ಆರ್ಥಿಕ ಮುಗ್ಗಟ್ಟಿನಿಂದಾಗಿ ಜಾಗತಿಕವಾಗಿ ಕಳೆದ ನಾಲ್ಕು ವರ್ಷಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಬ್ಯಾಂಕ್​ ಉದ್ಯೋಗಿಗಳಿಗೆ ಗೇಟ್ ಪಾಸ್!

ಜರ್ಮನಿಯ ಅತಿದೊಡ್ಡ ಸಂಸ್ಥೆಗಳು ಉದ್ಯೋಗಿ ಕಡಿತಕ್ಕೆ ಪಟ್ಟಿ ಸಿದ್ಧತೆ ಮಾಡಿಕೊಂಡಿದೆ.  ಡಾಯ್ಚ್ ಬ್ಯಾಂಕ್ ಎಜಿ ತನ್ನ ಬ್ಯಾಂಕಿಂಗ್ ಹೂಡಿಕೆ ವ್ಯವಹಾರದ ದೊಡ್ಡ ಭಾಗದಿಂದ ಹಿಂದೆ ಸರಿಯುವುದರಿಂದ 2022 ರ ವೇಳೆಗೆ 18,000 ಉದ್ಯೋಗಿಗಳನ್ನು ತೆಗೆದುಹಾಕಲು ಯೋಜನೆ ಹಾಕಿಕೊಂಡಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ನವದೆಹಲಿ: ಆರ್ಥಿಕ ಬಿಕ್ಕಟ್ಟು ಮತ್ತು ಡಿಜಿಟಲ್ ತಂತ್ರಜ್ಞಾನ ಅಳವಡಿಕೆಯಿಂದಾಗಿ ಕಳೆದ ನಾಲ್ಕು ವರ್ಷಗಳಲ್ಲಿ ಜಾಗತಿಕವಾಗಿ ಬ್ಯಾಂಕ್​ ಉದ್ಯೋಗಿಗಳು ಯಥೇಚ್ಛ ಪ್ರಮಾಣದಲ್ಲಿ ಕೆಲಸ ಕಳೆದುಕೊಂಡಿದ್ದಾರೆ.

    ಉದ್ಯೋಗಿಗಳನ್ನು ನೇಮಿಸುವ ಕಂಪನಿ ಮತ್ತು ಕಾರ್ಮಿಕ ಸಂಘಗಳ ಪ್ರಕಾರ, ಈ ವರ್ಷ 50ಕ್ಕೂ ಹೆಚ್ಚು ಬ್ಯಾಂಕ್​ಗಳು ಜೊತೆಯಾಗಿ 77,780 ಉದ್ಯೋಗಿಗಳನ್ನು ಕೆಲಸದಿಂದ ಕಡಿತಗೊಳಿಸಲು ಚಿಂತಿಸಿವೆ. 2015ರಲ್ಲಿ 91,448 ಅತೀ ಹೆಚ್ಚು ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದರು. ಯುರೋಪ್ ಬ್ಯಾಂಕುಗಳು ನಕಾರಾತ್ಮಕ ಹೆಚ್ಚುವರಿ ಬಡ್ಡಿದರ ಹೊರೆ ಎದುರಿಸುತ್ತಿದೆ ಎಂದು ಎಕಾನಾಮಿಕ್ ಟೈಮ್ಸ್​ ವರದಿ ಮಾಡಿದೆ.

    2019ರ ಕಡಿತವು ಕಳೆದ ಆರು ವರ್ಷಗಳಿಂದ ಒಟ್ಟು 425,000 ಕ್ಕಿಂತ ಹೆಚ್ಚಾಗಿದೆ.  ವಾಸ್ತವವಾಗಿ, ಅನೇಕ ಬ್ಯಾಂಕುಗಳು ಸಿಬ್ಬಂದಿಗೂ ಸೂಚನೆಯನ್ನೂ ನೀಡದೆಯೇ ಕೆಲಸದಿಂದ ಕಿತ್ತು ಹಾಕಿವೆ. ಮಾರ್ಗನ್​ ಸ್ಟಾನ್ಲಿ ಸಂಸ್ಥೆಯೂ 1500 ಕ್ಕೂ ಅಧಿಕ ಸಿಬ್ಬಂದಿಗೆ ಗೇಟ್​ ಪಾಸ್​ ನೀಡಿದೆ. ಸಂಸ್ಥೆಯಲ್ಲಿ ಶೇ.2ಗೂ ಅಧಿಕ ಉದ್ಯೋಗಿಗಳನ್ನು ತೆಗೆದುಹಾಕಲಾಗಿದೆ ಎಂದು ಕಾರ್ಯನಿರ್ವಾಹಕ ಅಧಿಕಾರಿ ಜೇಮ್ಸ್​ ಜಾರ್ಮನ್​ ಹೇಳಿದ್ದಾರೆ.

    ಈ ವರ್ಷದ ಅಂಕಿ-ಅಂಶಗಳು ಯುರೋಪಿಯನ್ ಬ್ಯಾಂಕುಗಳ ಆರ್ಥಿಕ ದೌರ್ಬಲ್ಯದ ಸ್ಥಿತಿಗತಿಯನ್ನು ಒತ್ತಿ ಹೇಳುತ್ತಿವೆ. ಈ ಭಾಗದ ರಫ್ತು ಆಧಾರಿತ ಆರ್ಥಿಕತೆಯು ಅಂತರರಾಷ್ಟ್ರೀಯ ವಾಣಿಜ್ಯ ಸಂಘರ್ಷಗಳನ್ನು ಎದುರಿಸುತ್ತಿದ್ದರೆ, ಕೆಟ್ಟ ಬಡ್ಡಿದರ ಸಾಲದ ಆದಾಯವನ್ನು ಕಿತ್ತು ತಿನ್ನುತ್ತಿವೆ. ಸರ್ಕಾರದ ಯೋಜನೆಗಳು ಮತ್ತು ಸಾಲಗಾರರು ಆರ್ಥಿಕ ಬಿಕ್ಕಟ್ಟಿನಿಂದ ಶೀಘ್ರವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡಿದವು,  ಯುರೋಪಿನಲ್ಲಿ ಹಲವು ಬ್ಯಾಂಕುಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಅಥವಾ ತಮ್ಮ ಹೆಜ್ಜೆ ಗುರುತನ್ನು ಮರಳಿ ಪಡೆಯಲು ಹೆಣಗಾಡುತ್ತಿವೆ. ಅನೇಕ ಸಂಸ್ಥೆಗಳು  ಸಿಬ್ಬಂದಿಯನ್ನು ವಜಾ ಮಾಡುತ್ತಿದ್ದಾರೆ ಮತ್ತು ಲಾಭವನ್ನು ಹೆಚ್ಚಿಸಲು ವ್ಯವಹಾರವನ್ನು ಮಾರಾಟ ಮಾಡುತ್ತಿವೆ.

    ಜರ್ಮನಿಯ ಅತಿದೊಡ್ಡ ಸಂಸ್ಥೆಗಳು ಉದ್ಯೋಗಿ ಕಡಿತಕ್ಕೆ ಪಟ್ಟಿ ಸಿದ್ಧತೆ ಮಾಡಿಕೊಂಡಿದೆ.  ಡಾಯ್ಚ್ ಬ್ಯಾಂಕ್ ಎಜಿ ತನ್ನ ಬ್ಯಾಂಕಿಂಗ್ ಹೂಡಿಕೆ ವ್ಯವಹಾರದ ದೊಡ್ಡ ಭಾಗದಿಂದ ಹಿಂದೆ ಸರಿಯುವುದರಿಂದ 2022 ರ ವೇಳೆಗೆ 18,000 ಉದ್ಯೋಗಿಗಳನ್ನು ತೆಗೆದುಹಾಕಲು ಯೋಜನೆ ಹಾಕಿಕೊಂಡಿದೆ. ಮುಂದಿನ ವರ್ಷವೂ ಕೂಡ ಬ್ಯಾಂಕುಗಳು ಸಿಬ್ಬಂದಿ ಕಡಿತವನ್ನು ಮುಂದುವರೆಸಲು ಯೋಜಿಸಿವೆ. ಸ್ವೀಸ್​ ಸಂಪತ್ತು ನಿರ್ವಾಹಕ ಜುಲಿಯಸ್ ಗ್ರೂಪ್ ಲಿಮಿಟೆಡ್ ಸ್ಪರ್ಧೆ ಹೆಚ್ಚಳ ಕಾರಣದಿಂದ ವೆಚ್ಚ ಕಡಿವಾಣಕ್ಕೆ ತೀರ್ಮಾನಿಸಿದೆ.

    Published by:HR Ramesh
    First published: