ್ಲೋಸ್‌ಮಾಡುವ ದಿನ ಬ್ಯಾಂಕ್‌ಗಳಿಗೆ ರಜೆ ಘೋಷಿಸಲಾಗುತ್ತದೆ.

ಬ್ಯಾಂಕಿಂಗ್ ರಜಾದಿನಗಳು ನಿರ್ದಿಷ್ಟ ರಾಜ್ಯಗಳಲ್ಲಿ ಆಚರಿಸಲಾಗುವ ಹಬ್ಬಗಳ ಮೇಲೆ ಅವಲಂಬಿತವಾಗಿರುತ್ತದೆ ಮತ್ತು ಒಂದು ರಾಜ್ಯದಿಂದ ಇನ್ನೊಂದಕ್ಕೆ ಭಿನ್ನವಾಗಿರಬಹುದು ಎಂಬುದನ್ನು ಗಮನಿಸಬೇಕು. ಎಲ್ಲಾ ಅಂಶಗಳನ್ನು ಪರಿಗಣಿಸಿ, ನಾವು 2021 ರ ಏಪ್ರಿಲ್ ತಿಂಗಳ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ನೀಡಿದ್ದೇವೆ.

ಯತ್ನಾಳ್​​ಗೆ ಹುಚ್ಚು ಹಿಡಿದಿದೆ, ಸಿದ್ದರಾಮಯ್ಯ ಜೆಡಿಎಸ್​​ನಿಂದ ಬರುವಾಗ ಸೇಲ್ ಆಗಿದ್ರಾ?; ರೇಣುಕಾಚಾರ್ಯ ವಾಗ್ದಾಳಿ

ಏಪ್ರಿಲ್ 6: ತಮಿಳುನಾಡು ವಿಧಾನಸಭಾ ಚುನಾವಣೆಯ ಕಾರಣ ರಾಜ್ಯ ನಿರ್ದಿಷ್ಟ ರಜೆ.
ಏಪ್ರಿಲ್ 10: ತಿಂಗಳ ಎರಡನೇ ಶನಿವಾರವಾದ್ದರಿಂದ ಬ್ಯಾಂಕ್ ಮುಚ್ಚಲ್ಪಡುತ್ತದೆ.
ಏಪ್ರಿಲ್‌ 11: ಭಾನುವಾರದ ರಜೆಏಪ್ರಿಲ್ 13: ಗುಡಿ ಪಾಡ್ವಾ, ತೆಲುಗು ಹೊಸ ವರ್ಷದ ದಿನ, ಯುಗಾದಿ ಉತ್ಸವ, ಸಾಜಿಬು ನೊಂಗ್‌ಮಪನ್ಬಾ (ಚೀರೋಬಾ), ನವರಾತ್ರ ಮೊದಲನೇ ದಿನ, ವೈಶಾಖಿ
ಏಪ್ರಿಲ್ 14: ಡಾ. ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿ / ತಮಿಳು ಹೊಸ ವರ್ಷದ ದಿನ / ವಿಶು / ಬಿಜು ಉತ್ಸವ / ಚೀರೋಬಾ (ಮಣಿಪುರ) / ಬೋಹಾಗ್ ಬಿಹು (ಅಸ್ಸಾಂ, ಅರುಣಾಚಲ ಪ್ರದೇಶ)
ಏಪ್ರಿಲ್ 15: ಹಿಮಾಚಲ್ ದಿನ / ಬಂಗಾಳಿ ಹೊಸ ವರ್ಷದ ದಿನ / ಬೋಹಾಗ್ ಬಿಹು / ಸರ್ಹುಲ್
ಏಪ್ರಿಲ್ 18: ಭಾನುವಾರದ ರಜೆ
ಏಪ್ರಿಲ್ 21: ಶ್ರೀ ರಾಮ ನವಮಿ / ಗರಿಯಾ ಪೂಜಾ. ಇದು ಪಶ್ಚಿಮ ಬಂಗಾಳ, ಅಸ್ಸಾಂ, ಗೋವಾ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಕರ್ನಾಟಕ, ಕೇರಳ, ಲಕ್ಷದ್ವೀಪ, ಮಣಿಪುರ, ಮೇಘಾಲಯ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಮಿಜೋರಾಂ, ಪುದುಚೇರಿ, ತಮಿಳುನಾಡುಗಳಲ್ಲಿ ರಾಷ್ಟ್ರೀಯ ರಜಾ ದಿನವಾಗಿದೆ.
ಏಪ್ರಿಲ್ 24: ತಿಂಗಳ ನಾಲ್ಕನೇ ಶನಿವಾರವಾದ್ದರಿಂದ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
ಏಪ್ರಿಲ್ 25: ಮಹರ್ಷಿ ಪರಶುರಾಮ ಜಯಂತಿ. ಹಿಮಾಚಲ ಪ್ರದೇಶ, ಗುಜರಾತ್, ಹರಿಯಾಣ, ರಾಜಸ್ಥಾನಗಳಲ್ಲಿ ನಿರ್ದಿಷ್ಟ ರಜಾ ದಿನವಾಗಿದೆ. ಉಳಿದೆಡೆ ಭಾನುವಾರದ ರಜೆ

ಒಟ್ಟಿನಲ್ಲಿ ಈ ಎಲ್ಲಾ ರಜಾದಿನಗಳನ್ನು ಹೊರತುಪಡಿಸಿ ಉಳಿದ ದಿನ ನಿಮ್ಮ ಬ್ಯಾಂಕ್​ ಕೆಲಸಗಳನ್ನು ಮುಗಿಸಿಕೊಳ್ಳಿ. ಚೆಕ್ ಹಾಕುವುದು, ಹಣ ಡ್ರಾ ಮಾಡುವುದು, ಹೊಸ ಪಾಸ್​ ಬುಕ್​ ಅಪ್ಲೈ ಮಾಡುವುದು, ಪಾಸ್​ಬುಕ್ ಎಂಟ್ರಿ ಮಾಡಿಸುವುದು, ಪಿಂಚಣಿ ಹಣ ಡ್ರಾ ಮಾಡುವುದು, ಡಿಡಿ ತೆಗೆದುಕೊಳ್ಳುವುದು ಇಂತಹ ತುರ್ತು ಆರ್ಥಿಕ ಚಟುವಟಿಕೆಗಳಿಗೆ ಬ್ಯಾಂಕ್ ಅವಲಂಬನೆ ಇರುವವರು ಈ ಬಗ್ಗೆ ಮುಂಜಾಗ್ರತೆ ವಹಿಸುವುದು ಉತ್ತಮ. ಆದರೆ, ರಜಾ ದಿನಗಳಂದೂ ಸಹ ಎಟಿಎಂ ಸೇವೆ ಲಭ್ಯವಿರುತ್ತದೆ.
Published by: Latha CG
First published: April 6, 2021, 11:17 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories