ವಿಜಯ್ ಮಲ್ಯ, ನೀರವ್ ಮೋದಿ ಆಸ್ತಿ ಮಾರಾಟದಿಂದ 13,109 ಕೋಟಿ ರೂ. ವಸೂಲಿ ಆಗಿದೆ: ನಿರ್ಮಲಾ ಸೀತಾರಾಮನ್

ಇಲ್ಲಿಯವರೆಗೆ ಕೇಂದ್ರೀಯ ಸಂಸ್ಥೆಗಳು 18,170.02 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದು, ಈ ಪೈಕಿ 969 ಕೋಟಿ ರೂ. ಮೌಲ್ಯದ ಆಸ್ತಿ ವಿದೇಶಗಳಲ್ಲಿದೆ. ಈ ಆಸ್ತಿಗಳ ಮೌಲ್ಯವು ಬ್ಯಾಂಕ್‌ಗಳಿಗೆ ಆಗಿರುವ ನಷ್ಟ ಪ್ರಮಾಣದ ಶೇ. 80.45ರಷ್ಟಿದೆ.

ನಿರ್ಮಲಾ ಸೀತಾರಾಮನ್

ನಿರ್ಮಲಾ ಸೀತಾರಾಮನ್

  • Share this:
ಬ್ಯಾಂಕ್ ಸುಸ್ತಿದಾರರಾದ ವಿಜಯ್ ಮಲ್ಯ (Vijay Mallya)ಹಾಗೂ ನೀರವ್ ಮೋದಿಯವರ (Nirav Modi) ಆಸ್ತಿಗಳ ಮಾರಾಟದಿಂದ ಭಾರತೀಯ ಬ್ಯಾಂಕುಗಳು (Indian banks) 13,109 ಕೋಟಿ ರೂ. ವಸೂಲಿ ಮಾಡಿವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Finance Minister Nirmala Sitharaman) ಸಂಸತ್ತಿಗೆ (Parliament) ತಿಳಿಸಿದ್ದಾರೆ. ಈ ಆಸ್ತಿಗಳನ್ನು ಅಕ್ರಮ ಹಣ ವರ್ಗಾವಣೆ (Money laundering) ಕಾಯ್ದೆಯಡಿ ಕೇಂದ್ರೀಯ ಸಂಸ್ಥೆಗಳು ಮುಟ್ಟುಗೋಲು ಹಾಕಿಕೊಂಡಿವೆ.

ಇದಕ್ಕೂ ಮುನ್ನ ಬ್ರಿಟಿಷ್ ನ್ಯಾಯಾಲಯವೊಂದು ವಿಜಯ್ ಮಲ್ಯರನ್ನು ದಿವಾಳಿ ಎಂದು ಘೋಷಿಸುವ ಮೂಲಕ ಭಾರತೀಯ ಸ್ಟೇಟ್ ‍ಬ್ಯಾಂಕ್ ನೇತೃತ್ವದ ಭಾರತೀಯ ಬ್ಯಾಂಕ್ ಒಕ್ಕೂಟವು ವಿಶ್ವಾದ್ಯಂತ ಇರುವ, ಸದ್ಯ ಬ್ಯಾಂಕ್ ಸುಸ್ತಿದಾರರಾಗಿರುವ ವಿಜಯ್ ಮಲ್ಯ ಮಾಲೀಕತ್ವದ ಕಿಂಗ್ ಫಿಷರ್ ಏರ್‌ಲೈನ್ಸ್‌ಗೆ (Kingfisher Airlines) ಸೇರಿದ ಆಸ್ತಿಗಳನ್ನು ತನ್ನ ಸಾಲ ಮರುಪಾವತಿಗೆ ಪ್ರತಿಯಾಗಿ ಮುಟ್ಟುಗೋಲು ಹಾಕಿಕೊಳ್ಳಲು ಹಾದಿ ಸುಗಮಗೊಳಿಸಿದೆ.

ಇದನ್ನೂ ಓದಿ: ಕೊನೆಗೂ ಹರಾಜಿನಲ್ಲಿ ಮಾರಾಟವಾದ ಕಿಂಗ್ ಫಿಶರ್ ಹೌಸ್: ಮೂಲ ಬೆಲೆಗಿಂತ ಅತಿ ಕಡಿಮೆಗೆ ಸೇಲ್‌..!

ಪ್ರಮುಖ ಆರೋಪಿಗಳಿಂದ ನಷ್ಟ
ಗಡೀಪಾರಿಗೆ ಸಂಬಂಧವಿಲ್ಲದ ಗೋಪ್ಯ ಅರ್ಜಿಯೊಂದರನ್ನು ಆಶ‍್ರಯ ಕೋರಿ ಸಲ್ಲಿಸಿರುವ 65 ವರ್ಷದ ಉದ್ಯಮಿ ವಿಜಯ್ ಮಲ್ಯರಿಗೆ ಬ್ರಿಟನ ನ್ಯಾಯಾಲಯ ಜಾಮೀನು ನೀಡಿದೆ. ಭಾರತೀಯ ಬ್ಯಾಂಕ್ ಒಕ್ಕೂಟಕ್ಕೆ ವಿಜಯ್ ಮಲ್ಯ 9000 ಕೋಟಿ ರೂ. ಅಸಲು ಮತ್ತು ಬಾಕಿ ಉಳಿಸಿದ್ದು, ಮತ್ತಿಬ್ಬರು ಉದ್ಯಮಿಗಳಾದ ನೀರವ್ ಮೋದಿ ಹಾಗೂ ಚೋಕ್ಸಿ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13,000 ಕೋಟಿ ರೂ. ನಷ್ಟವುಂಟು ಮಾಡಿದ್ದಾರೆ. ಈ ಇಬ್ಬರು ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದಲ್ಲಿ ಪ್ರಮುಖ ಆರೋಪಿಗಳಾಗಿದ್ದಾರೆ.

ನಷ್ಟ ಪ್ರಮಾಣದ ಶೇ. 80.45ರಷ್ಟಿದೆ.
ಇಲ್ಲಿಯವರೆಗೆ ಕೇಂದ್ರೀಯ ಸಂಸ್ಥೆಗಳು 18,170.02 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದು, ಈ ಪೈಕಿ 969 ಕೋಟಿ ರೂ. ಮೌಲ್ಯದ ಆಸ್ತಿ ವಿದೇಶಗಳಲ್ಲಿದೆ. ಈ ಆಸ್ತಿಗಳ ಮೌಲ್ಯವು ಬ್ಯಾಂಕ್‌ಗಳಿಗೆ ಆಗಿರುವ ನಷ್ಟ ಪ್ರಮಾಣದ ಶೇ. 80.45ರಷ್ಟಿದೆ. ಕೇಂದ್ರೀಯ ಸಂಸ್ಥೆಗಳು ಮುಟ್ಟುಗೋಲು ಹಾಕಿಕೊಂಡಿರುವ ಆಸ್ತಿಗಳ ಪೈಕಿ 10,000 ಕೋಟಿ ರೂ. ಮೌಲ್ಯದ ಆಸ್ತಿ ವಿಜಯ್ ಮಲ್ಯ ಒಬ್ಬರಿಗೇ ಸೇರಿದೆ. ಈ ಆಸ್ತಿಯು ಯುನೈಟೆಡ್ ಬ್ರಿವರೀಸ್ ಲಿಮಿಟೆಡ್ ಹಾಗೂ ಸಂಬಂಧಿತ ಘಟಕಗಳ ಮೌಲ್ಯವೇ 8000 ಕೋಟಿ ರೂ. ನಷ್ಟಿದೆ. ಉಳಿದಂತೆ ಕಿಂಗ್ ಫಿಷರ್ ಬ್ರ್ಯಾಂಡ್‌, ಲಾಂಛನ, ಹೆಲಿಕಾಪ್ಟರ್, ವಾಹನ, ಸ್ಥಿರಾಸ್ತಿಗಳು ಹಾಗೂ ವಿದೇಶಿ ಬ್ಯಾಂಕ್ ಖಾತೆಗಳಲ್ಲಿನ ಠೇವಣಿ ಒಳಗೊಂಡಿದೆ.

ವಾಣಿಜ್ಯ ಸ್ಥಿರಾಸ್ತಿ ಮುಟ್ಟುಗೋಲು
ಇದಲ್ಲದೆ ಕೇಂದ್ರೀಯ ಸಂಸ್ಥೆಗಳು ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸಿಗೆ ಸೇರಿದ ವಜ್ರ, ರತ್ನಗಳನ್ನು ಮುಟ್ಟುಗೋಲು ಹಾಕಿಕೊಂಡಿವೆ. ಇವುಗಳೊಂದಿಗೆ ವಿಂಡ್ ಮಿಲ್ ಫಾರ್ಮ್, ಥಾಯ್ಲೆಂಡ್‌ನಲ್ಲಿರುವ ಒಂದು ಕಾರ್ಖಾನೆ, ವಸತಿ ಹಾಗೂ ಇನ್ನಿತರ ವಾಣಿಜ್ಯ ಸ್ಥಿರಾಸ್ತಿಗಳನ್ನೂ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಇದೇ ವೇಳೆ, ಕೆಟ್ಟ ಸಾಲಗಳನ್ನು ಹೊಂದಾಣಿಕೆ ಮಾಡುವ ಮೂಲಕ ಕಳೆದ 7 ವರ್ಷಗಳಿಂದ 5.49 ಲಕ್ಷ ಕೋಟಿ ರೂ. ವಸೂಲಿ ಮಾಡಲಾಗಿದೆ. ಎಲ್ಲ ರಾಜ್ಯಗಳ ಬಳಿಯೂ ಸಾಕಷ್ಟು ನಗದು ಪ್ರಮಾಣವಿದ್ದು, ಕೇವಲ 2 ರಾಜ್ಯಗಳು ಮಾತ್ರ ಋಣಾತ್ಮಕ ನಗದು ಪ್ರಮಾಣ ಹೊಂದಿವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿಗೆ ತಿಳಿಸಿದರು.

ಇದನ್ನೂ ಓದಿ: Petrol-Diesel Tax: ಕಳೆದ 3 ವರ್ಷಗಳಲ್ಲಿ ಪೆಟ್ರೋಲ್​​ & ಡೀಸೆಲ್​ ಮೇಲಿನ ತೆರಿಗೆಯಿಂದ 8.02 ಲಕ್ಷ ಕೋಟಿ ರೂ. ಸಂಗ್ರಹ

ವ್ಯಂಗ್ಯವಾಡಿ ಮಲ್ಯ ಟ್ವೀಟ್‌
ಇ.ಡಿ 14 ಸಾವಿರ ಕೋಟಿ ಮೌಲ್ಯದಷ್ಟು ಇರುವ ನನ್ನ ಆಸ್ತಿಯನ್ನು ಸರ್ಕಾರಿ ಬ್ಯಾಂಕುಗಳ ಮನವಿ ಮೇರೆಗೆ 6.2 ಸಾವಿರ ಕೋಟಿಯನ್ನು ಬ್ಯಾಂಕ್​ ಸಾಲಕ್ಕೆ ಲಗತ್ತಿಸಿದೆ. ಬ್ಯಾಂಕ್​ಗಳ ಎಲ್ಲಾ ಬಡ್ಡಿ ಸೇರಿ 9 ಸಾವಿರ ಕೋಟಿ ಹಣವನ್ನು ವಸೂಲಿ ಮಾಡುತ್ತಿವೆ. ಮಿಕ್ಕ 5 ಸಾವಿರ ಕೋಟಿ ಹೆಚ್ಚಿಗೆ ವಸೂಲಿ ಮಾಡುತ್ತಿವೆ. ಈ ಹಣವನ್ನು ಇ.ಡಿಗೆ ಹಿಂದಿರುಗಿಸಬೇಕಾಗಿರುವುದರಿಂದ ಬ್ಯಾಂಕುಗಳು ನನ್ನನ್ನು ನ್ಯಾಯಲಯದಲ್ಲಿ ದಿವಾಳಿ ಎಂದು ಘೋಷಿಸುವಂತೆ ಮಾಡಿವೆ. ಅದ್ಬುತ ಕೆಲಸ’’, ಎಂದು ವ್ಯಂಗ್ಯವಾಡಿ ಮಲ್ಯ ಟ್ವೀಟ್‌ ಮಾಡಿದ್ದರು.
Published by:vanithasanjevani vanithasanjevani
First published: