Bank Holidays: ಇಂದಿನಿಂದ ಆ.23ರವರೆಗೆ ಸತತವಾಗಿ 5 ದಿನ ಬ್ಯಾಂಕ್​ಗಳಿಗೆ ರಜೆ..!

ರಜಾದಿನಗಳಲ್ಲಿ ಗ್ರಾಹಕರು ಬ್ಯಾಂಕ್​ ವ್ಯವಹಾರ ಇಟ್ಟುಕೊಳ್ಳುವುದನ್ನು ಕ್ಯಾನ್ಸಲ್ ಮಾಡಿ ಎಂದು ಆರ್​ಬಿಐ ಸಲಹೆ ನೀಡಿದೆ. ಈ ಮೇಲ್ಕಂಡ ರಜಾದಿನಗಳಲ್ಲಿ ಬ್ಯಾಂಕ್​ಗಳು ಮುಚ್ಚಲ್ಪಟ್ಟಿರುತ್ತವೆ. ಮೊಬೈಲ್​ ಮತ್ತು ಇಂಟರ್​ನೆಟ್​​​​​​​​ ಬ್ಯಾಂಕಿಂಗ್ ಎಂದಿನಂತೆ ಕಾರ್ಯನಿರ್ವಹಿಸಲಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಪ್ರತಿ ತಿಂಗಳು ಬ್ಯಾಂಕ್‌ಗೆ ಇಂತಿಷ್ಟು ರಜಾ ದಿನಗಳೆಂದು ಘೋಷಿಸಲಾಗುತ್ತದೆ. ಆದರೆ, ಒಮ್ಮೊಮ್ಮೆ ಎಲ್ಲ ರಜೆಗಳು ಒಂದೇ ವೇಳೆಯಲ್ಲಿ ಬರುತ್ತದೆ. ಸತತವಾಗಿ 2 - 3 ದಿನಗಳ ಕಾಲ ರಜಾ ಇದ್ದರೆ ಬ್ಯಾಂಕ್‌ ಗ್ರಾಹಕರಿಗೆ ತೊಂದರೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಎಲ್ಲರಿಗೂ ಆನ್‌ಲೈನ್‌ ಬ್ಯಾಂಕಿಂಗ್‌ ವ್ಯವಹಾರದ ಬಗ್ಗೆ ಹೆಚ್ಚಿನ ಅರಿವಿಲ್ಲದ ಕಾರಣ ಇನ್ನೂ ಹಲವರು ಬ್ಯಾಂಕ್‌ಗೆ ಹೋಗುತ್ತಾರೆ. ಈ ಹಿನ್ನೆಲೆ ಬ್ಯಾಂಕ್‌ ರಜಾ ದಿನಗಳ ವಿವರಗಳನ್ನು ಮೊದಲೇ ನೋಡಿದರೆ, ತಮ್ಮ ಬ್ಯಾಂಕ್‌ಗಳು ಕಾರ್ಯ ನಿರ್ವಹಿಸುವ ದಿನದಲ್ಲಿ ಅವರು ತಮ್ಮ ಬ್ಯಾಂಕ್‌ ಶಾಖೆಗಳಿಗೆ ಹೋದರೆ ಅವರ ಕೆಲಸ ಬೇಗ ಮುಗಿಸಿಕೊಳ್ಳಬಹುದು. ಇದೇ ರೀತಿ, ರಿಸರ್ವ್​ ಬ್ಯಾಂಕ್​​ ಆಫ್​ ಇಂಡಿಯಾದ ಹಾಲಿಡೇ ಕ್ಯಾಲೆಂಡರ್​ ಪ್ರಕಾರ, ಆಗಸ್ಟ್​​​ ತಿಂಗಳಿನಲ್ಲಿ ಬರೋಬ್ಬರಿ 15 ದಿನಗಳು ಬ್ಯಾಂಕ್‌ ಬಂದ್‌ ಆಗಲಿದೆ. ಇದರಿಂದ ಬ್ಯಾಂಕ್ ಕೆಲಸವಿರುವ ಗ್ರಾಹಕರಿಗೆ ತೊಂದರೆಯಾಗಬಹುದು.

  ಎರಡನೇ ಶನಿವಾರ, ನಾಲ್ಕನೇ ಶನಿವಾರ ಹಾಗೂ ಭಾನುವಾರಗಳು ಈ 15 ದಿನಗಳ ರಜೆಯ ಪಟ್ಟಿಯಲ್ಲಿ ಸೇರ್ಪಡೆಯಾಗಿವೆ. ಈ ಆಗಸ್ಟ್​​ ತಿಂಗಳಿನಲ್ಲಿ ವಿಶೇಷ ದಿನಗಳಿರುವುದರಿಂದ ಬ್ಯಾಂಕ್​ ರಜೆ ಇರುತ್ತದೆ ಎಂದು ರಿಸರ್ವ್​ ಬ್ಯಾಂಕ್​ ಆಫ್ ಇಂಡಿಯಾ ಹೇಳಿದೆ. ಆದರೆ, ಎಲ್ಲಾ ಬ್ಯಾಂಕುಗಳಲ್ಲಿ ಹಾಗೂ ಎಲ್ಲಾ ರಾಜ್ಯಗಳಲ್ಲಿ 15 ದಿನಗಳ ಕಾಲ ರಜೆ ಇರುವುದಿಲ್ಲ. ರಾಜ್ಯದಿಂದ ರಾಜ್ಯಕ್ಕೆ ಬ್ಯಾಂಕ್​ ರಜೆಗಳು ಬದಲಾಗಲಿವೆ. ಗೆಜೆಟೆಡ್ ರಜಾದಿನಗಳು ಮಾತ್ರ ದೇಶಾದ್ಯಂತ ಎಲ್ಲಾ ಬ್ಯಾಂಕ್​ಗಳಿಗೆ ಅನ್ವಯವಾಗಲಿವೆ. ಗೆಜೆಟೆಡ್​ ರಜಾದಿನಗಳಲ್ಲಿ ಶನಿವಾರ ಮತ್ತು ಭಾನುವಾರಗಳು ಸೇರಿವೆ.

  ಆಗಸ್ಟ್​ 19ರಿಂದ ಆಗಸ್ಟ್ 23ರವರೆಗೆ ಸತತ 5 ದಿನ ಬ್ಯಾಂಕ್​ಗಳಿಗೆ ರಜೆ ಇದೆ. ಹೀಗಾಗಿ ಗ್ರಾಹಕರು ತಮ್ಮ ಬ್ಯಾಂಕಿಂಗ್​ ಕೆಲಸಗಳನ್ನು ಆ.23ರ ಬಳಿಕ ಇಟ್ಟುಕೊಂಡರೆ ಒಳಿತು. ಮೊಹರಂ ಕಡೇ ದಿನ, ರಕ್ಷಾ ಬಂಧನ ಮತ್ತು ಓಣಂ ಹಬ್ಬಗಳು ಇರುವುದರಿಂದ ಬ್ಯಾಂಕ್​ಗಳಿಗೆ ರಜೆ ಇರುತ್ತದೆ.

  ಇದನ್ನೂ ಓದಿ:Karnataka Weather Today: ರಾಜ್ಯದಲ್ಲಿ ಇನ್ನೂ 2 ದಿನ ಮಳೆ; ಇಂದು ಯಾವ್ಯಾವ ಜಿಲ್ಲೆಗಳಲ್ಲಿ ಮಳೆಯಾಗಲಿದೆ? ಇಲ್ಲಿದೆ ಮಾಹಿತಿ

  ಆಗಸ್ಟ್​ 19- ಇಂದು ಮೊಹರಂ ಕಡೇ ದಿನ. ಹೀಗಾಗಿ ಹಲವು ಕಡೆ ಇಂದು ಬ್ಯಾಂಕ್​ಗಳಿಗೆ ರಜೆ ಇರುತ್ತದೆ. ತ್ರಿಪುರಾ, ಗುಜರಾತ್, ಪಂಜಾಬ್, ಮಹಾರಾಷ್ಟ್ರ, ಮಧ್ಯ ಪ್ರದೇಶ, ಉತ್ತರ ಪ್ರದೇಶ, ದೆಹಲಿ, ಪಶ್ಚಿಮ ಬಂಗಾಳ-ಈ ರಾಜ್ಯಗಳಲ್ಲಿ ಇಂದು ಬ್ಯಾಂಕ್​ ರಜೆ ಇದೆ.

  ಆಗಸ್ಟ್ 20- ನಾಳೆ ಅಂದರೆ ಆ.20ರಂದು ಓಣಂ ಹಬ್ಬ ಇರುವುದರಿಂದ ದಕ್ಷಿಣ ಭಾರತದ ಅನೇಕ ರಾಜ್ಯಗಳಲ್ಲಿ ಬ್ಯಾಂಕ್​​ಗಳು ಕಾರ್ಯನಿರ್ವಹಿಸುವುದಿಲ್ಲ. ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ಬ್ಯಾಂಕ್​ಗಳಿಗೆ ರಜೆ ಇರುತ್ತದೆ.

  ಆಗಸ್ಟ್​ 21-ಕೇರಳದಲ್ಲಿ ತಿರುವೋಣಂ ಆಚರಣೆ ಇರುವುದರಿಂದ ಆ ರಾಜ್ಯದಲ್ಲಿ ಬ್ಯಾಂಕ್​ಗಳು ರಜೆ ಇರುತ್ತವೆ.

  ಆಗಸ್ಟ್​ 22- ಅಂದು ಭಾನುವಾರ. ಹೀಗಾಗಿ ಬ್ಯಾಂಕ್​ಗಳಿಗೆ ಸಾಮಾನ್ಯವಾಗಿ ರಜಾದಿನ. ಆ ದಿನವೇ ರಕ್ಷಾ ಬಂಧನವೂ ಸಹ ಇದೆ.

  ಆಗಸ್ಟ್​ 23- ಕೇರಳದಲ್ಲಿ ಶ್ರೀ ನಾರಾಯಣ ಗುರು ಜಯಂತಿ ಆಚರಣೆ ಇರುವುದರಿಂದ ಅಲ್ಲಿ ಬ್ಯಾಂಕ್​ಗಳಿಗೆ ರಜೆ ಇರುತ್ತದೆ.

  ಆಗಸ್ಟ್ ತಿಂಗಳ ರಜಾದಿನಗಳು 'ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ಸೆಕ್ಷನ್' ಅಡಿಯಲ್ಲಿ ಬರುತ್ತದೆ. ಆರ್‌ಬಿಐನ ಪಟ್ಟಿಯ ಪ್ರಕಾರ ರಜೆಗಳ ಅಧಿಕೃತ ಪಟ್ಟಿ ಬ್ಯಾಂಕ್‌ಗಳಿಗೆ ಮಾತ್ರ ಆರಂಭವಾಗಿದ್ದರೂ, ಬ್ಯಾಂಕ್ ಸಿಬ್ಬಂದಿಗಳು ಕೆಲವು ರಜಾದಿನಗಳಲ್ಲಿ ಬಂದು ಹೋಗಿರುವುದನ್ನು ಗಮನಿಸಬಹುದು. ಆಗಸ್ಟ್ ತಿಂಗಳು ಆರಂಭವಾದಾಗಿನಿಂದ ಎರಡು ಭಾನುವಾರಗಳು ಬಂದು ಹೋಗಿವೆ. ಹೆಚ್ಚುವರಿಯಾಗಿ, ಅಧಿಕೃತ ಆರ್‌ಬಿಐ ಪಟ್ಟಿಯಲ್ಲಿ ಮೊದಲ ರಜೆ ಶುಕ್ರವಾರ ಇತ್ತು.

  ಇದನ್ನೂ ಓದಿ:Petrol Price Today: ದೆಹಲಿ, ಮುಂಬೈನಲ್ಲಿ ಇಳಿಕೆಯಾದ ಡೀಸೆಲ್​ ಬೆಲೆ; ಪೆಟ್ರೋಲ್​ ದರ ಯಥಾಸ್ಥಿತಿ

  ರಜಾದಿನಗಳಲ್ಲಿ ಗ್ರಾಹಕರು ಬ್ಯಾಂಕ್​ ವ್ಯವಹಾರ ಇಟ್ಟುಕೊಳ್ಳುವುದನ್ನು ಕ್ಯಾನ್ಸಲ್ ಮಾಡಿ ಎಂದು ಆರ್​ಬಿಐ ಸಲಹೆ ನೀಡಿದೆ. ಈ ಮೇಲ್ಕಂಡ ರಜಾದಿನಗಳಲ್ಲಿ ಬ್ಯಾಂಕ್​ಗಳು ಮುಚ್ಚಲ್ಪಟ್ಟಿರುತ್ತವೆ. ಮೊಬೈಲ್​ ಮತ್ತು ಇಂಟರ್​ನೆಟ್​​​​​​​​ ಬ್ಯಾಂಕಿಂಗ್ ಎಂದಿನಂತೆ ಕಾರ್ಯನಿರ್ವಹಿಸಲಿವೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.
  Published by:Latha CG
  First published: