Bank Strike: ಬ್ಯಾಂಕ್ ಮುಷ್ಕರದಿಂದಾಗಿ ದೇಶದ ಪ್ರಮುಖ ಬ್ಯಾಂಕ್ ಸೇವೆಗಳ ಮೇಲೆ ಬೀರಲಿರುವ ಪರಿಣಾಮಗಳೇನು?

Bank Strike: ಈ ಅಭಿಯಾನವನ್ನು ಆಲ್ ಇಂಡಿಯಾ ಬ್ಯಾಂಕ್ ಆಫೀಸರ್ಸ್ ಕಾನ್ಫಿಡರೇಶನ್ ಮುನ್ನಡೆಸುತ್ತಿದೆ ಇತರ ಷೇರುಹೋಲ್ಡರ್‌ಗಳು ಹಾಗೂ ವಿವಿಧ ಭಾಗಗಳ ಯೂನಿಯನ್ ಸದಸ್ಯರುಗಳು ಮುಷ್ಕರದಲ್ಲಿ ಭಾಗವಹಿಸಿದ್ದಾರೆ

ಬ್ಯಾಂಕ್

ಬ್ಯಾಂಕ್

  • Share this:
ಈ ವಾರದಲ್ಲಿ ನಡೆಯಲಿರುವ ಎರಡು ದಿನಗಳ ರಾಷ್ಟ್ರವ್ಯಾಪಿ ಬ್ಯಾಂಕ್(Bank Strike) ಮುಷ್ಕರದಿಂದಾಗಿ ಸ್ಟೇಟ್ ಬ್ಯಾಂಕ್ ಆಫ್ (State Bank of India) ಇಂಡಿಯಾ, ಪಂಜಾಬ್ ನ್ಯಾಶನಲ್ ಬ್ಯಾಂಕ್ ( Punjab National Bank) ಹಾಗೂ ಇತರ ಬ್ಯಾಂಕ್‌ಗಳ ಸೇವೆಗಳ (Services) ಮೇಲೆ ಪರಿಣಾಮ ಬೀರಲಿದೆ. ಸಾರ್ವಜನಿಕ ವಲಯ ಬ್ಯಾಂಕ್‌ಗಳನ್ನು ಖಾಸಗಿಗೊಳಿಸುವ ಕೇಂದ್ರದ ನಿರ್ಧಾರವನ್ನು ಖಂಡಿಸಿ ಮುಷ್ಕರವನ್ನು ಕೈಗೊಳ್ಳಲಾಗಿದೆ ಈ ನಿಟ್ಟಿನಲ್ಲಿ ಬ್ಯಾಂಕ್ ಅಧಿಕಾರಿಗಳು ಹಾಗೂ ಟ್ರೇಡ್ ಯೂನಿಯನ್‌ಗಳು ಡಿಸೆಂಬರ್ (December 1 )1 ರಿಂದ ಜಂತರ್ ಮಂತರ್‌ನಲ್ಲಿ ಬ್ಯಾಂಕ್ ಬಚಾವೊ(Bank Bachao), ದೇಶ್ ಬಚಾವೊ (Desh Bachao) (ಬ್ಯಾಂಕ್ ಉಳಿಸಿ, ದೇಶ ಉಳಿಸಿ) ಎಂಬ ಅಭಿಯಾನವನ್ನು ಕೈಗೊಂಡಿವೆ.

ಬ್ಯಾಂಕ್ ಮುಷ್ಕರಕ್ಕೆ ಕರೆ
ಈ ಅಭಿಯಾನವನ್ನು ಆಲ್ ಇಂಡಿಯಾ ಬ್ಯಾಂಕ್ ಆಫೀಸರ್ಸ್ ಕಾನ್ಫಿಡರೇಶನ್ (AIBOC) ಮುನ್ನಡೆಸುತ್ತಿದೆ. ಇತರ ಷೇರುಹೋಲ್ಡರ್‌ಗಳು ಹಾಗೂ ವಿವಿಧ ಭಾಗಗಳ ಯೂನಿಯನ್ ಸದಸ್ಯರುಗಳು ಮುಷ್ಕರದಲ್ಲಿ ಭಾಗವಹಿಸಿದ್ದಾರೆ. ಇದೀಗ ಯುನೈಟೆಡ್ ಫಾರಮ್ ಆಫ್ ಬ್ಯಾಂಕ್ ಯೂನಿಯನ್‌ಗಳು (UFBU) ಡಿಸೆಂಬರ್ 16 ಹಾಗೂ 17 ರಂದು ಎರಡು ದಿನಗಳ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿವೆ.

ಇದನ್ನೂ ಓದಿ: SBI ಗ್ರಾಹಕರೇ ಗಮನಿಸಿ: ಎರಡು ದಿನ ATM ಹಾಗೂ ಇತರೆ ಸೇವೆಯಲ್ಲಿ ವ್ಯತ್ಯಯ ಸಾಧ್ಯತೆ

ಪಿಎಸ್‌ಬಿ ಗಳನ್ನು ಖಾಸಗೀಕರಣಗೊಳಿಸುವುದು ಆರ್ಥಿಕತೆಯ ಆದ್ಯತಾ ವಲಯಗಳ ಮೇಲೆ ಪರಿಣಾಮ ಬೀರಲಿದೆ ಅಂತೆಯೇ ಸ್ವ-ಸಹಾಯ ಗುಂಪುಗಳು ಮತ್ತು ಗ್ರಾಮೀಣ ಆರ್ಥಿಕತೆಯ ಸಾಲದ ಹರಿವಿನ ಮೇಲೂ ಇದು ಪರಿಣಾಮ ಬೀರಲಿದೆ ಎಂಬುದಾಗಿ ಆಲ್ ಇಂಡಿಯಾ ಬ್ಯಾಂಕ್ ಆಫೀಸರ್ಸ್ ಕಾನ್ಫಿಡರೇಶನ್ (AIBOC) ಜನರಲ್ ಸೆಕ್ರೆಟರಿ ಸಂಜಯ್ ದಾಸ್ ತಿಳಿಸಿದ್ದಾರೆ.

ಎಸ್‌ಬಿಐ ಬ್ಯಾಂಕ್ ಸೇವೆಗಳ ಮೇಲೆ ಮುಷ್ಕರದ ಪರಿಣಾಮ
ಡಿಸೆಂಬರ್ 16 ರಿಂದ ಆರಂಭಗೊಳ್ಳಲಿರುವ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರದಿಂದಾಗಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಾಮಾನ್ಯ ಕಾರ್ಯನಿರ್ವಹಿಸುವ ಶಾಖೆಗಳು ಹಾಗೂ ಎಟಿಎಮ್‌ಗಳ ಮೇಲೆ ಪ್ರಭಾವ ಬೀರಲಿದೆ. ಸ್ಟೇಟ್ ಬ್ಯಾಂಕ್ ರೆಗ್ಯುಲೇಟರಿ ಫೈಲಿಂಗ್‌ನಲ್ಲಿ ಮುಷ್ಕರದ ಕುರಿತು ನೋಟೀಸ್ ಜಾರಿ ಮಾಡಿದ್ದು, ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಮುಷ್ಕರದ ಸೂಚನೆಯನ್ನು ನೀಡಿದೆ ಎಂದು ಭಾರತೀಯ ಬ್ಯಾಂಕ್‌ಗಳ ಸಂಘದಿಂದ (lBA) ನಮಗೆ ಸಲಹೆ ನೀಡಲಾಗಿದೆ.

UFBU ನ ಘಟಕ ಒಕ್ಕೂಟಗಳ ಸದಸ್ಯರು, ಅಂದರೆ. AIBEA, AIBOC, NCBE, AIBOA, BEFI, INBEF ಮತ್ತು INBOC ಗಳು ತಮ್ಮ ಬೇಡಿಕೆಗಳನ್ನು ಬೆಂಬಲಿಸಲು 2021 ರ ಡಿಸೆಂಬರ್ 16 ಮತ್ತು l7 ರಂದು ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರವನ್ನು ನಡೆಸಲಿವೆ ಎಂದು ತಿಳಿಸಿದೆ.

ಮುಷ್ಕರದ ಸಮಯದಲ್ಲಿ ತನ್ನ ಶಾಖೆಗಳಲ್ಲಿ ಸಾಮಾನ್ಯ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯ ವ್ಯವಸ್ಥೆಗಳನ್ನು ಮಾಡಿದೆ ಎಂದು ಎಸ್‌ಬಿಐ ಹೇಳಿದೆ.

ಡಿಸೆಂಬರ್ 16 ರಿಂದ ಬ್ಯಾಂಕ್ ಮುಷ್ಕರ: ಯಾರೆಲ್ಲಾ ಭಾಗವಹಿಸುತ್ತಾರೆ?
ನ್ಯಾಶನಲ್ ಕಾನ್ಫಿಡರೇಶನ್ ಆಫ್ ಬ್ಯಾಂಕ್ ಎಂಪ್ಲಾಯ್ಸ್ (NCBE), ಇಂಡಿಯನ್ ನ್ಯಾಶನಲ್ ಬ್ಯಾಂಕ್ ಎಂಪ್ಲಾಯ್ಸ್ ಫೆಡರೇಶನ್ (INBFF), ಬ್ಯಾಂಕ್ ಎಂಪ್ಲಾಯ್ಸ್ ಫೆಡರೇಶನ್ ಆಫ್ ಇಂಡಿಯಾ (BEFI), ನ್ಯಾಶನಲ್ ಆರ್ಗನೈಸೇಶನ್ ಆಫ್ ಬ್ಯಾಂಕ್ ವರ್ಕರ್ಸ್ (NOBW), ಆಲ್ ಇಂಡಿಯಾ ಬ್ಯಾಂಕ್ ಆಫೀಸರ್ಸ್ ಕಾನ್ಫಿಡರೇಶನ್ (AIBOC), ನ್ಯಾಶನಲ್ ಆರ್ಗನೈಸೇಶನ್ ಆಫ್ ಬ್ಯಾಂಕ್ ಆಫೀಸರ್ಸ್ (NOBO) ಡಿಸೆಂಬರ್ 16 ಹಾಗೂ 17 ರಂದು ನಡೆಯಲಿರುವ ಬ್ಯಾಂಕ್ ಮುಷ್ಕರದಲ್ಲಿ ಪಾಲ್ಗೊಳ್ಳಲಿವೆ.

ಬ್ಯಾಂಕ್ ಯೂನಿಯನ್‌ಗಳು ಏಕೆ ಮುಷ್ಕರ ನಡೆಸುತ್ತಿವೆ:
2021-22 ರ ಬಜೆಟ್‌ನಲ್ಲಿ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ 1.75 ಲಕ್ಷ ಕೋಟಿ ಸಂಗ್ರಹಿಸಲು ಹೂಡಿಕೆ ಹಿಂಪಡೆಯುವಿಕೆಯ ಭಾಗವಾಗಿ ಸಾರ್ವಜನಿಕ ವಲಯ ಬ್ಯಾಂಕ್‌ಗಳನ್ನು ಖಾಸಗೀಕರಣಗೊಳಿಸುವ ಸರಕಾರದ ಯೋಜನೆಯ ಕುರಿತು ಘೋಷಣೆ ಮಾಡಿದ್ದಾರೆ. ಕೇಂದ್ರವು ಮುಂಬರಲಿರುವ ಚಳಿಗಾಲದ ಅಧಿವೇಶನದಲ್ಲಿ ಬ್ಯಾಂಕಿಂಗ್ ಕಾನೂನುಗಳ (ಮಸೂದೆ) 2021 ಅನ್ನು ಪರಿಚಯಿಸುವುದಾಗಿ ಪ್ರಸ್ತಾವಿಸಿತ್ತು.

ದೇಶದ ಒಟ್ಟು ಠೇವಣಿಗಳಲ್ಲಿ ಶೇಕಡಾ 70 ರಷ್ಟು ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿದೆ ಮತ್ತು ಅವುಗಳನ್ನು ಖಾಸಗಿ ಬಂಡವಾಳಕ್ಕೆ ಹಸ್ತಾಂತರಿಸುವುದರಿಂದ ಈ ಬ್ಯಾಂಕುಗಳಲ್ಲಿ ಠೇವಣಿ ಇಟ್ಟಿರುವ ಸಾಮಾನ್ಯ ಜನರ ಹಣವು ಅಪಾಯಕ್ಕೆ ಒಳಗಾಗುತ್ತದೆ ಎಂಬುದು ಸಂಜಯ್ ಅವರ ಹೇಳಿಕೆಯಾಗಿದೆ. ಹೊಸ ಮಸೂದೆಯು ಸರಕಾರದ ಕನಿಷ್ಟ ಷೇರುಹಿಡುವಳಿಯನ್ನು 26% ಕ್ಕೆ ಕಡಿಮೆ ಮಾಡಲಿದೆ. ಬ್ಯಾಂಕಿಂಗ್ ಕಾನೂನುಗಳನ್ನು ಕೈಬಿಡುವಂತೆ ಬ್ಯಾಂಕ್‌ಗಳು ಸರಕಾರವನ್ನು ವಿನಂತಿಸಿಕೊಂಡಿವೆ.

ಪಿಎನ್‌ಬಿ ಹಾಗೂ ಇತರ ಬ್ಯಾಂಕ್ ಸೇವೆಗಳ ಮೇಲೆ ಮುಷ್ಕರದ ಪರಿಣಾಮ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನಂತರ ಮೂರು ಇತರ ಬ್ಯಾಂಕ್‌ಗಳಾದ ಪಂಜಾಬ್ ನ್ಯಾಶನಲ್ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಆರ್‌ಬಿಎಲ್ ಬ್ಯಾಂಕ್‌ಗಳ ಮೇಲೂ ಮುಷ್ಕರದ ಕಾವು ಪರಿಣಾಮ ಬೀರಲಿದೆ ಎಂಬುದಾಗಿ ಸಂಸ್ಥೆಗಳು ತಿಳಿಸಿವೆ. ಎಂದಿನಂತೆ ಕಾರ್ಯನಿರ್ವಹಿಸಲು ಅಗತ್ಯವಾಗಿರುವ ಕ್ರಮಗಳನ್ನು ಬ್ಯಾಂಕ್‌ಗಳು ಕೈಗೊಂಡಿದ್ದರೂ, ಮುಷ್ಕರದ ಪ್ರಭಾವಕ್ಕೆ ಬ್ಯಾಂಕ್ ಒಳಗಾಗಲಿದೆ ಎಂಬುದಾಗಿ ಸ್ಟಾಕ್ ಎಕ್ಸ್‌ಚೇಂಜ್‌ಗಳ ಹೇಳಿಕೆಯಲ್ಲಿ ಪಿಎನ್‌ಬಿ ಬ್ಯಾಂಕ್ ತಿಳಿಸಿದೆ.

ಇದನ್ನೂ ಓದಿ: ದುಬಾರಿಯಾಗಲಿದೆ ATMನಿಂದ ಹಣ ತೆಗೆಯುವ ಪ್ರಕ್ರಿಯೆ: ಹೊಸ ದರದ ಮಾಹಿತಿ ಇಲ್ಲಿದೆ

ಸೆಂಟ್ರಲ್ ಬ್ಯಾಂಕ್ ಕೂಡ ಮುಷ್ಕರದ ಸಮಯದಲ್ಲಿ ಎಂದಿನಂತೆ ಕಾರ್ಯನಿರ್ವಹಿಸಲು ಅಗತ್ಯವಾಗಿರುವ ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದ್ದು ಬ್ರ್ಯಾಂಚ್‌ಗಳು ಹಾಗೂ ಕಚೇರಿಗಳ ವ್ಯವಹಾರಗಳ ಮೇಲೆ ಮುಷ್ಕರದ ಪರಿಣಾಮವೊಡ್ಡದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದೆ. ಅದಾಗ್ಯೂ ಮುಷ್ಕರದಿಂದಾಗಿ ಬ್ರ್ಯಾಂಚ್‌ಗಳು ಹಾಗೂ ಕಚೇರಿಗಳ ಮೇಲೆ ಪರಿಣಾಮ ಬೀರಲಿದೆ ಎಂದು ಸೆಂಟ್ರಲ್ ಬ್ಯಾಂಕ್ ತಿಳಿಸಿದೆ.
Published by:vanithasanjevani vanithasanjevani
First published: